ಚಕೋರ ಯುವ ಸಮುದಾಯದಲ್ಲಿ ಕನ್ನಡ ಜಾಗೃತಿ ಮೂಡಿಸುವ ವೇದಿಕೆಯಾಗಿದೆ: ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದ್‌ರಾಜ್
ಕನ್ನಡ ಸಾಹಿತ್ಯವನ್ನು ಯಾಕೆ ಓದಬೇಕು ಎಂದರೆ ೮ ಜ್ಞಾನಪೀಠ ಪ್ರಶಸ್ತಿ ಪಡೆದ ಏಕೈಕ ಭಾಷೆ ಕನ್ನಡ ವಾಗಿದೆ. ಯಾಕೆ ಕನ್ನಡಕ್ಕೆ ಬಂದಿದೆ ಎಂದರೆ ನಾನು ಹೆಮ್ಮೆ ಪಡುವ ಸಂಗತಿ ಇಲ್ಲಿನ ಸಾಹಿತ್ಯ ಕೃತಿಯ ಲ್ಲಿದೆ. ನಾವು ಇವುಗಳ ವಾರಸುದಾರರು ಆದಾಗ ಮಾತ್ರ ಇದರ ಮಹತ್ವ ತಿಳಿಯಬಹುದು. ಸಂವಿಧಾನದ ಪೀಠಿಕಾ ಭಾಗ ಸಂವಿಧಾನದ ಆತ್ಮ ಇದ್ದಂತೆ ೮ ಜ್ಞಾನ ಪೀಠ ಪ್ರಶಸ್ತಿಗಳ ಆತ್ಮ ಕನ್ನಡ ಸಾಹಿತ್ಯ ಕೃತಿ ಗಳಲ್ಲಿ ಅಡಗಿದೆ ಎಂದರು
ಚಿಕ್ಕಬಳ್ಳಾಪುರ: ಕರ್ನಾಟಕ ಸಾಹಿತ್ಯ ಅಕಾಡೆಮಿ ನಡೆಸಿಕೊಂಡು ಬರುತ್ತಿರುವ ಚಕೋರ ಕಾರ್ಯ ಕ್ರಮವು ನಾಡಿನ ಉದ್ದಗಲಕ್ಕೂ ಇರುವ ಯುವ ಸಮುದಾಯದಲ್ಲಿ ಕನ್ನಡ ಭಾಷೆ ಸಾಹಿತ್ಯ ಬಗ್ಗೆ ಅಭಿಮಾನ ಮೂಡಿಸಿ ಅವರನ್ನು ಓದಿಗೆ ಹಚ್ಚುವ ಮಹತ್ತರ ಕಾರ್ಯಕ್ರಮವಾಗಿದೆ ಎಂದು ಕರ್ನಾ ಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದ್‌ರಾಜ್ ತಿಳಿಸಿದರು.
ನಗರದ ವಿಷ್ಣುಪ್ರಿಯ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಚಕೋರ ಕಾರ್ಯಕ್ರಮದ ಉದ್ಘಾ ಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇದನ್ನೂ ಓದಿ: Chikkabalapur Crime: ಪೋಕ್ಸೋ ಕಾಯ್ದೆಯಡಿ 20 ವರ್ಷ ಕಠಿಣ ಶಿಕ್ಷೆ
ಚಕೋರ ಎಂದರೆ ಬೆಳದಿಂಗಳಿಗಾಗಿ ಕಾಯುವ ಕಾಲ್ಪನಿಕ ಪಕ್ಷಿ. ಬೆಳದಿಂಗಳ ತಂಪು ಹೊತ್ತಿನಲ್ಲಿ ಕನ್ನಡ ಸಾಹಿತ್ಯವನ್ನು ಎದೆಗೆ ಇಳಿಸಿಕೊಳ್ಳುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣದ ಶಿಲ್ಪಿಗಳನ್ನಾಗಿ ವಿದ್ಯಾರ್ಥಿಗಳನ್ನು ರೂಪಿಸಬೇಕೆನ್ನುವ ಹಂಬಲ ಚಕೋರ ಕಾರ್ಯಕ್ರಮಕ್ಕಿದೆ. ಸಾಹಿತ್ಯದ ಗುಣವೇ ಕ್ರೂರತ್ವವನ್ನು ಕಳೆದು ಮನುಷ್ಯತ್ವದ ಜೀವಸೆಲೆಯನ್ನು ಎದೆಗಿಳಿಸಲಿದೆ. ಇಂದಿನ ಯುವ ತಲೆಮಾರು ಮೊಬೈಲ್ ನೋಡುವ ಸಂಸ್ಕೃತಿಗೆ ವಿಧಾಯ ಹೇಳಿ ಪುಸ್ತಕ ಓದುವ ಸಂಸ್ಕೃತಿ ಬೆಳೆಸಿಕೊಂಡರೆ ನಿಮ್ಮ ಭವಿಷ್ಯ ಉಜ್ವಲವಾಗಲಿದೆ ಎಂದರು.
ಆದಿಕವಿ ಪಂಪ ಮನುಷ್ಯಜಾತಿ ಒಂದೇ ವಲಂ ಎನ್ನುವ ಮೂಲಕ ನೀವು ನಾವು ಏನೇ ಆಗಿದ್ದರೂ ಮೊದಲು ಮಾನವತೆಗೆ ಜೀವಕೊಡಿ ಎಂದು ಹೇಳುತ್ತಾನೆ.ಪಂಪ ಜೀವಜಗತ್ತಿನ ಸೃಷ್ಟಿಯ ಬಗ್ಗೆ, ಭೋಗ ಜೀವನದ ನೀರಸತೆ ಬಗ್ಗೆ,ಜಾತಿ ಅಹಮಿಕೆಗೆ ಮನ್ನಣೆ ನೀಡದೆ ಪ್ರತಿಭೆಗೆ ಮನ್ನನೆ ನೀಡಿ ಎನ್ನುವ ಸಂದೇಶವನ್ನು ತನ್ನೆರಡು ಕೃತಿಗಳಲ್ಲಿ ಹೇಳುತ್ತಾನೆ.ರನ್ನ, ಜನ್ನ, ಪೊನ್ನರ ಕಾವ್ಯಗಳನ್ನು ಓದುವ ಮೂಲಕ ಸಾಹಿತ್ಯದ ರಸಬನಿಯನ್ನು ಓದುಗರಾದ ನಾವೆಲ್ಲಾ ಸವಿಯಲು ಸಾಧ್ಯ ಎಂದರು.
ಕನ್ನಡ ಸಾಹಿತ್ಯವನ್ನು ಯಾಕೆ ಓದಬೇಕು ಎಂದರೆ ೮ ಜ್ಞಾನಪೀಠ ಪ್ರಶಸ್ತಿ ಪಡೆದ ಏಕೈಕ ಭಾಷೆ ಕನ್ನಡವಾಗಿದೆ.ಯಾಕೆ ಕನ್ನಡಕ್ಕೆ ಬಂದಿದೆ ಎಂದರೆ ನಾನು ಹೆಮ್ಮೆ ಪಡುವ ಸಂಗತಿ ಇಲ್ಲಿನ ಸಾಹಿತ್ಯ ಕೃತಿಯಲ್ಲಿದೆ. ನಾವು ಇವುಗಳ ವಾರಸುದಾರರು ಆದಾಗ ಮಾತ್ರ ಇದರ ಮಹತ್ವ ತಿಳಿಯಬಹುದು. ಸಂವಿಧಾನದ ಪೀಠಿಕಾ ಭಾಗ ಸಂವಿಧಾನದ ಆತ್ಮ ಇದ್ದಂತೆ ೮ ಜ್ಞಾನ ಪೀಠ ಪ್ರಶಸ್ತಿಗಳ ಆತ್ಮ ಕನ್ನಡ ಸಾಹಿತ್ಯ ಕೃತಿಗಳಲ್ಲಿ ಅಡಗಿದೆ ಎಂದರು.
ಸAವಿಧಾನದ ಮಾನವೀಯ ಮೌಲ್ಯಗಳನ್ನು ಭಾರತದ ಪ್ರಜೆಗಳಿಗೆ ೭೫ ವರ್ಷಗಳಲ್ಲಿ ತಿಳಿಸಿದಂತೆ ಕನ್ನಡ ಸಾಹಿತ್ಯದಲ್ಲಿ ಒಂದು ಸಾವಿರ ವರ್ಷಗಳ ಹಿಂದೆಯೇ ತಿಳಿಸಿದೆ.ಕವಿರಾಜ ಮಾರ್ಗ ಕೃತಿಯಲ್ಲಿ ಕನ್ನಡಿಗರ ಸೌಂದರ್ಯ, ಅಭಿಮಾನ,ಜಾಣ್ಮೆ ಹಿರಿಮೆ ಗರಿಮೆ ನಾಡಿನ ಭೌಗೋಳಿಕ ಪರಿಸರವನ್ನು ಸ್ಪಷ್ಟವಾಗಿ ತಿಳಿಸಿದೆ.ಇದನ್ನು ಓದುವ ಮೂಲಕ ನಾವು ಸಂವಿಧಾನದ ಕಾನೂನಾತ್ಮಕ ಸಂಗತಿ ಗಳೊಟ್ಟಿಗೆ ಮುಖಾಮುಖಿ ಆಗಬಹುದು ಎಂದರು.
ಜಾನಪದ ಮಹಾಕಾವ್ಯಗಳಾದ ಮಂಟೆಸ್ವಾಮಿಕಾವ್ಯ, ಮಲೆಮಹದೇಶ್ವರ ಕಾವ್ಯ,ಜುಂಜಪ್ಪನ ಕಾವ್ಯ, ಬಿಳಿಗಿರಿರಂಗಪ್ಪನ ಕಾವ್ಯ,ಸವದತ್ತಿ ಎಲ್ಲಮ್ಮನ ಕಾವ್ಯ,ಅರ್ಜುನ ಜೋಗಿ ಕಾವ್ಯ,ಹೀಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ಜನಪದರು ತಮ್ಮ ಬಾಯಲ್ಲಿಯೇ ಇಟ್ಟುಕೊಂಡಿದ್ದರು.ಇAದು ಇವುಗಳೆಲ್ಲಾ ಪಠ್ಯಗಳಾಗಿ ನಮ್ಮ ಕಣ್ಣಮುಂದೆಯಿವೆ.ಇವುಗಳನ್ನು ಬರೆದವರು ಯಾರೂ ಕೂಡ ಓದಿದವರಲ್ಲ. ಅನಕ್ಷರಸ್ಥ ಸಮುದಾಯ ಎಂದು ಹೇಳಿದರು.
ಅಕಾಡೆಮಿ ಸದಸ್ಯೆ ಅಕೈ ಪದ್ಮಶಾಲಿ ಮಾತನಾಡಿ ತೃತೀಯ ಲಿಂಗಿಗಳಿಗೆ ಸಮಾಜದಿಂದ ಅನುಕೂಲ ಕ್ಕಿಂತ ಅನ್ಯಾಯವೇ ಆಗುತ್ತಿದೆ.ನಿಮ್ಮ ಬಿಕ್ಷೆ,ಸಹಾನುಭೂತಿ ನಮಗೆ ಬೇಡ, ನಿಮ್ಮಂತೆ ಎಲ್ಲರಂತೆ ಸಮಾನ ಅವಕಾಶ ನೀಡಿದರೆ ಸಾಕು ನಾವೂ ಕೂಡ ನಾಗರೀಕ ಬದುಕನ್ನು ಬದುಕುತ್ತೇವೆ.ಇವತ್ತು ನಮಗೆ ಏನಾದರೂ ಅಷ್ಟೋ ಇಷ್ಟೋ ನ್ಯಾಯ ಸಿಕ್ಕಿದೆ ಎಂದರೆ ಕಾನೂನಾತ್ಮಕ ಹೋರಾಟದಿಂದ ಮಾತ್ರ ಎಂಬುದು ಸತ್ಯ.ರಾಜ್ಯ ಸರಕಾರವೂ ಕೂಡ ನಮ್ಮನ್ನು ಅಕಾಡೆಮಿ ಸದಸ್ಯರಾಗಿ ಮಾಡಿದರೆ ಸಾಲದು. ನಮ್ಮ ಧ್ವನಿಗೆ ಬಲ ಬರಬೇಕಾದರೆ ರಾಜ್ಯ ಸಭಾ ಸದಸ್ಯರಾಗಿಯೋ, ವಿಧಾನ ಪರಿಷತ್ ಸದಸ್ಯರಾಗಿಯೋ ಮಾಡಬೇಕಿದೆ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ, ನಾಗಾರ್ಜುನ ಕಾಲೇಜ್ ಆಫ್ ಮ್ಯಾನೇಜ್ ಮೆಂಟ್ ಸ್ಟಡೀಸ್ ಪ್ರಾಶುಪಾಲೆ ಡಾ. ಆನಂದಮ್ಮ,ವಿಷ್ಣುಪ್ರಿಯ ಕಾಲೇಜ್ ಆಫ್ ಮ್ಯಾನೇಜ್ ಮೆಂಟ್ ಸ್ಟಡೀಸ್. ಪ್ರಾಂಶುಪಾಲ ಎನ್. ನಟರಾಜ್, ಹಿರಿಯ ಸಾಹಿತಿ ಕಾಗತಿ ವಿ. ವೆಂಕಟರತ್ನ, ಶ್ರೀಮತಿ ಸರಸಮ್ಮ ನಾಟಕ ಅಕಾಡೆಮಿ ಸದಸ್ಯ ಕೆ.ವಿ ನಾಯಕ (ಅಮಾಸ), ಸಂಸ್ಥಾಪಕರು, ವಿಷ್ಣುಪ್ರಿಯ ಶಿಕ್ಷಣ ಸಂಸ್ಥೆಗಳು ಸಂಸ್ಥಾಪಕ ಶ್ರೀ ರಾಮಚಂದ್ರ ರೆಡ್ಡಿ, ಚಿಕ್ಕಬಳ್ಳಾಪುರ ಚಕೋರ ಸಾಹಿತ್ಯ ವಿಚಾರ ವೇದಿಕೆ ಜಿಲ್ಲಾ ಸಂಚಾಲಕರಾದ ಈ ಧರೆ ಪ್ರಕಾಶ್ ಮತ್ತು ಪಾತಮುತ್ತಕಹಳ್ಳಿ ಮು. ಚಲಪತಿಗೌಡ ಹಾಗೂ ಮುತ್ತಿತರರು ಉಪಸ್ಥಿತರಿದ್ದರು.