#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Rajath Kishan: ರಜತ್ ವರ್ತನೆಯಿಂದ ಕೋಪಗೊಂಡ ಸುದೀಪ್ ಮಗಳು ಸಾನ್ವಿ: ವೈರಲ್ ಆಗ್ತಿದೆ ವಿಡಿಯೋ

ಕರ್ನಾಟಕ ಬುಲ್ಡೋಜರ್ಸ್ ತಂಡ ಗೆದ್ದ ಬಳಿಕ ಸಂಭ್ರಮಿಸಿದ ಸಾನ್ವಿ ಸುದೀಪ್ ಗ್ರೂಪ್ ಫೋಟೋಕ್ಕೆ ಪೋಸ್ ಕೊಡಲು ಮುಂದಾಗಿದ್ದಾರೆ. ದೀಪಿಕಾ ದಾಸ್‌, ಅದ್ವಿತಿ ಶೆಟ್ಟಿ, ಅಶ್ವಿತಿ ಶೆಟ್ಟಿ ಜೊತೆ ಸಾನ್ವಿ ಸುದೀಪ್‌ ಫೋಟೋ ತೆಗೆಸಿಕೊಳ್ಳುತ್ತಿದ್ದರು. ಈ ವೇಳೆ ಹಿಂದೆಯಿಂದ ಬಂದ ರಜತ್‌, ಕೈಯಲ್ಲಿ ವಿಕ್ಟರಿ ಸಿಂಬಲ್ ಹಿಡಿದು ಪೋಸ್ ಕೊಟ್ಟರು.

ರಜತ್ ವರ್ತನೆಯಿಂದ ಕೋಪಗೊಂಡ ಸುದೀಪ್ ಮಗಳು ಸಾನ್ವಿ: ವೈರಲ್ ಆಗ್ತಿದೆ ವಿಡಿಯೋ

Rajath Kishan and Savi Sudeep

Profile Vinay Bhat Feb 12, 2025 7:27 AM

ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada 11) ಸ್ಪರ್ಧಿಗಳು ಶೋ ಮುಗಿದ ಬಳಿಕ ಸಖತ್ ಬ್ಯುಸಿಯಾಗಿದ್ದಾರೆ. ಕೆಲವರು ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದರೆ ಇನ್ನೂ ಕೆಲವರು ಕೆಲ ಸಮಾರಂಭದಲ್ಲಿ ಅತಿಥಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಟೆಂಪಲ್ ರನ್​ನಲ್ಲಿ ಬ್ಯುಸಿಯಾಗಿದ್ದಾರೆ. ಫ್ರೀ ಟೈಮ್​ನಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ತಮ್ಮ ಸ್ನೇಹಿತರ ಜೊತೆ ಸಿಸಿಎಲ್ ವೀಕ್ಷಣೆಗೆ ಕೂಡ ಬಂದಿದ್ದಾರೆ. ದೊಡ್ಮನೆಯಲ್ಲಿ ಈ ಬಾರಿ ಹವಾ ಸೃಷ್ಟಿಸಿದ್ದ ರಜತ್ ಕಿಶನ್ ಕೂಡ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ವೀಕ್ಷಣೆಗೆ ಬಂದಿದ್ದು, ಇಲ್ಲೊಂದು ಕಿರಿಕ್ ಮಾಡಿ ಸುದ್ದಿಯಾಗಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊನ್ನೆಯಷ್ಟೆ ಸಿಸಿಎಲ್ ಪಂದ್ಯಗಳು ನಡೆದಿವೆ. ಇದರಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ತೆಲುಗು ವಾರಿಯರ್ ಮುಖಾಮುಖಿ ಆಗಿದ್ದು, ಇದರಲ್ಲಿ ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ಗೆದ್ದು ಬೀಗಿದೆ. ಈ ಪಂದ್ಯವನ್ನು ನೋಡುವುದಕ್ಕೆ ಅನೇಕ ಸೆಲೆಬ್ರಿಟಿಗಳು ಹಾಜರಿದ್ದರು. ಸಾನ್ವಿ ಸುದೀಪ್ ಹಾಗೂ ಪ್ರಿಯಾ ಸುದೀಪ್ ಕೂಡ ಬಂದಿದ್ದರು. ಬಿಬಿಕೆ ಸ್ಪರ್ಧಿಗಳಾದ ಧನರಾಜ್ ಆಚಾರ್, ರಜತ್ ಕಿಶನ್, ಅರವಿಂದ್ ಕೆಪಿ, ದಿವ್ಯಾ ಉರುಡುಗ ಸೇರಿದಂತೆ ಅನೇಕರು ಹಾಜರಿದ್ದರು.

ಕರ್ನಾಟಕ ಬುಲ್ಡೋಜರ್ಸ್ ತಂಡ ಗೆದ್ದ ಬಳಿಕ ಸಂಭ್ರಮಿಸಿದ ಸಾನ್ವಿ ಸುದೀಪ್ ಗ್ರೂಪ್ ಫೋಟೋಕ್ಕೆ ಪೋಸ್ ಕೊಡಲು ಮುಂದಾಗಿದ್ದಾರೆ. ದೀಪಿಕಾ ದಾಸ್‌, ಅದ್ವಿತಿ ಶೆಟ್ಟಿ, ಅಶ್ವಿತಿ ಶೆಟ್ಟಿ ಜೊತೆ ಸಾನ್ವಿ ಸುದೀಪ್‌ ಫೋಟೋ ತೆಗೆಸಿಕೊಳ್ಳುತ್ತಿದ್ದರು. ಈ ವೇಳೆ ಹಿಂದೆಯಿಂದ ಬಂದ ರಜತ್‌, ಕೈಯಲ್ಲಿ ವಿಕ್ಟರಿ ಸಿಂಬಲ್ ಹಿಡಿದು ಪೋಸ್ ಕೊಟ್ಟರು. ಹುಡುಗಿಯರು ಫೋಟೋ ಕ್ಲಿಕ್ಕಿಸಿಕೊಳ್ಳುವಾಗ, ಹಿಂದೆಯಿಂದ ರಜತ್‌ ಬಂದು ಪೋಸ್‌ ಕೊಟ್ಟಿದ್ದು ಸಾನ್ವಿಗೆ ಇಷ್ಟವಾದಂತೆ ಕಾಣಲಿಲ್ಲ.

ಹೆಣ್ಣು ಮಕ್ಕಳೆಲ್ಲ ಸೇರಿ ಖುಷಿಯಾಗಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿರುವಾಗ ತಮಾಷೆ ಮಾಡಲು ಹೋಗಿ ಸಾನ್ವಿ ಕೆಂಗಣ್ಣಿಗೆ ಗುರಿಯಾದರು ರಜತ್. ಕೂಡಲೆ ರಜತ್‌ನ ಪ್ರಶ್ನೆ ಮಾಡಿದರು. ಆಗ ರಜತ್‌ ಹೊರಟರು. ಆನಂತರ ಸಾನ್ವಿ ಪಕ್ಕದಲ್ಲಿ ನಿಂತು ಮತ್ತೆ ಅದೇ ಪೋಸ್‌ನ ರಜತ್‌ ರಿಪೀಟ್ ಮಾಡಿದರು. ಫೋಟೋ ಕ್ಲಿಕ್ ಆದ ಬಳಿಕ, ಥ್ಯಾಂಕ್ಯು ಎಂದು ಹೇಳಿ ಎಲ್ಲರೂ ಹೊರಟರು. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್‌ ಆಗಿದೆ.

Trivikram BBK 11: ಲವ್ ಇತ್ತು-ಬ್ರೇಕಪ್ ಆಯ್ತು-ಈಗ ಸಿಂಗಲ್: ಪ್ರೀತಿಯ ಗುಟ್ಟು ರಟ್ಟು ಮಾಡಿದ ತ್ರಿವಿಕ್ರಮ್