Champions Trophy: ಚಾಂಪಿಯನ್ಸ್ ಟ್ರೋಫಿ ಉದ್ಘಾಟನ ಸಮಾರಂಭ ರದ್ದು
ಹೈಬ್ರೀಡ್ ಮಾದರಿಯಲ್ಲಿ ನಡೆಯುವ ಈ ಟೂರ್ನಿಯಲ್ಲಿ ಭಾರತ ತನ್ನ ಎಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಭಾರತ ಫೈನಲ್ ಪ್ರವೇಶಿಸಿದೆ ಈ ಪಂದ್ಯವನ್ನು ಕೂಡ ದುಬೈನಲ್ಲೇ ಆಡಲಿದೆ. ಭಾರತ ಫೈನಲ್ ತಲುಪದಿದ್ದರೆ ಲಾಹೋರ್‌ನಲ್ಲಿ ಫೈನಲ್ ನಡೆಯಲಿದೆ.
ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಸಮಾರಂಭ ಹಾಗೂ ನಾಯಕರ ಫೋಟೊ ಶೂಟ್ ರದ್ದುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಭಾರತದ ನಾಯಕ ರೋಹಿತ್ ಶರ್ಮಾ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎನ್ನುವುದು ಖಚಿತವಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ಹಿಂದೆ ಮಾಹಿತಿ ನೀಡಿದ ಪ್ರಕಾರ ಫೆ.16 ರಂದು ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲ ತಂಡಗಳ ನಾಯಕರ ಫೋಟೋ ಶೂಟ್ ಹಾಗೂ ಸುದ್ದಿಗೋಷ್ಠಿ ನಡೆಯಲಿದೆ ಎಂದು ಹೇಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಕ್ ಪ್ರಧಾನಿ ಮುಖ್ಯ ಅತಿಥಿಯಾಗಿ ಭಾಗವಹಿಸುವ ನಿರೀಕ್ಷೆಯಿತ್ತು. ಐಸಿಸಿ ಟೂರ್ನಿಗೂ ಮುನ್ನ ಎಲ್ಲ ತಂಡಗಳ ನಾಯಕರು ಟ್ರೋಫಿ ಜತೆಗಿನ ಫೋಟೋಶೂಟ್‌ನಲ್ಲಿ ಭಾಗವಹಿಸುವುದು ಸಂಪ್ರದಾಯ.
ಇನ್ನೊಂದೆಡೆ ಚಾಂಪಿಯನ್ಸ್ ಟ್ರೋಫಿ ಆರಂಭದ ವೇಳೆ ಪಾಕಿಸ್ತಾನದ ಕ್ರೀಡಾಂಗಣಗಳು ಸಿದ್ಧಗೊಳ್ಳುವ ಕುರಿತು ತೀವ್ರ ಕಳವಳವಿದೆ. ಇನ್ನೂ ಕೂಡ ಕ್ರೀಡಾಂಗಣದ ಕಾಮಗಾರಿಗಳು ನಡೆಯುತ್ತಲೇ ಇದೆ. ಗುರುವಾರ ಪಾಕ್ ಕ್ರಿಕೆಟ್ ಮಂಡಳಿ ಗಡಾಫಿ ಕ್ರೀಡಾಂಗಣದ ವಿಡಿಯೊವೊಂದನ್ನು ಹಂಚಿಕೊಂಡಿತ್ತು. ಇದನ್ನು ಕಂಡ ಅನೇಕರು ಟೂರ್ನಿ ವೇಳೆಗೆ ಕೆಲಸ ಪೂರ್ಣೊಳ್ಳುವುದು ಅಸಾಧ್ಯ ಎಂದಿದ್ದಾರೆ.
ಹೈಬ್ರೀಡ್ ಮಾದರಿಯಲ್ಲಿ ನಡೆಯುವ ಈ ಟೂರ್ನಿಯಲ್ಲಿ ಭಾರತ ತನ್ನ ಎಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಭಾರತ ಫೈನಲ್ ಪ್ರವೇಶಿಸಿದೆ ಈ ಪಂದ್ಯವನ್ನು ಕೂಡ ದುಬೈನಲ್ಲೇ ಆಡಲಿದೆ. ಭಾರತ ಫೈನಲ್ ತಲುಪದಿದ್ದರೆ ಲಾಹೋರ್‌ನಲ್ಲಿ ಫೈನಲ್ ನಡೆಯಲಿದೆ.
ಇದನ್ನೂ ಓದಿ ಮೈದಾನದ ವಿಡಿಯೊ ಹಂಚಿಕೊಂಡ ಪಾಕ್ ಕ್ರಿಕೆಟ್ ಮಂಡಳಿ
19 ದಿನಗಳ ಕಾಲ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ. ಫೆಬ್ರವರಿ 19ರಂದು ಹಾಲಿ ಚಾಂಪಿಯನ್ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಕರಾಚಿಯಲ್ಲಿ ಉದ್ಘಾಟನಾ ಪಂದ್ಯ ಆಡುವ ಮೂಲಕ ಪಂದ್ಯಾವಳಿಗೆ ಚಾಲನೆ ಸಿಗಲಿದೆ. ಟೂರ್ನಿಯಲ್ಲಿ ಆಡುವ 8 ತಂಡಗಳನ್ನು ತಲಾ 4ರಂತೆ 2 ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ರೌಂಡ್ ರಾಬಿನ್ ಲೀಗ್ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್ಗೇರಲಿವೆ.