Metro fare hike: ಜನಾಕ್ರೋಶದ ಬೆನ್ನಲ್ಲೇ ಮೆಟ್ರೋ ಟಿಕೆಟ್ ದರ ಇಳಿಕೆಗೆ ಬಿಎಂಆರ್‌ಸಿಎಲ್ ನಿರ್ಧಾರ!
Metro fare hike: ಕನಿಷ್ಠ ದರ 10 ರೂಪಾಯಿ ಹಾಗೂ ಗರಿಷ್ಠ ದರ 90 ರೂಪಾಯಿ ಇದೆ. ಇದರಲ್ಲಿ ಯಾವುದೇ ಬದಲಾವಣೆ ಆಗಲ್ಲ. ಉಳಿದಂತೆ ಸ್ಟೇಜ್ ಲೆಕ್ಕದಲ್ಲಿ ದರ ಪರಿಷ್ಕರಣೆ ಮಾಡಲು ಮುಂದಾಗುತ್ತೇವೆ. ನಾಳೆಯಿಂದ ಪರಿಷ್ಕೃತ ದರ ಜಾರಿಯಾಗಲಿದೆ ಎಂದು ಬಿಎಂಆರ್‌ಸಿಎಲ್ ಎಂಡಿ ಮಹೇಶ್ವರ್ ರಾವ್ ತಿಳಿಸಿದ್ದಾರೆ.
![ಮೆಟ್ರೋ ಟಿಕೆಟ್ ದರ ಇಳಿಕೆಗೆ ಬಿಎಂಆರ್‌ಸಿಎಲ್ ನಿರ್ಧಾರ!](https://cdn-vishwavani-prod.hindverse.com/media/original_images/Namma_metro.jpg)
![Profile](https://vishwavani.news/static/img/user.png)
ಬೆಂಗಳೂರು: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ಜನಾಕ್ರೋಶ ವ್ಯಕ್ತವಾದ ಬೆನ್ನಲ್ಲೇ ಅಲ್ಪ ಪ್ರಮಾಣದಲ್ಲಿ ದರ ಇಳಿಕೆಗೆ ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಈ ಮೊದಲು ಶೇ.46 ವರೆಗೂ ದರ ಏರಿಕೆಯಾಗಲಿದೆ ಎಂದು ಬಿಎಂಆರ್‌ಸಿಎಲ್ (Metro fare hike) ತಿಳಿಸಿತ್ತು. ಆದರೆ, ಕೆಲವು ಸ್ಟೇಜ್‌ಗಳಲ್ಲಿ ಶೇ. 90ರಿಂದ ಶೇ.100 ಟಿಕೆಟ್ ದರ ಹೆಚ್ಚಾದ ಹಿನ್ನೆಲೆಯಲ್ಲಿ ನಿಗಮದ ವಿರುದ್ಧ ಪ್ರಯಾಣಿಕರು ಅಸಮಾಧಾನ ಹೊರಹಾಕಿದ್ದರು. ಈ ಸಂಬಂಧ ಇದೀಗ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿರುವ ಬಿಎಂಆರ್‌ಸಿಎಲ್ ಎಂಡಿ ಮಹೇಶ್ವರ್ ರಾವ್ ಅವರು, ಕೆಲವು ಕಡೆ ಶೇ.90 ರಿಂದ ಶೇ.100ರಷ್ಟು ಟಿಕೆಟ್ ದರ ಹೆಚ್ಚಳವಾಗಿದೆ. ಎಲ್ಲೆಲ್ಲಿ ಹೆಚ್ಚಾಗಿದೆಯೋ ಅಲ್ಲಿ ಬದಲಾವಣೆ ಮಾಡುತ್ತೇವೆ. ಶೇ.45 ರಷ್ಟು ಮಾತ್ರ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುತ್ತೇವೆ. ಇದರಿಂದ ಜನರಿಗೆ ರಿಲೀಫ್ ಸಿಗುತ್ತದೆ ಎಂದು ತಿಳಿಸಿದ್ದಾರೆ.
2010ರಲ್ಲಿ ನಮ್ಮ ಮೆಟ್ರೋ ಶುರುವಾಗಿದ್ದು, ಕಳೆದ 15 ವರ್ಷದಿಂದ ಕಾರ್ಯಾಚರಣೆ ನಡೆಸುತ್ತಿದ್ದೇವೆ. ನಾಲ್ಕೈದು ವರ್ಷದಿಂದ ದರ ಪರಿಷ್ಕರಣೆ ಮಾಡಲು ಕೇಳಿದ್ದೆವು. ಆದರೆ, ಅಸಹಜವಾಗಿ ಟಿಕೆಟ್ ದರ ಏರಿಕೆ ಮಾಡಿದ್ದಾರೆ ಎಂಬ ದೂರುಗಳು ಬಂದಿವೆ. ಈ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದೇವೆ. ಜತೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೂ ಟಿಕೆಟ್ ದರದ ಬಗ್ಗೆ ಪರಿಶೀಲಿಸಲು ತಿಳಿಸಿದ್ದಾರೆ. ಮೆಟ್ರೋ ದರ ಏರಿಕೆ ಬಗ್ಗೆ ಜನ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇವೆಲ್ಲವನ್ನು ಪರಿಗಣಿಸಿ ದರ ನಿಗದಿ ಬದಲಾವಣೆ ಮಾಡುತ್ತೇವೆ ಎಂದು ಹೇಳಿದರು.
ನಾವು ಪ್ಲಾಟ್ ಫಾರ್ಮ್ ಡೋರ್‌ಗಳನ್ನು ಹಾಕಬೇಕು. ಆದ್ದರಿಂದ ನಮಗೆ ಒಂದಷ್ಟು ಆದಾಯ ಬೇಕಾಗುತ್ತದೆ. ಹೀಗಾಗಿ, ಟಿಕೆಟ್ ದರ ಏರಿಕೆ ಮಾಡುವುದು ಅನಿವಾರ್ಯವಾಗಿತ್ತು. ಮೆಟ್ರೋ ದರ ಏರಿಕೆ ಮಾಡಿದ್ದ ತಕ್ಷಣ ನಮಗೆ ತುಂಬಾ ಆದಾಯ ಬರುವುದಿಲ್ಲ. ಲೋನ್ ಪೇಮೆಂಟ್ ಬಾಕಿ ಇದೆ. ನಮ್ಮ ನಿರ್ವಹಣಾ ವೆಚ್ಚವೂ ಹೆಚ್ಚಾಗಿದೆ. ನಮ್ಮ ಮೆಟ್ರೋ ಹಲವು ವರ್ಷಗಳಿಂದ ನಷ್ಟದಲ್ಲಿಯೇ ನಡೆಯುತ್ತಿದೆ. ಆದರೂ, ದರ ಏರಿಕೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಶೀಘ್ರದಲ್ಲಿಯೇ ಮೆಟ್ರೋ ದರ ಪರಿಷ್ಕರಣೆ ಪಟ್ಟಿ ಬಿಡುಗಡೆ ಮಾಡುತ್ತೇವೆ.
ಎಲ್ಲ ಸ್ಟೇಜ್‌ಗಳಲ್ಲೂ ನಾವು ಇಷ್ಟೇ ಅಂತ ಏರಿಕೆ ಮಾಡಿಲ್ಲ. 29 ರೂಪಾಯಿ ಇರುವುದು 60 ರೂಪಾಯಿಗೆ ಜಂಪ್ ಆಗಿದ್ದರೆ ಅದನ್ನು 50 ರೂಪಾಯಿ ಮಾಡುತ್ತೇವೆ. ಸ್ಟೇಜ್ ಬೈ ಸ್ಟೇಜ್ ದರ ಮರ್ಜ್ ಮಾಡುತ್ತೇವೆ. ಮ್ಯಾಟ್ರಿಕ್ಸ್ ಆಧಾರದ ಮೇಲೆ ದರ ನಿಗದಿ ಮಾಡುತ್ತೇವೆ. ಕೆಲವು ಕೇಸ್‌ಗಳಲ್ಲಿ ಶೇಕಡಾವಾರು 30, 40, 50, 70 ರೀತಿಯಲ್ಲಿ ಟಿಕೆಟ್ ದರ ಏರಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Karnataka State Awards: ಗುಂಜಾಳಗೆ ಬಸವ ಪುರಸ್ಕಾರ, ವಿವೇಕ್ ರೈಗೆ ಪಂಪ ಪ್ರಶಸ್ತಿ; 19 ಪುರಸ್ಕೃತರ ಪಟ್ಟಿ ಪ್ರಕಟ
ಇನ್ನು ಕನಿಷ್ಠ ದರ 10 ರೂಪಾಯಿ ಹಾಗೂ ಗರಿಷ್ಠ ದರ 90 ರೂಪಾಯಿ ಇದೆ. ಇದರಲ್ಲಿ ಯಾವುದೇ ಬದಲಾವಣೆ ಆಗಲ್ಲ. ಉಳಿದಂತೆ ಸ್ಟೇಜ್ ಲೆಕ್ಕದಲ್ಲಿ ದರ ಪರಿಷ್ಕರಣೆ ಮಾಡಲು ಮುಂದಾಗುತ್ತೇವೆ. ನಾಳೆಯಿಂದ ಪರಿಷ್ಕೃತ ದರ ಜಾರಿಯಾಗಲಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ತಿಳಿಸಿದರು.