ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

IND vs BAN: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಬಾಂಗ್ಲಾದೇಶ!

IND vs BAN: ಯುಎಇಯ ದುಬೈ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಇದೀಗ ಆರಂಭವಾದ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಎರಡನೇ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ.

IND vs BAN: ಬಾಂಗ್ಲಾ ಮೊದಲ ಬ್ಯಾಟಿಂಗ್‌, ಭಾರತದ ಪ್ಲೇಯಿಂಗ್‌ XI ವಿವರ!

IND vs BAN

Profile Ramesh Kote Feb 20, 2025 2:42 PM

ದುಬೈ: ಇಲ್ಲಿನ ದುಬೈ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಇದೀಗ ಆರಂಭವಾದ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಬಾಂಗ್ಲಾದೇಶ ತಂಡ, ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಟೀಮ್‌ ಇಂಡಿಯಾ ಚೇಸ್‌ ಮಾಡಲಿದೆ.

ಇಂಗ್ಲೆಂಡ್‌ ವಿರುದ್ದ ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿದ್ದ ಟೀಮ್‌ ಇಂಡಿಯಾ, ಇದೀಗ ಅದೇ ಲಯವನ್ನು ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿಯೂ ಮುಂದುವರಿಸಲು ಎದುರು ನೋಡುತ್ತಿದೆ. ಅಂದ ಹಾಗೆ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಎರಡು ಬದಲಾವಣೆ ತರಲಾಗಿದೆ. ಇಂಗ್ಲೆಂಡ್‌ ವಿರುದ್ಧ ಕಳೆದ ಪಂದ್ಯವಾಡಿದ್ದ ವರುಣ್‌ ಚಕ್ರವರ್ತಿ ಮತ್ತು ಅರ್ಷದೀಪ್‌ ಸಿಂಗ್‌ ಅವರ ಬದಲು ಮೊಹಮ್ಮದ್‌ ಶಮಿ ಮತ್ತು ರವೀಂದ್ರ ಜಡೇಜಾ ಅವರನ್ನು ಕರೆಸಿಕೊಳ್ಳಲಾಗಿದೆ.

ಚಾಂಪಿಯನ್ಸ್‌ ಟ್ರೋಫಿಗೆ ಐವರು ಸ್ಪಿನ್ನರ್‌ಗಳೇಕೆ? ಟೀಕಾಕಾರರಿಗೆ ರೋಹಿತ್‌ ಶರ್ಮಾ ತಿರುಗೇಟು!

ಭಾರತ ತಂಡದಲ್ಲಿ ಪೂರ್ಣ ಪ್ರಮಾಣದ ಫಾಸ್ಟ್‌ ಬೌಲರ್‌ಗಳಾಗಿ ಮೊಹಮ್ಮದ್‌ ಶಮಿ ಮತ್ತು ಹರ್ಷಿತ್‌ ರಾಣಾ ಆಡಿದರೆ, ಸೀಮ್‌ ಬೌಲಿಂಗ್‌ ಆಲ್‌ರೌಂಡರ್‌ ಆಗಿ ಹಾರ್ದಿಕ್‌ ಪಾಂಡ್ಯ ಆಡುತ್ತಿದ್ದಾರೆ. ಇನ್ನು ಸ್ಪಿನ್‌ ಆಲ್‌ರೌಂಡರ್‌ಗಳಾಗಿ ರವೀಂದ್ರ ಜಡೇಜಾ ಮತ್ತು ಹರ್ಷಿತ್‌ ರಾಣಾ ಇದ್ದಾರೆ.

ಇನ್ನು ಬಾಂಗ್ಲಾದೇಶ ತಂಡದ ಪ್ಲೇಯಿಂಗ್‌ XIನಲ್ಲಿ ಮೂವರು ಸೀಮರ್‌ಗಳು ಹಾಗೂ ಇನ್ನು ಸ್ಪಿನ್ನರ್‌ಗಳು ಆಡುತ್ತಿದ್ದಾರೆ. ದುಬೈ ಇಂಟರ್‌ನ್ಯಾಷನಲ್‌ ಸ್ಟೇಡಿಯಂನಲ್ಲಿ ಆಡಿದ ಅಪಾರ ಅನುಭವವನ್ನು ಹೊಂದಿರುವ ಬಾಂಗ್ಲಾ, ಭಾರತವನ್ನು ಮಣಿಸಿ ಟೂರ್ನಿಯಲ್ಲಿ ಶುಭಾರಂಭ ಕಾಣಲು ಎದುರು ನೋಡುತ್ತಿದ್ದಾರೆ.



ಇತ್ತಂಡಗಳ ಪ್ಲೇಯಿಂಗ್‌ XI

ಭಾರತ: ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಕುಲ್‌ದೀಪ್ ಯಾದವ್

ಬಾಂಗ್ಲಾದೇಶ: ತಂಝಿದ್ ಹಸನ್, ಸೌಮ್ಯ ಸರ್ಕಾರ್, ನಜ್ಮುಲ್ ಹುಸೇನ್‌ ಶಾಂಟೊ(ನಾಯಕ), ತೌಹಿದ್ ಹೃದಯ್, ಮುಷ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮೆಹಿಡಿ ಹಸನ್ ಮಿರಾಜ್, ಝಾಕರ್ ಅಲಿ, ರಿಷದ್ ಹುಸೇನ್, ತಂಝಿಮ್‌ ಹಸನ್ ಸಕಿಬ್, ಟಾಸ್ಕಿನ್ ಅಹ್ಮದ್, ಮುಸ್ತಾಫಿಝುರ್ ರೆಹಮಾನ್

ಚಾಂಪಿಯನ್ಸ್‌ ಟ್ರೋಫಿ ಗೆದ್ದ ತಂಡಕ್ಕೆ ಸಿಗಲಿದೆ ಭಾರೀ ಮೊತ್ತದ ಬಹುಮಾನ

ತಂಡಗಳು

ಬಾಂಗ್ಲಾದೇಶ: ಸೌಮ್ಯ ಸರ್ಕಾರ್, ತಂಝಿದ್ ಹಸನ್, ನಜ್ಮುಲ್ ಹುಸೇನ್‌ ಶಾಂಟೊ(ನಾಯಕ), ಝಕಿರ್‌ ಅಲಿ (ವಿಕೆ), ಮುಷ್ಫಿಕರ್ ರಹೀಮ್, ಮಹ್ಮದುಲ್ಲಾ, ಮೆಹಿಡಿ ಹಸನ್ ಮಿರಾಜ್, ಟಾಸ್ಕಿನ್ ಅಹ್ಮದ್, ತಂಝಿಮ್ ಹಸನ್ ಸಕಿಬ್, ನಹಿದ್ ರಾಣಾ, ಮುಸ್ತಾಫಿಝುರ್ ರೆಹಮಾನ್, ತೌಹಿದ್ ಹೃದಯ್, ರಿಷದ್ ಹುಸೇನ್, ಪರ್ವೇಜ್ ಹೊಸೈನ್ ಎಮನ್, ನಸುಮ್ ಅಹ್ಮದ್.

ಭಾರತ: ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ರಿಷಭ್ ಪಂತ್, ವಾಷಿಂಗ್ಟನ್ ಸುಂದರ್