Kangana Ranaut: ಪ್ರೇಮ್ ಬರೆದ ‘ಸೆರಗ ಸರ್ಸೆ’ ಹಾಡಿಗೆ ಕಂಗನಾ ರಣಾವತ್ ಕಿಡಿ!
Kangana Ranaut: ನೋರಾ ಫತೇಹಿ ಮತ್ತು ಸಂಜಯ್ ದತ್ ಅಭಿನಯದ ಕನ್ನಡ ಚಿತ್ರ ಕೆಡಿ - ದಿ ಡೆವಿಲ್‌ನ " ಸರ್ಕೆ ಚುನರ್ ತೇರಿ ಸರ್ಕೆ " ಹಾಡಿನ ಅಶ್ಲೀಲ ಸಾಹಿತ್ಯ ಮತ್ತು ಅಶ್ಲೀಲ ನೃತ್ಯ ಸಂಯೋಜನೆಯಿಂದಾಗಿ ಪ್ರೇಕ್ಷಕರಿಂದ ಭಾರಿ ಟೀಕೆಗೆ ಗುರಿಯಾಯಿತು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಇದರ ಬಗ್ಗೆ ಕಾನೂನು ನೋಟಿಸ್ ಜಾರಿ ಮಾಡಿದೆ. ನಂತರ ಹಾಡನ್ನು ಯೂಟ್ಯೂಬ್ ಮತ್ತು ಇತರ ಪ್ಲ್ಯಾಟ್‌ಫಾರ್ಮ್‌ನಿಂದ ತೆಗೆದುಹಾಕಲಾಗಿದೆ.
ಕಂಗನಾ ರಣಾವತ್ -
ನೋರಾ ಫತೇಹಿ (Nora Fatehi) ಮತ್ತು ಸಂಜಯ್ ದತ್ (Sanjay Datt) ಅಭಿನಯದ ಕನ್ನಡ ಚಿತ್ರ ಕೆಡಿ - ದಿ ಡೆವಿಲ್‌ನ " ಸರ್ಕೆ ಚುನರ್ ತೇರಿ ಸರ್ಕೆ " (Sarke Chunar) ಹಾಡಿನ ಅಶ್ಲೀಲ ಸಾಹಿತ್ಯ ಮತ್ತು ಅಶ್ಲೀಲ ನೃತ್ಯ ಸಂಯೋಜನೆಯಿಂದಾಗಿ ಪ್ರೇಕ್ಷಕರಿಂದ ಭಾರಿ ಟೀಕೆಗೆ ಗುರಿಯಾಯಿತು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಇದರ ಬಗ್ಗೆ ಕಾನೂನು ನೋಟಿಸ್ (Notice) ಜಾರಿ ಮಾಡಿದೆ. ನಂತರ ಹಾಡನ್ನು ಯೂಟ್ಯೂಬ್ ಮತ್ತು ಇತರ ಪ್ಲ್ಯಾಟ್‌ಫಾರ್ಮ್‌ನಿಂದ ತೆಗೆದುಹಾಕಲಾಗಿದೆ.
NHRC ನೋಟಿಸ್ ಜಾರಿ
ವಕೀಲ ವಿನೀತ್ ಜಿಂದಾಲ್ ಅವರು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಔಪಚಾರಿಕ ದೂರು ಸಲ್ಲಿಸಿದ ನಂತರ ಹಾಡಿನ ವಿರುದ್ಧದ ವಿರೋಧ ತೀವ್ರಗೊಂಡಿತು ಎಂದು ANI ವರದಿ ಮಾಡಿದೆ. ವಕೀಲರು ತುರ್ತಾಗಿ ಹಾಡಿನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ವಿನಂತಿಸಿದರು. ಸಾಮಾಜಿಕ ಮಾಧ್ಯಮದಲ್ಲಿ ಇದು ವ್ಯಾಪಕವಾಗಿ ಪ್ರಸಾರವಾಗುತ್ತಿರುವ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: Sara Ali Khan: ಕೇದಾರನಾಥ, ಬದ್ರಿನಾಥ್ ದೇವಾಲಯಕ್ಕೆ ಸೈಫ್ ಅಲಿ ಖಾನ್ ಪುತ್ರಿ ಸಾರಾಗೆ ಪ್ರವೇಶವಿಲ್ಲ!ಕಾರಣ ಇದು
ವರದಿಗಳ ಪ್ರಕಾರ, ಹಾಡಿನ ಕುರಿತು ದೆಹಲಿ ಪೊಲೀಸ್ ಸೈಬರ್ ಸೆಲ್‌ನಲ್ಲಿ ಈಗಾಗಲೇ ಪ್ರತ್ಯೇಕ ಕ್ರಿಮಿನಲ್ ದೂರು ದಾಖಲಾಗಿದೆ.
ಈ ಹಾಡನ್ನು ಆನಂದ್ ಆಡಿಯೋ ಸೋಮವಾರ ಯೂಟ್ಯೂಬ್‌ನಲ್ಲಿ ಹಿಂದಿ, ಮಲಯಾಳಂ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಅಪ್‌ಲೋಡ್ ಮಾಡಿದೆ. ಆದಾಗ್ಯೂ, ದೂರಿನ ನಂತರ, ಹಾಡನ್ನು ವೇದಿಕೆಯಿಂದ ತೆಗೆದುಹಾಕಲಾಗಿದೆ.
ಕಂಗನಾ ರಣಾವತ್ ಖಂಡನೆ
ನಟಿ, ಸಂಸದೆ ಕಂಗನಾ ರಣಾವತ್ ಕೂಡ ಈ ಹಾಡಿನ ಅಸಭ್ಯ ಸಾಹಿತ್ಯವನ್ನು ಖಂಡಿಸಿದ್ದಾರೆ. ಇಂಥ ಹಾಡುಗಳ ಬಗ್ಗೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುವ ಅಗತ್ಯ ಇದೆ ಎಂದು ಅವರು ಹೇಳಿದ್ದಾರೆ.
ಬಾಲಿವುಡ್ ಅಶ್ಲೀಲತೆ, ಗಿಮಿಕ್ ಮತ್ತು ಅಟೆನ್ಷನ್ ಪಡೆಯುವ ತಂತ್ರಗಳಲ್ಲಿ ಎಲ್ಲ ಮಿತಿಗಳನ್ನು ಮೀರಿದೆ. ಇಡೀ ದೇಶವೇ ಇವರನ್ನು ಖಂಡಿಸುತ್ತಿದೆ. ಆದರೆ ಇವರಿಗೆ ಯಾವುದೇ ನಾಚಿಕೆ ಇಲ್ಲ ಎಂದು ನನಗನ್ನಿಸುತ್ತದೆ. ಇಂತಹ ಅಸಭ್ಯ ಪ್ರದರ್ಶನಗಳ ಬಗ್ಗೆ ಸರ್ಕಾರ ಮತ್ತು ಸೆನ್ಸಾರ್ ಮಂಡಳಿಗಳು ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ. ಬಾಲಿವುಡ್‌ಗೆ ಸರಿಯಾದ ಲಗಾಮು ಹಾಕುವ ಸಮಯ ಬಂದಿದೆ’ ಎಂದು ಗುಡುಗಿದ್ದಾರೆ.
#WATCH | Delhi: On the controversy over the actress Nora Fatehi's song, BJP MP Kangana Ranaut says, "Bollywood has crossed all limits with vulgarity, tactics, and attention-seeking. The entire country is condemning and reprimanding them. But I don't think they have any… pic.twitter.com/o4cyShzoEY
— ANI (@ANI) March 17, 2026
ಈ ಹಾಡಿನ ಸಾಹಿತ್ಯ ಕೇಳಿ ಖ್ಯಾತ ಗಾಯಕ ಅರ್ಮಾನ್ ಮಲಿಕ್ ಕೂಡ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ‘ಕೆಡಿ: ದಿ ಡೆವಿಲ್’ ಚಿತ್ರದ ಈ ಹಾಡಿನ ಆರಂಭಿಕ ಸಾಲುಗಳು ಲೈಂಗಿಕತೆಯನ್ನು ಬಿಂಬಿಸುವ ದ್ವಂದ್ವಾರ್ಥದ ಪದಗಳಿಂದ ಕೂಡಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ‘ ನಿರ್ದೇಶಕ ಪ್ರೇಮ್ ಅವರ ಈ ಮಹತ್ವಾಕಾಂಕ್ಷೆಯ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇತ್ತಾದರೂ, ಈ ಹಾಡಿನ ವಿವಾದವು ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಇದನ್ನೂ ಓದಿ: Rashmika Mandanna: ಮತ್ತೆ ಕೆಲಸದ ಕಡೆಗೆ ಗಮನ ಹರಿಸಿದ ರಶ್ಮಿಕಾ ಮಂದಣ್ಣ; ಫೋಟೋ ವೈರಲ್
ʻಕೆಡಿʼ ಚಿತ್ರವನ್ನು ಏಪ್ರಿಲ್ 30ರಂದು ತೆರೆಕಾಣಿಸಲು ನಿರ್ದೇಶಕರು ಸಜ್ಜಾಗಿದ್ದಾರೆ. ಇದೊಂದು ಪ್ಯಾನ್-ಇಂಡಿಯಾ ಆಕ್ಷನ್ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಧ್ರುವ ಸರ್ಜಾ, ಸಂಜಯ್ ದತ್, ರವಿಚಂದ್ರನ್, ರಮೇಶ್ ಅರವಿಂದ್, ಶಿಲ್ಪಾ ಶೆಟ್ಟಿ, ರೀಷ್ಮಾ ನಾಣಯ್ಯ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.