ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Master Anand: ಸುಳ್ಳು ಸುದ್ದಿ ಹಬ್ಬಿಸಿದ ಪೇಜ್‌ ಅಡ್ಮಿನ್‌ ನಂಬರ್ಸ್ ನನ್ನಲ್ಲಿದೆ: ಎಚ್ಚರಿಕೆ ಕೊಟ್ಟ ಮಾ. ಆನಂದ್

ಈ ಡಿವೋರ್ಸ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಪೇಜ್‌ಗಳ ಅಡ್ಮಿನ್‌ ನಂಬರ್‌ಗಳು ನನ್ನ ಬಳಿ ಇದೆ. ದೊಡ್ಡ ದೊಡ್ಡ ವಕೀಲರು ನನಗೆ ಪರಿಚಯ ಇದ್ದಾರೆ. ಈ ಬಗ್ಗೆ ಅವರ ಜೊತೆ ಒಂದು ಸುತ್ತಿನ ಮಾತಾಯಿತು. ಅವರ ವಿರುದ್ಧ ಕ್ರಮ ತೆಗೆದುಕೊಳ್ಳೋಣ ಎನ್ನುವ ಮಟ್ಟಿಗೆ ಹೋಯ್ತು. ಆದರೆ ನಾನು ಬೇಡ ಅದು ಅಂದೆ ಎಂದು ಮಾಸ್ಟರ್‌ ಆನಂದ್ ಹೇಳಿದ್ದಾರೆ.

ಸುಳ್ಳು ಸುದ್ದಿ ಹಬ್ಬಿಸಿದ ಪೇಜ್‌ ಅಡ್ಮಿನ್‌ ನಂಬರ್ಸ್ ನನ್ನಲ್ಲಿದೆ: ಆನಂದ್

Master Ananda

Profile Vinay Bhat Feb 17, 2025 7:44 AM

ಇತ್ತೀಚಿಗೆ ಡಿವೋರ್ಸ್‌ ಎನ್ನುವ ವಿಚಾರದಲ್ಲಿ ಅನೇಕ ಜೋಡಿಗಳ ಹೆಸರು ಕೇಳಿಬರುತ್ತಿದೆ. ಆ ಸೆಲೆಬ್ರೆಟಿ ಜೋಡಿಗಳ ನಡುವೆ ಉತ್ತಮ ಬಾಂಧವ್ಯ ಅನ್ಯೋನ್ಯತೆ ಇದ್ದರೂ ಸಹ ಕೆಲ ಸಾಮಾಜಿಕ ಜಾಲತಾಣ ಬಳಕೆದಾರರು ಮಾತ್ರ ವಿಚ್ಛೇದನ ಸುದ್ದಿಯನ್ನು ಎಲ್ಲೆಡೆ ಹರಡಿಸುತ್ತಾರೆ. ಕಳೆದ ಡಿಸೆಂಬರ್​ನಲ್ಲಿ ಈ ಸಾಲಿಗೆ ಕನ್ನಡ ಚಿತ್ರರಂಗದ ಖ್ಯಾತ ನಟ, ಕಿರುತೆರೆಯ ಜನಪ್ರಿಯ ನಿರೂಪಕ ಮಾಸ್ಟರ್‌ ಆನಂದ್ ಹಾಗೂ ಅವರ ಪತ್ನಿ ಯಶಸ್ವಿನಿ ಹೆಸರು ತುಳುಕು ಹಾಕಿಕೊಂಡಿತ್ತು. ಇದೀಗ ವಿಶ್ವವಾಣಿ ಜೊತೆಗಿನ ಸಂದರ್ಶನದಲ್ಲಿ ಮಾಸ್ಟರ್ ಆನಂದ್ ಈ ಕುರಿತು ಮಾತನಾಡಿದ್ದಾರೆ.

ಯಶಸ್ವಿನಿ ಆನಂದ್‌ ಅವರು ಒಂದು ರೀಲ್ಸ್ ಮಾಡಿ, ಅದನ್ನ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್‌ ಮಾಡಿದ್ದರು. ಇದಕ್ಕೆ ಮಹಿಳೆಯೊಬ್ಬಳು ನೆಕ್ಸ್ಟ್‌ ಡಿವೋರ್ಸ್‌ ಲೋಡಿಂಗ್‌ ಎಂದು ಕಾಮೆಂಟ್‌ ಹಾಕಿದ್ದರು. ಆನಂದ್‌ ಪತ್ನಿ ಆ ಕಾಮೆಂಟ್‌ ನೋಡಿ ರಿಪ್ಲೈ ಮಾಡಿದ್ದರು. ಪಾಸಿಬಲ್ ಇಲ್ಲ. ಆನಂದನ್‌ನ ನಾನು ನನ್ನ ಮಕ್ಕಳಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತೀನಿ. ಈ ತರಹ ಇಲ್ಲ ಸಲ್ಲದ ರೂಮರ್ಸ್ ಹಬ್ಬಿಸಬೇಡಿ ಎಂದು ಯಶಸ್ವಿನಿ ಪ್ರತಿಕ್ರಿಯೆ ಕೊಟ್ಟಿದ್ದರು.

ಇಲ್ಲಿಂದ ಮಾಸ್ಟರ್ ಆನಂದ್ - ಯಶಸ್ವಿನಿ ಡಿವೋರ್ಸ್ ವಿಚಾರ ವೈರಲ್‌ ಆಯ್ತು. ಮಾಧ್ಯಮದಲ್ಲಿ ಇದು ದೊಡ್ಡ ಸುದ್ದಿ ಆಯಿತು. ಇದೀಗ ಈ ಕುರಿತು ಆನಂದ್ ಪ್ರತಿಕ್ರಿಯೆ ನೀಡಿದ್ದಾರೆ. ಡಿವೋರ್ಸ್‌ ಅನ್ನುವ ಒಂದೇ ಒಂದು ಪದ ಇಟ್ಟುಕೊಂಡು ಈ ವಿಚಾರಕ್ಕೆ ಇನ್ನೂ ಏನೇನೋ ತಿರುವು ಕೊಟ್ಟರು. ಅವರು ಯಾರು ಮತ್ತು ಅವರ ಕಾಂಟ್ಯಾಕ್‌ ಡೀಟೇಲ್ಸ್‌ ಎಲ್ಲವನ್ನು ನಾನು ಕಲೆಕ್ಟ್‌ ಮಾಡಿದೆ. ನಮ್ಮ ಹೆಸರನ್ನು ಬಳಸಿಕೊಂಡು ಎಷ್ಟೋ ಜನ ಊಟ ಮಾಡುತ್ತಿದ್ದಾರೆ. ಮಾಡಲಿ ಬಿಡಿ ಪಾಪಾ ಅಂತ ಸುಮ್ಮನಾದೆ ಎಂದಿದ್ದಾರೆ.



ಈ ಡಿವೋರ್ಸ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಪೇಜ್‌ಗಳ ಅಡ್ಮಿನ್‌ ನಂಬರ್‌ಗಳು ನನ್ನ ಬಳಿ ಇದೆ. ದೊಡ್ಡ ದೊಡ್ಡ ವಕೀಲರು ನನಗೆ ಪರಿಚಯ ಇದ್ದಾರೆ. ಈ ಬಗ್ಗೆ ಅವರ ಜೊತೆ ಒಂದು ಸುತ್ತಿನ ಮಾತಾಯಿತು. ಅವರ ವಿರುದ್ಧ ಕ್ರಮ ತೆಗೆದುಕೊಳ್ಳೋಣ ಎನ್ನುವ ಮಟ್ಟಿಗೆ ಹೋಯ್ತು. ಆದರೆ ನಾನು ಬೇಡ ಅದು ಅಂದೆ ಎಂದು ಹೇಳಿದ್ದಾರೆ. ನನಗೆ ತುಂಬಾ ಪರಿಚಯ ಇರುವ ಪೊಲೀಸರು ಹಾಗೂ ವಕೀಲರು ಹೇಳಿದರು ಹು ಅನ್ನಿ ಆನಂದ್‌, ಏನು ಮಾಡಬೇಕೋ ನೋಡೋಣ. ಅವನನ್ನು ತಂದು ನಿಲ್ಲಿಸುತ್ತೇನೆ ಅಂದರು. ನಾನೇ ಬೇಡ ಅಂದೆ ಎಂದಿದ್ದಾರೆ.

Bro Gowda Marriage: ವಿಡಿಯೋ ಮೂಲಕ ಮದುವೆಯಾಗೋ ಹುಡುಗಿಯನ್ನು ಪರಿಚಯಿಸಿದ ಬ್ರೋ ಗೌಡ