Champions Trophy: ಭಾರತ ಜೆರ್ಸಿಯಲ್ಲಿ ಪಾಕ್ ಹೆಸರಿಗೆ ಒಪ್ಪದ ಬಿಸಿಸಿಐಗೆ ಐಸಿಸಿ ತರಾಟೆ!
Champions Trophy: ಎಲ್ಲಾ ತಂಡಗಳು ತಮ್ಮ ಕಿಟ್‌ಗಳಲ್ಲಿ ಆತಿಥೇಯ ದೇಶದ ಹೆಸರನ್ನು ಒಳಗೊಂಡಂತೆ ಪಂದ್ಯಾವಳಿಯ ಅಧಿಕೃತ ಲೋಗೋವನ್ನು ಮುದ್ರಿಸಬೇಕು, ಇದನ್ನು ಪಾಲಿಸದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಐಸಿಸಿ ಎಚ್ಚರಿಕೆ ನೀಡಿರುವುದಾಗಿ ತಿಳಿದುಬಂದಿದೆ.
ದುಬೈ: ಚಾಂಪಿಯನ್ಸ್ ಟ್ರೋಫಿ(Champions Trophy)ಯಲ್ಲಿ ಭಾರತ ತಂಡದ ಆಟಗಾರರು ಧರಿಸಲಿರುವ ಜೆರ್ಸಿಯಲ್ಲಿ ಆತಿಥೇಯ ರಾಷ್ಟ್ರ ಪಾಕಿಸ್ತಾನದ ಹೆಸರನ್ನು ಮುದ್ರಿಸಲು ನಿರಾಕರಿಸಿದ ಬಿಸಿಸಿಐಯನ್ನು ಐಸಿಸಿ ತರಾಟೆಗೆ ತೆದುಕೊಂಡಿದೆ. ಎಲ್ಲಾ ತಂಡಗಳು ತಮ್ಮ ಕಿಟ್‌ಗಳಲ್ಲಿ ಆತಿಥೇಯ ದೇಶದ ಹೆಸರನ್ನು ಒಳಗೊಂಡಂತೆ ಪಂದ್ಯಾವಳಿಯ ಅಧಿಕೃತ ಲೋಗೋವನ್ನು ಮುದ್ರಿಸಬೇಕು, ಇದನ್ನು ಪಾಲಿಸದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಐಸಿಸಿ ಎಚ್ಚರಿಕೆ ನೀಡಿರುವುದಾಗಿ ತಿಳಿದುಬಂದಿದೆ.
ಐಸಿಸಿ ಸಂಪ್ರದಾಯದಂತೆ ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲ ತಂಡಗಳು ಕೂಡ ಆತಿಥೇಯ ದೇಶದ ಹೆಸರು ಮತ್ತು ಲೋಗೊವನ್ನು ಮುದ್ರಿಸುವುದು ಕಡ್ಡಾಯ. ಆದರೆ ಬಿಸಿಸಿಐ ಮಾತ್ರ ಭಾರತ ತನ್ನ ಪಂದ್ಯಗಳನ್ನು ತಟಸ್ಥ ತಾಣವಾದ ದುಬೈನಲ್ಲಿ ಆಡುವ ಕಾರಣ ನೀಡಿ ಪಾಕ್ ಹೆಸರು ಮುದ್ರಿಸಲು ನಿರಾಕರಿಸಿತ್ತು. ಇದಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತೀವ್ರ ಆಕ್ಷೇಪ ಮತ್ತು ಐಸಿಸಿಗೆ ದೂರು ನೀಡಿತ್ತು.
ಇದೀಗ ಈ ಪ್ರಕರಣವನ್ನು ಐಸಿಸಿ ಗಂಭೀರವಾಗಿ ಪರಿಗಣಿಸಿದ್ದು, ಬಿಸಿಸಿಐಗೆ ಖಡಕ್ ಎಚ್ಚರಿಕೆ ನೀಡಿದೆ ಎಂದು ಐಸಿಸಿಐ ಉನ್ನತ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ. ಒಂದೊಮ್ಮ ಐಸಿಸಿ, ಬಿಸಿಸಿಐಗೆ ನಿಯಮ ಜೆರ್ಸಿಯಲ್ಲಿ ಪಾಕಿಸ್ತಾನದ ಹೆಸರು ಮತ್ತು ನಿಯಮ ಪಾಲಿಸುವಂತೆ ಹೇಳಿದ್ದೇ ಆದಲ್ಲಿ ಫೆ.16 ಅಥವಾ 17ರಂದು ನಡೆಯುವ ಟ್ರೋಫಿ ಉದ್ಘಾಟನ ಸಮಾರಂಭದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮ ಕೂಡ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಭಾರತ ತಂಡ ಭದ್ರತಾ ಕಾರಣದಿಂದ ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ತೆರಳಲು ಒಪ್ಪದ ಕಾರಣ ಕೊನೆಗೆ ಐಸಿಸಿಯ ಮಧ್ಯಸ್ಥಿಕೆಯಲ್ಲಿ ನಡೆದ ಸಭೆಯಲ್ಲಿ ಹೈಬ್ರೀಡ್ ಮಾದರಿಯ ಟೂರ್ನಿಗೆ ಬಿಸಿಸಿಐ ಮತ್ತು ಪಾಕ್ ಕ್ರಿಕೆಟ್ ಮಂಡಳಿ ಮಧ್ಯೆ ಹಲವು ಷರತ್ತುಗಳೊಂದಿಗೆ ಟೂರ್ನಿಯನ್ನು ನಡೆಸಲು ತೀರ್ಮಾನ ಕೈಗೊಳಲಾಗಿತ್ತು.
ಇದನ್ನೂ ಓದಿ Champions Trophy schedule: ಫೆ 23ಕ್ಕೆ ಭಾರತ-ಪಾಕ್ ಪಂದ್ಯ, ಚಾಂಪಿಯನ್ಸ್ ಟ್ರೋಫಿಯ ಸಂಪೂರ್ಣ ವೇಳಾಪಟ್ಟಿ!
ಪಿಸಿಬಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯನ್ನು ಹೈಬ್ರೀಡ್ ಮಾದರಿಯಲ್ಲಿ ನಡೆಸಲು ಒಪ್ಪಿದ ಕಾರಣಕ್ಕಾಗಿ 2028ರ ಮಹಿಳಾ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಆಇಥ್ಯವನ್ನು ಐಸಿಸಿ ಪಾಕಿಸ್ತಾನಕ್ಕೆ ನೀಡಿತ್ತು. ಕೇವಲ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಮಾತ್ರವಲ್ಲ, 2027ರ ತನಕ ಭಾರತ, ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುವ ಎಲ್ಲ ಐಸಿಸಿ ಪಂದ್ಯಾವಳಿಗೂ ಇದೇ ಮಾದರಿ ಅನ್ವಯವಾಗಲಿದೆ.