Chikkabalapur Crime: ಪೋಕ್ಸೋ ಕಾಯ್ದೆಯಡಿ 20 ವರ್ಷ ಕಠಿಣ ಶಿಕ್ಷೆ
ಗೌರಿಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ಕಲಂ ೩೭೬(೨) (ಎನ್)ಐಪಿಸಿ ,ಕಲಂ ೪ & ೬ ಪೋಕ್ಸೋ ಆಕ್ಟ್ ರೀತ್ಯಾ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಪೂರೈಸಿ ಶ್ರೀ.ರವಿ.ಎಸ್, ಸಿ.ಪಿ.ಐ ಇವರು ದೋಷಾರೋಪಣಾ ಪತ್ರವನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದರು
Source : Chikkaballapur Reporter
ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲೂಕು, ಕಸಬಾ ಹೋಬಳಿ, ಗೋಟಕನಾಪುರ ಗ್ರಾಮದ ಅಪ್ರಾಪ್ತ ಬಾಲಕಿಯನ್ನು ಆರೋಪಿ, ಅಹೇಶ್ ಬಿನ್ ನರಸಿಂಹಪ್ಪ ಇವರು ೨೦೨೦ ನೇ ಜುಲೈ ಮಾಹೆಯಲ್ಲಿ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ತನ್ನ ಜೊತೆ ಕರೆದು ಕೊಂಡು ಹೋಗಿ ಜಮೀನಿನಲ್ಲಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಆಕೆಯ ಮೇಲೆ ಲೈಂಗಿಕ ಅತ್ಯಾಚಾರ ಮಾಡಿ ಗರ್ಭಿಣಿ ಮಾಡಿರುತ್ತಾರೆ.
ಈ ಸಂಬಂಧ ಗೌರಿಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ಕಲಂ ೩೭೬(೨) (ಎನ್)ಐಪಿಸಿ ,ಕಲಂ ೪ & ೬ ಪೋಕ್ಸೋ ಆಕ್ಟ್ ರೀತ್ಯಾ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಪೂರೈಸಿ ಶ್ರೀ.ರವಿ.ಎಸ್, ಸಿ.ಪಿ.ಐ ಇವರು ದೋಷಾರೋಪಣಾ ಪತ್ರವನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಸದರಿ ಪ್ರಕರಣದ ವಿಚಾರಣೆಯು ಚಿಕ್ಕಬಳ್ಳಾಪುರ ಈಖಿSಅ-೧ ನೇ ಘನ ನ್ಯಾಯಾಲಯದಲಿ ನಡೆದಿದ್ದು, ೨೦೨೪ ಡಿಸೆಂಬರ್ ೩೧ರಂದು ವಿಚಾರಣೆ ಮುಗಿದಿರುತ್ತದೆ. ಮಾನ್ಯ ನ್ಯಾಯಾ ಧೀಶರಾದ ಎನ್.ಸವಿತಾ ಕುಮಾರಿ ಅವರು ಆರೋಪಿಗೆ ದಂಡನಿಯ ಕಲಂ ೩೭೬(೨)(ಎನ್) ಐಪಿಸಿ, ಕಲಂ ೪ & ೬ ಆಫ್ ಪೋಕೋ ಆಕ್ಟ್ ೨೦ ವರ್ಷಗಳ ಕಾಲ ಕಠಿಣ ಶಿಕ್ಷೆ ಮತ್ತು 10000/- ರೂ ದಂಡವನ್ನು ವಿಧಿಸಿ ಶಿಕ್ಷೆ ನೀಡಿರುತ್ತಾರೆ.
ಸರ್ಕಾರ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಲಕ್ಷ್ಮಿ ನರಸಿಂಹಪ್ಪ ಇವರು ವಾದ ಮಂಡಿಸಿರುತ್ತಾರೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರಾದ ಲಕ್ಷ್ಮೀ ನರಸಿಂಹಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಂದು ದಿನದ ತರಬೇತಿ ಕಾರ್ಯಾಗಾರ
ಚಿಕ್ಕಬಳ್ಳಾಪುರ : ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಚಿಕ್ಕಬಳ್ಳಾಪುರ ವತಿಯಿಂದ ಜಿಲ್ಲೆಯ ೬ ತಾಲ್ಲೂಕುಗಳಲ್ಲಿ ಪ್ರತ್ಯೇಕವಾಗಿ ಪಿ.ಯು ಸಿ, ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಒಂದು ದಿನದ ತರಬೇತಿ ಕಾರ್ಯಗಾರವನ್ನು ಫೆಬ್ರವರಿ ತಿಂಗಳಲ್ಲಿ ಆಯೋಜಿಸಲಾಗಿದೆ.
ಆಸಕ್ತ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಜನವರಿ ೨೪ ರ ಒಳಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಿಕ್ಕಬಳ್ಳಾಪುರ ಜಿಲ್ಲಾ ಕಚೇರಿಯನ್ನು ಅಥವಾ ದೂರವಾಣಿ ಸಂಖ್ಯೆ: ೦೮೧೫೬-೨೭೦೦೫೪ ಗೆ ಸಂಪರ್ಕಿಸಿ ಹೆಸರುಗಳನ್ನು ನೊಂದಣಿ ಮಾಡಿಕೊಳ್ಳು ವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Crime News: ಉಜ್ಜೈನಿ ಮಹಾಕಾಲೇಶ್ವರ ದೇವಸ್ಥಾನದ ಆವರಣದಲ್ಲಿ ದುರಂತ; ಯಂತ್ರಕ್ಕೆ ದುಪ್ಪಟಾ ಸಿಲುಕಿ ಮಹಿಳೆ ಸಾವು