Trivikram BBK 11: ಪಕ್ಕಾ ಕ್ರಿಕೆಟ್ ಶಾಟ್: ತ್ರಿವಿಕ್ರಮ್ ಬ್ಯಾಟಿಂಗ್ ಕಂಡು ಶಾಕ್ ಆದ ಫ್ಯಾನ್ಸ್- VIDEO
ಎರಡನೇ ಪಂದ್ಯಕ್ಕೆ ತ್ರಿವಿಕ್ರಮ್ ಸಜ್ಜಾಗುತ್ತಿದ್ದಾರೆ. ತ್ರಿವಿಕ್ರಮ್ ಅಧಿಕೃತವಾಗಿ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಸೇರಿಕೊಂಡಿದ್ದು, ಭರ್ಜರಿ ಸ್ವಾಗತ ಕೂಡ ಸಿಕ್ಕಿದೆ. ತ್ರಿವಿಕ್ರಮ್ ಸಿಸಿಎಲ್ ಪ್ರ್ಯಾಕ್ಟೀಸ್ ಕೂಡ ಶುರು ಮಾಡಿದ್ದಾರೆ. ಕರ್ನಾಟಕ ಬುಲ್ಡೋಜರ್‌ನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ತ್ರಿವಿಕ್ರಮ್ ಪ್ರಾಕ್ಟಿಸ್ ಮಾಡುವ ವಿಡಿಯೋವನ್ನು ಶೇರ್ ಮಾಡಲಾಗಿದೆ.
ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) 2025ರ 11 ಆವೃತ್ತಿಗೆ ಚಾಲನೆ ಸಿಕ್ಕಿದೆ. ಫೆಬ್ರುವರಿ 8ರಿಂದ ಪಂದ್ಯಾವಳಿ ಆರಂಭವಾಗಿದ್ದು, 8 ಚಿತ್ರರಂಗಗಳ ಒಂದು ಕಪ್ಗಾಗಿ ಸೆಣೆಸಾಟ ನಡೆಸಲಿದ. ಕಿಚ್ಚ ಸುದೀಪ್ ಅವರ ಕರ್ನಾಟಕ ಬುಲ್ಡೋಜರ್ಸ್ ತಂಡ ಮೊದಲ ಪಂದ್ಯದಲ್ಲಿ ಗೆದ್ದು ಶುಭಾರಂಭ ಕೂಡ ಮಾಡಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡವು ತೆಲುಗು ವಾರಿಯರ್ಸ್ ವಿರುದ್ಧ ಗೆದ್ದು ಬೀಗಿತು. ಆದರೆ, ಬಿಗ್ ಬಾಸ್ ಕನ್ನಡ ಸೀಸನ್ 11ರ ರನ್ನರ್-ಅಪ್ ತ್ರಿವಿಕ್ರಮ್ ಈ ಪಂದ್ಯದಲ್ಲಿ ಕಣಕ್ಕಿಳಿಯಲಿಲ್ಲ.
ಆದರೆ, ಇದೀಗ ಎರಡನೇ ಪಂದ್ಯಕ್ಕೆ ತ್ರಿವಿಕ್ರಮ್ ಸಜ್ಜಾಗುತ್ತಿದ್ದಾರೆ. ತ್ರಿವಿಕ್ರಮ್ ಅಧಿಕೃತವಾಗಿ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಸೇರಿಕೊಂಡಿದ್ದು, ಭರ್ಜರಿ ಸ್ವಾಗತ ಕೂಡ ಸಿಕ್ಕಿದೆ. ತ್ರಿವಿಕ್ರಮ್ ಸಿಸಿಎಲ್ ಪ್ರ್ಯಾಕ್ಟೀಸ್ ಕೂಡ ಶುರು ಮಾಡಿದ್ದಾರೆ. ಕರ್ನಾಟಕ ಬುಲ್ಡೋಜರ್‌ನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ತ್ರಿವಿಕ್ರಮ್ ಪ್ರ್ಯಾಕ್ಟೀಸ್ ಮಾಡುವ ವಿಡಿಯೋವನ್ನು ಶೇರ್ ಮಾಡಲಾಗಿದೆ. ಎಡಗೈ ಬ್ಯಾಟ್ಸ್ಮನ್ ಆಗಿರುವ ತ್ರಿವಿಕ್ರಮ್ ಅವರ ಶಾಟ್ ಕಂಡು ಫ್ಯಾನ್ಸ್ ಶಾಕ್ ಆಗಿದ್ದು, ಇದು ಪಕ್ಕಾ ಕ್ರಿಕೆಟಿಂಗ್ ಶಾಟ್ ಎಂದು ಹೇಳುತ್ತಿದ್ದಾರೆ.
ತ್ರಿವಿಕ್ರಮ್ ಅನ್ನು ಮುಂದಿನ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ ತಂಡದ ಪರ ಕಣಕ್ಕಿಳಿಸುವ ಸಾಧ್ಯತೆಯಿದೆ. ಬ್ಯಾಟ್ಸ್‌ಮ್ಯಾನ್ ಹಾಗೂ ಬೌಲರ್ ಆಗಿರುವ ತ್ರಿವಿಕ್ರಮ್ ಕರ್ನಾಟಕ ಬುಲ್ಡೋಜರ್ ಪರ ಆಡಿದರೆ ಇನ್ನಷ್ಟು ಬಲ ಬರಲಿದೆ. ಯಾಕೆಂದರೆ ಮುಂದಿನ ಪಂದ್ಯ ಸುದೀಪ್ ಪಡೆಗೆ ಬಹಳ ಮಹತ್ವದ್ದಾಗಿದೆ. ಕರ್ನಾಟಕ ಬುಲ್ಡೋಜರ್ಸ್ ತಂಡ ಫೆಬ್ರವರಿ 14ರಂದು ಶುಕ್ರವಾರ ಹೈದರಾಬಾದ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಚೆನ್ನೈ ರೈನೋಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಹೈ ವೋಲ್ಟೇಜ್ ಪಂದ್ಯ ಆಗಿದ್ದು ತ್ರಿವಿಕ್ರಮ್ ಆಡುವ ಸಾಧ್ಯತೆ ದಟ್ಟವಾಗಿದೆ.
ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ಕಿಚ್ಚ ಸುದೀಪ್ ನಾಯಕನಾಗಿದ್ದು, ಗೋಲ್ಡನ್ ಸ್ಟಾರ್ ಗಣೇಶ್, ಕಾರ್ತಿಕ್ ಜಯರಾಮ್, ಡಾರ್ಲಿಂಗ್ ಕೃಷ್ಣ, ರಾಜೀವ್ ಹನು, ಚಂದನ್ ಕುಮಾರ್, ಪ್ರತಾಪ್ ನಾರಾಯಣ್, ನಿರೂಪ್ ಭಂಡಾರಿ, ಅನೂಪ್ ಭಂಡಾರಿ, ಕರಣ್ ಆರ್ಯನ್, ಮಂಜುನಾಥ್ ಗೌಡ, ಸಾಗರ್ ಗೌಡ, ಅಲಕಾನಂದ, ತ್ರಿವಿಕ್ರಮ್ ಇದ್ದಾರೆ. ಈ ಸೀಸನ್‌ನಲ್ಲಿ ಕರ್ನಾಟಕ ಬುಲ್ಡೋಜರ್ ತಂಡ ಪ್ರದೀಪ್ ಅನ್ನು ಮಿಸ್ ಮಾಡಿಕೊಂಡಿದೆ. ಇವರ ಜಾಗದಲ್ಲಿ ತ್ರಿವಿಕ್ರಮ್ ಆಡಲಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಸಾಮ್ರಾಟ್ ಅಂತಲೇ ಜನಪ್ರಿಯತೆ ಪಡೆದಿರುವ ಬಿಗ್ ಬಾಸ್ ಸೀಸನ್ 11ರ ಫಸ್ಟ್ ರನ್ನರ್ ರಪ್ ನಟ ತ್ರಿವಿಕ್ರಮ್ಗೆ ಈಗ ದೊಡ್ಡ ಅಭಿಮಾನಿ ಬಳಗವೇ ಹುಟ್ಟಿಕೊಂಡಿದೆ. ಇವರು ಜೀವನದಲ್ಲಿ ನಡೆದುಕೊಂಡು ಬಂದ ದಾರಿ, ಇವರ ಕ್ರಿಕೆಟ್ ಪ್ರೇಮ, ಇನ್ನೂ ಏನಾದರು ಮಾಡಬೇಕು ಎಂಬ ಛಲ ಕಂಡು ಅನೇಕ ಫ್ಯಾನ್ಸ್ ಹುಟ್ಟುಕೊಂಡಿದ್ದಾರೆ.
Hanumantha, BBK 11: ಶಾಸಕ ಪ್ರಭು ಚೌಹಾಣ್ ಜೊತೆ ಮಸ್ತ್ ಡ್ಯಾನ್ಸ್ ಮಾಡಿದ ಹನುಮಂತ: ವಿಡಿಯೋ ನೋಡಿ