ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Champions Trophy BCCI Reward: ಚಾಂಪಿಯನ್ಸ್‌ ಟ್ರೋಫಿ ಗೆದ್ದ ರೋಹಿತ್‌ ಪಡೆಗೆ ಬೃಹತ್‌ ನಗದು ಪುರಸ್ಕಾರ ಘೋಷಿಸಿದ ಬಿಸಿಸಿಐ

BCCI Cash Prize for Team India: ಕಳೆದ ವರ್ಷ ಬಾರ್ಬಡೋಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಗೆಲುವಿನ ನಂತರ, ಟೀಮ್‌ ಇಂಡಿಯಾಕ್ಕೆ ಬಿಸಿಸಿಐ 125 ಕೋಟಿ ರೂ.ಗಳ ಬೃಹತ್ ಬಹುಮಾನ ನೀಡಿ ಘೋಷಿಸಿತ್ತು. ಆಟಗಾರರಿಗೆ ಮಾತ್ರವಲ್ಲದೆ ತಂಡ ಸಿಬ್ಬಂದಿಗಳಿಗೂ ಬಹುಮಾನ ಮೊತ್ತ ನೀಡಲಾಗಿತ್ತು.

ಚಾಂಪಿಯನ್ಸ್‌ ಟ್ರೋಫಿ ಗೆದ್ದ ಭಾರತ ತಂಡಕ್ಕೆ 58 ಕೋಟಿ ಘೋಷಿಸಿದ ಬಿಸಿಸಿಐ

Profile Abhilash BC Mar 20, 2025 11:52 AM

ಮುಂಬಯಿ: ಐಸಿಸಿ ಚಾಂಪಿಯನ್ಸ್‌ ಟ್ರೋಫಿ 2025 ಗೆದ್ದ(Champions Trophy BCCI Reward) ರೋಹಿತ್ ಶರ್ಮ ನಾಯಕತ್ವದ ಟೀಂ ಇಂಡಿಯಾಗೆ ಬಿಸಿಸಿಐ(BCCI Cash Prize for Team India) 58 ಕೋಟಿ ರೂ. ಗಳ ನಗದು ಬಹುಮಾನ ಘೋಷಣೆ ಮಾಡಿದೆ. ಐಪಿಎಲ್‌ ಆರಂಭಕ್ಕೆ 2 ದಿನಗಳು ಬಾಕಿ ಇರುವಾಗಲೇ ಟೀಮ್‌ ಇಂಡಿಯಾ ಆಟಗಾರರಿಗೆ ಬಂಪರ್‌ ಲಾಟರಿ ಲಭಿಸಿದಂತಾಗಿದೆ. ಮಾರ್ಚ್‌ 9 ರಂದು ದುಬೈನಲ್ಲಿ ನಡೆದಿದ್ದ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್‌ ವಿರುದ್ಧ 4 ವಿಕೆಟ್‌ ಅಂತರದಿಂದ ಗೆದ್ದು ಮೂರನೇ ಬಾರಿಗೆ ಟ್ರೋಫಿ ಎತ್ತಿ ಹಿಡಿದಿತ್ತು.

ಐಸಿಸಿಯ ಬಹುಮಾನ ಮೊತ್ತವಾಗಿ ಚಾಂಪಿಯನ್‌ ಭಾರತ 19.45 ಕೋಟಿ ರೂ. ಪಡೆದರೆ ರನ್ನರ್​ಅಪ್ ನ್ಯೂಜಿಲ್ಯಾಂಡ್‌​ ತಂಡಕ್ಕೆ 9.72 ಕೋಟಿ ರೂ. ಲಭಿಸಿತ್ತು. ಐಪಿಎಲ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದ್ದ ಕಾರಣ ಆಟಗಾರರಿಗೆ ವಿಶ್ರಾಂತಿ ನೀಡುವ ಸಲುವಾಗಿ ಈ ಬಾರಿ ವಿಜಯೋತ್ಸವ ಪರೇಡ್ ನಡೆಸಲಿಲ್ಲ.​

ಕಳೆದ ವರ್ಷ ಬಾರ್ಬಡೋಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಗೆಲುವಿನ ನಂತರ, ಟೀಮ್‌ ಇಂಡಿಯಾಕ್ಕೆ ಬಿಸಿಸಿಐ 125 ಕೋಟಿ ರೂ.ಗಳ ಬೃಹತ್ ಬಹುಮಾನ ನೀಡಿ ಘೋಷಿಸಿತ್ತು. ಆಟಗಾರರಿಗೆ ಮಾತ್ರವಲ್ಲದೆ ತಂಡ ಸಿಬ್ಬಂದಿಗಳಿಗೂ ಬಹುಮಾನ ಮೊತ್ತ ನೀಡಲಾಗಿತ್ತು.

ಫೈನಲ್‌ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ನ್ಯೂಜಿಲೆಂಡ್ ಬ್ಯಾಟಿಂಗ್ ಡೆರಿಲ್ ಮಿಚೆಲ್ (63 ರನ್, 101 ಎಸೆತ, 3 ಬೌಂಡರಿ) ಹಾಗೂ ಮಿಚೆಲ್ ಬ್ರೇಸ್‌ವೆಲ್ (53* ರನ್, 40 ಎಸೆತ, 3 ಬೌಂಡರಿ, 2 ಸಿಕ್ಸರ್) ಅರ್ಧಶತಕಗಳ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 251 ರನ್‌ಗಳ ಮೊತ್ತ ಕಲೆಹಾಕಿತ್ತು.



ಚೇಸಿಂಗ್‌ ವೇಳೆ ರೋಹಿತ್ ಶರ್ಮ ಹಾಗೂ ಶುಭಮಾನ್ ಗಿಲ್ (31) ಒದಗಿಸಿದ ಬಿರುಸಿನ ಆರಂಭ ಪಡೆಯಿತು. ಕೊಹ್ಲಿ(1) ವಿಫಲರಾದರು. ಶ್ರೇಯಸ್ ಅಯ್ಯರ್ (48 ರನ್, 62 ಎಸೆತ, 2 ಬೌಂಡರಿ, 2 ಸಿಕ್ಸರ್) ಹಾಗೂ ಆಲ್ರೌಂಡರ್ ಅಕ್ಷರ್ ಪಟೇಲ್ (29) ಸಣ್ಣ ಬ್ಯಾಟಿಂಗ್‌ ಹೋರಾಟ ನಡೆಸಿದರು. ಕೊನೆಯಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ (34* ರನ್, 33 ಎಸೆತ, 1 ಬೌಂಡರಿ, 1 ಸಿಕ್ಸರ್) ಉಪಯುಕ್ತ ಆಟದ ನೆರವಿನಿಂದ 49 ಓವರ್‌ಗಳಲ್ಲಿ 6 ವಿಕೆಟ್‌ಗೆ 254 ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು.

ಇದನ್ನೂ ಓದಿ IPL 2025: ಚೆಂಡಿಗೆ ಎಂಜಲು ಬಳಕೆ ನಿಷೇಧ ತೆರವಿಗೆ ಮುಂದಾದ ಬಿಸಿಸಿಐ

ಭಾರತದ ಗೆಲುವಿನಲ್ಲಿ ನಾಯಕ ರೋಹಿತ್ ಶರ್ಮ (76 ರನ್, 83 ಎಸೆತ, 7 ಬೌಂಡರಿ, 3 ಸಿಕ್ಸರ್) ಬಿರುಸಿನ ಆಟ ಹಾಗೂ ನಾಲ್ವರು ಸ್ಪಿನ್ನರ್‌ಗಳ ಬಿಗಿ ಬೌಲಿಂಗ್ ದಾಳಿ ಮತ್ತು ಕೊನೆಯ ಹಂತದಲ್ಲಿ ಕನ್ನಡಿಗ ಕೆ.ಎಲ್‌ ರಾಹುಲ್‌ ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರಮುಖವಾಗಿತ್ತು.