Bhagya Lakshmi Serial: ತಾಂಡವ್ನ ಎಲ್ಲ ಪ್ಲ್ಯಾನ್ ನೀರಲ್ಲ ಹೋಮ ಮಾಡಿದ ಶ್ರೇಷ್ಠಾ
ಮಾಸ್ಟರ್ ಪ್ಲ್ಯಾನ್ ಮಾಡಿ ಆ ತನ್ವಿನ ನನ್ನ ಕಡೆ ಎಳ್ಕೊಳೋಣ ಅಂತ ಅಂದುಕೊಂಡ್ರೆ ಎಲ್ಲ ಹಾಳು ಮಾಡಿ ಬಿಟ್ಟೆ.. ನನ್ನ ಮನೆಯವರನ್ನು ನನ್ನ ಸೈಡ್ ಮಾಡೋದಕ್ಕೆ ಫಸ್ಟ್ ಸ್ಟೆಪ್ ಆಗಿತ್ತು ಇದು.. ಎಲ್ಲ ನೀನು ಆಳು ಮಾಡಿ ಬಿಟ್ಟೆ ಎಂದು ಶ್ರೇಷ್ಠಾ ಮೇಲೆ ಸಿಕ್ಕಾಪಟ್ಟೆ ರೇಗಾಡಿದ್ದಾನೆ ತಾಂಡವ್.
![ತಾಂಡವ್ನ ಎಲ್ಲ ಪ್ಲ್ಯಾನ್ ನೀರಲ್ಲ ಹೋಮ ಮಾಡಿದ ಶ್ರೇಷ್ಠಾ](https://cdn-vishwavani-prod.hindverse.com/media/original_images/Bhagya_Lakshmi_serial_32.jpg)
Bhagya Lakshmi serial
![Profile](https://vishwavani.news/static/img/user.png)
ಹಿಂದಿನ ವಾರ ಟಿಆರ್ಪಿಯಲ್ಲಿ ಕುಸಿತ ಕಂಡ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ( Bhagya Lakshmi Serial ) ಇದೀಗ ಹೊಸ ದಿಕ್ಕಿನತ್ತ ಸಾಗುತ್ತಿದೆ. ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಧಾರಾವಾಹಿಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡಲಾಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಧಾರಾವಾಹಿ ಹೊಸ ತಿರುವನ್ನು ಪಡೆದುಕೊಳ್ಳಲಿದ್ದು, ಭಾಗ್ಯಾಳ ಹೊಸ ಪಯಣ ಶುರುವಾಗಲಿದೆ. ತಾಂಡವ್ ತನ್ನ ಅಮ್ಮ-ಅಪ್ಪ ಮಕ್ಕಳನ್ನು ತನ್ನತ್ತ ಸೆಳೆಯಲು ಹೊಸ ಪ್ಲ್ಯಾನ್ ಮಾಡುತ್ತಿದ್ದಾನೆ. ಆದ್ರೆ, ಶ್ರೇಷ್ಠಾ ಬಂದು ಈ ಎಲ್ಲ ಯೋಜನೆಯನ್ನು ಕೆಡಿಸಿಬಿಟ್ಟಿದ್ದಾಳೆ. ಇದರಿಂದ ತಾಂಡವ್ಗೆ ಸಿಕ್ಕಾಪಟ್ಟೆ ಕೋಪ ಬಂದಿದೆ.
ತನ್ವಿ ಕಾಲೇಜಿನಲ್ಲಿ ಕೋರ್ಸ್‌ಗೆ ಸೇರಲು 80,000 ರೂಪಾಯಿ ಫೀಸ್ ಕಟ್ಟಿದ ವಿಚಾರ ತಾಂಡವ್-ಶ್ರೇಷ್ಠಾ ಬಾಳಲ್ಲಿ ಬಿರುಗಾಳಿ ಎಬ್ಬಿದೆ. ತಾಂಡವ್ ಫೀಸ್ ಕಟ್ಟಿದ್ದಕ್ಕೆ ಇದೆಲ್ಲ ಭಾಗ್ಯಾಳ ಪ್ಲ್ಯಾನ್ ಎಂದು ಶ್ರೇಷ್ಠಾಗೆ ಕೋಪ ನೆತ್ತಿಗೇರುತ್ತದೆ. ಇದೆಲ್ಲದೆ ನೇರವಾಗಿ ಭಾಗ್ಯಾ ಇರುವ ಮನೆಗೆ ಹೋಗಿ ನೀನು ನನ್ನ ಮನೇನ ದರೋಡೆ ಮಾಡ್ತಾ ಇದ್ರೆ ಈ ಶ್ರೇಷ್ಠಾ ಸುಮ್ನೆ ನೋಡ್ಕೊಂಡು ಕೂರಲ್ಲ.. ಮಕ್ಕಳನ್ನು ಮುಂದೆ ಇಡ್ಕೊಂಡು ನನ್ನವರನ್ನ ದೋಚೊ ಕೆಲಸ ಮಾಡ್ತಾ ಇದ್ದಾಳಲ್ಲ ಭಾಗ್ಯಾ ಅದನ್ನ ನಿಲ್ಸಿ ಸ್ವಲ್ಪ ಮಾನ ಮರಿಯಾದೆಯಿಂದ ಬದುಕೊ ಅಂತ ಹೇಳೋಕೆ ಬಂದಿದ್ದೇನೆ. ಇನ್ನೊಂದು ಸಲ ಮಕ್ಳು-ಮರಿ ಅಂತ ಪ್ಲ್ಯಾನ್ ಮಾಡ್ಕೊಂಡು ನನ್ನ ಗಂಡನ ಹತ್ರ ದುಡ್ಡು ಕೇಳೋ ಪ್ಲ್ಯಾನ್ ಮಾಡಿದ್ರೆ ಸರಿಯಿರಲ್ಲ ಎನ್ನುತ್ತಾಳೆ.
ಆಗ ಕುಸುಮಾ ತಾಂಡವ್ಗೆ ಕರೆ ಮಾಡಿ, ತನ್ವಿ ತಾನೆ ನಿನ್ನ ಹತ್ರ ದುಡ್ಡು ಕೇಳಿದ್ದು.. ಭಾಗ್ಯಾ ಕೇಳಿದ್ದಾಳ.. ಈಗ ಈ ಶ್ರೇಷ್ಠಾನ ಇಲ್ಲಿಗೆ ರಂಪಾಟ ಮಾಡಿಸೋಕೆ ಕರೆಸಿದ್ದೀಯಾ ಎಂದು ಕೇಳಿದ್ದಾರೆ. ಶ್ರೇಷ್ಠಾ ಅಲ್ಲಿಗೆ ಬಂದ ವಿಷಯ ತಿಳಿದು ಶಾಕ್ ತಾಂಡವ್ ನೇರವಾಗಿ ಮನೆಗೆ ಬಂದು ಶ್ರೇಷ್ಠಾಳ ಕೆನ್ನೆಗೆ ಬಾರಿಸಿ ಸರಿಯಾಗಿ ಬೈದಿದ್ದಾನೆ. ಬಳಿಕ ಮನೆಯಿಂದ ಹೊರಬಂದು ಕೂಡ ಶ್ರೇಷ್ಠಾ ಮೇಲೆ ನನ್ನ ಪ್ಲ್ಯಾನ್ ಎಲ್ಲ ಹಾಳು ಮಾಡಿದಿ ಎಂದು ರೇಗಾಡಿದ್ದಾನೆ.
ನಾನೇನು ಈ ಮನೆಗೆ ಬಂದು ಭಾಗ್ಯಾಳ ಜೊತೆ ಜೀವನ ಮಾಡಲ್ಲ.. ಭಾಗ್ಯಾ ನಾನೇ ಗ್ರೇಟ್.. ನಂದೇ ಗ್ರೇಟ್ ಅಂತ ಪ್ರೂವ್ ಮಾಡೋಕೆ ಸಾಯ್ತಾ ಇರ್ತಾಳೆ. ಹಾಗಿರುವಾಗ ಅವಳು ತನ್ವಿನ ಮುಂದೆ ಇಟ್ಕೊಂಡು ದುಡ್ಡು ಕೇಳಲ್ಲ.. ನಾನು ಫೀಸ್ ಕಟ್ಟಿ ಮುಗಿಸಿದ ಮೇಲೆಯೇ ಅವಳಿಗೆ ಆ ವಿಚಾರ ತಿಳಿದಿದ್ದು.. ಆ ಭಾಗ್ಯಾನ ಬಿಟ್ಟು ಆ ಮನೆಯಲ್ಲಿ ಇರುವವರು ಎಲ್ಲ ನನ್ನ ಪರವಾಗಿ ಬರ್ಬೇಕು ಅನ್ನೋದೆ ನನ್ನ ಉದ್ದೇಶ.. ಅದಕ್ಕಾಗಿ ಇದೆಲ್ಲ ಮಾಡ್ತಾ ಇದ್ದೇನೆ. ಆದ್ರೆ ನೀನು ಈಡಿಯೆಟ್ ಥರಾ ಅಲ್ಲೋಗಿ ಎಲ್ಲ ಹಾಳು ಮಾಡಿಬಿಟ್ಟೆ.. ಮಾಸ್ಟರ್ ಪ್ಲ್ಯಾನ್ ಮಾಡಿ ಆ ತನ್ವಿನ ನನ್ನ ಕಡೆ ಎಳ್ಕೊಳೋಣ ಅಂತ ಅಂದುಕೊಂಡ್ರೆ ಎಲ್ಲ ಹಾಳು ಮಾಡಿ ಬಿಟ್ಟೆ.. ನನ್ನ ಮನೆಯವರನ್ನು ನನ್ನ ಸೈಡ್ ಮಾಡೋದಕ್ಕೆ ಫಸ್ಟ್ ಸ್ಟೆಪ್ ಆಗಿತ್ತು ಇದು.. ಎಲ್ಲ ನೀನು ಆಳು ಮಾಡಿ ಬಿಟ್ಟೆ.. ಯಾವ ಗನಂದಾರಿ ಕೆಲ್ಸ ಮಾಡೋದಕ್ಕೆ ಅಲ್ಲೋಗಿದ್ದೆ ಎಂದು ಶ್ರೇಷ್ಠಾ ಮೇಲೆ ಸಿಕ್ಕಾಪಟ್ಟೆ ರೇಗಾಡಿದ್ದಾನೆ ತಾಂಡವ್.
ಇದರ ಮಧ್ಯೆ ಭಾಗ್ಯಾಳ ಅತ್ತೆ ಕುಸುಮಾ.. ತನ್ನ ಸೊಸೆಯನ್ನು ಕೆಲಸದಿಂದ ತೆಗೆದವಳಿಗೆ ಬುದ್ದಿ ಕಲಿಸಬೇಕೆಂದು ಹಿತಾಳ ಸಹಾಯದಿಂದ ಕನ್ನಿಕಾ ಮನೆಯ ಅಡ್ರೆಸ್ ಪಡೆದುಕೊಂಡಿದ್ದಾಳೆ. ಅಷ್ಟೇ ಅಲ್ಲದೆ ಕುಸುಮಾ ಕಾರಿನಲ್ಲಿ ಕನ್ನಿಕಾಳ ಮನೆಗೆ ತೆರಳಿದ್ದಾಳೆ. ಸದ್ಯ ಮಹತ್ವದ ತಿರುವಿಲ್ಲಿ ಭಾಗ್ಯಲಕ್ಷ್ಮೀ ಧಾರಾವಾಹಿ ಇದ್ದು, ಮುಂದಿನ ಸಂಚಿಕೆಯಲ್ಲಿ ಏನಾಗುತ್ತೆ ಎಂಬುದು ಕುತೂಹಲ ಕೆರಳಿಸಿದೆ.
Boys vs Girls: ನೀನು ಬಾಸ್ ಅಲ್ಲ.. ಕೂಸು: ವೇದಿಕೆ ಮೇಲೆ ಚೈತ್ರಾ ವಿರುದ್ಧ ಮತ್ತೆ ರೊಚ್ಚಿಗೆದ್ದ ರಜತ್