ಲಕ್ಷ್ಮೀ ನಿವಾಸ, ಶಾಂಭವಿ ಸೀರಿಯಲ್‌ಗಳಿಂದ ನಟಿ ಮಾನಸಾ ಮನೋಹರ್ ಹೊರಬಂದಿದ್ದೇಕೆ? ಇಲ್ಲಿದೆ ಅಸಲಿ ಕಾರಣ
Manasa Manohar: ಜೀ ಕನ್ನಡದ 'ಲಕ್ಷ್ಮೀ ನಿವಾಸ' ಮತ್ತು 'ಶಾಂಭವಿ' ಧಾರಾವಾಹಿಗಳಲ್ಲಿ ಮನೆಮಾತಾಗಿದ್ದ ನಟಿ ಮಾನಸಾ ಮನೋಹರ್ ಅವರು ಆ ಸೀರಿಯಲ್‌ಗಳಿಂದ ಈಗ ಹೊರಬಂದಿದ್ದಾರೆ. ಪ್ರಸ್ತುತ ತುಂಬು ಗರ್ಭಿಣಿಯಾಗಿರುವ ಮಾನಸಾ, ತಮ್ಮ ಆರೋಗ್ಯ ಮತ್ತು ಮಗುವಿನ ಹಿತದೃಷ್ಟಿಯಿಂದ ಚಿತ್ರೀಕರಣಕ್ಕೆ ತಾತ್ಕಾಲಿಕ ಬ್ರೇಕ್ ನೀಡಿದ್ದಾರೆ.
-
ಜೀ ಕನ್ನಡದ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನೀಲು ಪಾತ್ರ ಮತ್ತು ಶಾಂಭವಿ ಸೀರಿಯಲ್‌ನಲ್ಲಿ ಶಿವಗಾಮಿ ಪಾತ್ರಗಳನ್ನು ನಟಿ ಮಾನಸಾ ಮನೋಹರ್ ನಿಭಾಯಿಸುತ್ತಿದ್ದರು. ಆದರೆ, ಅವರೀಗ ಈ ಎರಡೂ ಧಾರಾವಾಹಿಗಳಿಂದ ಹೊರಬಂದಿದ್ದಾರೆ. ಹೀಗೆ ದಿಢೀರ್ ಅಂತ ಅವರು ಧಾರಾವಾಹಿಗಳಿಂದ ಎಕ್ಸಿಟ್ ಆಗಿದ್ದೇಕೆ? ಉತ್ತರ ಪ್ರಗ್ನೆನ್ಸಿ! ಹೌದು, ನಟಿ ಮಾನಸಾ ಮನೋಹರ್ ಅವರು ಈಗ ತುಂಬುಗರ್ಭಿಣಿ. ಆ ಕಾರಣಕ್ಕೆ ಅವರು ಧಾರಾವಾಹಿಗಳಿಂದ ಬ್ರೇಕ್ ತೆಗೆದುಕೊಂಡಿದ್ದಾರೆ.
ಮಾನಸಾ ಮನೋಹರ್ ಏನಂದ್ರು?
ಈ ಬಗ್ಗೆ ವಿಶ್ವವಾಣಿ ಟಿವಿಗೆ ಎಕ್ಸ್‌ಕ್ಲೂಸಿವ್ ಸಂದರ್ಶನ ನೀಡಿರುವ ಮಾನಸಾ ಮನೋಹರ್, "ನನ್ನ ಮದುವೆ 2024ರ ನವೆಂಬರ್‌ನಲ್ಲಿ ನಡೆದಿತ್ತು. ಕಳೆದ ವರ್ಷ ಆಗಸ್ಟ್ ವೇಳೆಗೆ ನಾನು ಗರ್ಭಿಣಿಯಾದೆ. ಆನಂತರ ನಾನು ಏಳು ತಿಂಗಳು ತುಂಬುವವರೆಗೂ ನಾನು ಶೂಟಿಂಗ್‌ನಲ್ಲಿ ಭಾಗಿಯಾಗಿದ್ದೇನೆ. ಜನವರಿ ತಿಂಗಳು ಪೂರ್ತಿ ನಾನು ಲಕ್ಷ್ಮೀ ನಿವಾಸಕ್ಕಾಗಿ ಕೆಲಸ ಮಾಡಿದ್ದೆ. ನನಗೆ ಆರು ತಿಂಗಳು ತುಂಬುವವರೆಗೂ ಶೂಟಿಂಗ್‌ನಲ್ಲಿ ಭಾಗಿಯಾಗುವೆ ಎಂದು ಹೇಳಿದ್ದೆ. ಶಾಂಭವಿ ಧಾರಾವಾಹಿಗೆ ಫೆಬ್ರವರಿಯಲ್ಲೂ ಶೂಟಿಂಗ್ ಮಾಡಿ, ಮುಗಿಸಿಕೊಟ್ಟಿದ್ದೇನೆ" ಎಂದು ಮಾನಸಾ ಹೇಳಿದ್ದಾರೆ.
Lakshmi Nivasa Serial: ಲಕ್ಷ್ಮೀ ನಿವಾಸದ ಹೊಸ ಲಕ್ಷ್ಮೀ ಮಾಧುರಿ ಯಾರು ಗೊತ್ತೇ?: ಸಿನಿಮಾದಿಂದ ದೂರ ಇಳಿದಿದ್ದೇಕೆ?
ಫ್ಯಾನ್ಸ್ ಕಡೆಯಿಂದಲೇ ಬಂದಿತ್ತು ಮನವಿ
"ನನಗೆ ಫ್ಯಾನ್ಸ್ ಮತ್ತು ಪ್ರೇಕ್ಷಕರಿಂದ, ಮೇಡಂ ನೀವು ಇವಾಗ ಆರಾಮಾಗಿ ರೆಸ್ಟ್ ತಗೊಳ್ಳಿ. ಶೂಟಿಂಗ್ ನಿಲ್ಸಿಬಿಡಿ. ಕೆಲಸ ಯಾವಾಗಲೂ ಇರುತ್ತೆ, ಜೀವನದಲ್ಲಿ ಈ ಟೈಮ್ ಮತ್ತೆ ಬರೋದಿಲ್ಲ. ಸೀರಿಯಲ್ ಫೀಲ್ಡ್‌ನಲ್ಲಿ ನೀವು ತಾಯಿಯಾದ್ರೂ ಅಷ್ಟೇ, ಅಜ್ಜಿಯಾದ್ರೂ ಅಷ್ಟೇ ನೀವು ಕೆಲಸ ಮಾಡುತ್ತಲೇ ಇರಬಹುದು. ಮದುವೆ, ಮಕ್ಕಳಾದ ತಕ್ಷಣ ಅವಕಾಶಗಳು ಸಿಗೋದಿಲ್ಲ ಅನ್ನೋ ಕಾಲ ಈಗ ಹೊರಟು ಹೋಗಿಬಿಟ್ಟಿದೆ. ಎಂಥ ದೊಡ್ಡ ದೊಡ್ಡ ಸೆಲೆಬ್ರಿಟೀಸ್‌ಗಳೇ ಮದುವೆ ಆಗಿ, ಎರಡು ಮಕ್ಕಳು ಆದಮೇಲೂ ಕೂಡ ತುಂಬಾ ಸಕ್ಸಸ್‌ಫುಲ್ ಆಗಿದ್ದಾರೆ. ಹಾಗಾಗಿ, ನೀವು ಈಗ ಬ್ರೇಕ್ ತೆಗೆದುಕೊಳ್ಳಿ ಎಂಬ ಅಭಿಪ್ರಾಯ ನನಗೆ ಸಿಕ್ಕಿತ್ತು. ಅಂತೆಯೇ ನಾನೀಗ ಬ್ರೇಕ್ ತೆಗೆದುಕೊಂಡಿದ್ದೇನೆ" ಎಂದು ಮಾನಸಾ ಹೇಳಿದ್ದಾರೆ.
Lakshmi Nivasa Serial : ಎರಡನೇ ಬಾರಿ ತಂದೆಯಾದ ಲಕ್ಷ್ಮೀ ನಿವಾಸ ʻವೆಂಕಿʼ; ಫೋಟೋಶೂಟ್ ವೈರಲ್
ಧಾರಾವಾಹಿಗಳನ್ನು ನೀಟ್ ಆಗಿ ಮುಗಿಸಿದ್ದೇನೆ
"ನಾವು ಮಾಡುತ್ತಿರುವ ಕೆಲವೊಂದು ಪಾತ್ರಗಳು ತುಂಬಾ ಚೆನ್ನಾಗಿ ಹೋಗುತ್ತಿರುತ್ತವೆ. ನನಗೆ 3 ತಿಂಗಳು ತುಂಬಿದಾಗ ನನ್ನ ಎರಡೂ ಧಾರಾವಾಹಿಗಳ ಟೀಮ್‌ಗಳಿಗೆ, ಚಾನೆಲ್‌ಗೆ ಮಾಹಿತಿ ನೀಡಿದ್ದೆ. ಆನಂತರ ಅವರು ಪ್ರಿಪೇರ್ ಆಗಿದ್ದರು. ಕಥೆಯನ್ನು ಹೇಗೆ ತೆಗೆದುಕೊಂಡು ಹೋಗಬೇಕು, ಪಾತ್ರದ ಟ್ರ್ಯಾಕ್ ಅನ್ನು ಹೇಗೆ ಮುಂದುವರಿಸಬೇಕು ಎಂದು ಪ್ಲ್ಯಾನ್ ಮಾಡಿಕೊಂಡರು. ಎರಡೂ ಧಾರಾವಾಹಿಗಳನ್ನು ನೀಟ್ ಆಗಿ ಮುಗಿಸಿದ್ದೇನೆ, ಎಲ್ಲರೂ ಖುಷಿಯಾಗಿದ್ಧಾರೆ" ಎಂದು ಮಾನಸಾ ಹೇಳಿದ್ದಾರೆ.
ಮಾನಸಾ ಮನೋಹರ್ ಅವರ ಸಂದರ್ಶನ
"ನನಗೆ ತುಂಬಾ ಖುಷಿ ಇದೆ. ನಾನು ಏಳು ತಿಂಗಳು ತುಂಬುವವರೆಗೂ ಕೆಲಸ ಮಾಡಿದ್ದೇನೆ. ಅದಕ್ಕೆ ನನ್ನ ದೇಹ ಸಪೋರ್ಟ್ ಮಾಡಿದೆ. ಕೆಲವರಿಗೆ ಪ್ರೆಗ್ನೆಂಟ್ ಆಗುತ್ತಿದ್ದಂತೆಯೇ, ಸಾಕಷ್ಟು ಸಮಸ್ಯೆಗಳು ಬರುತ್ತವೆ. ನನಗೆ ಆ ರೀತ ಏನೂ ಆಗಲಿಲ್ಲ. ಹಾಗಾಗಿ, ನಾನು ಆರಾಮಾಗಿ ಕೆಲಸ ಮಾಡಲು ಸಾಧ್ಯವಾಯಿತು. ಒಂದು ಟಿವಿಯಲ್ಲಿ ಕಾಣಿಸುವಾಗ ನನಗೆ ಹೊಟ್ಟೆ ಬಂದಿರುತ್ತದೆ. ಅದು ಆ ಪಾತ್ರಗಳಿಗೆ ಸೂಟ್ ಆಗಲ್ಲ. ಆದ್ದರಿಂದ ನಾನು ಈ ಬ್ರೇಕ್ ಅನ್ನು ತೆಗೆದುಕೊಳ್ಳಲೇಬೇಕಾಯ್ತು. ಯಾವುದೇ ಬೇಜಾರು ಇಲ್ಲದೇ ನಾನು ಧಾರಾವಾಹಿಗಳಿಂದ ಹೊರಬಂದಿದ್ದೇನೆ" ಎನ್ನುತ್ತಾರೆ ಮಾನಸಾ.