ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Shubman Gill: ಭಾರತದ ಭವಿಷ್ಯದ ವಿರಾಟ್‌ ಕೊಹ್ಲಿಯನ್ನು ಹೆಸರಿಸಿದ ಮೊಹಮ್ಮದ್‌ ಹಫೀಝ್‌!

Mohammad Hafeez Praised on Shubman Gill: ಬಾಂಗ್ಲಾದೇಶ ವಿರುದ್ಧ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ನಿರ್ಣಾಯಕ ಶತಕವನ್ನು ಸಿಡಿಸಿದ್ದ ಭಾರತ ತಂಡದ ಯುವ ಆರಂಭಿಕ ಶುಭಮನ್‌ ಗಿಲ್‌ ಅವರನ್ನು ಪಾಕಿಸ್ತಾನ ಮಾಜಿ ಆಟಗಾರ ಮೊಹಮ್ಮದ್‌ ಹಫೀಝ್‌ ಮುಕ್ತ ಕಂಠದಿಂದ ಗುಣಗಾನ ಮಾಡಿದ್ದಾರೆ.

ಭಾರತದ ಭವಿಷ್ಯದ ವಿರಾಟ್‌ ಕೊಹ್ಲಿಯನ್ನು ಹೆಸರಿಸಿದ ಮೊಹಮ್ಮದ್‌ ಹಫೀಝ್‌!

ಶುಭಮನ್‌ ಗಿಲ್‌ ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ ಮೊಹಮ್ಮದ್‌ ಹಫೀಝ್‌.

Profile Ramesh Kote Feb 21, 2025 8:09 PM

ದುಬೈ: ಬಾಂಗ್ಲಾದೇಶ ವಿರುದ್ಧ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ತನ್ನ ಮೊದಲನೇ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಭಾರತ ತಂಡವನ್ನು ಗೆಲ್ಲಿಸಿದ್ದ ಯುವ ಆರಂಭಿಕ ಬ್ಯಾಟ್ಸ್‌ಮನ್‌ ಶುಭಮನ್‌ ಗಿಲ್‌ ಅವರನ್ನು ಪಾಕಿಸ್ತಾನ ಮಾಜಿ ನಾಯಕ ಮೊಹಮ್ಮದ್‌ ಹಫೀಝ್‌ ಶ್ಲಾಘಿಸಿದ್ದಾರೆ. ಶುಭಮನ್‌ ಗಿಲ್‌ ಭಾರತದ ಭವಿಷ್ಯದ ವಿರಾಟ್‌ ಕೊಹ್ಲಿ ಎಂದು ಅವರು ಬಣ್ಣಿಸಿದ್ದಾರೆ. ಗುರುವಾರ ದುಬೈ ಇಂಟರ್‌ ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಗಿಲ್‌ ಅಜೇಯ 101 ರನ್‌ಗಳನ್ನು ಬಾರಿಸಿದ್ದರು. ಆ ಮೂಲಕ ಭಾರತ ತಂಡದ 6 ವಿಕೆಟ್‌ ಗೆಲುವಿಗೆ ನೆರವಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಇಲ್ಲಿನ ದುಬೈ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದಿದ್ದ ಪಂದ್ಯದಲ್ಲಿ ಬಾಂಗ್ಲಾದೇಶ ನೀಡಿದ್ದ 229 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಭಾರತ ತಂಡದ ಪರ, ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ಶುಭಮನ್‌ ಗಿಲ್‌ ತಮ್ಮ ಒಡಿಐ ವೃತ್ತಿ ಜೀವನದ ಎಂಟನೇ ಶತಕವನ್ನು ಬಾರಿಸಿದ್ದರು. ಇವರು ಆಡಿದ್ದ 129 ಎಸೆತಗಳಲ್ಲಿ 2 ಸಿಕ್ಸರ್‌ ಹಾಗೂ 9 ಬೌಂಡರಿಗಳೊಂದಿಗೆ ಅಜೇಯ 101 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಟೀಮ್‌ ಇಂಡಿಯಾದ 6 ವಿಕೆಟ್‌ಗಳ ಗೆಕಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು.

IND vs BAN: ಶುಭಮನ್‌ ಗಿಲ್‌ ಶತಕ, ಬಾಂಗ್ಲಾ ವಿರುದ್ಧ ಗೆದ್ದು ಶುಭಾರಂಭ ಮಾಡಿದ ಭಾರತ!

ಶುಭಮನ್‌ ಗಿಲ್‌ಗೆ ಹಫೀಜ್‌ ಮೆಚ್ಚುಗೆ

ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಅದ್ಭುತ ಫಾರ್ಮ್‌ ಅನ್ನು ಮುಂದುವರಿಸಿರುವ ಶುಭಮನ್‌ ಗಿಲ್, ಬಾಂಗ್ಲಾದೇಶ ವಿರುದ್ದದ ಪಂದ್ಯದಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಬ್ಯಾಟ್‌ ಮಾಡಿದ್ದಾರೆಂದು ಮೊಹಮ್ಮದ್‌ ಹಫೀಝ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದುಬೈ ಅಂಗಣದಲ್ಲಿ ಒತ್ತಡವನ್ನು ನಿರ್ವಹಿಸುವುದು ಮತ್ತು ಆಟವನ್ನು ನಿಯಂತ್ರಿಸುವುದು ಮುಖ್ಯ ಎಂದು ಅವರು ಹೇಳಿದ್ದಾರೆ.

"ಭಾರತ ತಂಡಕ್ಕೆ ಆಗಮಿಸಿ, ಕಳೆದ ಮೂರು ವರ್ಷಗಳಿಂದ ಮುಂದಿನ ವಿರಾಟ್‌ ಕೊಹ್ಲಿಯಾಗಲು ಶುಭಮನ್‌ ಗಿಲ್‌ ಪ್ರಯತ್ನಿಸುತ್ತಿದ್ದಾರೆ. ಅವರು ಆ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾರೆ," ಎಂದು ಪಾಕಿಸ್ತಾನ ಮಾಜಿ ನಾಯಕ ಗುಣಗಾನ ಮಾಡಿದ್ದಾರೆ.

IND vs BAN: 11000 ಒಡಿಐ ರನ್‌ ಪೂರ್ಣಗೊಳಿಸಿ ಸಚಿನ್‌ ದಾಖಲೆ ಮುರಿದ ರೋಹಿತ್‌ ಶರ್ಮಾ!

ಸನ್ನಿವೇಶಕ್ಕೆ ತಕ್ಕಂತೆ ಬ್ಯಾಟ್‌ ಮಾಡಿದ್ದಾರೆ: ಹಫೀಝ್‌

"ಇದು ಅವರ ಎಂಟನೇ ಒಡಿಐ ಶತಕವಾಗಿದೆ ಆದರೆ, ಅವರ ನಿಧಾನಗತಿಯ ಶತಕಗಳಲ್ಲಿ ಇದು ಒಂದಾಗಿದೆ. ಅವರು ನಿಧಾನವಾಗಿ ಬ್ಯಾಟ್‌ ಮಾಡಿರಬಹುದು. ಆದರೆ, ಅವರು ಸನ್ನಿವೇಶಕ್ಕೆ ತಕ್ಕಂತೆ ಬ್ಯಾಟ್‌ ಮಾಡಿ ಸಂಗತಿಗಳನ್ನು ಸುಲಭವಾಗಿಸಿದ್ದಾರೆ. ಇದರ ಬಗ್ಗೆ ಸಂತಸವಿದೆ. ದುಬೈನಂಥ ಅಂಗಣದಲ್ಲಿ ನೀವು ಒತ್ತಡಕ್ಕೆ ಒಳಗಾಗದೆ, ಆಟವನ್ನು ನಿಯಂತ್ರಿಸುವುದು ತುಂಬಾ ಮುಖ್ಯ. ದೊಡ್ಡ ವೇದಿಕೆಯಲ್ಲಿ ಉತ್ತಮ ಪ್ರದರ್ಶನ ತೋರುವ ಆಟಗಾರರ ಪೈಕಿ ಶುಭಮನ್‌ ಗಿಲ್‌ ಕೂಡ ಒಬ್ಬರು," ಎಂದು ಮೊಹಮ್ಮದ್‌ ಹಫೀಝ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.



"ಶುಭಮನ್‌ ಗಿಲ್‌ ತಮ್ಮ ಸ್ವಾಭಾವಿಕ ಆಟ (ಆಕ್ರಮಣಕಾರಿ ಆಟ)ಕ್ಕೆ ವಿರುದ್ಧವಾಗಿ ಆಡಿದ್ದಾರೆ ಹಾಗೂ ಪಂದ್ಯ ಗೆಲುವಿನ ಪ್ರದರ್ಶನವನ್ನು ತೋರಿದ್ದಾರೆ. ಕೇವಲ 25 ವರ್ಷದ ಆಟಗಾರನೊಬ್ಬ ಆಟವನ್ನು ಚೆನ್ನಾಗಿ ನಿಯಂತ್ರಿಸುತ್ತಿರುವುದನ್ನು ನೋಡುವುದು ನನಗೆ ತುಂಬಾ ಸಂತೋಷ ತಂದಿದೆ. ಯಾವಾಗ ದಾಳಿ ಮಾಡಬೇಕು ಮತ್ತು ಯಾವಾಗ ಒತ್ತಡವನ್ನು ನಿಯಂತ್ರಿಸಬೇಕೆಂದು ಅವರಿಗೆ ಚೆನ್ನಾಗಿ ತಿಳಿದಿದೆ," ಎಂದು ಪಾಕ್‌ ಮಾಜಿ ನಾಯಕ ಶ್ಲಾಘಿಸಿದ್ದಾರೆ.