IND vs NZ: ವಿರಾಟ್ ಕೊಹ್ಲಿಯನ್ನು ದಂತಕತೆ ಎನ್ನಲು ಕಾರಣ ತಿಳಿಸಿದ ವಿವಿಯನ್ ರಿಚರ್ಡ್ಸ್!
Vivian Richards Praised on Virat Kohli: ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ವೆಸ್ಟ್ ಇಂಡೀಸ್ ದಿಗ್ಗಜ ವಿವಿಯನ್ ರಿಚರ್ಡ್ಸ್ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಹೋರಾಟದ ಮನೋಭಾವ ಹೊಂದಿರುವ ಕಾರಣ ವಿರಾಟ್ ಕೊಹ್ಲಿ ದಂತಕತೆಯಾಗಿದ್ದಾರೆಂದು ವಿಂಡೀಸ್ ಮಾಜಿ ನಾಯಕ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿಯನ್ನು ಶ್ಲಾಘಿಸಿದ ವಿವಿಯನ್ ರಿಚರ್ಡ್ಸ್

ದುಬೈ: ಭಾರತೀಯ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಢ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ವಿರಾಟ್ ಕೊಹ್ಲಿಯನ್ನು ಈಗಾಗಲೇ ಸಾಕಷ್ಟು ಮಾಜಿ ಕ್ರಿಕೆಟಿಗರು ಶ್ಲಾಘಿಸಿದ್ದಾರೆ. ಇದೀಗ ಈ ಪಟ್ಟಿಗೆ ವೆಸ್ಟ್ ಇಂಡೀಸ್ ಮಾಜಿ ನಾಯಕ ಹಾಗೂ ದಿಗ್ಗಹ ವಿವಿಯನ್ ರಿಚರ್ಡ್ಸ್ ಸೇರ್ಪಡೆಯಾಗಿದ್ದಾರೆ. ಹೋರಾಟದ ಮನೋಭಾವದಿಂದಾಗಿ ವಿರಾಟ್ ಕೊಹ್ಲಿ ಕ್ರಿಕೆಟ್ ದಂತಕತೆಯಾಗಿದ್ದಾರೆಂದು ಅವರು ಬಣ್ಣಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಹಾಗೂ ಇಂಗ್ಲೆಂಡ್ ವಿರುದ್ಧದ ತವರು ಏಕದಿನ ಸರಣಿಯಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ವಿರಾಟ್ ಕೊಹ್ಲಿ, ಇತ್ತೀಚೆಗೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಶತಕ ಸಿಡಿಸಿ ಭಾರತ ತಂಡವನ್ನು ಗೆಲ್ಲಿಸಿದ್ದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಸತತ ವೈಫಲ್ಯ ಅನುಭವಿಸಿದ ಕಾರಣ ಭಾರತ ತಂಡದಲ್ಲಿನ ಅವರ ಸ್ಥಾನವನ್ನು ಪ್ರಶ್ನೆ ಮಾಡಲಾಗುತ್ತಿದೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿನ ವೈಫಲ್ಯ, ನಂತರ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಳಲ್ಲಿ ಮಾಜಿ ನಾಯಕ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುವ ಮೂಲಕ ಭಾರಿ ಟೀಕೆಗೆ ಗುರಿಯಾಗಿದ್ದರು. ಆದರೆ, ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ 111 ಎಸೆತಗಳಲ್ಲಿ ವಿರಾಟ್ ಕೊಹ್ಲಿ ತಮ್ಮ ಏಕದಿನ ವೃತ್ತಿ ಜೀವನದ 51 ನೇ ಶತಕವನ್ನು ಸಿಡಿಸಿ ಭಾರತ ತಂಡವನ್ನು ಗೆಲ್ಲಿಸಿದ್ದರು. ಆ ಮೂಲಕ ತಾವು ಚೇಸ್ ಮಾಸ್ಟರ್ ಎಂಬುದನ್ನು ಎಲ್ಲರಿಗೂ ನೆನಪಿಸಿದ್ದರು.
ವಿರಾಟ್ ಕೊಹ್ಲಿ or ಸಚಿನ್ ತೆಂಡೂಲ್ಕರ್ ನಡುವೆ ಬೆಸ್ಟ್ ಒಡಿಐ ಆಟಗಾರನನ್ನು ಆರಿಸಿದ ಸಂಜಯ್ ಮಾಂಜ್ರೇಕರ್!
ಇಂಟರ್‌ನ್ಯಾಷನಲ್ ಮಾಸ್ಟರ್ ಲೀಗ್ ಪಂದ್ಯದ ವೇಳೆ ಮಾಧ್ಯಮ ಸಂಭಾಷಣೆಯಲ್ಲಿ ಮಾತನಾಡಿದ ವಿವಿಯನ್ ರಿಚರ್ಡ್ಸ್, ವಿರಾಟ್ ಕೊಹ್ಲಿ ಮಾನಸಿಕ ಸಾಮರ್ಥ್ಯದ ಬಗ್ಗೆ ಚರ್ಚೆ ನಡೆಸಿದರು. ನಿರ್ಣಾಯಕ ಸನ್ನಿವೇಶಗಳಲ್ಲಿ ಇತರೆ ಕ್ರಿಕೆಟಿಗರಿಗಿಂತ ವಿರಾಟ್ ಕೊಹ್ಲಿ ಅತ್ಯುತ್ತಮ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರ ಗುಣಮಟ್ಟದಿಂದ ನಾವು ದಂತತೆ ಎಂದು ಕರೆಯಬಹುದು ಎಂದು ಶ್ಲಾಘಿಸಿದ್ದಾರೆ.
"ಅವರು ನಮ್ಮ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಅವರು ಸಾಕಷ್ಟು ಕೆಲಸವನ್ನು ಮಾಡಿದ್ದಾರೆ. ಅವರು ಸರಿಯಾಗಿ ಕೆಲಸ ಮಾಡಿಲ್ಲವಾಗಿದ್ದರೆ ಈ ರೀತಿಯ ಪ್ರದರ್ಶನವನ್ನು ತೋರಲು ಸಾಧ್ಯವಾಗುವುದಿಲ್ಲ. ಹಾಗಾಗಿ ನಾವು ಮಾತನಾಡುವ ಪಾತ್ರಕ್ಕೆ ಅವರು ಸೂಕ್ತವಾಗಿದ್ದಾರೆ. ದಂತಕತೆ ಎಂದು ನಾವು ಕರೆಯುವುದಕ್ಕೆ ಅವರು ನ್ಯಾಯ ಒದಗಿಸುತ್ತಾರೆ," ಎಂದು ವಿವಿಯನ್ ರಿಚರ್ಡ್ಸ್ ತಿಳಿಸಿದ್ದಾರೆ.
Shubman Gill: ಭಾರತದ ಭವಿಷ್ಯದ ವಿರಾಟ್ ಕೊಹ್ಲಿಯನ್ನು ಹೆಸರಿಸಿದ ಮೊಹಮ್ಮದ್ ಹಫೀಝ್!
"ಎಲ್ಲಾ ಸಮಯದಲ್ಲಿಯೂ ಒಬ್ಬ ಆಟಗಾರ ಉತ್ತಮವಾಗಿ ಆಡಲು ಸಾಧ್ಯವಾಗುವುದಿಲ್ಲ. ಆಟಗಾರ ಎಂದ ಮೇಲೆ ಏರಿಳಿತಗಳು ಇದ್ದೇ ಇರುತ್ತವೆ ಹಾಗೂ ಕಮ್‌ಬ್ಯಾಕ್ ಮಾಡುತ್ತಾರೆ. ಇದು ಕೆವಲ ಹೋರಾಟದ ಮನೋಭಾವವಾಗಿರುತ್ತದೆ. ಶಕ್ತಿ, ಉತ್ಸಾಹ, ಉತ್ಸುಕತೆಯಿಂದಾಗಿಯೇ ವಿರಾಟ್ ಕೊಹ್ಲಿಯನ್ನು ನಾವು ಅಗ್ರ ದರ್ಜೆಯಲ್ಲಿ ಇಟ್ಟಿದ್ದೇವೆ. ಅವರು ಕೆಟ್ಟ ಸಮಯಗಳನ್ನು ಎದುರಿಸಬೇಕಾಗುತ್ತದೆ. ಇಂಥಾ ಕೆಟ್ಟ ಸಮಯಗಳನ್ನು ಮಟ್ಟಿ ನಿಂತು ಬರುವ ಮೂಲಕ ಅವರು ದಿಗ್ಗಜ ಎನಿಸಿಕೊಂಡಿದ್ದಾರೆ," ಎಂದು ಅವರು ಸೇರಿಸಿದ್ದಾರೆ.
ಸೆಮಿಫೈನಲ್‌ಗೆ ಅರ್ಹತೆ ಪಡೆದಿರುವ ಭಾರತ
ಟೂರ್ನಿಯ ಲೀಗ್ ಹಂತದ ಆರಂಭಿಕ ಎರಡೂ ಪಂದ್ಯಗಳಲ್ಲಿ ಭಾರತ ತಂಡ ಕ್ರಮವಾಗಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ವಿರುದ್ಧ ಗೆಲುವು ಪಡೆಯುವ ಮೂಲಕ ಸೆಮಿಫೈನಲ್‌ಗೆ ಪ್ರವೇಶ ಮಾಡಿದೆ. ಇದೀಗ ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಫಲಿತಾಂಶ ಭಾರತ ತಂಡಕ್ಕೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ಈ ಪಂದ್ಯದಲ್ಲಿ ಭಾರತ ಗೆದ್ದರೆ, ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಒಂದು ವೇಳೆ ಸೋತರೆ ಬಿ ಗ್ರೂಪ್‌ನ ಅಗ್ರ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ವಿರುದ್ದ ಕಾದಾಟ ನಡೆಸಲಿದೆ.