ತೆಂಡೂಲ್ಕರ್‌ಗೆ ಜೀವಮಾನ ಶ್ರೇಷ್ಠ: 2023-24ರ ಸಾಲಿನ ಬಿಸಿಸಿಐ ಪ್ರಶಸ್ತಿ ವಿಜೇತರ ವಿವರ!
BCCI Award List: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಸೇರಿದಂತೆ ಒಟ್ಟು 26 ಮಂದಿಯನ್ನು 2023-24ರ ಸಾಲಿನ ಪ್ರಶಸ್ತಿಗಳಿಗೆ ಬಿಸಿಸಿಐ ಆಯ್ಕೆ ಮಾಡಿದೆ. ಅಂತಾರಾಷ್ಟ್ರೀಯ ಹಾಗೂ ದೇಶಿ ಕ್ರಿಕೆಟ್‌ನಲ್ಲಿ ಸಾಧನೆ ಮಾಡಿದ ಆಟಗಾರರನ್ನು ಬಿಸಿಸಿಐ ಆಯ್ಕೆ ಮಾಡಿದೆ.
ನವದೆಹಲಿ: ಕಳೆದ 2023-24ರ ಸಾಲಿನ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಶುಕ್ರವಾರ ಅಂತಿಮಗೊಳಿಸಿದೆ. ಒಟ್ಟು 26 ಪ್ರಶಸ್ತಿ ವಿಜೇತರ ಹೆಸರುಗಳನ್ನು ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ. ದೇಶಿ ಕ್ರಿಕೆಟ್‌ನ ರನ್ ಮಷೀನ್ ಅಗ್ನಿ ಚೋಪ್ರಾ ಹಾಗೂ ಐಪಿಎಲ್ ಹೀರೋ ಶಶಾಂಕ್ ಸಿಂಗ್ ಸೇರಿದಂತೆ ಹಲವರು ಬಿಸಿಸಿಐ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಫೆಬ್ರವರಿ ಒಂದರಂದು ಮುಂಬೈನಲ್ಲಿ ಬಿಸಿಸಿಐ ಅಧಿಕೃತವಾಗಿ ಪ್ರಶಸ್ತಿ ವಿತರಣಾ ಸಮಾರಂಭವನ್ನು ಹಮ್ಮಿಕೊಳ್ಳಲಿದೆ. ಈ ಕಾರ್ಯಕ್ರಮಕ್ಕೆ ವಿಶೇಷವಾಗಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್‌ಗೆ ವಿಶೇಷ ಆಹ್ವಾನವನ್ನು ನೀಡಲಾಗಿದೆ. ಇವರಿಗೆ ಸಿಕೆ ನಾಯ್ಡು ಜೀವಮಾನ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಗುತ್ತದೆ. ಸಚಿನ್ ತೆಂಡೂಲ್ಕರ್ ಜೊತೆಗೆ ಇತ್ತೀಚೆಗೆ ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಆರ್ ಅಶ್ವಿನ್‌ಗೂ ಕೂಡ ಬಿಸಿಸಿಐ ವಿಶೇಷ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಭಾರತ ತಂಡದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಅವರು ಪಾಲಿ ಉಮ್ರಿಗರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ ಹಾಗೂ ಮಹಿಳೆಯರ ವಿಭಾಗದಲ್ಲಿ ಇದೇ ಪ್ರಶಸ್ತಿಗೆ ಸ್ಮೃತಿ ಮಂಧಾನಾ ಭಾಜನರಾಗಿದ್ದಾರೆ. ಅಂಡರ್ 23 ಸಿಕೆ ನಾಯ್ಡು ಟ್ರೋಫಿ (ಎಲೈಟ್ ಗ್ರೂಪ್) ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಿಗೆ ನೀಡುವ ಕರ್ನಾಟಕ ತಂಡದ ಕೆವಿ ಅನೀಷ್ ಅವರು ಎಂಎ ಚಿದಂಬರಂ ಟ್ರೋಫಿಗೆ ಭಾಜನರಾಗಿದ್ದಾರೆ.
ಬಿಸಿಸಿಐ ಅಂತಿಮಗೊಳಿಸಿದ ಎಲ್ಲಾ ಪ್ರಶಸ್ತಿ ವಿಜೇತರ ಪಟ್ಟಿ
- ಬಿಸಿಸಿಐ ದೇಶಿ ಟೂರ್ನಿಗಳಲ್ಲಿ ಅತ್ಯುತ್ತಮ ಪ್ರದರ್ಶನ: ಮುಂಬೈ ಕ್ರಿಕೆಟ್ ಅಸೋಸಿಯೇಷನ್
- ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ (ಮಹಿಳೆಯರು) ಅತ್ಯಧಿಕ ವಿಕೆಟ್ : ದೀಪ್ತಿ ಶರ್ಮಾ
- ಅಂತಾರಾಷ್ಟ್ರೀಯ (ಮಹಿಳೆಯರು) ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ: ಸ್ಮೃತಿ ಮಂಧಾನ
- ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ (ಮಹಿಳೆ): ಆಶಾ ಸೊಬ್ನಾ
- ಅಂತಾರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆ (ಪುರುಷರು): ಸರ್ಫರಾಜ್ ಖಾನ್
- ಅಂತರಾಷ್ಟ್ರೀಯ ಅತ್ಯುತ್ತಮ ಕ್ರಿಕೆಟ್ ಆಟಗಾರ್ತಿ (ಮಹಿಳೆ): ಸ್ಮೃತಿ ಮಂಧಾನಾ
- ಪಾಲಿ ಉಮ್ರಿಗರ್ ಪ್ರಶಸ್ತಿ: ಅಂತಾರಾಷ್ಟ್ರೀಯ ಅತ್ಯುತ್ತಮ ಕ್ರಿಕೆಟಿಗ (ಪುರುಷರು): ಜಸ್‌ಪ್ರೀತ್ ಬುಮ್ರಾ
- ಬಿಸಿಸಿಐ ವಿಶೇಷ ಪ್ರಶಸ್ತಿ- ರವಿಚಂದ್ರನ್ ಅಶ್ವಿನ್
- ಕರ್ನಲ್ ಸಿ ಕೆ ನಾಯುಡು ಜೀವಮಾನ ಸಾಧನೆ ಪ್ರಶಸ್ತಿ: ಸಚಿನ್ ತೆಂಡೂಲ್ಕರ್
- ಜಗಮೋಹನ್ ದಾಲ್ಮಿಯಾ ಟ್ರೋಫಿ- ಅತ್ಯುತ್ತಮ ಮಹಿಳಾ ಕ್ರಿಕೆಟರ್ (ಜೂನಿಯರ್ ಡೊಮೆಸ್ಟಿಕ್): ಮಹಾರಾಷ್ಟ್ರದ ಈಶ್ವರಿ ಅವಸರೆ
- ಜಗಮೋಹನ್ ದಾಲ್ಮಿಯಾ ಟ್ರೋಫಿ- ಅತ್ಯುತ್ತಮ ಮಹಿಳಾ ಕ್ರಿಕೆಟರ್ (ಹಿರಿಯರ ದೇಶಿ ಕ್ರಿಕೆಟ್) - ದಿಲ್ಲಿಯ ಪ್ರಿಯಾ ಮಿಶ್ರಾ
- ಜಗಮೋಹನ್ ದಾಲ್ಮಿಯಾ ಟ್ರೋಫಿ-ಅಂಡರ್ 16 ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್: ತಮಿಳುನಾಡಿನ ಹೇಮಚುದೇಶನ್ ಜಗನಾಥನ್
- ಜಗಮೋಹನ್ ದಾಲ್ಮಿಯಾ ಟ್ರೋಫಿ: U16 ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರು: ಉತ್ತರಾಖಂಡ್‌ನ ಲಕ್ಷ ರಾಯಚಂದನಿ
- ಎಂಎ ಚಿದಂಬರಂ ಟ್ರೋಫಿ: U19 ಕೂಚ್ ಬೆಹಾರ್ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಟೇಕರ್: ಮಧ್ಯಪ್ರದೇಶದ ವಿಷ್ಣು ಭಾರದ್ವಾಜ್
- ಎಂಎ ಚಿದಂಬರಂ ಟ್ರೋಫಿ: U19 ಕೂಚ್ ಬೆಹಾರ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರು: ಉತ್ತರ ಪ್ರದೇಶದ ಕಾವ್ಯಾ ಟಿಯೋಟಿಯಾ
- ಎಂಎ ಚಿದಂಬರಂ ಟ್ರೋಫಿ: U23 ಸಿಕೆ ನಾಯ್ಡು ಟ್ರೋಫಿ (ಪ್ಲೇಟ್ ಗ್ರೂಪ್) ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರು: ನಾಗಾಲ್ಯಾಂಡ್‌ನ ನೀಜೆಖೋ ರುಪ್ರಿಯೊ
- ಎಂಎ ಚಿದಂಬರಂ ಟ್ರೋಫಿ: U23 ಸಿಕೆ ನಾಯುಡು ಟ್ರೋಫಿ (ಪ್ಲೇಟ್ ಗ್ರೂಪ್) ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ: ನಾಗಾಲ್ಯಾಂಡ್‌ನ ಹೇಮ್ ಚೆಟ್ರಿ
- ಎಂಎ ಚಿದಂಬರಂ ಟ್ರೋಫಿ: U23 ಸಿಕೆ ನಾಯ್ಡು ಟ್ರೋಫಿ (ಎಲೈಟ್ ಗ್ರೂಪ್) ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರು: ತಮಿಳುನಾಡಿನ ಪಿ ವಿದ್ಯುತ್
- ಎಂಎ ಚಿದಂಬರಂ ಟ್ರೋಫಿ: U23 ಸಿಕೆ ನಾಯ್ಡು ಟ್ರೋಫಿ (ಎಲೈಟ್ ಗ್ರೂಪ್) ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ: ಕರ್ನಾಟಕದ ಅನೀಶ್ ಕೆವಿ
- ಮಾಧವರಾವ್ ಸಿಂಧಿಯಾ ಪ್ರಶಸ್ತಿ: ರಣಜಿ ಟ್ರೋಫಿ (ಪ್ಲೇಟ್ ಗ್ರೂಪ್) ನಲ್ಲಿ ಅತ್ಯಧಿಕ ವಿಕೆಟ್-ಟೇಕರ್ - ಮಿಜೋರಾಂನ ಮೋಹಿತ್ ಜಂಗ್ರಾ
- ಮಾಧವರಾವ್ ಸಿಂಧಿಯಾ ಪ್ರಶಸ್ತಿ: ರಣಜಿ ಟ್ರೋಫಿಯಲ್ಲಿ (ಎಲೈಟ್ ಗ್ರೂಪ್) ಅತ್ಯಧಿಕ ವಿಕೆಟ್ ಪಡೆದವರು: ಹೈದರಾಬಾದ್‌ನ ತನಯ್ ತ್ಯಾಗರಾಜನ್
- ಮಾಧವರಾವ್ ಸಿಂಧಿಯಾ ಪ್ರಶಸ್ತಿ: ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ (ಪ್ಲೇಟ್ ಗ್ರೂಪ್): ಮಿಜೋರಾಂನ ಅಗ್ನಿ ಚೋಪ್ರಾ
- ಮಾಧವರಾವ್ ಸಿಂಧಿಯಾ ಪ್ರಶಸ್ತಿ: ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ (ಎಲೈಟ್ ಗ್ರೂಪ್): ಆಂಧ್ರಪ್ರದೇಶದ ರಿಕಿ ಭುಯಿ
- ಅತ್ಯುತ್ತಮ ಆಲ್‌ರೌಂಡರ್‌ಗಾಗಿ ಲಾಲಾ ಅಮರನಾಥ್ ಪ್ರಶಸ್ತಿ: ಛತ್ತೀಸ್‌ಗಢದ ಶಶಾಂಕ್ ಸಿಂಗ್
- ರಣಜಿ ಟ್ರೋಫಿಯಲ್ಲಿ ಅತ್ಯುತ್ತಮ ಆಲ್‌ರೌಂಡರ್‌ಗಾಗಿ ಲಾಲಾ ಅಮರನಾಥ್ ಪ್ರಶಸ್ತಿ: ಮುಂಬೈನ ತನುಷ್ ಕೋಟ್ಯಾನ್
- ದೇಶಿ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಅಂಪೈರ್: ಅಕ್ಷಯ್ ಟೋಟ್ರೆ