ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಶಾಲಾ ವಾರ್ಷಿಕೋತ್ಸವ ಉತ್ತಮ ವೇದಿಕೆ : ಬಿಇಒ ಮುನಿವೆಂಕಟರಾಮಾಚಾರಿ
ನಾಗರೀಕ ಸಮಾಜದಲ್ಲಿ ಹಬ್ಬ ಹರಿದಿನ ಆಚರಿಸುವಂತೆ ಶಾಲಾ ಕಾಲೇಜುಗಳಲ್ಲಿ ವರ್ಷಕ್ಕೊಮ್ಮೆ ನಡೆ ಯುವ ವಾರ್ಷಿಕೋತ್ಸವ ಮಕ್ಕಳ ಪಾಲಿಗೆ ಹಬ್ಬದ ಸನ್ನಿವೇಶವನ್ನು ಸೃಷ್ಟಿ ಎಲ್ಲಾ ಧರ್ಮಗಳ ಸಮನ್ವ ಯತೆಯನ್ನು ಇಲ್ಲಿ ಕಾಣಲು ಸಾಧಲ್ಲೀ ಮೂಲಕ ಮಕ್ಕಳ ಪ್ರತಿಭಾ ದರ್ಶನ ಪೋಷಕರಿಗೆ ಆಗಲಿದೆ ಎಂದರು
![sanmana](https://cdn-vishwavani-prod.hindverse.com/media/images/sanmana.max-1280x720.jpg)
![Profile](https://vishwavani.news/static/img/user.5c7ca8245eec.png)
ಚಿಕ್ಕಬಳ್ಳಾಪುರ : ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಶಾಲಾ ವಾರ್ಷಿಕೋತ್ಸವಗಳು ಉತ್ತಮ ವೇದಿಕೆಯಾಗಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮುನಿವೆಂಕಟರಾಮಾಚಾರಿ ಅಭಿಪ್ರಾಯಪಟ್ಟರು.
ನಗರದ ಹರ್ಷೋದಯ ಕಲ್ಯಾಣಮಂಟಪದಲ್ಲಿ ಬುಧವಾರ ಆಕಾಶ್ ಗ್ಲೋಬಲ್ ಸ್ಕೂಲ್ ವತಿ ಯಿಂದ ಏರ್ಪಡಿಸಿದ್ದ "ವುಮೆನ್ ಅರೌಂಡ್ ದ ವರ್ಲ್ಡ್" ಶೀರ್ಷಿಕೆಯಲ್ಲಿ ನಡೆದ 11ನೇ ವರ್ಷದ ಶಾಲಾ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಾಗರೀಕ ಸಮಾಜದಲ್ಲಿ ಹಬ್ಬ ಹರಿದಿನ ಆಚರಿಸುವಂತೆ ಶಾಲಾ ಕಾಲೇಜುಗಳಲ್ಲಿ ವರ್ಷಕ್ಕೊಮ್ಮೆ ನಡೆಯುವ ವಾರ್ಷಿಕೋತ್ಸವ ಮಕ್ಕಳ ಪಾಲಿಗೆ ಹಬ್ಬದ ಸನ್ನಿವೇಶವನ್ನು ಸೃಷ್ಟಿ ಎಲ್ಲಾ ಧರ್ಮಗಳ ಸಮನ್ವಯತೆಯನ್ನು ಇಲ್ಲಿ ಕಾಣಲು ಸಾಧಲ್ಲೀ ಮೂಲಕ ಮಕ್ಕಳ ಪ್ರತಿಭಾ ದರ್ಶನ ಪೋಷಕರಿಗೆ ಆಗಲಿದೆ ಎಂದರು.
ಇದನ್ನೂ ಓದಿ: Chikkaballapur News: ಜನಸಾಗರದ ನಡುವೆ ನಡೆದ ಚಿತ್ರಾವತಿ ಶ್ರೀಸುಬ್ರಹ್ಮಣ್ಯೇಶ್ವರಸ್ವಾಮಿ ಬ್ರಹ್ಮರಥೋತ್ಸವ
ಮಕ್ಕಳನ್ನು ಓದಿಸುವ ವಿಚಾರದಲ್ಲಿ ಶಿಕ್ಷಕರಷ್ಟೆ ಪೋಷಕರದ್ದು ಕೂಡ ದೊಡ್ಡ ಜವಾಬ್ದಾರಿಯಿದೆ. ಮಕ್ಕಳ ಓದಿನ ಬಗ್ಗೆ ಪೋಷಕರು ಸರಿಯಾಗಿ ಗಮನಿಸಬೇಕು. ಬದ್ಧತೆ,ಶಿಸ್ತು, ಧೈರ್ಯ ಈ ೩ ಗುಣ ಗಳನ್ನು ಮಕ್ಕಳಿಗೆ ಧಾರೆಯೆರಯಬೇಕು. ಯಾವ ಕಾರಣಕ್ಕೂ ಮಕ್ಕಳು ಓದುವಾಗ ಟಿವಿ ಹಾಕಬೇಡಿ. ನಿಶ್ಯಬ್ಧ ಪರಿಸರ ಇರಲಿ.ಮಕ್ಕಳ ಮುಂದೆ ಜಗಳ ಆಡಬೇಡಿ.ಇದು ಮಕ್ಕಳ ಮನಸ್ಸಿನ ಮೇಲೆ ಪ್ರತಿ ಕೂಲ ಪ್ರಭಾವ ಬೀರುತ್ತದೆ ಎಂದು ಎಚ್ಚರಿಸಿದರು.
ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಿರುವ ಶಾಲೆಗಳ ಪೈಕಿ ಆಕಾಶ್ ಗ್ಲೋಬಲ್ ಶಾಲೆ ಪ್ರಥಮ ಸ್ಥಾನದಲ್ಲಿ ನಿಲ್ಲಲಿದೆ.ಪಠ್ಯ ಶಿಕ್ಷಣದೊಟ್ಟಿಗೆ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಕಲಿಸುತ್ತಿರುವುದು ಹೆಮ್ಮೆಯೆನಿಸಿದೆ.ಇದೇ ಕಾರಣಕ್ಕಾಗ ಇಲ್ಲಿ ದಾಖಲಾತಿಗೆ ಕೊರತೆಯಾಗಿಲ್ಲ ಎಂದು ಬಣ್ಣಿಸಿದರು.
ಶಿಕ್ಷಣದಲ್ಲಿ ತಾಂತ್ರಿಕತೆಯಿರಬೇಕು. ಮೌಲ್ಯಗಳಿರಬೇಕು,ಕೌಶಲ್ಯಯುತ ಬೋಧನೆಗೆ ಒತ್ತು ನೀಡಬೇಕು. ಆಗ ಮಾತ್ರ ಮಕ್ಕಳು ದೇಶದ ಆಸ್ತಿ ಆಗುತ್ತಾರೆ. ಕಾಣದ ದೇವರನ್ನು ಪೂಜಿವ ಬದಲಿಗೆ ಕಣ್ಣಿಗೆ ಕಾಣುವ ತಂದೆ ತಾಯಿಯನ್ನು ಗೌರವಿಸಿ, ಪೂಜಿಸಲು ಮುಂದಾಗುತ್ತಾರೆ. ಮಕ್ಕಳು ಏನಾಗ ಬೇಕು ಎಂದು ನಿಮಗೆ ಕನಸಿದೆಯೋ ಅಂತಹ ಪರಿಸರ ಸೃಷ್ಟಿಸುವ ಮೂಲಕ ಪೋಷಕರು ಮಕ್ಕಳಿಗೆ ಮಾದರಿಯಾಗಬೇಕು.ಓದುವ ಸಮಯದಲ್ಲಿ ಟಿ.ವಿ.ಮೊಬೈಲ್ ಮೋಹ ಅಪ್ಪ ಅಮ್ಮನಿಗೂ ಬೇಡ, ಇಷ್ಟಾದರೆ ಮಕ್ಕಳೂ ಅದರಿಂದ ದೂರವಿರುತ್ತಾರೆ ಎಂದು ಕರೆ ನೀಡಿದರು.
ಮುಕ್ತಾ ಫೌಂಡೇಷನ್‌ನ ಸಂಸ್ಥಾಪಕ ನಿರ್ದೇಶಕಿ ಡಾ.ಅಶ್ವಿನಿ ಎನ್.ವಿ. ಮಾತನಾಡಿ ಪುರುಷನಿರಲಿ ಮಕ್ಕಳಿರಲಿ ಅವರ ಯಶಸ್ಸಿನ ಹಿಂದೆ ತಾಯಿ ಅಂದರೆ ಹೆಣ್ಣು ಇದ್ದೇ ಇರುತ್ತಾಳೆ.ಬಾಲ್ಯದಿಂದಲೇ ನಮ್ಮ ಮಕ್ಕಳಿಗೆ ಬೇರೆಯವರ ಹಕ್ಕಿನ ಉಲ್ಲಂಘನೆ ಮಾಡದಂತೆ,ನಮ್ಮ ಹಕ್ಕುಗಳ ಉಲ್ಲಂಘನೆಯೂ ಆಗದಂತೆ ಜಾಗೃತೆ ವಹಿಸುವ ಬಗ್ಗೆ ಕಲಿಸಬೇಕು. ಎರಡನೆಯದಾಗಿ ಎಮೋಷನಲ್ ಪ್ರಥಮ ಚಿಕಿತ್ಸೆ ನೀಡುವ ಬದಲು ಮಾನಸಿಕ ಪ್ರಥಮ ಚಿಕಿತ್ಸೆ ಕಲಿಸಿ. ಮೂರನೆಯದಾಗಿ ಭಯಮುಕ್ತ ಭಾರತ ಕಟ್ಟು ವುದಕ್ಕೆ ಪೋಷಕರು ಕೈಜೋಡೊಡಿಸಬೇಕು. ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಯುವ ಭಾಗವಾಗಿ ಸಹಾಯ ಕೇಳುವ,ಸಹಾಯ ಮಾಡುವ ಕೌಶಲ್ಯ ಮಕ್ಕಳಿಗೆ ಕಲಿಸಬೇಕು ಎಂದರು.
ಮಕ್ಕಳ ಮನಸ್ಸು ಹತ್ತಿಯ ರೀತಿಯಿರುತ್ತದೆ. ಇದಕ್ಕೆ ಏನನ್ನು ಹಾಕುತ್ತೀರೋ ಅದನ್ನು ಹೀರಿ ಕೊಳ್ಳುವ ಗುಣಹೊಂದಿದೆ.ಹೀಗಾಗಿ ಸದಾಕಾಲ ಮಕ್ಕಳಿಗೆ ಗುಣಾತ್ಮಕ ಚಿಂತನೆಗಳನ್ನು ಮಕ್ಕಳಿಗೆ ಕಲಿಸಿ.ಮಗು ನಿನ್ನಲ್ಲಿ ಗುರಿಯಿದೆ.ಆ ಗುರಿ ಮುಟ್ಟುವ ಛಲವಿದೆ ನೀನು ಮಾಡುತ್ತೀಯಾ ಎಂದು ಬೆನ್ನು ತಟ್ಟುವ ಮೂಲಕ ಮಗುವಿನ ಅಂತರ್ಧನಿಯಾಗಿ ಅಪ್ಪ ಅಮ್ಮ ಕೆಲಸ ಮಾಡಿಬೇಕಿದೆ. ವಿನಾಕಾರಣ ಹೋಲಿಕೆ ಮಾಡಲೇ ಬೇಡಿ .ಮಕ್ಕಳು ನಿಮ್ಮ ಮಾತನ್ನು ಕೇಳಿ ಬದಲಾವಣೆ ಆಗುವು ದಿಲ್ಲ, ಬದಲಿಗೆ ನಿಮ್ಮ ವರ್ತನೆ ನೋಡಿ ಕಲಿಯುತ್ತಾರೆ ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ,ಎತ್ತಿನ ಗಾಡಿ ಮೂಲಕ ನೀರುಸರಬರಾಜು,ಗ್ರಾಪಂ ಸ್ವಚ್ಚತಾ ವಾಹನ ಚಾಲಕಿ,ಅಂಗನವಾಡಿ ಶಿಕ್ಷಕಿ,ಹಿರಿಯ ಸಾಹಿತಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ೫ ಮಂದಿ ಸಾಧಕ ಮಹಿಳೆಯರನ್ನು ಗೌರವಿಸಿದರು.
ಮಕ್ಕಳ ಮೇಲೆ ಪೋಷಕರ ಪ್ರಭಾವ ಹೆಚ್ಚಿರುತ್ತದೆ.ಮಕ್ಕಳು ಏನಾಗಬೇಕು ಎಂದು ಬಯಸಿದ್ದೀರೋ, ನೀವು ಮೊದಲು ಹಾಗೆ ಬದಲಾಗುವ ಮೂಲಕ ಮಕ್ಕಳಲ್ಲಿ ಬದಲಾವಣೆ ಕಾಣಬಹುದು ಎಂದ ಅವರು ಆಕಾಶ ಗ್ಲೋಬಲ್ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಆಕಾಶದೆತ್ತರಕ್ಕೆ ಬೆಳೆಯಲಿ, ಉನ್ನತವಾದ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.
ಈ ವೇಳೆ ಹಿರಿಯ ಸ್ತಿçÃರೋಗ ತಜ್ಞೆ ಡಾ.ಸುಶೀಲಾಮೂರ್ತಿ,ದಕ್ಷಿಣ ಪದವೀಧರರ ವೇದಿಕೆ ಅಧ್ಯಕ್ಷ ಎನ್.ಎನ್.ವಿನಯ್,ಸಿಟಿ ಸಿವಿಲ್ ಕೋರ್ಟ್ ಅಭಿಯೋಜಕ ಮಹಾಲಿಂಗಪ್ಪ ಉತ್ತೂರು, ದೊಡ್ಡ ಮರಳಿ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಟಿ.ಮುನಿರಾಜು, ಟಿಪಿಎಸ್ ಮಾಜಿ ಅಧ್ಯಕ್ಷ ಮೂರ್ತಿ, ಗಂಗರಾಜು, ಆಕಾಶ್ ಗ್ಲೋಬಲ್ ಶಾಲೆ ಸಂಸ್ಥಾಪಕ ಕೆ.ವಿ.ವಾಸುದೇವ್ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಇದ್ದರು.