Viral Video: ಚಿರತೆಯ ಮೇಲೆ ಬೆಕ್ಕು ಸವಾರಿ- ವಿಡಿಯೊ ನೋಡಿ ಬೆಚ್ಚಿ ಬಿದ್ದ ನೆಟ್ಟಿಗರು
Cat rides leopard: ಮನೆಯ ಮುಂಭಾಗದ ವರಾಂಡಾದಲ್ಲಿ ಬೆಕ್ಕು ಶಾಂತವಾಗಿ ಕುಳಿತಿರುವುದನ್ನು ನೋಡಬಹುದು. ಶಾಂತವಾಗಿದ್ದ ರಾತ್ರಿ ವೇಳೆ ಇದ್ದಕ್ಕಿದ್ದಂತೆ ಎಲ್ಲಿಂದಲೋ ಚಿರತೆ ಕಾಣಿಸಿಕೊಳ್ಳುತ್ತದೆ. ಬೆಕ್ಕು ಚಿರತೆಯ ಬೆನ್ನಿನ ಮೇಲೆ ನಿಂತಿರುವ ವಿಡಿಯೊ ಇದೀಗ ವೈರಲ್ ಆಗಿದೆ.


ನವದೆಹಲಿ: ಬೆಕ್ಕುಗಳ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ವೈರಲ್ ಆಗುತ್ತಿರುತ್ತದೆ. ಅವುಗಳ ತುಂಟಾಟ, ಕೋಪ, ಬುದ್ಧಿವಂತಿಕೆ ಇತ್ಯಾದಿ ವಿಡಿಯೊಗಳನ್ನು ನೀವು ನೋಡಿರಬಹುದು. ಹಾವು, ಕೋತಿ, ಶ್ವಾನವನ್ನೂ ಬೆದರಿಸುವ ಜಾಣತನ ಬೆಕ್ಕಿಗಿದೆ. ಬೆಕ್ಕುಗಳು ಆತ್ಮವಿಶ್ವಾಸವನ್ನು ಹೊಂದಿರುವುದಕ್ಕೆ ಹೆಸರುವಾಸಿಯಾಗಿವೆ. ಇದೀಗ ವೈರಲ್ ಆಗಿರುವ ವಿಡಿಯೊ(Viral Video) ನಿಜವಾಗಿಯೂ ನೆಟ್ಟಿಗರಿಗೆ ಶಾಕಿಂಗ್ ಆಗಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೊದಲ್ಲಿ, ಮನೆಯ ಮುಂಭಾಗದ ವರಾಂಡಾದಲ್ಲಿ ಬೆಕ್ಕು ಶಾಂತವಾಗಿ ಕುಳಿತಿರುವುದನ್ನು ನೋಡಬಹುದು. ಶಾಂತವಾಗಿದ್ದ ರಾತ್ರಿ ವೇಳೆ ಇದ್ದಕ್ಕಿದ್ದಂತೆ ಎಲ್ಲಿಂದಲೋ ಚಿರತೆ ಕಾಣಿಸಿಕೊಳ್ಳುತ್ತದೆ. ಬೆಕ್ಕು ಭಯಗೊಳ್ಳುವ ಬದಲು ಎದ್ದು ನಿಂತು ಮಿಯಾಂವ್ ಎಂದಿದೆ. ನಂತರ ಆಶ್ಚರ್ಯಕರವಾಗಿ ಬೆಕ್ಕು ಮತ್ತು ಚಿರತೆ ಎರಡೂ ಒಟ್ಟಿಗೆ ಹೋಗುವುದನ್ನು ಕಾಣಬಹುದು. ಆ ಕ್ಷಣ ಮಾತ್ರ ವೀಕ್ಷಕರನ್ನು ದಿಗ್ಭ್ರಮೆಗೊಳಿಸಿದೆ. ಹಾಗಂತ ವಿಡಿಯೊ ಅಲ್ಲಿಗೆ ನಿಲ್ಲಲಿಲ್ಲ.
ಚಿರತೆ ಮತ್ತೆ ಆ ಸ್ಥಳದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಬಾರಿ ಮಾತ್ರ ಬೆಕ್ಕು ಬೆನ್ನಿನ ಮೇಲೆ ನಿಂತಿರುವುದು ಕಂಡುಬರುತ್ತದೆ. ಜುಲೈ 17 ರಂದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಹಿಡಿಯಲಾದ ಈ ಕ್ಷಣವನ್ನು ‘ಬೆಕ್ಕು ಎಲ್ಲವನ್ನೂ ನಿಭಾಯಿಸಬಲ್ಲದು’ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.
ವಿಡಿಯೊ ಇಲ್ಲಿದೆ:
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗಿನಿಂದ, ಈ ವಿಡಿಯೊ ಎಂಬತ್ತು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಆದರೆ, ಅನೇಕ ಬಳಕೆದಾರರು ದೃಶ್ಯಗಳ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದಾರೆ. ಹಲವಾರು ಬಳಕೆದಾರರು ವಿಡಿಯೊ ತುಂಬಾ ಪರಿಪೂರ್ಣವಾಗಿ ಕಾಣುತ್ತದೆ, ಇದು ಎಐ ರಚಿತ ವಿಡಿಯೊ ಎಂದು ಹೇಳಿದರು. ವಿಡಿಯೊ ನೋಡಿದಾಗ ತುಂಬಾ ಚೆನ್ನಾಗಿದೆ ಎಂದೆನಿಸಿತು, ಈ ವೇಳೆ ಎಐ ಬಂದಿರುವ ಬಗ್ಗೆ ನೆನಪಾಯಿತು ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಇನ್ನು ಕೆಲವರು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಅದು ಎಐ ಆಗಿರಲಿ ಅಥವಾ ಇಲ್ಲದಿರಲಿ ನನಗೆ ಇನ್ನು ಮುಂದೆ ಚಿಂತೆಯಿಲ್ಲ. ಈ ಬೆಕ್ಕಿನ ವರ್ತನೆ ಮಾತ್ರ ತುಂಬಾ ಇಷ್ಟವಾಯಿತು ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ತನ್ನ ಅಜ್ಜಿ ಇದನ್ನು ನೋಡಿದ ನಂತರ ಬೆಕ್ಕನ್ನು ಹೊರಗೆ ಬಿಡುವುದಿಲ್ಲ ಎಂದು ಇನ್ನೊಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.
ಈ ವೀಡಿಯೊವನ್ನು ಪೋಸ್ಟ್ ಮಾಡಿದ ಇನ್‌ಸ್ಟಾಗ್ರಾಮ್ ಪುಟದಲ್ಲಿ ಇದೇ ರೀತಿಯ ಹಲವಾರು ವಿಡಿಯೊಗಳನ್ನು ಹಂಚಿಕೊಳ್ಳಲಾಗಿದೆ. ಬೆಕ್ಕು ತಿಮಿಂಗಿಲದ ಮೇಲೆ ಕುಳಿತಿರುವ ದೃಶ್ಯ, ಇನ್ನೊಂದು ವಿಡಿಯೊದಲ್ಲಿ ಪಾಂಡಾ ವಿಮಾನದಲ್ಲಿ ಕುಳಿತಿರುವ ದೃಶ್ಯವನ್ನು ಈ ಪುಟದಲ್ಲಿ ನೋಡಬಹುದು.