IND vs BAN: 11000 ಒಡಿಐ ರನ್ ಪೂರ್ಣಗೊಳಿಸಿ ಸಚಿನ್ ದಾಖಲೆ ಮುರಿದ ರೋಹಿತ್ ಶರ್ಮಾ!
Rohit sharma Completed 11000 ODI Runs: ಬಾಂಗ್ಲಾದೇಶ ವಿರುದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದರು. ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅವರು 11000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ವೇಗವಾಗಿ ಹನ್ನೊಂದು ಸಾವಿರ ರನ್ ಪೂರ್ಣಗೊಳಿಸಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

11000 ರನ್‌ಗಳನ್ನು ಪೂರ್ಣಗೊಳಿಸಿದ ರೋಹಿತ್ ಶರ್ಮಾ.

ದುಬೈ: ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಈಗಾಗಲೇ ಹಲವು ದಾಖಲೆಗಳನ್ನು ಬರೆದಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಇದೀಗ ಮತ್ತೊಂದು ದಾಖಲೆಯನ್ನು ಬರೆದಿದ್ದಾರೆ. ಇದೀಗ ಅವರು ಏಕದಿನ ಕ್ರಿಕೆಟ್‌ನಲ್ಲಿ 11000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಮಾಸ್ಟರ್-ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯೊಂದನ್ನು ಹಿಟ್‌ಮ್ಯಾನ್ ಮುರಿದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 11000 ರನ್‌ಗಳನ್ನು ಪೂರ್ಣಗೊಳಿಸಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಈ ಮೊತ್ತವನ್ನು ಪೂರ್ಣಗೊಳಿಸಲು ರೋಹಿತ್ ಶರ್ಮಾ ಒಟ್ಟು 261 ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ. ಇನ್ನು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ 276 ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ.
ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ 297 ಒಡಿಐ ಪಂದ್ಯಗಳಿಂದ 13,963 ರನ್‌ಗಳನ್ನು ಗಳಿಸಿದ್ದಾರೆ. ಇವರು ತಮ್ಮ 230ನೇ ಪಂದ್ಯ ಹಾಗೂ 222 ಇನಿಂಗ್ಸ್‌ಗಳಿಂದ 11000 ರನ್‌ಗಳನ್ನು ಪೂರ್ಣಗೊಳಿಸಿದ್ದರು. ಆ ಮೂಲಕ ವೇಗವಾಗಿ ಈ ಸಾಧನೆ ಮಾಡಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರನ್ ಮಷೀನ್ ಅಗ್ರ ಸ್ಥಾನದಲ್ಲಿದ್ದಾರೆ. ಇವರು 2019ರ ಜೂನ್ 16 ರಂದು ಮ್ಯಾಂಚೆಸ್ಟರ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಈ ಮೊತ್ತವನ್ನು ದಾಖಲಿಸಿದ್ದರು.
IND vs BAN: 200ನೇ ಒಡಿಐ ವಿಕೆಟ್ ಕಿತ್ತು ವಿಶೇಷ ದಾಖಲೆ ಬರೆದ ಮೊಹಮ್ಮದ್ ಶಮಿ!
ವೇಗವಾಗಿ 11,000 ಒಡಿಐ ರನ್‌ಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳು
ವಿರಾಟ್ ಕೊಹ್ಲಿ (ಭಾರತ) – 222 ಇನಿಂಗ್ಸ್‌ಗಳು
ರೋಹಿತ್ ಶರ್ಮಾ (ಭಾರತ) – 261 ಇನಿಂಗ್ಸ್‌ಗಳು
ಸಚಿನ್ ತೆಂಡೂಲ್ಕರ್ (ಭಾರತ) – 276 ಇನಿಂಗ್ಸ್‌ಗಳು
ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) – 286 ಇನಿಂಗ್ಸ್‌ಗಳು
ಸೌರವ್ ಗಂಗೂಲಿ (ಭಾರತ) – 288 ಇನಿಂಗ್ಸ್‌ಗಳು
ಜಾಕ್ ಕಾಲಿಸ್ (ದಕ್ಷಿಣ ಆಫ್ರಿಕಾ) – 293 ಇನಿಂಗ್ಸ್‌ಗಳು
IND vs BAN: ʻಅಕ್ಷರ್ ಪಟೇಲ್‌ಗೆ ಹ್ಯಾಟ್ರಿಕ್ ಮಿಸ್ʼ-ಸುಲಭ ಕ್ಯಾಚ್ ಕೈಚೆಲ್ಲಿ ಕ್ಷಮೆ ಕೇಳಿದ ರೋಹಿತ್ ಶರ್ಮಾ!
ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಅಗ್ರ 10 ಬ್ಯಾಟ್ಸ್‌ಮನ್‌ಗಳು
ಸಚಿನ್ ತೆಂಡೂಲ್ಕರ್ - 18,426
ಕುಮಾರ್ ಸಂಗಕ್ಕಾರ - 14,234
ವಿರಾಟ್ ಕೊಹ್ಲಿ - 13,962
ರಿಕಿ ಪಾಂಟಿಂಗ್ - 13,704
ಸನತ್ ಜಯಸೂರ್ಯ - 13,430
ಮಹೇಲಾ ಜಯವರ್ಧನೆ - 12,650
ಇಂಝಮಾಮ್-ಉಲ್-ಹಕ್ - 11,739
ಜಾಕ್ ಕಾಲಿಸ್ - 11,579
ಸೌರವ್ ಗಂಗೂಲಿ - 11,363
ರೋಹಿತ್ ಶರ್ಮಾ - 11,029
1⃣1⃣,0⃣0⃣0⃣ ODI runs and counting for Rohit Sharma! 🙌🙌
— BCCI (@BCCI) February 20, 2025
He becomes the fourth Indian batter to achieve this feat! 👏👏
Follow the Match ▶️ https://t.co/ggnxmdG0VK#TeamIndia | #BANvIND | #ChampionsTrophy | @ImRo45 pic.twitter.com/j01YfhxPEH
ಏಕದಿನ ಕ್ರಿಕೆಟ್‌ನಲ್ಲಿ 11000 ರನ್‌ಗಳನ್ನು ಗಳಿಸಿದ ಭಾರತದ ನಾಲ್ಕನೇ ಹಾಗೂ ವಿಶ್ವದ 10ನೇ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ. 50 ಓವರ್‌ಗಳ ಐಸಿಸಿ ಟೂರ್ನಿಗಳಲ್ಲಿ ರೋಹಿತ್ ಶರ್ಮಾ ಬಾಂಗ್ಲಾದೇಶ ಎದುರು ನಾಲ್ಕು ಪಂದ್ಯಗಳನ್ನು ಆಡಿದ್ದು, ಮೂರು ಶತಕಗಳನ್ನು ಸಿಡಿಸಿದ್ದಾರೆ. ಗುರುವಾರ ದುಬೈ ಇಂಟರ್ ನ್ಯಾಷನಲ್ ಕ್ರೀಡಾಂಗಣದಲ್ಲಿಯೂ 41 ರನ್ ಗಳಿಸಿ ರೋಹಿತ್ ಶರ್ಮಾ ಉತ್ತಮ ಆರಂಭ ಪಡೆದಿದ್ದರು. ಆದರೆ, ಸಿಕ್ಕಿದ್ದ ಉತ್ತಮ ಆರಂಭದಲ್ಲಿ ದೊಡ್ಡ ಇನಿಂಗ್ಸ್ ಆಡುವಲ್ಲಿ ವಿಫಲರಾದರು.
228 ರನ್ ಕಲೆ ಹಾಕಿದ ಬಾಂಗ್ಲಾದೇಶ
ತೌಹಿದ್ ಹೃದಯ್ ಅವರ ಶತಕ ಹಾಗೂ ಜಾಕರ್ ಅಲಿ (68 ರನ್) ಅವರ ಅರ್ಧಶತಕದ ಬಲದಿಂದ ಬಾಂಗ್ಲಾದೇಶ ತಂಡ, 49.4 ಓವರ್‌ಗಳಿಗೆ 228 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ಟೀಮ್ ಇಂಡಿಯಾಗಿ 229 ರನ್‌ಗಳ ಗುರಿಯನ್ನು ನೀಡಿತ್ತು. ಭಾರತದ ಪರ ಮೊಹಮ್ಮದ್ ಶಮಿ 5 ವಿಕೆಟ್ ಸಾಧನೆ ಮಾಡಿದ್ದರು.