Boys vs Girls: ನೀನು ಬಾಸ್ ಅಲ್ಲ.. ಕೂಸು: ವೇದಿಕೆ ಮೇಲೆ ಚೈತ್ರಾ ವಿರುದ್ಧ ಮತ್ತೆ ರೊಚ್ಚಿಗೆದ್ದ ರಜತ್
ಬಿಗ್ ಬಾಸ್ ಮನೆಯೊಳಗೆ ಸಖತ್ ಸೌಂಡ್ ಮಾಡುತ್ತಿದ್ದ ಚೈತ್ರಾ- ರಜತ್ ಇದೀಗ ಹೊರಬಂದ ಬಳಿಕ ಮತ್ತೊಮ್ಮೆ ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋ ಮೂಲಕ ಮುಖಾಮುಖಿಯಾಗಿದ್ದಾರೆ. ಗ್ರ್ಯಾಂಡ್ ಓಪನಿಂದ ದಿನ ಕೂಡ ರಜತ್‌ಗೆ ಪೇಟ ಹಾಕಿ ಸನ್ಮಾನಿಸುವ ಮೂಲಕ ಚೈತ್ರಾ ಕುಂದಾಪುರ ಅವರು, ರಜತ್‌ಗೆ ಪ್ರೀತಿಯ ಬಾಸ್ ಮಾಡುವ ಸಮಸ್ಕಾರಗಳು ಎಂದು ಕಾಲೆಳೆದಿದ್ದರು.
![ನೀನು ಬಾಸ್ ಅಲ್ಲ.. ಕೂಸು: ಚೈತ್ರಾ ವಿರುದ್ಧ ಮತ್ತೆ ರೊಚ್ಚಿಗೆದ್ದ ರಜತ್](https://cdn-vishwavani-prod.hindverse.com/media/original_images/Rajath_Kishan_and_Chaithra_Kundapura_1.jpg)
Rajath Kishan and Chaithra Kundapura
![Profile](https://vishwavani.news/static/img/user.png)
ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಸೀಸನ್ 11 (Bigg Boss Kannada 11) ಕಾರ್ಯಕ್ರಮ ಮುಗಿದ ಬಳಿಕ ಹೊಸದಾಗಿ ವೀಕೆಂಡ್ನಲ್ಲಿ ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋ ಶುರುವಾಗಿದೆ. ಬಹುತೇಕ ಬಿಗ್ ಬಾಸ್ ಸ್ಪರ್ಧಿಗಳಿಂದಲೇ ಕೂಡಿರುವ ಈ ಶೋ ಸಖತ್ ಕಿಕ್ ಕೊಡುತ್ತಿದೆ. ಹುಡುಗರು ಹುಡುಗಿಯರಿಗೆ ಹಾಕುವ ಚಾಲೆಂಜ್ ಮತ್ತು ಹುಡುಗಿಯರು ಹುಡುಗರಿಗೆ ಹಾಕುವ ಚಾಲೆಂಜ್ ಪ್ರೇಕ್ಷಕರನ್ನು ನಕ್ಕು ನಗಿಸುತ್ತಿದೆ. ವಿಶೇಷ ಎಂದರೆ ಬಿಗ್ ಬಾಸ್ ಮನೆಯಲ್ಲಿ ಸದಾ ಕಿತ್ತಾಡುತ್ತಿದ್ದ ರಜತ್ ಕಿಶನ್ ಮತ್ತು ಚೈತ್ರಾ ಕುಂದಾಪುರ ಈ ರಿಯಾಲಿಟಿ ಶೋನಲ್ಲಿದ್ದು, ಇಲ್ಲೂ ಅದೇ ಕೋಳಿ ಜಗಳ ಮುಂದುವರೆಸಿದ್ದಾರೆ. ಹಾಗಾದರೆ ಹೊಸದಾಗಿ ಇವರು ಏನು ಮಾಡಿದ್ದಾರೆ?, ಏನು ಜಗಳ ನಡೆದಿದೆ?, ಇಲ್ಲಿದೆ ನೋಡಿ ಮಾಹಿತಿ.
ಫೈರ್‌ಬ್ರ್ಯಾಂಡ್ ಎಂದೇ ಖ್ಯಾತಿ ಪಡೆದಿರುವ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಲ್ಲಿ ತಮ್ಮ ಜೋರು ದನಿಯಿಂದಲೇ ಹೆಸರು ಮಾಡಿದರು. ಯಾವುದೇ ಸಂದರ್ಭದಲ್ಲಿ ಇವರು ಬಿಟ್ಟುಕೊಡುತ್ತಿರಲಿಲ್ಲ. ಮಾತಿನ ಮೂಲಕವೇ ಎಲ್ಲ ಸ್ಪರ್ಧಿಗಳಿಗೆ ನಡುಕ ಹುಟ್ಟಿಸಿದ್ದರು. ಇತ್ತ ವೈಲ್ಡ್‌ಕಾರ್ಡ್ ಮೂಲಕ ದಿಢೀರ್ ಎಂಟ್ರಿ ಕೊಟ್ಟ ರಜತ್ ಕಿಶನ್ ಕೂಡ ಕಡಿಮೆಯೇನಿರಲಿಲ್ಲ. ತಮ್ಮ ನೇರ ಮಾತು ಹಾಗೂ ಫಿಲ್ಟರ್ ಇಲ್ಲದೆ ಕೊಡುವಂತಹ ಕೌಂಟರ್ಗಳಿಗೆ ಎದುರಾಳಿ ನಡುಗುತ್ತಿದ್ದರು.
ಬಿಗ್ ಬಾಸ್ ಮನೆಯೊಳಗೆ ಸಖತ್ ಸೌಂಡ್ ಮಾಡುತ್ತಿದ್ದ ಚೈತ್ರಾ- ರಜತ್ ಇದೀಗ ಹೊರಬಂದ ಬಳಿಕ ಮತ್ತೊಮ್ಮೆ ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋ ಮೂಲಕ ಮುಖಾಮುಖಿಯಾಗಿದ್ದಾರೆ. ಗ್ರ್ಯಾಂಡ್ ಓಪನಿಂದ ದಿನ ಕೂಡ ರಜತ್‌ಗೆ ಪೇಟ ಹಾಕಿ ಸನ್ಮಾನಿಸುವ ಮೂಲಕ ಚೈತ್ರಾ ಕುಂದಾಪುರ ಅವರು, ರಜತ್‌ಗೆ ಪ್ರೀತಿಯ ಬಾಸ್ ಮಾಡುವ ಸಮಸ್ಕಾರಗಳು ಎಂದು ಕಾಲೆಳೆದಿದ್ದರು. ಇನ್ನು ಹಾರ ಹಾಕಿದ್ದನ್ನು ಕಂಡು ಇದು ಕುರಿಯನ್ನ ಬಲಿ ಕೊಡಂಗಿದೆ ಎಂದು ರಜತ್‌ಗೆ ಜೋಕ್ ಮಾಡಿದ್ದಾರೆ. ಈ ಶೋನಲ್ಲಿ ಹೇಗೋ ನೆಮ್ಮದಿಯಾಗಿರ್ತಿದ್ದೆ ಎಂದು ರಜತ್ ಹೇಳಿದ್ದಕ್ಕೆ, ನೀನು ನೆಮ್ಮದಿಯಾಗಿ ಇರಬಾರ್ದು ಅಂತಾನೇ ನಾನು ಬಂದಿರೋದು ಎಂದು ಚೈತ್ರಾ ಹೇಳಿದ್ದರು.
ಮೊನ್ನೆ ಕೂಡ ಮತ್ತೆ ಇವರಿಬ್ಬರು ಮುಖಾಮುಖಿ ಆಗಿದ್ದು ಸಖತ್ ಆಗಿ ಕಾಲೆಳೆದುಕೊಂಡಿದ್ದಾರೆ. ನಾನು ಬಾಸು.. ಬಾಸು ಅಂತ ಕರೆದಿದ್ದನ್ನು ನಿಜವಾಗ್ಲೂ ಬಾಸು ಅಂದುಕೊಂಡಿದ್ದಾಳೆ.. ನೀನು ಬಾಸು ಅಲ್ಲ ಕಣೆ ಕೂಸು ಎಂದು ಹೇಳಿದ್ದಾರೆ. ಬಿಗ್ ಬಾಸ್ನಲ್ಲಿ ತಾಯ್ತಾ ಕಟ್ಕೊಂಡು ಮನೆಗೆ ಕಳಿಸಿ ಬಿಟ್ಟೆ.. ಈಗ ಈ ಶೋ ಅದು ಎಂತಾ ಗಜ ಪಡೆ ಜೊತೆಗಿದೆ ಎಂದಿ ರಜತ್ ಹೇಳಿದಾಗ ಅದಕ್ಕೆ ತಿರುಗೇಟು ಕೊಟ್ಟ ಚೈತ್ರಾ ನಾನು ಒಬ್ಳೆ ಸಾಕು ನಿಮ್ಗೆ ಅಷ್ಟೂ ಜನಕ್ಕೆ.. ನಮ್ಮ ಇತರೆ ಗರ್ಲ್ಸ್ ಯಾರೂ ಬೇಕಾಗಿನೇ ಇಲ್ಲ ಎಂದು ಹೇಳಿದ್ದಾರೆ. ಒಟ್ಟಾರೆ ಇವರಿಬ್ಬರ ನಡುವಣ ಕೋಳಿ ಜಗಳ ವೀಕ್ಷಕರಿಗೆ ಮಾತ್ರ ಸಖತ್ ಮನರಂಜನೆ ನೀಡುತ್ತಿದೆ.
Gauthami Jadav: ಮುಂದುವರೆದ ಗೌತಮಿ ಜಾಧವ್ ಟೆಂಪಲ್ ರನ್: ಕನಕನ ಕಿಂಡಿಯಲ್ಲಿ ಬಿಗ್ ಬಾಸ್ ಸ್ಪರ್ಧಿ