Chikkaballapur News: ಚಿಂತಾಮಣಿಯ ಅತಿಥಿ ಉಪನ್ಯಾಸಕ ಎಂ.ನರಸಿಂಹಪ್ಪ ಸಾವು: ಜಿಲ್ಲಾ ಸಂಘ ತೀವ್ರ ಸಂತಾಪ
ಮೃತ ಎನ್.ನರಸಿಂಹಪ್ಪ ಸರಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸಕವಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಅಧ್ಯಾಪಕರಾಗಿದ್ದರು.ಇವರ ಅಕಾಲಿಕ ಮರಣ ಅತಿಥಿ ಉಪನ್ಯಾಸಕ ಬಳಗವನ್ನು ದು:ಖದಲ್ಲಿ ಮುಳುಗುವಂತೆ ಮಾಡಿದೆ
ಚಿಕ್ಕಬಳ್ಳಾಪುರ: ಚಿಂತಾಮಣಿ ಸರಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ ದಲ್ಲಿ ಕಳೆದ 12ವರ್ಷಕ್ಕೂ ಹೆಚ್ಚುಕಾಲದಿಂದ ವಾಣಿಜ್ಯಶಾಸ್ತ್ರ ಉಪನ್ಯಾಸಕನಾಗಿ ಸೇವೆ ಸಲ್ಲಿಸು ತ್ತಿದ್ದ ಸಹೋದರ ಎಂ.ನರಸಿಂಹಪ್ಪ ಅವರ ಅಕಾಲಿಕ ಮರಣಕ್ಕೆ ತುತ್ತಾಗಿರುವುದಕ್ಕೆ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ.
ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ನರಸಿಂಹಪ್ಪ ಮಂಗಳವಾರ ಮೃತರಾಗಿದ್ದು ಮಡದಿ ಮಕ್ಕಳು ಮತ್ತು ಎರಡು ಮಕ್ಕಳನ್ನು ಅಗಲಿದ್ದಾರೆ.
ಇದನ್ನೂ ಓದಿ: Chikkaballapur News: ಗ್ರಾಮೀಣ ಜನತೆಗೆ ಕಾನೂನು ಅರಿವು ಅಗತ್ಯ
ಸರಕಾರ ಕೂಡಲೇ ಮೃತರ ಕುಟುಂಬಕ್ಕೆ 10 ಲಕ್ಷ ಹಣವನ್ನು ಪರಿಹಾರದ ರೂಪದಲ್ಲಿ ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಮುನಿರಾಜು ಎಂ ಅರಿಕೆರೆ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಮೃತ ಎನ್.ನರಸಿಂಹಪ್ಪ ಸರಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ವಾಣಿಜ್ಯಶಾಸ್ತç ವಿಭಾಗದಲ್ಲಿ ಅತಿಥಿ ಉಪನ್ಯಾಸಕವಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಅಧ್ಯಾಪಕರಾಗಿದ್ದರು.ಇವರ ಅಕಾಲಿಕ ಮರಣ ಅತಿಥಿ ಉಪನ್ಯಾಸಕ ಬಳಗವನ್ನು ದು:ಖದಲ್ಲಿ ಮುಳುಗುವಂತೆ ಮಾಡಿದೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ತವರು ಕ್ಷೇತ್ರದಲ್ಲಿಯೇ ಅತಿಥಿ ಉಪನ್ಯಾಸಕರೊಬ್ಬರು ಮೃತಪಟ್ಟಿರುವುದು ತೀವ್ರ ಬೇಸರ ತರಿಸಿದೆ.
ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಕೂಡಲೇ ಮೃತ ಕುಟುಂಬಕ್ಕೆ ಸಾಂತ್ವಾನ ಹೇಳುವ ಜತೆಗೆ ಸರಕಾರದಿಂದ 10 ಲಕ್ಷ ರೂಪಾಯಿ ನೆರವನ್ನು ಘೋಷಣೆ ಮಾಡಬೇಕು. ಮೃತರ ಪತ್ನಿಗೆ ಇಲಾಖೆ ಯಲ್ಲಿ ಉದ್ಯೋಗ ಒದಗಿಸುವ ಮೂಲಕ ನೊಂದ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯದಂತೆ ಮಾಡಬೇಕೆಂದು ಜಿಲ್ಲಾ ಅತಿಥಿ ಉಪನ್ಶಾಸಕರ ಸಂಘವು ಒತ್ತಾಯಿಸಿದೆ.