Hanumantha, BBK 11: ಶಾಸಕ ಪ್ರಭು ಚೌಹಾಣ್ ಜೊತೆ ಮಸ್ತ್ ಡ್ಯಾನ್ಸ್ ಮಾಡಿದ ಹನುಮಂತ: ವಿಡಿಯೋ ನೋಡಿ
ಇದೀಗ ಹನುಮಂತ ಮತ್ತೊಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬೋಂತಿ ತಾಂಡಾದ ಜಗದಂಬಾ ದೇವಿಯ ಜಾತ್ರಾ ಮಹೋತ್ಸವ ಆಯೋಜಿಸಲಾಗಿತ್ತು. ಇದೇ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಸೀಸನ್ 11ರ ವಿನ್ನರ್ ಹನುಮಂತ ಅವರು ಭಾಗಿ ಆಗಿದ್ದರು.
![ಶಾಸಕ ಪ್ರಭು ಚೌಹಾಣ್ ಜೊತೆ ಮಸ್ತ್ ಡ್ಯಾನ್ಸ್ ಮಾಡಿದ ಹನುಮಂತ: ವಿಡಿಯೋ](https://cdn-vishwavani-prod.hindverse.com/media/original_images/Hanumantha_Dance.jpg)
Hanumantha Dance
![Profile](https://vishwavani.news/static/img/user.png)
ಹಳ್ಳಿ ಹೈದ ಹನುಮಂತ ಲಮಾಣಿ ಬಿಗ್ ಬಾಸ್ ಕನ್ನಡ ಸೀಸನ್ 11 ಟ್ರೋಫಿ ಗೆದ್ದ ಬಳಿಕ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ಕಲರ್ಸ್ ಕನ್ನಡದ ಮತ್ತೊಂದು ರಿಯಾಲಿಟಿ ಶೋ ಬಾಯ್ಸ್ vs ಗರ್ಲ್ನಲ್ಲಿ ಇವರು ಭಾಗವಹಿಸುತ್ತಿದ್ದಾರೆ. ಸಿನಿಮಾ ಆಫರ್ಗಳು ಕೂಡ ಬರುತ್ತಿವೆಯಂತೆ. ಮೊನ್ನೆಯಷ್ಟೆ ಟ್ರೋಫಿ ಹಿಡಿದುಕೊಂಡು ಹುಟ್ಟೂರಿಗೆ ಹೋದಾಗ ಇವರನ್ನು ನೋಡಲು ಜನಸಾಗರವೇ ಬಂದಿತ್ತು. ಹೀಗೆ ಹನುಮಂತನ ಹವಾ ಕರುನಾಡಲ್ಲಿ ಭರ್ಜರಿ ಆಗೇ ಇದೆ.
ಮೊನ್ನೆಯಷ್ಟೆ ಇವರು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಚಿಕ್ಕಣಜಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮಕ್ಕೆ ಅತಿಥಿಯಾಗಿ ತೆರಳಿದ್ದರು. ಹನುಮಂತನ ದರ್ಶನಕ್ಕೆ ಅನೇಕರು ನೆರೆದಿದ್ದರು. ಈ ಸಮಯದಲ್ಲಿ ತಮ್ಮದೇ ಶೈಲಿಯಲ್ಲಿ ಕಪ್ ಗೆದ್ದೇನಬೇ ಅವ್ವ ಎಂದು ಡೈಲಾಗ್ ಹೊಡೆದ ಹನುಮಂತ ಐದು ಕೋಟಿ ಮತ ಹಾಕಿ ನನ್ನ ಗೆಲ್ಲಿಸಿದ ಎಲ್ಲರಿಗೆ ಧನ್ಯವಾದ ಹೇಳಿದ್ದರು. ಇದೀಗ ಹನುಮಂತ ಮತ್ತೊಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬೋಂತಿ ತಾಂಡಾದ ಜಗದಂಬಾ ದೇವಿಯ ಜಾತ್ರಾ ಮಹೋತ್ಸವ ಆಯೋಜಿಸಲಾಗಿತ್ತು. ಇದೇ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಸೀಸನ್ 11ರ ವಿನ್ನರ್ ಹನುಮಂತ ಅವರು ಭಾಗಿ ಆಗಿದ್ದರು. ಜಾತ್ರಾ ಮಹೋತ್ಸವದ ಪ್ರಯುಕ್ತ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಶಾಸಕ ಪ್ರಭು ಚೌಹಾಣ್ ಕೂಡ ಪಾಲ್ಗೊಂಡಿದ್ದರು. ಹನುಮಂತನ ಜೊತೆ ವೇದಿಕೆಯಲ್ಲಿ ಪ್ರಭು ಚೌಹಾಣ್ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಹನುಮಂತ ಹಾಡು ಹಾಡುತ್ತಲೇ ಸ್ಟೆಪ್ಸ್ ಹಾಕಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಣಗಳಲ್ಲಿ ವೈರಲ್ ಆಗುತ್ತಿದೆ.
ಬಿಗ್ ಬಾಸ್ ಕನ್ನಡ ಇಷ್ಟು ಸೀಸನ್‌ದು ಒಂದು ಲೆಕ್ಕ, ಈ ಸೀಸನ್‌ದೆ ಇನ್ನೊಂದು ಲೆಕ್ಕ ಎಂದೇ ಹೇಳಬಹುದು. ಯಾಕೆಂದರೆ ಇಷ್ಟು ದಿನ ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಯಾರೊಬ್ಬರೂ ಟ್ರೋಫಿ ಎತ್ತಿರಲಿಲ್ಲ. ಆ ದಾಖಲೆಯನ್ನು ಹನುಮಂತ ಮಾಡಿದರು. ಕುರಿ ಕಾಯುತ್ತಿದ್ದ ಹಳ್ಳಿ ಹೈದ ಹನುಮಂತ ಯಾರೂ ಊಹಿಸದ ರೀತಿಯಲ್ಲಿ ಬಂದು ಸೈಲೆಂಟ್ ಆಗಿ ಟ್ರೋಫಿ ಎತ್ತಿ ಹಿಡಿದರು. ಹನುಮಂತು ದಾಖಲೆಯ 5 ಕೋಟಿ 23 ಲಕ್ಷದ 89 ಸಾವಿರದ 318 (5,23,89,318) ವೋಟ್ಸ್ ಅನ್ನು ಪಡೆದುಕೊಂಡು 50 ಲಕ್ಷದ ಜೊತೆ ಟ್ರೋಫಿ ಪಡೆದುಕೊಂಡರು.
ಬಿಗ್ ಬಾಸ್ ವಿನ್ ಆದ ಬಳಿಕ ಹನುಮಂತನ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ಹನುಮಂತ ಅವರು ಬಿಗ್ ಬಾಸ್ ಮನೆಗೆ ಬರುವಾಗ ಇನ್ಸ್ಟಾಗ್ರಾಮ್ನಲ್ಲಿ ಕೇವಲ ಒಂದೂವರೆ ಇಂದ ಎರಡು ಲಕ್ಷ ಹಿಂಬಾಲಕರನ್ನು ಹೊಂದಿದ್ದರು. ಈಗ ಆ ಸಂಖ್ಯೆ ಐದೂವರೆ ಲಕ್ಷಕ್ಕೆ ಏರಿಕೆ ಆಗಿದೆ. ಅವರನ್ನು ಇನ್ಸ್ಟಾಗ್ರಾಮ್ನಲ್ಲಿ 5.63 ಲಕ್ಷ ಹಿಂಬಾಲಕರನ್ನು ಪಡೆದಿದ್ದಾರೆ. ಇದು ಅವರಿಗೆ ಸಾಕಷ್ಟು ಜನಪ್ರಿಯತೆಗೆ ಸಿಕ್ಕ ಉದಾಹರಣೆ ಎನ್ನಬಹುದು.
Niranjan Yashaswini Love Story: ಮದುವೆ ದಿನ ಮೊಬೈಲ್ ಆಫ್ ಮಾಡಿ ಮಲಗಿ ಬಿಟ್ಟಿದ್ರಂತೆ ನಿರಂಜನ್: ಮುಂದೇನಾಯ್ತು..?