ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

ಚಾಂಪಿಯನ್ಸ್‌ ಟ್ರೋಫಿ ಗೆದ್ದ ತಂಡಕ್ಕೆ ಸಿಗಲಿದೆ ಭಾರೀ ಮೊತ್ತದ ಬಹುಮಾನ

Champions Trophy prize money: ಈ ಬಾರಿ ಟ್ರೋಫಿ ಗೆದ್ದ ತಂಡವು ಸುಮಾರು 19.46 ಕೋಟಿ ಪ್ರಶಸ್ತಿ ಮೊತ್ತ (USD 2.24 million) ಪಡೆಯಲಿದೆ. ಒಟ್ಟಾರೆ ಬಹುಮಾನ ಮೊತ್ತವನ್ನು 60 ಕೋಟಿಗೆ (USD 6.9 million) ಹೆಚ್ಚಿಸಲಾಗಿದೆ. ರನ್ನರ್ ಅಪ್ ತಂಡವು 9.75 ಕೋಟಿ (USD 1.12 million) ಮತ್ತು ಸೆಮಿಫೈನಲ್‌ನಲ್ಲಿ ಸೋತ ತಂಡವು 4.86 ಕೋಟಿ (USD 560,000) ಗಳಿಸಲಿದೆ. ಹಾಗೆಯೇ ಟೂರ್ನಿಯಲ್ಲಿ ಭಾಗವಹಿಸುವ ಪ್ರತಿ ತಂಡಗಳಿಗೂ ₹1.08 ಕೋಟಿ (USD 125,000) ಸಿಗಲಿವೆ.

ಚಾಂಪಿಯನ್ಸ್‌ ಟ್ರೋಫಿ ಗೆದ್ದ ತಂಡಕ್ಕೆ ಸಿಗಲಿದೆ ಭಾರೀ ಮೊತ್ತದ ಬಹುಮಾನ

Profile Abhilash BC Feb 14, 2025 2:55 PM

ದುಬೈ: 8 ವರ್ಷಗಳ ಬಳಿಕ ನಡೆಯಲಿರುವ ಮಿನಿ ವಿಶ್ವಕಪ್‌ ಎಂದೇ ಖ್ಯಾತಿ ಪಡೆದಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ(Champions Trophy) ಕ್ರಿಕೆಟ್‌ ಟೂರ್ನಿ ಇದೇ ಫೆ.19 ರಿಂದ ಆರಂಭಗೊಳ್ಳಲಿದೆ. ಇದೀಗ ಐಸಿಸಿ ವಿಶ್ವಕಪ್ ವಿಜೇತರ ಪ್ರಶಸ್ತಿ(Champions Trophy prize money) ಮೊತ್ತವನ್ನು ಘೋಷಣೆ ಮಾಡಿದೆ. 2017 ರ ಆವೃತ್ತಿಗಿಂತ ಶೇ.53ರ ಪ್ರತಿಶತದಷ್ಟು ಮೊತ್ತ ಹೆಚ್ಚಳವಾಗಿದೆ. ಅದರಂತೆ ಈ ಬಾರಿ ಟ್ರೋಫಿ ಗೆದ್ದ ತಂಡವು ಸುಮಾರು 19.46 ಕೋಟಿ ಪ್ರಶಸ್ತಿ ಮೊತ್ತ (USD 2.24 million) ಪಡೆಯಲಿದೆ. ಒಟ್ಟಾರೆ ಬಹುಮಾನ ಮೊತ್ತವನ್ನು 60 ಕೋಟಿಗೆ (USD 6.9 million) ಹೆಚ್ಚಿಸಲಾಗಿದೆ.

ರನ್ನರ್ ಅಪ್ ತಂಡವು 9.75 ಕೋಟಿ (USD 1.12 million) ಮತ್ತು ಸೆಮಿಫೈನಲ್‌ನಲ್ಲಿ ಸೋತ ತಂಡವು 4.86 ಕೋಟಿ (USD 560,000) ಗಳಿಸಲಿದೆ. ಹಾಗೆಯೇ ಟೂರ್ನಿಯಲ್ಲಿ ಭಾಗವಹಿಸುವ ಪ್ರತಿ ತಂಡಗಳಿಗೂ ₹1.08 ಕೋಟಿ (USD 125,000) ಸಿಗಲಿವೆ.

ಇದನ್ನೂ ಓದಿ ICC Champions Trophy: ಚಾಂಪಿಯನ್ಸ್‌ ಟ್ರೋಫಿಯಲ್ಲಿ ಅತ್ಯಧಿಕ ರನ್‌ ಬಾರಿಸಿದ ಟಾಪ್‌-5 ಬ್ಯಾಟರ್‌ಗಳು

ಹೈಬ್ರೀಡ್‌ ಮಾದರಿಯಲ್ಲಿ ನಡೆಯುವ ಈ ಟೂರ್ನಿಯ ಮೊದಲ ಪಂದ್ಯ ಫೆ. 19ರಂದು ಕರಾಚಿಯಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲ್ಯಾಂಡ್‌ ನಡುವೆ ನಡೆಯಲಿದೆ. ಭಾರತ ತನ್ನ ಎಲ್ಲ ಪಂದ್ಯವನ್ನು ತಟಸ್ಥ ತಾಣವಾದ ದುಬೈನಲ್ಲಿ ಆಡಲಿದೆ. ಒಂದೊಮ್ಮೆ ಭಾರತ ಫೈನಲ್‌ ಅಥವಾ ಸೆಮಿ ಪ್ರವೇಶಿಸಿದದೆ ಈ ಪಂದ್ಯಗಳನ್ನು ಕೂಡ ದುಬೈನಲ್ಲೇ ಆಡಲಿದೆ. ಇಂಡೋ-ಪಾಕ್‌ ಪಂದ್ಯ ಫೆ.23 ರಂದು ನಡೆಯಲಿದೆ.



ಟೂರ್ನಿಯಲ್ಲಿ ಆಡುವ 8 ತಂಡಗಳನ್ನು ತಲಾ 4ರಂತೆ 2 ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ರೌಂಡ್​ ರಾಬಿನ್​ ಲೀಗ್​ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್​ಗೇರಲಿವೆ.

ವೇಳಾಪಟ್ಟಿ

ಫೆ.19 ಪಾಕಿಸ್ತಾನ-ನ್ಯೂಜಿಲ್ಯಾಂಡ್‌, ಸ್ಥಳ: ಕರಾಚಿ

ಫೆ. 20 ಬಾಂಗ್ಲಾದೇಶ-ಭಾರತ, ಸ್ಥಳ: ದುಬೈ

ಫೆ. 21 ಅಫ್ಘಾನಿಸ್ತಾನ-ದ. ಆಫ್ರಿಕಾ, ಸ್ಥಳ: ಕರಾಚಿ

ಫೆ. 22 ಆಸ್ಟ್ರೆಲಿಯಾ-ಇಂಗ್ಲೆಂಡ್, ಸ್ಥಳ:​ ಲಾಹೋರ್

ಫೆ. 23 ಭಾರತ-ಪಾಕಿಸ್ತಾನ,ಸ್ಥಳ: ದುಬೈ

ಫೆ. 24 ಬಾಂಗ್ಲಾದೇಶ-ನ್ಯೂಜಿಲ್ಯಾಂಡ್‌, ಸ್ಥಳ:​ ರಾವಲ್ಪಿಂಡಿ

ಫೆ. 25 ಆಸ್ಟ್ರೆಲಿಯಾ-ದ. ಆಫ್ರಿಕಾ,ಸ್ಥಳ: ರಾವಲ್ಪಿಂಡಿ

ಫೆ. 26 ಅಫ್ಘಾನಿಸ್ತಾನ-ಇಂಗ್ಲೆಂಡ್,ಸ್ಥಳ:​ ಲಾಹೋರ್

ಫೆ. 27 ಪಾಕಿಸ್ತಾನ-ಬಾಂಗ್ಲಾದೇಶ,ಸ್ಥಳ: ರಾವಲ್ಪಿಂಡಿ

ಫೆ. 28 ಅಫ್ಘಾನಿಸ್ತಾನ-ಆಸ್ಟ್ರೆಲಿಯಾ,ಸ್ಥಳ: ಲಾಹೋರ್​

ಮಾ. 1 ದಕ್ಷಿಣ ಆಫ್ರಿಕಾ-ಇಂಗ್ಲೆಂಡ್,ಸ್ಥಳ:​ ಕರಾಚಿ

ಮಾ. 2 ಭಾರತ-ನ್ಯೂಜಿಲ್ಯಾಂಡ್‌, ಸ್ಥಳ:​ ದುಬೈ

ಮಾ. 4 ಸೆಮಿಫೈನಲ್-1, ಸ್ಥಳ: ದುಬೈ

ಮಾ. 5 ಸೆಮಿಫೈನಲ್​-2, ಸ್ಥಳ: ಲಾಹೋರ್​

ಮಾ. 9 ಫೈನಲ್​ -ಸ್ಥಳ: ದುಬೈ/ಲಾಹೋರ್‌