#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

76th Republic day: ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ; ಕರ್ತವ್ಯ ಪಥದಲ್ಲಿ ಸೇನಾ ಶಕ್ತಿ ಅನಾವರಣ

76 ನೇ ಗಣರಾಜ್ಯೋತ್ಸವದ ಸಂಭ್ರಮ ಎಲ್ಲೆಡೆ ಮೂಡಿದ್ದು, ದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸಿದ್ದಾರೆ. ಕರ್ತವ್ಯ ಪಥದಲ್ಲಿ ಪರೇಡ್‌ ನಡೆಯುತ್ತಿದೆ.

ದೇಶದಾದ್ಯಂತ 76ನೇ ಗಣರಾಜ್ಯೋತ್ಸವ ಸಂಭ್ರಮ; ಜಾರೋಹಣ ನೆರವೇರಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

Droupadi Murmu

Profile Vishakha Bhat Jan 26, 2025 11:22 AM

ನವದೆಹಲಿ: ದೇಶದಾದ್ಯಂತ ಗಣರಾಜ್ಯೋತ್ಸವದ (76th Republic day) ಸಂಭ್ರಮ ಕಳೆಗಟ್ಟಿದೆ. ದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi murmu) ಅವರು ಧ್ವಜಾರೋಹಣ ನೆರವೇರಿಸಿದ್ದಾರೆ. ಈ ಬಾರಿಯ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರು ಆಗಮಿಸಿದ್ದಾರೆ. ಧ್ವಜಾರೋಹಣ ಸಮಾರೋಪದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಹಾಗೂ ಸೇನಾ ಮುಖ್ಯಸ್ಥರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಧ್ವಜಾರೋಹಣದ ಬಳಿಕ ರಾಷ್ಟ್ರಪತಿ ಮುರ್ಮು ಅವರು ಗೌರವ ವಂದನೆಯನ್ನು ಸ್ವೀಕರಿಸಿದ್ದಾರೆ.



ಕರ್ತವ್ಯ ಪಥದಲ್ಲಿ ಈಗಾಗಲೇ ಪಥ ಸಂಚಲನ ಶುರುವಾಗಿದ್ದು, ಸೇನಾಪಡೆಗಳು ತಮ್ಮ ಶಕ್ತಿ ಪ್ರದರ್ಶನವನ್ನು ಮಾಡಲಿದೆ. 52 ಸದಸ್ಯರನ್ನು ಒಳಗೊಂಡಿರುವ ಇಂಡೋನೇಷಿಯಾದ ರಾಷ್ಟ್ರೀಯ ಸಶಸ್ತ್ರ ಪಡೆಗಳ ಮೆರವಣಿಗೆಯ ತುಕಡಿ ಮತ್ತು 190 ಸದಸ್ಯರೊಂದಿಗೆ ಇಂಡೋನೇಷ್ಯಾದ ಮಿಲಿಟರಿ ಅಕಾಡೆಮಿಯ ಬ್ಯಾಂಡ್ ಪರೇಡ್‌ನಲ್ಲಿ ಭಾಗವಹಿಸಿದೆ. ಭಾರತೀಯ ವಾಯು ಸೇನೆ ನೆರೆದಿದ್ದ ಗಣ್ಯರ ಮೇಲೆ ಪುಷ್ಪಾರ್ಚನೆಯನ್ನು ಮಾಡಿದೆ. ಲೆಫ್ಟಿನೆಂಟ್ ಅಹಾನ್ ಕುಮಾರ್ ನೇತೃತ್ವದಲ್ಲಿ ಅಶ್ವದಳ ಪರೇಡ್‌ ನಡೆಸಲಾಯಿತು.





ಈ ಸುದ್ದಿಯನ್ನೂ ಓದಿ: 76th Republic Day: 76ನೇ ಗಣರಾಜ್ಯೋತ್ಸವದ ಸಂಭ್ರಮ; ಮಾಣಿಕ್‌ ಷಾ ಪರೇಡ್‌ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ರಾಜ್ಯಪಾಲ ಗೆಹ್ಲೋಟ್‌

ಈ ಬಾರಿ 10 ಸಾವಿರ ಅತಿಥಿಗಳಿಗೆ ವಿಶೇಷವಾದ ಆಹ್ವಾನ ನೀಡಲಾಗಿದೆ. ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸಲು ಸ್ತಬ್ಧ ಚಿತ್ರಗಳ ಪ್ರದರ್ಶನ ನಡೆಯಲಿದೆ. ಕರ್ನಾಟಕದ ಲಕ್ಕುಂಡಿ ದೇವಾಲಯಗಳ ಸ್ತಬ್ಧ ಚಿತ್ರದ ಮೆರವಣಿಗೆ ನಡೆಯಲಿದೆ. ಈ ಬಾರಿ ಕರ್ತವ್ಯ ಪಥದಲ್ಲಿ 5,000 ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ನಾರಿ ಶಕ್ತಿ ಪ್ರತಿನಿಧಿಸುವ ಎಲ್ಲಾ ಮೂರು ಸೇವೆಗಳ ಅನುಭವಿ ಮಹಿಳಾ ಅಧಿಕಾರಿಗಳು ಪರೇಡ್‌ ನಡೆಸಲಿದ್ದಾರೆ.