Bhagya Lakshmi Serial: ಭಾಗ್ಯಾಗೆ ಶಾಕ್ ಮೇಲೆ ಶಾಕ್: ಸಂಪೂರ್ಣವಾಗಿ ತಾಂಡವ್ ಕಡೆ ವಾಲುತ್ತಿದೆ ಭಾಗ್ಯಾ ಕುಟುಂಬ
ಭಾಗ್ಯಾ ಕೇಕ್ ತೆಗೆದುಕೊಂಡು ಹೋಗಿ ಕೊಡಬೇಕು ಎನ್ನುವಾಗ ಇದರ ಮೇಲೆ ಯಾರ ಹೆಸರಿದೆ ಎಂದು ನೋಡಲು ಮುಂದಾಗುತ್ತಾಳೆ. ಕೇಕ್ ಮೇಲೆ ತನ್ವಿ ಹೆಸರು ಕಂಡು ಭಾಗ್ಯಾಗೆ ಆಘಾತ ಆಗುತ್ತದೆ. ಅಲ್ಲದೆ ತಲೆ ಎತ್ತಿ ವೇದಿಕೆ ನೋಡಿದಾಗ ಅಲ್ಲಿ ತನ್ವಿ, ತಾಂಡವ್ ಮತ್ತು ಶ್ರೇಷ್ಠಾ ಇರುವುದನ್ನು ಗಮನಿಸಿ ಶಾಕ್‌ಗೆ ಒಳಗಾಗುತ್ತಾಳೆ. ಭಾಗ್ಯಾ ಕಣ್ಣೀರಲ್ಲೇ ಕೇಕ್ ಅನ್ನು ಮಗಳ ಮುಂದೆ ಇಡುತ್ತಾಳೆ.

Bhagya lakshmi serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ (Bhagya Lakshmi) ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡಲಾಗುತ್ತದೆ.. ಸದ್ಯ ಧಾರಾವಾಹಿ ಮಹತ್ವದ ಘಟ್ಟಕ್ಕೆ ಬಂದು ನಿಂತಿದ್ದು, ಕೆಲಸ ಕಳೆದುಕೊಂಡಿರುವ ಭಾಗ್ಯಾ ಈಗ ತನ್ನ ಕುಟುಂಬವನ್ನೂ ಕಳೆದುಕೊಳ್ಳುತ್ತಾಳ ಅಂಬ ಅನುಮಾನ ಮೂಡಿದೆ. ತಾಂಡವ್ ಮಾಡುತ್ತಿರುವ ಹೊಸ ಪ್ಲ್ಯಾನ್ ಎಲ್ಲ ವರ್ಕ್ ಆಗುತ್ತಿದ್ದು, ಮಗಳು ತನ್ವಿ ಅಂತು ಸುಲಭವಾಗಿ ಬಲೆಗೆ ಬಂದಿದ್ದಾಳೆ. ಅತ್ತ ಕುಸುಮಾ ಕೂಡ ತಾಂಡವ್ನ ನಾಟಕೀಯ ನಡೆಯಿಂದ ಖುಷಿಗೊಂಡಿದ್ದು, ಎಲ್ಲರನ್ನೂ ಬಲೆಗೆ ಬೀಳಿಸುತ್ತಿದ್ದಾರೆ. ಇದಕ್ಕೆ ಶ್ರೇಷ್ಠಾ ಕೂಡ ಸಾಥ್ ನೀಡುತ್ತಿದ್ದಾಳೆ.
ಸದ್ಯ ಧಾರಾವಾಹಿಯಲ್ಲಿ ಭಾಗ್ಯಾ ಮಗಳು ತನ್ವಿ ಬರ್ತ್ ಡೇ ಸೆಲೆಬ್ರೇಷನ್ ನಡೆಯುತ್ತಿದೆ. ತಾಂಡವ್ ತನ್ವಿ ಕಾಲೇಜಿನಲ್ಲಿ ಕೇಕ್ ಕಟ್ ಮಾಡಿ ದೊಡ್ಡದಾಗಿ ಬರ್ತ್ ಡೇ ಸೆಲೆಬ್ರೇಟ್ ಮಾಡ್ತಾನೆ. ಬಳಿಕ ನಿನ್ನ ಫ್ರೆಂಡ್ಸ್ ಅವರನ್ನೆಲ್ಲ ಸಂಜೆ ಕರ್ಕೊಂಡು ಬಾ ಪಾರ್ಟಿ ಇದೆ ಎನ್ನುತ್ತಾನೆ. ಆದರೆ, ತನ್ವಿ ಮನೆಯಲ್ಲಿ ಏನು ಹೇಳೋದು..?, ಅಜ್ಜಿಗೆ ಗೊತ್ತಾದ್ರೆ ಬಿಡೋದೆ ಇಲ್ಲ ಎನ್ನುತ್ತಾಳೆ. ಆಗ ತಾಂಡವ್ ಅಜ್ಜಿಗೆ ಕಾಲ್ ಮಾಡಿ ಮಾತಾಡು.. ಬೈದ್ರೆ ನಂಗೆ ಕಾಲ್ ಕೊಡು ಎನ್ನುತ್ತಾನೆ. ಅದರಂತೆ ತನ್ವಿ ನಿಂದಲೇ ಕುಸುಮಾಗೆ ಕಾಲ್ ಮಾಡುತ್ತಾಳೆ. ಯಾಕೆ ಇನ್ನೂ ಮನೆಗೆ ಬಂದಿಲ್ಲ ಎಂದು ಅಜ್ಜಿ ಜೋರಾಗಿ ಕೇಳುತ್ತಾಳೆ. ಆಗ ತನ್ವಿ, ಇವತ್ತು ನನ್ನ ಬರ್ತ್ ಡೇ ಅಲ್ವಾ.. ಅಪ್ಪ ನನ್ನ ಹೊರಗಡೆ ಕರ್ಕೊಂಡು ಬಂದಿದ್ದಾರೆ ಎನ್ನುತ್ತಾಳೆ. ಇದನ್ನು ಕೇಳಿ ಕುಸುಮಾಗೆ ತುಂಬಾ ಖುಷಿ ಆಗುತ್ತದೆ.
ಆಗ ತನ್ವಿ ಫೋನನ್ನು ತಾಂಡವ್ ಕೈಗೆ ಕೊಡುತ್ತಾಳೆ. ನಿಮ್ಗೆ ಅವ್ಳು ಹೇಗೆ ಮೊಮ್ಮಗಳೊ ಹಾಗೆ ನನ್ಗೆ ಅವಳು ಮಗಳು.. ಅವಳ ಬರ್ತ್ ಡೇನ ಸೆಲೆಬ್ರೇಟ್ ಮಾಡ್ಬೇಕು ಅನಿಸುತ್ತು ಹಾಗೆ ಕರ್ಕೊಂಡು ಬಂದಿದ್ದೀನಿ ಎನ್ನುತ್ತಾನೆ. ಇದನ್ನ ಕೇಳಿ ಕುಸುಮಾಗೆ ಮತ್ತಷ್ಟು ಖುಷಿ ಆಗುತ್ತದೆ. ಅದರಂತೆ ತಾಂಡವ್, ಹುಟ್ಟುಹಬ್ಬದ ಸೆಲೆಬ್ರೇಷನ್ಗೆ ರೆಸಾರ್ಟ್‌ಗೆ ಕರೆದುಕೊಂಡು ಬಂದಿದ್ದಾನೆ. ಅಲ್ಲಿ ಹುಟ್ಟುಹಬ್ಬ ಆಚರಣೆಗೆ ಎಲ್ಲ ರೀತಿಯ ಏರ್ಪಾಟು ಆಗಿರುತ್ತದೆ. ತನ್ವಿಯ ಸಹಪಾಠಿಗಳು ಕೂಡ ಬಂದಿದ್ದಾರೆ.
ತನ್ವಿ, ಕಡು ಗುಲಾಬಿ ಬಣ್ಣದ ಬಾರ್ಬಿ ಉಡುಗೆ ಧರಿಸಿ, ಮಿರ ಮಿರ ಮಿಂಚುತ್ತಿದ್ದಾಳೆ, ರಾಜಕುಮಾರಿ ರೀತಿ ಕಾಣಿಸುತ್ತಿದ್ದಾಳೆ, ಅಂದವಾಗಿ ಸಿಂಗಾರಗೊಂಡು ರೆಡಿಯಾಗಿರುತ್ತಾಳೆ. ಆದರೆ, ಅತ್ತ ಮಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಬೇಕು ಎಂದು ಭಾಗ್ಯಾ ಎಲ್ಲಿಲ್ಲದ ಕಷ್ಟ ಪಡುತ್ತಿದ್ದಾಳೆ. ಕೂಡಿಟ್ಟ ಹಣ ಸಾಗಲಿಲ್ಲ. ಹೀಗಾಗಿ ಹೇಗಾದರು ಮಾಡಿ ಕೆಲ ಸಿಗಲೇಬೇಕೆಂದು ಹುಡುಕಿದಾಗ ತನ್ವಿ ಬರ್ತ್ ಡೇ ಆಚರಣೆ ಮಾಡುತ್ತಿರುವ ಅದೇ ರೆಸಾರ್ಟ್ನಲ್ಲಿ ಭಾಗ್ಯಾಗೆ ಕೆಲಸ ಸಿಗುತ್ತದೆ.
ಭಾಗ್ಯಾ ಜೋಕರ್ ವೇಷ ತೊಟ್ಟು ತನ್ನ ಸಹಪಾಠಿಗಳ ಜೊತೆ ರೆಸಾರ್ಟ್ನಲ್ಲಿ ಎಲ್ಲರನ್ನು ನಗಿಸಬೇಕು. ಜೀವನ ನಡೆಸೋಕೆ ಹೊಸ ವೇಷ ತೊಡ್ಕೊಳ್ತಾ ಇದ್ದೇನೆ ಎಂದು ಹೇಳಿ ಜೋಕರ್ ವೇಷದ ಬಣ್ಣ ಬಳಿಯುತ್ತಾಳೆ. ಅತ್ತ ತಾಂಡವ್ ಕೇಕ್ ಕಟ್ಟಿಂಗ್ ಇದೆ ಎಂದು ತನ್ವಿಗೆ ಹೇಳುತ್ತಾನೆ. ಆಗ ಭಾಗ್ಯಾ ಜೋಕರ್ ವೇಷದಲ್ಲಿ ಸಭೆಯ ಮಧ್ಯೆ ಕೇಕ್ ಹಿಡಿದುಕೊಂಡು ಬರುತ್ತಾಳೆ. ಆದರೆ, ಅಲ್ಲಿ ಭಾಗ್ಯಾಗೆ ದೊಡ್ಡ ಆಘಾತ ಕಾದಿರುತ್ತದೆ. ಭಾಗ್ಯಾ ಜೋಕರ್ ವೇಷ ತೊಟ್ಟು ಕೇಕ್ ಕೊಡಲು ಬಂದಿದ್ದು ಬೇರೆ ಯಾರದ್ದೋ ಬರ್ತ್ ಡೇಗೆ ಅಲ್ಲ.. ತನ್ನ ಸ್ವಂತ ಮಗಳ ಹುಟ್ಟುಹಬ್ಬಕ್ಕೆ.
ಮನೆಯಲ್ಲಿ ಮಗಳು ಕಾಯುತ್ತಾ ಇರುತ್ತಾಳೆ ನನಗೋಸ್ಕರ.. ಬೇಗ ಕೊಟ್ಟಿರುವ ಕೆಲಸ ಮಾಡಿ ಮನೆಗೆ ಹೋಗಿ ಮಗಳ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಬೇಕು ಎಂದು ಭಾಗ್ಯಾ ಆತುರದಲ್ಲಿ ಇರುತ್ತಾಳೆ. ಆಗ ಮ್ಯಾನೇಜರ್ ವೇದಿಕೆಗೆ ಬರ್ತ್‌ಡೇ ಕೇಕ್ ತೆಗೆದುಕೊಂಡು ಹೋಗಲು ಸೂಚಿಸುತ್ತಾರೆ. ಅದರಂತೆ ಭಾಗ್ಯಾ ಕೇಕ್ ತೆಗೆದುಕೊಂಡು ಹೋಗಿ ಕೊಡಬೇಕು ಎನ್ನುವಾಗ ಇದರ ಮೇಲೆ ಯಾರ ಹೆಸರಿದೆ ಎಂದು ನೋಡಲು ಮುಂದಾಗುತ್ತಾಳೆ. ಕೇಕ್ ಮೇಲೆ ತನ್ವಿ ಹೆಸರು ಕಂಡು ಭಾಗ್ಯಾಗೆ ಆಘಾತ ಆಗುತ್ತದೆ. ಅಲ್ಲದೆ ತಲೆ ಎತ್ತಿ ವೇದಿಕೆ ನೋಡಿದಾಗ ಅಲ್ಲಿ ತನ್ವಿ, ತಾಂಡವ್ ಮತ್ತು ಶ್ರೇಷ್ಠಾ ಇರುವುದನ್ನು ಗಮನಿಸಿ ಶಾಕ್‌ಗೆ ಒಳಗಾಗುತ್ತಾಳೆ. ಭಾಗ್ಯಾ ಕಣ್ಣೀರಲ್ಲೇ ಕೇಕ್ ಅನ್ನು ಮಗಳ ಮುಂದೆ ಇಡುತ್ತಾಳೆ. ಅತ್ತ ತಾಂಡವ್-ಶ್ರೇಷ್ಠಾ ಅದ್ಧೂರಿಯಾಗಿ ತನ್ವಿಯ ಬರ್ತ್ ಡೇ ಸೆಲೆಬ್ರೆಟ್ ಮಾಡ್ತಾರೆ. ಇದು ತಾಂಡವ್-ಶ್ರೇಷ್ಠಾ ಪ್ಲ್ಯಾನ್ ಎಂಬುದು ಭಾಗ್ಯಾಗೆ ಗೊತ್ತಿದ್ರೂ ಹೇಳೋಕೆ ಆಗ್ತಾ ಇಲ್ಲ. ಸದ್ಯ ಭಾಗ್ಯಾಳ ಮುಂದಿನ ನಡೆ ಏನು ಎಂಬುದು ರೋಚಕತೆ ಸೃಷ್ಟಿಸಿದೆ.
Master Anand: ಸುಳ್ಳು ಸುದ್ದಿ ಹಬ್ಬಿಸಿದ ಪೇಜ್ ಅಡ್ಮಿನ್ ನಂಬರ್ಸ್ ನನ್ನಲ್ಲಿದೆ: ಎಚ್ಚರಿಕೆ ಕೊಟ್ಟ ಮಾ. ಆನಂದ್