Coffee And Health: ನೀವು ಕುಡಿಯುವ ಕಾಫಿಯನ್ನು ಆರೋಗ್ಯಕರವಾಗಿಸಲು ಸಿಂಪಲ್ ಟಿಪ್ಸ್ ಇಲ್ಲಿದೆ

Coffee And Health: ಕಾಫಿಪ್ರಿಯರು ನೀವಾಗಿದ್ದರೆ ಇಲ್ಲಿದೆ ಸೂಪರ್‌ ಟಿಪ್ಸ್‌. ಕಾಫಿಯ ಸೇವನೆಯಲ್ಲಿ ಕೆಲವೊಂದಿಷ್ಟು ಬದಲಾವಣೆಗಳನ್ನು ಮಾಡಿಕೊಂಡರೆ ಆರೋಗ್ಯಕ್ಕೆ ಉತ್ತಮ. ಅದಕ್ಕಾಗಿ ನೀವು ಸರಳ ಟಿಪ್ಸ್‌ ಪಾಲಿಸಿದರೆ ಸಾಕು. ಅದೇನು ಎನ್ನುವ ವಿವರ ಇಲ್ಲಿದೆ.

healthy coffee
Profile Pushpa Kumari January 23, 2025

ನವದೆಹಲಿ: ಹೆಚ್ಚಿನ ಜನರಿಗೆ ಕಾಫಿ (Coffee) ಅತ್ಯಂತ ಪ್ರೀತಿಯ ಮತ್ತು ಆದ್ಯತೆಯ ಪಾನೀಯಗಳಲ್ಲಿ ಒಂದಾಗಿದ್ದು, ಲಕ್ಷಾಂತರ ಜನರು ದೈನಂದಿನ ಪ್ರಧಾನ ಪಾನೀಯವಾಗಿ ಸೇವಿಸುತ್ತಾರೆ (Coffee And Health). ಕಾಫಿ ಸೇವನೆ ಮಿತವಾಗಿದ್ದರೆ ಅದು ಆರೋಗ್ಯಕ್ಕೂ ಒಳ್ಳೆಯದು. ಅತಿಯಾದರೆ ಅದರಿಂದ ಕೆಲವು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಆಹಾರ ತಜ್ಞರು ಎಚ್ಚರಿಸುತ್ತಾರೆ.

ನೀವು ಕುಡಿಯುವ ಕಾಫಿಯನ್ನು ಇನ್ನಷ್ಟು ಆರೋಗ್ಯಕರವಾಗಿಸಲು ಕೆಲವು ಸಲಹೆಗಳು ಇಲ್ಲಿದೆ. ಕೆಲವೊಂದಿಷ್ಟು ಬದಲಾವಣೆಗಳನ್ನು ಮಾಡಿಕೊಂಡು ಕಾಫಿ ಕುಡಿದರೆ ಆರೋಗ್ಯಕ್ಕೆ ಉತ್ತಮ. ಕಾಫಿ ಸೇವನೆಯು ಆರೋಗ್ಯಕರವಾಗಿಸಲು ಈ ಸರಳ ಟಿಪ್ಸ್ ಬಳಸಿ.

ದಾಲ್ಚಿನ್ನಿ ಪುಡಿ ಸೇರಿಸಿ

ನಿಮ್ಮ ಕಾಫಿಗೆ ಸ್ವಲ್ಪ ಪ್ರಮಾಣದ ದಾಲ್ಚಿನ್ನಿ ಸೇರಿಸಿ ಕುಡಿದರೆ ಆರೋಗ್ಯಕ್ಕೆ ಬಹಳ ಉತ್ತಮ. ದಾಲ್ಚಿನ್ನಿ ಮಧುಮೇಹಿಗಳಲ್ಲಿ ರಕ್ತದಲ್ಲಿನ ಗ್ಲೂಕೋಸ್, ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಇದು ಉರಿಯೂತ ನಿವಾರಕ ಮತ್ತು ಆ್ಯಂಟಿ ಆಕ್ಸಿಡೆಂಟ್‌ಗಳಂತಹ ಹಲವು ಪ್ರಮುಖ ಪೋಷಕಾಂಶಗಳನ್ನು ಹೊಂದಿದೆ. ಹಾಗಾಗಿ ದಾಲ್ಚಿನಿ ಸೇರಿಸುವ ಮೂಲಕ ಕಾಫಿ ಕುಡಿಯಬಹುದು.

ಕೋಕೋ ಸೇರಿಸಿ

ನಿಮ್ಮ ಕಾಫಿಗೆ ಕೋಕೋ ಸೇರಿಸಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಕೋಕೋವು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ. ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಜತೆಗೆ ರಕ್ತದೊತ್ತಡವನ್ನು ಕಡಿಮೆ ಮಾಡಲು, ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಾಗಾಗಿ ನಿಮ್ಮ ಬೆಳಗಿನ ಕಾಫಿಗೆ ಕೋಕೋ ಸೇರಿಸಿ, ಅಭ್ಯಾಸವನ್ನು ಬದಲಾಯಿಸಿಕೊಳ್ಳಿ.

ತೆಂಗಿನ ಎಣ್ಣೆ ಸೇರಿಸಿ

ಕಾಫಿಗೆ ನೀವು ತೆಂಗಿನ ಎಣ್ಣೆಯನ್ನು ಕೂಡ ಸೇರಿಸಿ ಕುಡಿಯಬಹುದು. ಕಾಫಿಗೆ ತೆಂಗಿನ ಎಣ್ಣೆ, ಎಂಸಿಟಿ ಎಣ್ಣೆ ಅಥವಾ ಬೆಣ್ಣೆಯಂತಹ ಆರೋಗ್ಯಕರ ಕೊಬ್ಬನ್ನು ಸೇರಿಸುವುದರಿಂದ ಆರೋಗ್ಯಕ್ಕೆ ಉತ್ತಮ. ಹಾಗಾಗಿ ಈ ಅಭ್ಯಾಸವನ್ನು ರೂಢಿಸಿಕೊಳ್ಳಿ.

ಸಕ್ಕರೆ ಬಳಸಬೇಡಿ

ಅತಿಯಾದ ಸಕ್ಕರೆ ಬಳಕೆ ಹಾನಿಕಾರಕವಾಗುತ್ತದೆ. ನಿತ್ಯ ಸಕ್ಕರೆ ಸೇರಿಸಿ ಕಾಫಿ ಕುಡಿದರೆ ಮಧುಮೇಹದಂತಹ ಗಂಭೀರ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ, ಸಕ್ಕರೆ ಹಾಕದೆ ಕಾಫಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಜೇನುತುಪ್ಪ, ಮೇಪಲ್ ಸಿರಪ್ ಇತ್ಯಾದಿ ನೈಸರ್ಗಿಕ ಸಿಹಿಕಾರಕಗಳನ್ನು ಬಳಸುವ ಮೂಲಕ ಅಪಾಯವನ್ನು ಕಡಿಮೆ ಮಾಡಬಹುದು

ಇದನ್ನು ಓದಿ: BBK 11: ಬಿಗ್ ಬಾಸ್ ಮನೆಗೆ ಬಂದ ಯಜಮಾನ ತಂಡ: ಮಸ್ತ್ ಮಜಾ ಮಾಡಿ ಸ್ಪರ್ಧಿಗಳು

ಸಸ್ಯ ಆಧಾರಿತ ಹಾಲನ್ನು ಬಳಸಿ

ಸಸ್ಯ ಆಧಾರಿತ ಹಾಲಿನಲ್ಲಿ ಕಡಿಮೆ ಕ್ಯಾಲೋರಿ ಇರುತ್ತದೆ. ಹೀಗಾಗಿ ಪೋಷಕಾಂಶ ಸಮೃದ್ಧವಾಗಿರುವ ಬಾದಾಮಿ, ಸೋಯಾ ಮತ್ತು ಓಟ್ ಹಾಲಿನಂತಹ ಸಸ್ಯ ಆಧಾರಿತ ಹಾಲನ್ನು ಸೇರಿಸಿ ಕಾಫಿ ಕುಡಿಯಿರಿ. ಕೆಲವರಿಗೆ ಹಾಲಿನ ಉತ್ಪನ್ನ ಉರಿಯೂತ, ಜೀರ್ಣಕಾರಿ ಸಮಸ್ಯೆಗಳು ಅಥವಾ ಚರ್ಮದ ಸಮಸ್ಯೆಗಳನ್ನು ಉಂಟು ಮಾಡಬಹುದು. ಬಾದಾಮಿ, ಓಟ್ ಅಥವಾ ತೆಂಗಿನ ಹಾಲಿನಂತಹ ಸಸ್ಯ ಆಧಾರಿತ ಹಾಲನ್ನು ಬಳಸುವುದರಿಂದ ಈ ಅಪಾಯಗಳನ್ನು ಕಡಿಮೆ ಮಾಡಬಹುದು.

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ