ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BCCI: ವಿಶ್ವದ ಶ್ರೀಮಂತ ಕ್ರಿಕೆಟ್‌ ಸಂಸ್ಥೆ ಬಿಸಿಸಿಐಗೆ ಕೆಂದ್ರ ಸರ್ಕಾರ ಅಂಕುಶ?

ಒಂದೊಮ್ಮೆ ಮಸೂದೆಯು ಕಾಯಿದೆಯಾಗಿ ಜಾರಿಯಾದರೆ ಬಿಸಿಸಿಐ ಕೂಡ ಎನ್‌ಎಸ್‌ಜಿ ವ್ಯಾಪ್ತಿಗೊಳಪಡಲಿದೆ. ಮಂಡಳಿಯು ಸರ್ಕಾರಿ ಅನುಧನ ಪಡೆಯದಿದ್ದರೂ ಲೋಕಸಭೆಯ ಕಾನೂನು ಅನ್ವಯವಾಗಲಿದೆ ಎಂದು ಸಚಿವಾಲಯದ ಉನ್ನತ ಮೂಲಗಳು ತಿಳಿಸಿವೆ. 1928ರ ಡಿ. 4ರಂದು ಸ್ಥಾಪನೆಯಾದ ಬಿಸಿಸಿಐಯು ಇದುವರೆಗೆ ಖಾಸಗಿ ಸಂಸ್ಥೆಯಾಗಿಯೇ ಕಾರ್ಯನಿರ್ವಹಿಸುತ್ತಿದೆ. ಕ್ರೀಡೆಗೆ ಸಂಬಂಧಿಸಿ ಸರಕಾರ ರೂಪಿಸುವ ಯಾವುದೇ ಕಾಯ್ದೆಗಳು ಹಾಗೂ ಕಾನೂನುಗಳು ಬಿಸಿಸಿಐಗೆ ಅನ್ವಯವಾಗುತ್ತಿರಲಿಲ್ಲ.

ವಿಶ್ವದ ಶ್ರೀಮಂತ ಕ್ರಿಕೆಟ್‌ ಸಂಸ್ಥೆ ಬಿಸಿಸಿಐಗೆ ಕೆಂದ್ರ ಸರ್ಕಾರ ಅಂಕುಶ?

Profile Abhilash BC Jul 23, 2025 10:15 AM

ನವದೆಹಲಿ: ವಿಶ್ವದ ಶ್ರೀಮಂತ ಕ್ರಿಕೆಟ್‌ ಸಂಸ್ಥೆಯಾದ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI)ಯನ್ನು ಕೇಂದ್ರ ಸರಕಾರವು ತನ್ನ ಮೇಲಿನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ. ಹೌದು ಲೋಕಸಭೆಯಲ್ಲಿ ಇಂದು(ಬುಧವಾರ) ಮಂಡಿಸಲು ಸಿದ್ಧವಾಗಿರುವ ರಾಷ್ಟ್ರೀಯ ಕ್ರೀಡಾ ಮಸೂದೆಯ ವ್ಯಾಪ್ತಿಗೆ(National Sports Governance Bill) ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯೂ ಬರಲಿದೆ ಎನ್ನಲಾಗಿದೆ. ಬಿಸಿಸಿಐ ಸ್ಥಾಪನೆಯಾದಾಗಿನಿಂದಲೂ ಖಾಸಗಿ ಸಂಸ್ಥೆಯಾಗಿಯೇ ಉಳಿದುಕೊಂಡಿದೆ.

ಕ್ರೀಡಾ ಸಚಿವಾಲಯದ ಮೂಲಗಳು ತಿಳಿಸಿರುವ ಮಾಹಿತಿ ಪ್ರಕಾರ, ಈ ಮಸೂದೆ ಕಾಯ್ದೆಯಾಗಿ ಬದಲಾದ ಬಳಿಕ ಬಿಸಿಸಿಐಯನ್ನು ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ ಎಂದು ಗುರುತಿಸಲಾಗುತ್ತದೆ. ಇತರ ಕ್ರೀಡಾ ಪ್ರಾಧಿಕಾರಗಳಂತೆ ಬಿಸಿಸಿಐಯು ಸರಕಾರದ ಅಧೀನಕ್ಕೆ ಒಳಪಟ್ಟರೂ ಸ್ವತಂತ್ರ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ. ಆದರೆ ಸಂಸತ್ತು ರೂಪಿಸುವ ನಿಯಮಗಳು ಬಿಸಿಸಿಐಗೆ ಅನ್ವಯವಾಗಲಿವೆ. ಜತೆಗೆ ಬಿಸಿಸಿಐ ಕೇಂದ್ರ ಕ್ರೀಡಾ ಸಚಿವಾಲಯದಿಂದ ಯಾವುದೇ ಅನುದಾನವನ್ನು ತೆಗೆದುಕೊಳ್ಳುವುದಿಲ್ಲ.

ಒಂದೊಮ್ಮೆ ಮಸೂದೆಯು ಕಾಯಿದೆಯಾಗಿ ಜಾರಿಯಾದರೆ ಬಿಸಿಸಿಐ ಕೂಡ ಎನ್‌ಎಸ್‌ಜಿ ವ್ಯಾಪ್ತಿಗೊಳಪಡಲಿದೆ. ಮಂಡಳಿಯು ಸರ್ಕಾರಿ ಅನುಧನ ಪಡೆಯದಿದ್ದರೂ ಲೋಕಸಭೆಯ ಕಾನೂನು ಅನ್ವಯವಾಗಲಿದೆ ಎಂದು ಸಚಿವಾಲಯದ ಉನ್ನತ ಮೂಲಗಳು ತಿಳಿಸಿವೆ.

1928ರ ಡಿ. 4ರಂದು ಸ್ಥಾಪನೆಯಾದ ಬಿಸಿಸಿಐಯು ಇದುವರೆಗೆ ಖಾಸಗಿ ಸಂಸ್ಥೆಯಾಗಿಯೇ ಕಾರ್ಯನಿರ್ವಹಿಸುತ್ತಿದೆ. ಕ್ರೀಡೆಗೆ ಸಂಬಂಧಿಸಿ ಸರಕಾರ ರೂಪಿಸುವ ಯಾವುದೇ ಕಾಯ್ದೆಗಳು ಹಾಗೂ ಕಾನೂನುಗಳು ಬಿಸಿಸಿಐಗೆ ಅನ್ವಯವಾಗುತ್ತಿರಲಿಲ್ಲ. ಅದು ತನ್ನದೇ ಆದ ನೀತಿಗಳನ್ನು ಹೊಂದಿದೆ.

ಇದನ್ನೂ ಓದಿ IND vs ENG: ನಾಲ್ಕನೇ ಟೆಸ್ಟ್‌ನಿಂದ ಆಕಾಶ್‌ ದೀಪ್‌ ಔಟ್‌, ಮ್ಯಾಂಚೆಸ್ಟರ್‌ ಟೆಸ್ಟ್‌ಗೆ ಯುವ ವೇಗಿ!