ಭಾರತ-ಪಾಕ್ ಪಂದ್ಯದ ಟಿಕೆಟ್ ಒಂದೇ ಗಂಟೆಯಲ್ಲಿ ಖಾಲಿ!
ಭಾರತ-ಪಾಕ್ ಹೊರತುಪಡಿಸಿ ಉಳಿದ ಪಂದ್ಯಗಳ ಟಿಕೆಟ್‌ಗಳು (Champions Trophy tickets) ಇನ್ನೂ ಲಭ್ಯವಿದೆ. ಟಿಕೆಟ್ ಬೆಲೆ 2,900ರೂ.ಗಳಿಂದ ಆರಂಭವಾಗಿದೆ. ಐಸಿಸಿ ವೆಬ್‌ಸೈಟ್‌ನಲ್ಲಿ ಟಿಕೆಟ್‌ಗಳನ್ನು ಖರೀದಿಸಬಹುದು.
ದುಬೈ: ಚಾಂಪಿಯನ್ಸ್ ಟ್ರೋಫಿಯ(Champions Trophy) ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯದ ಟಿಕೆಟ್‌ಗಳು ಒಂದೇ ಗಂಟೆಯೊಳಗೆ ಮಾರಾಟವಾಗಿದೆ. ಹೈಬ್ರೀಡ್ ಮಾದರಿಯಲ್ಲಿ ನಡೆಯುವ ಈ ಟೂರ್ನಿಯಲ್ಲಿ ಭಾರತ(India vs Pakistan) ತನ್ನ ಎಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಭಾರತ ಫೈನಲ್ ಪ್ರವೇಶಿಸಿದೆ ಈ ಪಂದ್ಯವನ್ನು ಕೂಡ ದುಬೈನಲ್ಲೇ ಆಡಲಿದೆ. ಭಾರತ ಫೈನಲ್ ತಲುಪದಿದ್ದರೆ ಲಾಹೋರ್‌ನಲ್ಲಿ ಫೈನಲ್ ನಡೆಯಲಿದೆ.
ಭಾರತ-ಪಾಕ್ ಹೊರತುಪಡಿಸಿ ಉಳಿದ ಪಂದ್ಯಗಳ ಟಿಕೆಟ್‌ಗಳು ಇನ್ನೂ ಲಭ್ಯವಿದೆ. ಟಿಕೆಟ್ ಬೆಲೆ 2,900ರೂ.ಗಳಿಂದ ಆರಂಭವಾಗಿದೆ. ಐಸಿಸಿ ವೆಬ್‌ಸೈಟ್‌ನಲ್ಲಿ ಟಿಕೆಟ್‌ಗಳನ್ನು ಖರೀದಿಸಬಹುದು. ಮಾ.9ರ ಫೈನಲ್ ಪಂದ್ಯದ ಟಿಕೆಟ್‌ಗಳನ್ನು ಮೊದಲ ಸೆಮಿಫೈನಲ್ ಬಳಿಕ ಮಾರಾಟಕ್ಕೆ ಬಿಡಲಾಗುವುದು ಎಂದು ಐಸಿಸಿ ತಿಳಿಸಿದೆ.
ಇದನ್ನೂ ಓದಿ Champions Trophy: ಚಾಂಪಿಯನ್ಸ್ ಟ್ರೋಫಿ ಉದ್ಘಾಟನ ಸಮಾರಂಭ ರದ್ದು
ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ. ಫೆಬ್ರವರಿ 19ರಂದು ಹಾಲಿ ಚಾಂಪಿಯನ್ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಕರಾಚಿಯಲ್ಲಿ ಉದ್ಘಾಟನಾ ಪಂದ್ಯ ಆಡುವ ಮೂಲಕ ಪಂದ್ಯಾವಳಿಗೆ ಚಾಲನೆ ಸಿಗಲಿದೆ. ಟೂರ್ನಿಯಲ್ಲಿ ಆಡುವ 8 ತಂಡಗಳನ್ನು ತಲಾ 4ರಂತೆ 2 ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ರೌಂಡ್ ರಾಬಿನ್ ಲೀಗ್ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್ಗೇರಲಿವೆ.
ವೇಳಾಪಟ್ಟಿ
ಫೆ.19 ಪಾಕಿಸ್ತಾನ-ನ್ಯೂಜಿಲ್ಯಾಂಡ್, ಸ್ಥಳ: ಕರಾಚಿ
ಫೆ. 20 ಬಾಂಗ್ಲಾದೇಶ-ಭಾರತ, ಸ್ಥಳ: ದುಬೈ
ಫೆ. 21 ಅಫ್ಘಾನಿಸ್ತಾನ-ದ. ಆಫ್ರಿಕಾ, ಸ್ಥಳ: ಕರಾಚಿ
ಫೆ. 22 ಆಸ್ಟ್ರೆಲಿಯಾ-ಇಂಗ್ಲೆಂಡ್, ಸ್ಥಳ: ಲಾಹೋರ್
ಫೆ. 23 ಭಾರತ-ಪಾಕಿಸ್ತಾನ,ಸ್ಥಳ: ದುಬೈ
ಫೆ. 24 ಬಾಂಗ್ಲಾದೇಶ-ನ್ಯೂಜಿಲ್ಯಾಂಡ್, ಸ್ಥಳ: ರಾವಲ್ಪಿಂಡಿ
ಫೆ. 25 ಅಸ್ಟ್ರೆಲಿಯಾ-ದ. ಆಫ್ರಿಕಾ,ಸ್ಥಳ: ರಾವಲ್ಪಿಂಡಿ
ಫೆ. 26 ಅಫ್ಘಾನಿಸ್ತಾನ-ಇಂಗ್ಲೆಂಡ್,ಸ್ಥಳ: ಲಾಹೋರ್
ಫೆ. 27 ಪಾಕಿಸ್ತಾನ-ಬಾಂಗ್ಲಾದೇಶ,ಸ್ಥಳ: ರಾವಲ್ಪಿಂಡಿ
ಫೆ. 28 ಅಫ್ಘಾನಿಸ್ತಾನ-ಆಸ್ಟ್ರೆಲಿಯಾ,ಸ್ಥಳ: ಲಾಹೋರ್
ಮಾ. 1 ದಕ್ಷಿಣ ಆಫ್ರಿಕಾ-ಇಂಗ್ಲೆಂಡ್,ಸ್ಥಳ: ಕರಾಚಿ
ಮಾ. 2 ಭಾರತ-ನ್ಯೂಜಿಲ್ಯಾಂಡ್, ಸ್ಥಳ: ದುಬೈ
ಮಾ. 4 ಸೆಮಿಫೈನಲ್-1, ಸ್ಥಳ: ದುಬೈ
ಮಾ. 5 ಸೆಮಿಫೈನಲ್-2, ಸ್ಥಳ: ಲಾಹೋರ್
ಮಾ. 9 ಫೈನಲ್ -ಸ್ಥಳ: ದುಬೈ/ಲಾಹೋರ್