#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Bhagya Lakshmi Serial: ಇವತ್ತು ಬಿದ್ದಿರೊ ಭಾಗ್ಯಾ ನಾಳೆ ತಲೆ ಎತ್ತುತ್ತಾಳೆ ನೋಡು: ಕನ್ನಿಕಾಗೆ ಚಾಲೆಂಜ್ ಮಾಡಿದ ಭಾಗ್ಯಾ

ಸಿಂಹ ಯಾವತ್ತೂ ನ್ಯಾಯದ ದಾರಿಯಲ್ಲೇ ಬದುಕತ್ತೆ.. ನಾನು ಸೋತಿರಬಹುದು.. ಆದ್ರೆ ಸತ್ತಿಲ್ಲ.. ಇವತ್ತು ಬಿದ್ದಿರೋ ಭಾಗ್ಯಾ ನಾಳೆ ಎಲ್ಲರ ಮುಂದೆ ತಲೆ ಎತ್ತೋದನ್ನ ನೋಡಲು ತಯಾರಾಗಿರು ಎಂದು ಚಾಲೆಂಜ್ ಮಾಡಿ ಅತ್ತೆ-ಮಾವನನ್ನು ಅಲ್ಲಿಂದ ಕರೆದುಕೊಂಡು ಹೊರಟಿದ್ದಾಳೆ.

ಇವತ್ತು ಬಿದ್ದಿರೊ ಭಾಗ್ಯಾ ನಾಳೆ ತಲೆ ಎತ್ತುತ್ತಾಳೆ ನೋಡು

Bhagya Lakshmi serial

Profile Vinay Bhat Feb 12, 2025 12:27 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಸೇಡಿನ ಸಮಯ ಶುರುವಾಗಿದೆ. ಮೋಸಮಾಡಿ ತನ್ನನ್ನು ಕೆಲಸದಿಂದ ತೆಗೆದಿದ್ದಕ್ಕೆ ಮತ್ತು ಅತ್ತೆ-ಮಾವನಿಗೆ ಅವಮಾನ ಮಾಡಿದ್ದಕ್ಕೆ ಭಾಗ್ಯಾ ಕನ್ನಿಕಾ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದು, ಸವಾಲು ಹಾಕಿ ಬಂದಿದ್ದಾಳೆ. ಅಷ್ಟೇ ಅಲ್ಲದೆ ಆಫೀಸ್​ನಲ್ಲಿ ಎಲ್ಲರ ಎದುರೇ ಭಾಗ್ಯಾ, ಕನ್ನಿಕಾಳ ಕೆನ್ನೆಗೆ ಬಾರಿಸಿ ಮಾನಮರ್ಯಾದೆ ತೆಗೆದಿದ್ದಾಳೆ. ಸದ್ಯ ಧಾರಾವಾಹಿ ಮಹತ್ವದ ಘಟ್ಟಕ್ಕೆ ಬಂದು ನಿಂತಿದ್ದು, ಭಾಗ್ಯಾಳ ಮುಂದಿನ ನಡೆ ಏನು ಎಂಬುದು ರೋಚಕತೆ ಸೃಷ್ಟಿಸಿದೆ.

ಕನ್ನಿಕಾ ಆಫೀಸ್‌ ವಿಳಾಸವನ್ನು ಹಿತಾ ಮೂಲಕ ಪೂಜಾ ಪಡೆದುಕೊಂಡು ಕುಸುಮಾಳಿಗೆ ನೀಡಿದ್ದಾಳೆ. ಭಾಗ್ಯಾಗೆ ನ್ಯಾಯ ಕೊಡಿಸಿಯೇ ತೀರುತ್ತೇನೆಂದು ಧರ್ಮರಾಜ್ ಮತ್ತು ಕುಸುಮಾ ಅಡ್ರೆಸ್ ಹಿಡಿದುಕೊಂಡು ನೇರವಾಗಿ ಕನ್ನಿಕಾಳ ಆಫೀಸ್​ಗೆ ಹೋಗಿದ್ದಾರೆ. ಆದರೆ, ಅಲ್ಲಿ ಧರ್ಮರಾಜ್ ಮತ್ತು ಕುಸುಮಾಗೆ ಕನ್ನಿಕಾ ಅವಮಾನ ಮಾಡುತ್ತಾಳೆ. ತನ್ನ ಆಫೀಸ್ ಸಿಬ್ಬಂದಿಗಳನ್ನೆಲ್ಲ ಕರೆದು, ಅವರ ಮುಂದೆಯೇ ಇಬ್ಬರನ್ನೂ ಅವಮಾನ ಮಾಡುತ್ತಾಳೆ.

ಇವರಿಬ್ರು ಯಾರು ಗೊತ್ತಾ, ನಮ್ಮ ಹೋಟೆಲ್​ನಲ್ಲಿ ವಿಐಪಿಗಳ ಊಟಕ್ಕೆ ಏನೋ ಹಾಕಿ ಅವರನ್ನು ಹಾಸ್ಪಿಟರ್​ಗೆ ಹೋಗೋ ತರ ಮಾಡಿ ನಮ್ಮ ಹೋಟೆಲ್ ಇಮೇಜ್​ನ ಹಾಳು ಮಾಡದ್ದಾಳಲ್ಲ ಅವಳ ಅತ್ತೆ-ಮಾವ ಇವರು. ಆಫೀಸ್ ಸಿಬ್ಬಂದಿಗಳ ಎದುರು ಕುಸುಮಾ ಬಗ್ಗೆ ಕನ್ನಿಕಾ ತುಂಬಾ ಹೀಯಾಳಿಸಿ ಮಾತನಾಡುತ್ತಾಳೆ. ಅಲ್ಲದೆ ಕುಸುಮಾಳನ್ನು ಆಫೀಸಿನಿಂದ ಹೊರಹಾಕಲು ಅವರ ಕೈಯಿಂದ ಹಿಡಿದುಕೊಂಡು ಕರೆದೊಯ್ಯುತ್ತಾಳೆ. ಇದರ ಮಧ್ಯೆ ಅತ್ತೆ-ಮಾವ ಕನ್ನಿಕಾ ಆಫೀಸ್​ಗೆ ಹೋಗಿರುವ ವಿಚಾರ ಭಾಗ್ಯಾಗೆ ಗೊತ್ತಾಗಿದೆ.

ಭಾಗ್ಯಾ ನೇರವಾಗಿ ಕನ್ನಿಕಾ ಆಫೀಸ್​ಗೆ ಬರುತ್ತಾಳೆ. ಅಲ್ಲಿ ಅತ್ತೆ-ಮಾವನಿಗೆ ಆಗುತ್ತಿರುವ ಅವಮಾನ ಕಂಡು ಕೋಪಗೊಳ್ಳುತ್ತಾಳೆ. ಭಾಗ್ಯಾಳನ್ನ ಕೆಲಸದಿಂದ ಕಿತ್ತಾಗಿದ ಮೇಲೂ ಅವಳ ಅತ್ತೆ-ಮಾವ ಮತ್ತೆ ಕೆಲಸ ವಾಪಾಸ್ ಕೊಡಿ ಎಂದು ಭಿಕ್ಷೆ ಬೇಡೋಕೆ ಬಂದಿದ್ದಾರೆ.. ನೀವು ಗತಿ ಇಲ್ಲದಿರುವ ಜೊತೆಗೆ ಮಾನಗೆಟ್ಟವರು ಎಂದು ಕನ್ನಿಕಾ ಹೇಳುತ್ತಾಳೆ. ಇದರಿಂದ ಕೋಪಗೊಂಡ ಭಾಗ್ಯಾ, ಮಾತಿನ ಮೇಲೆ ನಿಗ ಇರಲಿ ಎಂದು ಹೇಳಿ ಕನ್ನಿಕಾಳ ಕೆನ್ನೆಗೆ ಬಾರಿಸಿದ್ದಾಳೆ.



ಸಿಂಹ ಯಾವತ್ತೂ ನ್ಯಾಯದ ದಾರಿಯಲ್ಲೇ ಬದುಕತ್ತೆ.. ಈ ತರ ಬಂಡು ಬದುಕ ಬದುಕೋದು ನರಿ.. ಕೈಲಾಗದಿರೋದು ಮಾತ್ರ ಹಿರಿಯರ ಮೇಲೆ ದಾಳಿ ಮಾಡೋದು.. ನನ್ಗೆ ಎಲ್ಲೂ ಕೆಲಸ ಸಿಗದೇ ಇರೊ ತರ ಏನಾದ್ರು ಮಾಡಬಹುದು ಅಂತ ನೀನು ಅಂದುಕೊಂಡಿದ್ರೆ ಅದನ್ನ ತಲೆಯಿಂದ ತೆಗೆದುಹಾಕಿಬಿಡು. ನಾನು ಸೋತಿರಬಹುದು.. ಆದ್ರೆ ಸತ್ತಿಲ್ಲ.. ಇವತ್ತು ಬಿದ್ದಿರೋ ಭಾಗ್ಯಾ ನಾಳೆ ಎಲ್ಲರ ಮುಂದೆ ತಲೆ ಎತ್ತೋದನ್ನ ನೋಡಲು ತಯಾರಾಗಿರು ಎಂದು ಚಾಲೆಂಜ್ ಮಾಡಿ ಅತ್ತೆ-ಮಾವನನ್ನು ಅಲ್ಲಿಂದ ಕರೆದುಕೊಂಡು ಹೊರಟಿದ್ದಾಳೆ.

Rajath Kishan: ರಜತ್ ವರ್ತನೆಯಿಂದ ಕೋಪಗೊಂಡ ಸುದೀಪ್ ಮಗಳು ಸಾನ್ವಿ: ವೈರಲ್ ಆಗ್ತಿದೆ ವಿಡಿಯೋ