Vishwavani Editorial: ಬಿಜೆಪಿ ಕಲಹ ಉಲ್ಭಣ
ಪಕ್ಷದ ಕಟ್ಟಾ ಹಿಂದೂ ನಾಯಕ ಎಂದು ಗುರುತಿಸಿಕೊಂಡಿದ್ದ ಯತ್ನಾಳ್‌ರಿಗೆ ಕೇಂದ್ರ ದಲ್ಲೂ, ರಾಜ್ಯದಲ್ಲೂ ಕೆಲ ನಾಯಕರು ಬೆಂಬಲವಾಗಿ ನಿಂತಿದ್ದರು. ಆದರೆ ಪಕ್ಷದ ಈ ಆಂತರಿಕ ಕಚ್ಚಾಟ ವನ್ನು ನಿರ್ಲಕ್ಷಿಸುತ್ತಲೇ ಬಂದ ಹೈಕಮಾಂಡ್, ಇದೀಗ ಒಮ್ಮಿಂದೊ ಮ್ಮೆಲೆ ಕೆಲವರಿಗೆ ಶೋಕಾ ಸ್ ನೋಟಿಸ್ ನೀಡಿದೆ.


Source : https://vishwavani.news/karnataka/basangouda-patil-yatnals-supporters-resign-after-his-expulsion-380
ಬಿಜೆಪಿ ನಾಯಕ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಚಾಟನೆಯೊಂದಿಗೆ ರಾಜ್ಯ ಬಿಜೆಪಿಯ ಬಣ ಕದನ ಮತ್ತೊಂದು ಮಜಲು ಪ್ರವೇಶಿಸಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಪಕ್ಷ ತನ್ನ ಒಳಜಗಳದ ಕಾರಣದಿಂದ ಪ್ರಬಲ ಪ್ರತಿಪಕ್ಷ ವಾಗಿಯೂ ಗುರುತಿಸಿಕೊಳ್ಳುವಲ್ಲಿ ವಿಫಲವಾಗಿದೆ. ಬಿಜೆಪಿಯ ಹಿರಿಯ ನಾಯಕರು ಆಡಳಿತ ಪಕ್ಷದೊಂದಿಗೆ ಹೊಂದಾಣಿಕೆ ರಾಜಕೀಯ ಮಾಡಿಕೊಂಡು ಬಂದಿದ್ದಾರೆಂದು ಆರೋಪಿಸಿದ್ದ ಯತ್ನಾಳ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ಸಮರ ಸಾರಿದ್ದರು.
ಪಕ್ಷದ ಕಟ್ಟಾ ಹಿಂದೂ ನಾಯಕ ಎಂದು ಗುರುತಿಸಿಕೊಂಡಿದ್ದ ಯತ್ನಾಳ್‌ರಿಗೆ ಕೇಂದ್ರ ದಲ್ಲೂ, ರಾಜ್ಯದಲ್ಲೂ ಕೆಲ ನಾಯಕರು ಬೆಂಬಲವಾಗಿ ನಿಂತಿದ್ದರು. ಆದರೆ ಪಕ್ಷದ ಈ ಆಂತರಿಕ ಕಚ್ಚಾಟವನ್ನು ನಿರ್ಲಕ್ಷಿಸುತ್ತಲೇ ಬಂದ ಹೈಕಮಾಂಡ್, ಇದೀಗ ಒಮ್ಮಿಂದೊ ಮ್ಮೆಲೆ ಕೆಲವರಿಗೆ ಶೋಕಾಸ್ ನೋಟಿಸ್ ನೀಡಿದೆ.
ಇದನ್ನೂ ಓದಿ: Vishwavani Editorial: ಕಾನೂನು ಮೇಲ್ಮಟ್ಟದಿಂದ ಜಾರಿಯಾಗಲಿ
ಯತ್ನಾಳ್‌ರನ್ನು 6 ವರ್ಷ ಅವಧಿಗೆ ಉಚ್ಚಾಟಿಸಿದೆ. ಯತ್ನಾಳ್‌ರ ಉಚ್ಚಾಟನೆ ನಿರ್ಧಾರ ವನ್ನು ಮರುಪರಿಶೀಲಿಸುವಂತೆ ಶಾಸಕ ಶ್ರೀರಾಮುಲು, ರಮೇಶ್ ಜಾರಕಿಹೊಳಿ ಹೈಕಮಾಂ ಡ್‌ಗೆ ಮನವಿ ಮಾಡಿದ್ದಾರೆ. ಇನ್ನೂ ಅನೇಕ ನಾಯಕರು ಇದೇ ಮನಸ್ಥಿತಿಯಲ್ಲಿ ದ್ದಾರೆ. ಬಿಜೆಪಿ ವರಿಷ್ಠರು ಈ ಹಿಂದೆಯೇ ಇತ್ತಂಡಗಳ ನಾಯಕರನ್ನು ಒಂದೆಡೆ ಸೇರಿಸಿ ಭಿನ್ನಾಭಿ ಪ್ರಾಯಗಳನ್ನು ಸರಿಪಡಿಸುವ ಕೆಲ ಮಾಡಿದ್ದರೆ ಪಕ್ಷದಲ್ಲಿ ಇಷ್ಟೊಂದು ಅಶಿಸ್ತು ತಾಂಡವ ವಾಡುತ್ತಿರಲಿಲ್ಲ.
ಹಾಗೆ ನೋಡಿದರೆ ಬಿಎಸ್‌ವೈ ಬಳಿಕದ ಸಮರ್ಥ ನಾಯಕನನ್ನು ಗುರುತಿಸಲು ಪಕ್ಷ ವಿಫಲ ವಾಗಿದ್ದೇ ಇಂದಿನ ಈ ಸಮಸ್ಯೆಯ ಮೂಲಕಾರಣ. 2021ರಲ್ಲಿ ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಸ್ಥಾನಕ್ಕೆ ತಂದ ಹೈಕಮಾಂಡ್ ಈ ಮೂಲಕ ಹೊಸ ನಾಯಕತ್ವ ಕಂಡುಕೊಳ್ಳುವ ಪ್ರಯತ್ನ ಮಾಡಿತ್ತು. ಬಳಿಕ ಲಿಂಗಾಯತ ಸಮುದಾಯದ ಮುನಿಸು ತಣಿಸುವ ಪ್ರಯತ್ನವಾಗಿ ಬಿಎಸ್‌ವೈ ಪುತ್ರ ವಿಜಯೇಂದ್ರರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿತ್ತು.
ಇದು ಯತ್ನಾಳ್ ಸೇರಿದಂತೆ ಹಲವು ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಬಳಿಕ ಪ್ರತಿಪಕ್ಷ ನಾಯಕನ ಆಯ್ಕೆಗೂ ದೀರ್ಘ ಸಮಯ ತೆಗೆದುಕೊಂಡ ವರಿಷ್ಠರು ವಿಳಂಬ ನೀತಿಯ ಮೂಲಕವೇ ಆಂತರಿಕ ಜಗಳ ಉಲ್ಬಣಿಸಲು ಕಾರಣರಾಗಿದ್ದರು. ಈ ಒಳಜಗಳ ದಿಂದ ತಳಮಟ್ಟದಲ್ಲಿ ಬಲಿಷ್ಠವಾಗಿದ್ದ ಪಕ್ಷ ಸಂಘಟನೆಯೂ ಶಿಥಿಲವಾಗಿದೆ. ಕಾರ್ಯ ಕರ್ತರು ಅತಂತ್ರರಾಗಿದ್ದಾರೆ. ಯತ್ನಾಳ್ ಉಚ್ಚಾಟನೆಯೊಂದಿಗೆ ಪಕ್ಷದಲ್ಲಿನ ಬಂಡಾಯದ ವಾತಾವರಣ ನಿಲ್ಲುವ ಖಾತರಿ ಇಲ್ಲ. ಬದಲಾಗಿ ಅದು ಇನ್ನಷ್ಟೂ ಉಲ್ಭಣಿಸುವ ಸಾಧ್ಯತೆ ಇದೆ.