Kolkata Physical Abuse Case: ಕಾನೂನು ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್; ಸಿಸಿಟಿವಿಯಲ್ಲಿ ಸಿಕ್ತು ಮಹತ್ವದ ಸಾಕ್ಷಿ
ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸಾಕ್ಷಿಯೊಂದು ಸಿಕ್ಕಿದೆ. ಸಿಸಿಟಿವಿ ಕ್ಯಾಮೆರಾ ದೃಶ್ಯವೊಂದರಲ್ಲಿ ಯುವತಿಯನ್ನು ಮೂವರು ಕಿಡಿಗೇಡಿಗಳು ಎಳೆದೊಯ್ಯತ್ತಿರುವುದು ಬಯಲಾಗಿದೆ ಎಂದು ಪೊಲೀಸರು ಖಚಿತಪಡಿದ್ದಾರೆ. ಜೂನ್ 25 ರಂದು ಮಧ್ಯಾಹ್ನ 3.30 ರಿಂದ ರಾತ್ರಿ 10.50 ರವರೆಗಿನ ಏಳು ಗಂಟೆಗಳ ಸಿಸಿಟಿವಿ ದೃಶ್ಯಾವಳಿಗಳು ಕಾಲೇಜು ಆವರಣದ ಸುತ್ತಲಿನ ಚಲನವಲನಗಳನ್ನು ಸೆರೆಹಿಡಿದಿವೆ.


ಕೋಲ್ಕತ್ತಾ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಯುವತಿ ಮೇಲೆ ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ(Kolkata Physical Abuse Case) ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸಾಕ್ಷಿಯೊಂದು ಸಿಕ್ಕಿದೆ. ಸಿಸಿಟಿವಿ ಕ್ಯಾಮೆರಾ ದೃಶ್ಯವೊಂದರಲ್ಲಿ ಯುವತಿಯನ್ನು ಮೂವರು ಕಿಡಿಗೇಡಿಗಳು ಎಳೆದೊಯ್ಯತ್ತಿರುವುದು ಬಯಲಾಗಿದೆ ಎಂದು ಪೊಲೀಸರು ಖಚಿತಪಡಿದ್ದಾರೆ. ಜೂನ್ 25 ರಂದು ಮಧ್ಯಾಹ್ನ 3.30 ರಿಂದ ರಾತ್ರಿ 10.50 ರವರೆಗಿನ ಏಳು ಗಂಟೆಗಳ ಸಿಸಿಟಿವಿ ದೃಶ್ಯಾವಳಿಗಳು ಕಾಲೇಜು ಆವರಣದ ಸುತ್ತಲಿನ ಚಲನವಲನಗಳನ್ನು ಸೆರೆಹಿಡಿದಿವೆ. ಈ ದೃಶ್ಯಾವಳಿಗಳು ಸಂತ್ರಸ್ತೆಯನ್ನು ಗಾರ್ಡ್‌ನ ಕೋಣೆಗೆ ಬಲವಂತವಾಗಿ ಕರೆದೊಯ್ಯುವುದನ್ನು ತೋರಿಸಿವೆ, ಅಲ್ಲಿ ಮೂವರು ಆರೋಪಿಗಳು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳು ಹುಡುಗಿಯ ಆರೋಪಗಳನ್ನು ದೃಢಪಡಿಸುತ್ತವೆ. ಇದು ಮೂವರು ಆರೋಪಿಗಳು, ಸೆಕ್ಯುರಿಟಿ ಗಾರ್ಡ್ ಮತ್ತು ಸಂತ್ರಸ್ತೆ ಚಲನವಲನಗಳನ್ನು ತೋರಿಸುತ್ತದೆ. ನಾವು ಪ್ರಸ್ತುತ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ತನಿಖಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈಗ ವಕೀಲರಾಗಿರುವ ಕಾಲೇಜಿನ 31 ವರ್ಷದ ಮಾಜಿ ವಿದ್ಯಾರ್ಥಿ ಮೊನೊಜಿತ್ ಮಿಶ್ರಾ ಮತ್ತು ಇತರ ಮೂವರು ವಿದ್ಯಾರ್ಥಿಗಳು - 19 ವರ್ಷದ ಜೈಬ್ ಅಹ್ಮದ್ ಮತ್ತು 20 ವರ್ಷದ ಪ್ರಮಿತ್ ಮುಖೋಪಾಧ್ಯಾಯ ಮತ್ತು ಸೆಕ್ಯುರಿಟಿ ಗಾರ್ಡ್‌ನನ್ನುಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ವಿದ್ಯಾರ್ಥಿಗಳ ಒಕ್ಕೂಟ ಕೊಠಡಿ, ಶೌಚಾಲಯ ಮತ್ತು ಗಾರ್ಡ್‌ನ ಕೊಠಡಿ ಹೀಗೆ ಮೂರು ಕ್ಯಾಂಪಸ್ ಸ್ಥಳಗಳಿಂದ ತನಿಖಾ ತಂಡವು ಪುರಾವೆಗಳನ್ನು ಸಂಗ್ರಹಿಸಿದೆ.
ಈ ಸುದ್ದಿಯನ್ನೂ ಓದಿ: Emmanuel Macron: ಅಯ್ಯೋ... ಇದೆಂಥಾ ರಾಜತಾಂತ್ರಿಕ ಭೇಟಿ? ಟರ್ಕಿ-ಫ್ರಾನ್ಸ್ ಅಧ್ಯಕ್ಷರ ವಿಚಿತ್ರ ವರ್ತನೆ; ವಿಡಿಯೊ ಫುಲ್ ವೈರಲ್
ಮೂರು ಸ್ಥಳಗಳಿಂದ ವಶಪಡಿಸಿಕೊಂಡ ವಸ್ತುಗಳಲ್ಲಿ ಕೂದಲಿನ ಎಳೆಗಳು, ಅಪರಿಚಿತ ದ್ರವಗಳನ್ನು ಹೊಂದಿರುವ ಹಲವಾರು ಬಾಟಲಿಗಳು ಮತ್ತು ಹಾಕಿ ಸ್ಟಿಕ್ ಸೇರಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಮೂರು ಕೋಣೆಗಳಲ್ಲೂ ಯುವತಿ ಪ್ರತಿರೋಧಿಸಿರುವ ಸ್ಪಷ್ಟ ಲಕ್ಷಣಗಳಿವೆ. ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿಯು ಹಾಕಿ ಸ್ಟಿಕ್ ಹಿಡಿದು ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ. ಪ್ರಮುಖ ಆರೋಪಿಯ ಮೊಬೈಲ್ ಫೋನ್‌ನಿಂದ 1.5 ನಿಮಿಷಗಳ ವೀಡಿಯೊ ಕ್ಲಿಪ್ ಅನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಏತನ್ಮಧ್ಯೆ, ಕೋಲ್ಕತ್ತಾ ಪೊಲೀಸರು ಸಹಾಯಕ ಪೊಲೀಸ್ ಆಯುಕ್ತ (ದಕ್ಷಿಣ ಉಪನಗರ ವಿಭಾಗ) ಪ್ರದೀಪ್ ಘೋಷಾಲ್ ನೇತೃತ್ವದಲ್ಲಿ ಐದು ಸದಸ್ಯರ ವಿಶೇಷ ತನಿಖಾ ತಂಡ (SIT) ಅನ್ನು ರಚಿಸಿದ್ದಾರೆ. SIT ಸಂತ್ರಸ್ತೆ ಮತ್ತು ಆಕೆಯ ಪೋಷಕರಿಂದ ಗೌಪ್ಯ ಹೇಳಿಕೆಯನ್ನು ದಾಖಲಿಸುವ ನಿರೀಕ್ಷೆಯಿದೆ.