Chikkabalalpur News: ದುರಸ್ತಿಯಾಗದ ಕುಡಿಯುವ ನೀರಿನ ಶುದ್ಧೀಕರಣ ಘಟಕ

ಶೌಚಾಲಯ ಇಲ್ಲದೇ ಪುರುಷರು ಮತ್ತು ಮಹಿಳೆಯರು ಪರದಾಡುವಂತಾಗಿದೆ. ತಾಲ್ಲೂಕು ಆಡಳಿ ತದ ಕಚೇರಿಯಲ್ಲಿಯೇ ಈ ಪರಿಸ್ಥಿತಿಯಾದರೆ, ಉಳಿದ ಕಚೇರಿಗಳಲ್ಲಿನ ಪರಿಸ್ಥಿತಿ ಏನು ಎಂಬುದು ನಾಗರಿಕರ ಪ್ರಶ್ನೆ

IMG-20250205-WA0054 (1)  ok
Profile Ashok Nayak Feb 5, 2025 11:44 PM

ಬಾಗೇಪಲ್ಲಿ: ತಾಲ್ಲೂಕು ಕಚೇರಿ ಆವರಣದಲ್ಲಿರುವ ಕುಡಿಯುವ ನೀರಿನ ಶುದ್ಧೀಕರಣ ಘಟಕ ಇದ್ದರು ಪ್ರಯೋಜನವಾಗದ ಸ್ಥಿತಿ ಕಳೆದ ಎಂಟು ತಿಂಗಳಿನಿಂದಲೂ ಕೆಟ್ಟಿದ್ದು, ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗಿದೆ.

ಶೌಚಾಲಯ ಇಲ್ಲದೇ ಪುರುಷರು ಮತ್ತು ಮಹಿಳೆಯರು ಪರದಾಡುವಂತಾಗಿದೆ. ತಾಲ್ಲೂಕು ಆಡಳಿ ತದ ಕಚೇರಿಯಲ್ಲಿಯೇ ಈ ಪರಿಸ್ಥಿತಿಯಾದರೆ, ಉಳಿದ ಕಚೇರಿಗಳಲ್ಲಿನ ಪರಿಸ್ಥಿತಿ ಏನು ಎಂಬುದು ನಾಗರಿಕರ ಪ್ರಶ್ನೆ.

ಇದನ್ನೂ ಓದಿ: Chikkaballapur News: ಜನಸಾಗರದ ನಡುವೆ ನಡೆದ ಚಿತ್ರಾವತಿ ಶ್ರೀಸುಬ್ರಹ್ಮಣ್ಯೇಶ್ವರಸ್ವಾಮಿ ಬ್ರಹ್ಮರಥೋತ್ಸವ

‌ಪಟ್ಟಣದ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಮಿನಿ ವಿಧಾನಸೌಧವಿದೆ. ಪಕ್ಕದಲ್ಲಿಯೇ ಪುರಸಭೆಯ ಮಳಿಗೆಗಳು ಹಾಗೂ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣವಿದೆ. ಮಿನಿ ವಿಧಾನಸೌಧದ ಕೆಳ ಮಹಡಿಯ ಬಲಭಾಗದಲ್ಲಿ ಚುನಾವಣಾ ಶಾಖೆ, ತಹಶೀಲ್ದಾರ್, ಗ್ರೇಡ್-2 ತಹಶೀಲ್ದಾರ್ ಕೊಠಡಿಗಳು, ಆಡಳಿತ ಸಿಬ್ಬಂದಿ ಕಚೇರಿ ಕೊಠಡಿ ಹಾಗೂ ಬಲಭಾಗದಲ್ಲಿ ಉಪಖಜಾನೆ, ಆಹಾರ ನಿರೀಕ್ಷಕರ ಕಚೇರಿಯ ಕೊಠಡಿಗಳಿವೆ. ದಾಖಲೆಗಳ ಕೊಠಡಿ ಇದೆ.

ಮೊದಲ ಮಹಡಿಯಲ್ಲಿ ವಿಡಿಯೊ ಕಾನ್ಪರೆನ್ಸ್ ಹಾಲ್, ಭೂ ನೋಂದಣಿ ಕಚೇರಿ ಹಾಗೂ ಸಭಾಂ ಗಣ ಇದೆ. ಉಳಿದಂತೆ ಪಡಿತರ ಚೀಟಿ, ಆಧಾರ್ ಕಾರ್ಡ್‌, ವೃದ್ಧಾಪ್ಯ, ಅಂಗವಿಕಲರ, ವಿಧವಾ ವೇತನ, ಜನನ- ಮರಣ ಪ್ರಮಾಣ ಪತ್ರಗಳ ವಿತರಣೆ, ಖಾತೆ, ವಂಶವೃಕ್ಷ, ಪವತಿ ವಿತರಿಸಲು ಪ್ರತ್ಯೇಕ ವಾಗಿ ಕೌಂಟರ್ ತೆರೆಯಲಾಗಿದೆ.

ತಾಲ್ಲೂಕಿನಿಂದ ಪ್ರತಿನಿತ್ಯ ನೂರಾರು ಜನರು ಇಲ್ಲಿಗೆ ಆಗಮಿಸುತ್ತಾರೆ. ಹಗಲೆಲ್ಲಾ ಕಚೇರಿಯ ಬಳಿ ಕೆಲಸಕ್ಕೆ ಅಲೆದಾಡುತ್ತಿದ್ದಾರೆ.

ದುರಸ್ತಿಯಾಗದ ನೀರಿನ ಶುದ್ದೀಕರಣ ಘಟಕ

ಆಹಾರ ನಿರೀಕ್ಷಕರ ಕೊಠಡಿ ಮುಂದೆ ಕುಡಿಯುವ ನೀರಿನ ಶುದ್ಧೀಕರಣ ಘಟಕ ಇದೆ. ಅದು ಕೆಟ್ಟು ನಿಂತಿದ್ದರೂ ದುರಸ್ತಿಪಡಿಸಿಲ್ಲ. ಶುದ್ಧೀ‌ಕರಣ ಯಂತ್ರದ ಉಪಕರಣಗಳು ತುಕ್ಕು ಹಿಡಿದಿವೆ. ತಾಲ್ಲೂ ಕು ಕಚೇರಿಯ ಅಧಿಕಾರಿಗಳು ಕನಿಷ್ಠ ಕುಡಿಯುವ ನೀರಿನ ಕ್ಯಾನ್‌ಗಳನ್ನೂ ಇಟ್ಟಿಲ್ಲ. ಇದರಿಂದ ತಾಲ್ಲೂಕು ಕಚೇರಿಯಲ್ಲಿ ಕುಡಿಯಲು ನೀರು ಸಿಗದೆ ಜನರು ಪರಿತಪಿಸುವಂತಾಗಿದೆ.

ಇದೇ ಆವರಣದ ಸಂಕೀರ್ಣದಲ್ಲಿ ಪೊಲೀಸ್ ಠಾಣೆ, ಪತ್ರಕರ್ತರ ಭವನ, ಹಿಂಭಾಗದಲ್ಲಿ ಬಿಎಸ್‌ ಎನ್‌ಎಲ್ ಕಚೇರಿ ಇದೆ. ತಾಲ್ಲೂಕು ಕಚೇರಿಯ ಮುಖ್ಯದ್ವಾರದಿಂದ ಕಚೇರಿ ಮುಂದೆ ಸೂಕ್ತವಾದ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ತಹಶೀಲ್ದಾರ್, ಪೊಲೀಸ್ ಇನ್‌ಸ್ಪೆಕ್ಟರ್, ಸಬ್ ಇನ್‌ಸ್ಪೆಕ್ಟರ್, ಆಂಬುಲೆನ್ಸ್ ವಾಹನಗಳ ಸಂಚಾರಕ್ಕೂ ಅಡೆತಡೆಯಾಗಿದೆ. ಇದರಿಂದ ಸುಗಮ ಸಂಚಾರಕ್ಕೂ ತೊಂದರೆ ಆಗಿದೆ.

‘ತಾಲ್ಲೂಕು ಆಡಳಿತ ಕಚೇರಿಯಲ್ಲಿಯೇ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಕನಿಷ್ಠ ಮೂಲಸೌಲಭ್ಯ ಇಲ್ಲ. ಇದು ಆಡಳಿತ ಯಂತ್ರದ ಕಾರ್ಯವೈಖರಿ ಬಗ್ಗೆ ತಿಳಿಯುತ್ತದೆ. ಅಧಿಕಾರಿಗಳು ಬಿಸ್ಲೆರಿ ನೀರಿನ ಬಾಟೆಲ್ ಬಳಸುತ್ತಾರೆ. ಆದರೆ, ಕಚೇರಿಯಲ್ಲಿ ಕುಡಿಯುವ ನೀರು ಇದೆಯೇ ಎಂದು ಪರಿಶೀಲನೆ ಮಾಡಿಲ್ಲ ಎಂದು ದೂರುತ್ತಾರೆ ನಾಗರಿಕರು.

ಈ ಬಗ್ಗೆ ಕರವೇ ಸ್ವಾಭಿಮಾನಿ ಬಣದ ಉಪಾಧ್ಯಕ್ಷ ಜಬೀವುಲ್ಲ ಮಾತನಾಡಿ, ತಾಲೂಕು ಕಚೇರಿಗೆ ತಾಲೂಕಿನ ನಾನಾ ಗ್ರಾಮಗಳಿಂದ ರೈತರು,ನಾಗರೀಕರು ಆಗಮಿಸುತ್ತಾರೆ. ಅವರಿಗೆ ಕಚೇರಿಯಲ್ಲಿ ಕೆಲಸಗಳು ವಿಳಂಬವಾದಾಗಿ ಕನಿಷ್ಟ ಕುಡಿಯುವ ನೀರಿನ ಸೌಲಭ್ಯ ಒದಗಿಸಿಲ್ಲ.‌ ನೀರಿನ ಶುದ್ದೀ ಕರಣ ಘಟಕವಿದ್ದರೂ, ಅದನ್ನು ದುರಸ್ತಿ ಪಡಿಸುತ್ತಿಲ್ಲ.ಹಾಗಾಗಿ ಕೂಡಲೇ ಸಂಬಂಧಪಟ್ಟ ಅಧಿಕಾ ರಿಗಳು ಸರಿಪಡಿಸಿ ನಾಗರೀಕರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?