#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Budget 2025: ಧಾರ್ಮಿಕ, ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೆ ಬಜೆಟ್‌ನಲ್ಲಿ ನೆರವು ನಿರೀಕ್ಷೆ

ಭಾರತಕ್ಕೆ ದೇಶ-ವಿದೇಶಗಳ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿ ಪ್ರವಾಸೋದ್ಯಕ್ಕೆ ಉತ್ತೇಜನ ಸಿಗುವ ನಿರೀಕ್ಷೆ ಇದೆ. ಈ ಬಾರಿಯ ಕೇಂದ್ರ ಬಜೆಟ್‌ ಫೆ. 1ರಂದು ಮಂಡನೆಯಾಗಲಿದೆ.

ಬಜೆಟ್‌ 2025: ಧಾರ್ಮಿಕ, ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೆ ನೆರವಿನ ನಿರೀಕ್ಷೆ

ಕಾಶಿ.

Profile Ramesh B Jan 27, 2025 5:11 PM

-ರಾಧಾಕೃಷ್ಣ ಹೊಳ್ಳ, ಅಧ್ಯಕ್ಷ, ರಾಜ್ಯ ಟ್ರಾವೆಲ್ಸ್‌ ಅಸೋಸಿಯೇಶನ್

ಹೊಸದಿಲ್ಲಿ: ಭಾರತಕ್ಕೆ ದೇಶ-ವಿದೇಶಗಳ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಮುಖ್ಯವಾಗಿ ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿ ಮಹತ್ವದ ಯಾತ್ರಾ ಸ್ಥಳಗಳಿಗೆ ಭೇಟಿ ನೀಡುವುದು ಸಾಮಾನ್ಯ. ಅಂಕಿ-ಅಂಶಗಳ ಪ್ರಕಾರ 85% ಪ್ರವಾಸಿಗರು ಧಾರ್ಮಿಕ ಸ್ಥಳಗಳು ಮತ್ತು ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಭಾರತದ ಪ್ರವಾಸೋದ್ಯಮ (Tourism)ದಲ್ಲಿ ಆಧ್ಯಾತ್ಮಿಕತೆ ಮತ್ತು ಧಾರ್ಮಿಕ ಪರಂಪರೆಯ ಪಾತ್ರವನ್ನು ಎತ್ತಿ ತೋರಿಸುತ್ತದೆ. ಈ ಬಾರಿಯ ಬಜೆಟ್‌ನಲ್ಲಿ (Budget 2025) ಧಾರ್ಮಿಕ, ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೆ ನೆರವು ಸಿಗುವ ನಿರೀಕ್ಷೆ ಇದೆ.

ವಾಸ್ತವವಾಗಿ ಭಾರತದಲ್ಲಿ ಪ್ರವಾಸೋದ್ಯಮವು ಅದರ ಶ್ರೀಮಂತ ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಧಾರ್ಮಿಕ ಇತಿಹಾಸದಿಂದ ಹೆಚ್ಚು ಪ್ರಭಾವಿತವಾಗಿದೆ. ಕಾಶಿ, ಹರಿದ್ವಾರ, ಋಷಿಕೇಶ, ಅಮೃತಸರದ ಗೋಲ್ಡನ್ ಟೆಂಪಲ್ ಮತ್ತು ತಮಿಳುನಾಡಿನ ಪ್ರಾಚೀನ ದೇವಾಲಯಗಳು ಪ್ರಮುಖ ಯಾತ್ರಾ ಸ್ಥಳಗಳು ಕೋಟ್ಯಾಂತರ ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಆಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ಹಾಗೂ ವಾರಣಾಸಿ ಕಾರಿಡಾರ್ ಅಭಿವೃದ್ಧಿಯ ಬಳಿಕ, ಉತ್ತರ ಪ್ರದೇಶದ ಆರ್ಥಿಕ ಪರಿಸ್ಥಿತಿಯನ್ನು, ಉದ್ಯೋಗ ಸೃಷ್ಟಿ ಹಾಗೂ ತಲಾ ಆದಾಯದಲ್ಲಿ ಹೆಚ್ಚಳ ಕಂಡು ಬಂದಿದೆ. ಮಹಾ ಕುಂಭಮೇಳವು ಉತ್ತರದ ಹಲವು ರಾಜ್ಯಗಳಿಗೆ ಪ್ರವಾಸೋದ್ಯಮ ಕ್ಷೇತ್ರಕ್ಕೆ ಧಾರ್ಮಿಕ ಪ್ರವಾಸೋದ್ಯಮವು ನಮ್ಮ ದೇಶದ ಬಹುಬಾಗದ ಹಲವು ಉದ್ಯಮಗಳಿಗೆ ಆರ್ಥಿಕವಾಗಿ ಪುನರ್ಜನ್ಮ ಕೊಡಲಿದೆ.

ಪ್ರವಾಸೋದ್ಯಮಕ್ಕೆ ಹೆಚ್ಚಿನ ಕೊಡುಗೆ ನೀಡಿದಲ್ಲಿ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ಆತಿಥ್ಯ, ಸಾರಿಗೆ ಮತ್ತು ಚಿಲ್ಲರೆ ವ್ಯಾಪಾರಕ್ಕೆ ಸಂಬಂಧಿಸಿದ ವ್ಯವಹಾರಗಳನ್ನು ಉತ್ತೇಜಿಸುತ್ತದೆ.

ದೇಶದಲ್ಲಿ ಪ್ರವಾಸೋದ್ದಿಮೆ ಅಭಿವೃದ್ಧಿಗೆ ಮೂಲಭೂತ ಸೌಲಭ್ಯಗಳು ಅಗತ್ಯ. ಜತೆಗೆ ನೇರ ತೆರಿಗೆ ಹಾಗೂ ಪರೋಕ್ಷ ತೆರಿಗೆ ಗಳಲ್ಲಿ ಬದಲಾವಣೆಗಳ ಅವಶ್ಯಕತೆ ಇದೆ. ದೇಶದಾದ್ಯಂತ ಏಕರೂಪ ರಸ್ತೆ ತೆರಿಗೆ ಇರಬೇಕು. ಎಲ್ಲಾ ವಾಹನಗಳಿಗೂ ಒಂದೆ ಪರೋಕ್ಷ ತೆರಿಗೆ ನೀತಿ (GST) ಬೇಕಿದೆ. ಹಾಗೂ ತೆರಿಗೆಯ ಮೇಲಿನ ಸೆಸ್ ಗಳಲ್ಲಿನ ತಾರತಮ್ಯ ತೆಗೆದು ಸಮಾನವಾಗಿಸಬೇಕು.

ಈಗಾಗಲೇ ಎಲೆಕ್ಟ್ರಿಕ್ ವಾಹನಗಳಿಗೆ ರಹದಾರಿ ವಿನಾಯಿತಿ ಒದಗಿಸಿದಂತೆ ಹೈಬ್ರಿಡ್ ಹಾಗೂ ಹೊಸ ವಾಹನಗಳಿಗೆ ದೇಶದಾದ್ಯಂತ ಒಂದು ಪ್ರವಾಸಿ ಸ್ನೇಹಿ ರಹದಾರಿ ವಿನಾಯಿತಿ ಬರಬೇಕಿದೆ. ರಾಜ್ಯಗಳಿಂದ ರಾಜ್ಯಗಳಿಗೆ ವಿಶೇಷ ರಹದಾರಿಯ ವಿನಾಯಿತಿಯ ಅವಶ್ಯಕತೆ ಇದೆ.

ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ರಾಷ್ಟ್ರೀಯ, ಗ್ರಾಮೀಣ, ಪ್ರಾದೇಶಿಕ ಯುವಕರಿಗೆ ಅನುಕೂಲ ಆಗುವಂತೆ, ಗುಡಿ ಕೈಗಾರಿಕೆ, ಸ್ಥಳೀಯ ವಸ್ತುಗಳು ತಿಂಡಿ ತಿನಿಸು ಗಳು ತಯಾರಿಕೆ,ಯೋಗ, ವೇದಾದ್ಯಯನ, ಕರಕುಶಲವಸ್ತುಗಳ ತಾಯಾರಿಕೆಗೆ ಉತ್ತೇಜನ ನೀಡಬೇಕು. ಪ್ರವಾಸೋದ್ಯಮ ಕೋರ್ಸ್‌ಗಳನ್ನು ಬೆಂಬಲಿಸಬೇಕಾಗಿದೆ.

ಈ ಸುದ್ದಿಯನ್ನೂ ಓದಿ: Budget Session: ಜ. 31ರಿಂದ ಸಂಸತ್‌ ಅಧಿವೇಶನ

ರಸ್ತೆಗಳಲ್ಲಿ ಇನ್ಸ್‌ಪೆಕ್ಟರ್ ರಾಜ್ ತಪ್ಪಿಸಬೇಕಾಗಿದೆ. ಪ್ರವಾಸೋದ್ಯಮದಲ್ಲಿ ರೆಡ್‌ ಟ್ಯಾಪಿಸಂ (Red tapism) ನಿರ್ಮೂಲನೆಯ ಅಗತ್ಯ ಇದೆ. ರಾಜ್ಯ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಾಲಕರಿಗೆ ಪ್ರವಾಸಿಗರ ಅವಶ್ಯಕತೆಗಾಗಿ ಪ್ರತಿ ನೂರು ಕಿ.ಮೀ.ಗೆ ಒಂದರಂತೆ ಮಾರ್ಗ ಸೂಚಿ (Wayside Amenity) ಅವಶ್ಯಕವಾಗಿ ಆಗಲೇ ಬೇಕು.