Chikkaballapur News: ರೈತರ ಹಿತ ಕಾಯುವುದು ರಾಷ್ಟ್ರೀಯ ಬ್ಯಾಂಕುಗಳು ಮಾತ್ರ : ಪ್ರಗತಿಪರ ರೈತ ಜಿ.ಎನ್. ನಾರಾಯಣಸ್ವಾಮಿ ಅಭಿಮತ
೮೦ ಎಕರೆ ದಾಳಿಂಬೆ ತೋಟದಲ್ಲಿ ಬೆಳೆಯುತ್ತಿದ್ದ ಹಸಿ ಹುಲ್ಲನ್ನು ಹಾಳು ಮಾಡುವ ಬದಲು ದನ ಗಳಿಗೆ ಆಹಾರವಾಗುತ್ತದೆ ಎಂಬ ದೂರಾಲೋಚನೆಯಿಂದ ಹೈನೋಧ್ಯಮಕ್ಕೆ ಮುಂದಾಗಿ ಯಶಸ್ವಿ ಯಾಗಿದ್ದೇನೆ. 120 ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ನನಗೆ ೨೦೦ ಲಾರಿ ಲೋಡ್ ಕೊಟ್ಟಿಗೆ ಗೊಬ್ಬರದ ಅಗತ್ಯವಿತ್ತು
ಚಿಕ್ಕಬಳ್ಳಾಪುರ: ರೈತ ಬಂಧುಗಳೇ ನೀವು ಖಾಸಗಿ ಸಾಲಕ್ಕಿಂತ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಮಾಡಿ ಸಕಾಲದಲ್ಲಿ ಮರುಪಾವತಿ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದಾಗಿ ಸಂಕಷ್ಟದಲ್ಲಿ ಹೆಚ್ಚಿನ ಸಾಲಸೋಲ ಪಡೆಯಲು ಸಾಧ್ಯವಿದೆ ಎಂದು ಸುವರ್ಣ ಸಂಭ್ರಮ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ರೈತ ಮರಳುಕುಂಟೆ ಗ್ರಾಮದ ಜಿ.ಎನ್.ನಾರಾಯಣಸ್ವಾಮಿ ತಿಳಿಸಿದರು.
ತಾಲೂಕು ಮರಳುಕುಂಟೆ ಗ್ರಾಮದಲ್ಲಿರುವ ಪ್ರಗತಿಪರ ರೈತ ಜಿ.ಎನ್.ನಾರಾಯಣಸ್ವಾಮಿ ಅವರ ಫಾರ್ಮ್ ಹೌಸ್‌ನಲ್ಲಿ ಮಂಗಳವಾರ ಜಿಲ್ಲಾ ಕೃತಕ ಗರ್ಭಧಾರಣಾ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂಧನೆ ಸ್ವೀಕರಿಸಿ ಅವರು ಮಾತನಾಡಿದರು.
80 ಎಕರೆ ದಾಳಿಂಬೆ ತೋಟದಲ್ಲಿ ಬೆಳೆಯುತ್ತಿದ್ದ ಹಸಿ ಹುಲ್ಲನ್ನು ಹಾಳು ಮಾಡುವ ಬದಲು ದನ ಗಳಿಗೆ ಆಹಾರವಾಗುತ್ತದೆ ಎಂಬ ದೂರಾಲೋಚನೆಯಿಂದ ಹೈನೋಧ್ಯಮಕ್ಕೆ ಮುಂದಾಗಿ ಯಶಸ್ವಿ ಯಾಗಿದ್ದೇನೆ. 120 ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ನನಗೆ 200 ಲಾರಿ ಲೋಡ್ ಕೊಟ್ಟಿಗೆ ಗೊಬ್ಬರದ ಅಗತ್ಯವಿತ್ತು.ಇದನ್ನು ಮನಗಂಡು ಪಂಜಾಬ್‌ನ ಮರ‍್ರತಳಿಯ 30 ಎಮ್ಮೆಗಳು, 23 ಸೀಮೆ ಹಸುಗಳನ್ನು ಸಾಕಿದ್ದು ಇವು ಹಾಕಿರುವ ೨೦ ಹಸುವಿನ ಕರುಗಳು, 13 ಕರುಗಳು ಇವೆ.ಪ್ರತಿದಿನ 450 ಲೀಟರ್ ಹಾಲನ್ನು ಕಾಂತಿಸ್ವೀಟ್ಸ್ಗೆ ಕೊಡುತ್ತಿದ್ದೇವೆ.ಹಾಲಿನಿಂದ ಲಾಭವೇನೂ ಇಲ್ಲದಿದ್ದರೂ ಗೊಬ್ಬರ ಮತ್ತು ಹೆಣ್ಣು ಕರುಗಳಿಂದ ಲಾಭವಾಗುತ್ತಿದೆ. ಪ್ರತಿದಿನ 2 ಲೋಡ್ ಸೆಗಣಿಗೊಬ್ಬರ ಸಂಗ್ರಹವಾಗುತ್ತಿದೆ. ಇದನ್ನು ನಾನು ಕರ್ತವ್ಯವಾಗಿ ನೋಡುತ್ತಿದ್ದೇನೆ ವಿನಃ ಫ್ಯಾಷನ್‌ಗಾಗಿ ಮಾಡು ತ್ತಿಲ್ಲ ಎನ್ನುತ್ತಾರೆ.
ನಾನು ಪೌಲ್ಟ್ರಿ ಫಾರಂ ತೆರೆದಾಗ,ಸೋಲಾರ್ ಎನರ್ಜಿ ಮಾಡಲು ಮುಂದಾದಾಗ,ಡ್ರಾಗನ್ ಪ್ರೂಟ್ ಬೆಳೆಯಲು ಅಡಿಯಿಟ್ಟಾಗ,ದಾಳಿಂಬೆ ಹೀಗೆ ಏನೇ ಮಾಡಲು ಮುಂದಾದಾಗಲೂ ಗೇಲಿ ಮಾಡಿ ಕುಹಕವಾಡಿದವರೇ ಹೆಚ್ಚು.ಆದರೆ ಇದನ್ನೇ ಆಶೀರ್ವಾಧ ಎಂದು ಭಾವಿಸಿ ಕಾಯಕದಲ್ಲಿ ಮುನ್ನಡೆ ದ ಕಾರಣ ಕೃಷಿ ಸಂಪೂರ್ಣವಾಗಿ ನನ್ನ ಕೈಹಿಡಿದಿದೆ.ಇದರಲ್ಲಿಯೇ ಬದುಕು ಕಟ್ಟಿಕೊಂಡಿದ್ದೇನೆ ಎಂದರು.
ಜಿಲ್ಲಾಧ್ಯಕ್ಷ ಚೌಡರೆಡ್ಡಿ ಮಾತನಾಡಿ ಹೈನೋಧ್ಯಮದ ಪ್ರಗತಿ ಕುರಿತ ಮಾಸಿಕ ಸಭೆಯನ್ನು ಪ್ರಗತಿ ಪರ ರೈತ ಜಿ.ಎನ್.ನಾರಾಯಣಸ್ವಾಮಿ ಅವರ ತೋಟದಲ್ಲಿ ಏರ್ಪಡಿಸಿರುವುದು ಸಂತೋಷ ತಂದಿದೆ. ಆಡುಮುಟ್ಟದ ಸೊಪ್ಪಿಲ್ಲ,ನಾರಾಯಣಸ್ವಾಮಿ ಅವರು ಕೈಹಾಕದ ಕೃಷಿ ಕ್ಷೇತ್ರವಿಲ್ಲ ಎಂಬಂತೆ ಎಲ್ಲಾ ತರದ ಕೃಷಿಯನ್ನೂ ತಮಗಿರುವ 24 ಎಕರೆ ಭೂಮಿಯಲ್ಲಿ ಮಾಡಿರುವುದನ್ನು ನೋಡಿ ಸಂತೋಷವಾಗುತ್ತಿದೆ.ಕೋಳಿಸಾಗಣೆ, ಸೋಲಾರ್ ಎನರ್ಜಿ, ತೋಟಗಾರಿಕೆ ಬೆಳೆಗಳಾದ ದಾಳಿಂಬೆ,ಡ್ರಾಗನ್ ಪ್ರೂಟ್,ದೇಸಿ ಎಮ್ಮೆಗಳ ಸಾಗಣೆ ಮಾಡುತ್ತಿದ್ದಾರೆ. ಪ್ರತಿಯೊಂದರಲ್ಲಿಯೂ ಪ್ರಗತಿಯನ್ನು ದಾಖಲಿಸಿರುವ ಇವರು ಪಂಜಾಬ್‌ನ ಮರ‍್ರ ತಳಿಯ ಎಮ್ಮೆಗಳನ್ನು ಹೊಂದಿದ್ದು ಪ್ರತಿದಿನ 450 ಲೀಟರ್ ಹಾಲು ಮಾರಾಟ ಮಾಡುತ್ತಿದ್ದಾರೆ. ಇಂತಹ ಕಡೆ ಬಂದು ನಮ್ಮ ಜಿಲ್ಲಾ ಮಟ್ಟದ ಮಾಸಿಕ ಸಭೆ ನಡೆಸುವ ಜತೆಗೆ ಕೃಷಿ ಅನುಭವ,ಹೈನೋದ್ಯಮದ ಸಾಧನೆ, ಕೃಷಿಯಲ್ಲಿ ಅವರ ಸಾಧನೆಯನ್ನು ಕೇಳಿ ಸಂತೋಷ ಪಟ್ಟಿದ್ದೇವೆ ಎಂದರು.
ಇದೇ ವೇಳೆ ಸಂಘದಿಂದ ಕೃಷಿಪಂಡಿತ, ಸುವರ್ಣ ಸಂಭ್ರಮ ಪ್ರಶಸ್ತಿ ಪುರಸ್ಕೃತರಾದ ಪ್ರಗತಿಪರ ರೈತರಾದ ಜಿ.ಎನ್.ನಾರಾಯಣಸ್ವಾಮಿ ಅವರನ್ನು ಹಾರ ತುರಾಯಿ ಹಾಕಿ ಸನ್ಮಾನಿಸಿದರು.
ಜಿಲ್ಲಾಧ್ಯಕ್ಷ ಚೌಡರೆಡ್ಡಿ,ಉಪಾಧ್ಯಕ್ಷ ಶೇಷಗಿರಿರಾವ್,ಖಜಾಂಚಿ ಅಪ್ಪಾಜಿಗೌಡ,ಕಾರ್ಯದರ್ಶಿ ಮುನಿ ಕೃಷ್ಣಪ್ಪ,ನಿರ್ದೇಶಕರಾದ ಎನ್.ವಿ.ನಾರಾಯಣಸ್ವಾಮಿ, ಟಿ.ಸಿ,ದೇವರಾಜ್, ಟಿ.ಎನ್. ರಾಘವೇಂದ್ರ, ಮಂಜುನಾಥ್, ನಾರಾಯಣಸ್ವಾಮಿ, ರಾಜಣ್ಣ,ರಾಮಚಂದ್ರ, ನಾರಾಯಣ ಸ್ವಾಮಿ, ಮುನಿಕೃಷ್ಣಪ್ಪ, ಗೋವಿಂದಪ್ಪ, ಸೋಮೇಗೌಡ, ಹನುಮಂತಪ್ಪ, ಬೈರಾರೆಡ್ಡಿ, ಅಶ್ವತ್ಥರೆಡ್ಡಿ, ಚಾಂದ್‌ಪಾಷ, ಬಾಬುರೆಡ್ಡಿ ಇದ್ದರು.