ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸುಸ್ಥಿರ ನಗರ ಬೆಳವಣಿಗೆಗಾಗಿ ತನ್ನ ಶಿಫಾರಸ್ಸುಗಳನ್ನು ಪರಿಗಣಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ ಕ್ರೆಡಾಯ್ ಬೆಂಗಳೂರು

ಟಿಡಿಆರ್ ಸಮಸ್ಯೆಗಳು, ಏಕಗವಾಕ್ಷಿ ಒಪ್ಪಿಗೆಗಳು, ಜಕ್ಕೂರ್ ಏರೋಡ್ರಮ್ ಬಳಿ ಆಸ್ತಿಗಳಿಗೆ ಎನ್‌ಒಸಿ ತೆಗೆದುಹಾಕುವುದು, ವಾಣಿಜ್ಯ ಕಟ್ಟಡಗಳಲ್ಲಿ ಪಜಲ್ ಪಾರ್ಕಿಂಗ್ ಮುಂತಾದ ವಿಷಯಗಳ ಕಡೆಗೆ ತುರ್ತಾಗಿ ಗಮನಹರಿಸಿ ಪರಿಹರಿಸುವಂತೆ ಈ ರಿಯಲ್ ಎಸ್ಟೇಟ್ ಸಂಸ್ಥೆ ಅಧಿಕಾರಿಗಳಿಗೆ ಮನವಿ ಮಾಡಿದೆ. ಜೊತೆಗೆ ಮೆಟ್ರೊ ಟಿಒಡಿ ನೀತಿ ಪರಿಗಣನೆ, ವಾಟರ್ ಬಾಡಿ ಡೆಫನೇಷನ್ ಮುಂತಾದವು ಗಳ ಪರಿಗಣನೆ ಹಾಗೂ ಕಂದಾಯ ಭೂಪಟಗಳ ಆಧುನೀಕರಣವನ್ನು ಕೈಗೊಳ್ಳುವಂತೆ ಕೋರಿದೆ.

ರಿಯಲ್ ಎಸ್ಟೇಟ್ʼಗೆ ಆಸ್ತಿ ತೆರಿಗೆ ಸುಧಾರಣೆ ಪ್ರಮುಖ ಕ್ಷೇತ್ರವಾಗಿದೆ

Profile Ashok Nayak Apr 13, 2025 1:11 PM

ಬೆಂಗಳೂರು: ಅಧ್ಯಕ್ಷ ಅಮರ್ ಮೈಸೂರು ಅವರ ನೇತೃತ್ವದಡಿಯಲ್ಲಿನ ಕ್ರೆಡಾಯ್ ಬೆಂಗಳೂರು ಸಂಸ್ಥೆ ನಗರಾಭಿವೃದ್ಧಿಯಲ್ಲಿ ಸುಸ್ಥಿರತೆ ಮತ್ತು ಎಲ್ಲರನ್ನು ಒಳಗೊಳ್ಳುವ ಕ್ರಮಗಳಿಗೆ ಬೆಂಗಳೂರು ಜಾಗತಿಕ ಮಾನದಂಡವಾಗಬೇಕೆoಬ ತನ್ನ ಅಭಿಯಾನದ ಭಾಗವಾಗಿ ಕರ್ನಾಟಕ ಸರ್ಕಾರ ತುರ್ತಾಗಿ ತಮ್ಮ ಹಲವಾರು ಶಿಫಾರಸ್ಸುಗಳನ್ನು ಪರಿಗಣಿಸುವಂತೆ ಮನವಿ ಮಾಡಿದೆ. ಈ ಮನವಿಯಲ್ಲಿ ಕಳೆದ ಎರಡು ವರ್ಷಗಳಿಂದ ಮುಂದಿಟ್ಟಿರುವ ಹಲವಾರು ಸಮಸ್ಯೆಗಳು ಸೇರಿವೆ. ನಗರದಲ್ಲಿನ ಡೆವಲಪರ್‌ ಗಳು ಎದುರಿಸುತ್ತಿರುವ ಹಲವಾರು ಆತಂಕ ಮತ್ತು ಕಾಳಜಿಗಳನ್ನು ಇವು ಒಳಗೊಂಡಿವೆ. ಕ್ರೆಡಾಯ್ ಬೆಂಗಳೂರಿನ ಪ್ರಯತ್ನಗಳಲ್ಲಿ ಕೆಲವು ಪರಿಹಾರ ಕಂಡುಕೊoಡಿದ್ದು, ಇದರಲ್ಲಿ ಇ-ಖಾತಾ, ಪ್ರೀಮಿ ಯಂ ಎಫ್‌ಎಆರ್ ಅಲ್ಲದೆ ಆಸ್ತಿ ತೆರಿಗೆಯಲ್ಲಿ ಕಾರ್ ಪಾರ್ಕಿಂಗ್ ಪ್ರದೇಶಗಳನ್ನು ಕುರಿತು ಸ್ಪಷ್ಟತೆ, ಸ್ಟಿಲ್ಟ್ ಪಾರ್ಕಿಂಗ್‌ಗೆ ಎತ್ತರದ ಅವಕಾಶವನ್ನು 4.5 ಮೀಟರ್‌ಗೆ ಹೆಚ್ಚಿಸುವುದು ಮುಂತಾದವುಗಳು ಕುರಿತಂತೆ ಸರ್ಕಾರ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದೆ. ಆದರೆ, ಸರ್ಕಾರದ ಹಸ್ತಕ್ಷೇಪದ ಅಗತ್ಯವಿರುವ ಇನ್ನು ಕೆಲವು ಕ್ಷೇತ್ರಗಳು ಇವೆ.

``ಕಳೆದ ಎರಡು ವರ್ಷಗಳಲ್ಲಿ ನಾವು ಕರ್ನಾಟಕ ಸರ್ಕಾರವನ್ನು ಸಂಪರ್ಕಿಸಿದ್ದು, ರಾಜ್ಯದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರ ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಪರಿಹರಿಸುವಂತೆ ಕೋರಿ ದ್ದೆವು. ನಮ್ಮ ಶಿಫಾರಸ್ಸುಗಳಲ್ಲಿ ಕೆಲವನ್ನು ಸರ್ಕಾರ ಅನುಷ್ಟಾನಕ್ಕೆ ತಂದಿದೆ. ಆದರೆ, ಆದ್ಯತೆಯ ಮೇರೆಗೆ ಗಮನಿಸಬೇಕಾದ ಇನ್ನು ಹಲವಾರು ಸಮಸ್ಯೆಗಳು ಇವೆ. ಬಿಬಿಎಂಪಿಯಿoದ ಪ್ರತಿ ಕಾರ್ ಪಾರ್ಕ್ಗೆ 150 ಚದರಡಿಗೆ ಮಾನ್ಯತೆ ನೀಡಿರುವುದು ಸರಿಯಾದ ನಿಟ್ಟಿನಲ್ಲಿ ಕೈಗೊಂಡ ಕ್ರಮವಾಗಿದೆ. ಈ ಹಿಂದೆ ಡ್ರೈವ್‌ವೇ ಪ್ರದೇಶಗಳನ್ನು ಕೂಡ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತಿತ್ತು.

ಇದನ್ನೂ ಓದಿ: Bangalore News: ಅವಧಿಗೂ ಮುನ್ನ ಜನಿಸಿದ 830 ಗ್ರಾಂ ತೂಕದ ಶಿಶುವನ್ನು ರಕ್ಷಿಸುವಲ್ಲಿ ಯಶಸ್ವಿಯಾದ ವೈದ್ಯರು!

ಸ್ಟಿಲ್ಟ್ ಪಾರ್ಕಿಂಗ್ ಎತ್ತರಕ್ಕೆ ಅವಕಾಶವನ್ನು 4.5 ಮೀಟರ್‌ಗೆ ಹೆಚ್ಚಿಸಿರುವುದರಿಂದ, ಯಾಂತ್ರಿಕ ಪಾರ್ಕಿಂಗ್ ವ್ಯವಸ್ಥೆ ಸ್ಥಾಪಿಸುವುದರಿಂದ ರಸ್ತೆಗಳಲ್ಲಿ ಕಾರುಗಳನ್ನು ನಿಲ್ಲಿಸುವ ಹಾವಳಿ ಇಲ್ಲವಾ ಗುತ್ತದೆ. ಈ ಉಪಕ್ರಮಗಳಲ್ಲಿ ಸ್ಪಷ್ಟತೆ ಮತ್ತು ಪರಿಷ್ಕರಣೆ ಮುಂದುವರಿಸುವ ಅಗತ್ಯವನ್ನು ಕ್ರೆಡಾಯ್ ಬೆಂಗಳೂರು ಆಗ್ರಹಿಸುತ್ತದೆ. ಪ್ಲಾನ್ ಸ್ಯಾಂಕ್ಷನ್ ಪ್ರಕ್ರಿಯೆಯಲ್ಲಿ ಬಹಳಷ್ಟು ಸಮಯ ಹಿಡಿಯುವ ಹಳೆಯ ಟಿಡಿಆರ್ ಸರ್ಟಿಫಿಕೇಟ್‌ಗಳ(ಟ್ರಾö್ಯನ್ಸ್ಫರೇಬಲ್ ಡೆವಲಪ್‌ಮೆಂಟ್ ರೈಟ್ಸ್)ಪುನರ್ ಮೌಲ್ಯೀಕರಣ ಪರಿಹಾರವಾಗದಂತಹ ಒಂದು ಸವಾಲಾಗಿ ಉಳಿದಿದೆ.

ಯೋಜನೆಗಳು ಪೂರ್ಣಗೊಳ್ಳುವ ಸಮಯ ಮತ್ತು ವೆಚ್ಚಗಳ ಮೇಲೆ ಈ ಸಮಸ್ಯೆಗಳು ಗಮನಾರ್ಹ ಪರಿಣಾಮ ಬೀರುತ್ತವೆ ಎಂದು ಕ್ರೆಡಾಯ್ ಬೆಂಗಳೂರು ಎತ್ತಿ ತೋರಿದೆ. ಹಳೆಯ ಟಿಡಿಆರ್ ಊರ್ಜಿತ ಗೊಳಿಸುವಿಕೆಯ ಪ್ರಕ್ರಿಯೆಗಳನ್ನು ಸರಳವಾಗಿಸುವಂತೆ ಸಲಹೆ ನೀಡಿದೆ. ಅನಗತ್ಯ ಪರಿಷ್ಕರಣೆ ಗಳನ್ನು ತೆಗೆದು ಹಾಕುವುದು ಮತ್ತು ಆಕ್ಯುಪೆನ್ಸಿ ಸರ್ಟಿಫಿಕೇಟ್‌ಗಳನ್ನು ನೀಡುವ ಮುನ್ನ ಟಿಡಿಆರ್ ಖರೀದಿ ಕಡ್ಡಾಯವಾಗಿಸುವ ಬದಲಿಸಿದ ಸ್ಯಾಂಕ್ಷನ್ ಪ್ಲಾನ್‌ಗಳ ಅನುಷ್ಟಾನಗೊಳಿಸುವುದು ಇದರಲ್ಲಿ ಸೇರಿದೆ.

ಇಂತಹ ಕ್ರಮಗಳು ಡೆವಲಪರ್‌ಗಳು ತಮ್ಮ ಯೋಜನೆಯನ್ನು ಸಮಯದೊಳಗೆ ಮುಗಿಸುವತ್ತ ಗಮನ ಕೇಂದ್ರೀಕರಿಸಲು ಅಲ್ಲದೆ, ಕಾರ್ಯಕ್ಷಮತೆಯ ಖಾತ್ರಿ ಮಾಡಿಕೊಳ್ಳಲು ನೆರವಾಗುತ್ತವೆ’’ ಎಂದು ಕ್ರೆಡಾಯ್ ಬೆಂಗಳೂರುವಿನ ಅಧ್ಯಕ್ಷ ಅಮರ್ ಮೈಸೂರ್ ಹೇಳಿದರು.

``ಗಗನಚುಂಬಿ ಕಟ್ಟಡಗಳಿಗೆ ಒಪ್ಪಿಗೆಗಾಗಿ ಪ್ರಸ್ತುತ ಇರುವ ಬಹು ಏಜೆನ್ಸಿ ಕ್ರಮ ಬಹಳ ವಿಳಂಬಕ್ಕೆ ಕಾರಣವಾಗುತ್ತಿದೆ. ಈ ವಿಷಯದಲ್ಲಿ ಅಧಿಕಾರಿಗಳು ಗಮನ ಹರಿಸಬೇಕೆಂದು ನಾನು ಒತ್ತಾಯಿಸು ತ್ತೇನೆ. ರೇರಾ ಕಾನೂನಿನ 32ನೇ ವಿಭಾಗದಲ್ಲಿ ತಿಳಿಸಿರುವಂತೆ ಏಕಗವಾಕ್ಷಿ ಕ್ರಮವನ್ನು ಪರಿಚಯಿಸು ವಂತೆ ನಾವು ಸಲಹೆ ನೀಡಿದ್ದೇವೆ. ಈಗ ಇದರಲ್ಲಿ ಹಲವಾರು ಇಲಾಖೆಗಳಿಂದ 10-15 ಒಪ್ಪಿಗೆ ಪಡೆಯಬೇಕಿರುತ್ತದೆ. ಹೊಸ ವ್ಯವಸ್ಥೆ ಆಡಳಿತದಲ್ಲಿನ ಅಡೆತಡೆಯನ್ನು ಕಡಿಮೆ ಮಾಡುವುದಲ್ಲದೆ, ಸಮನ್ವಯದ ಪರಿಷ್ಕರಣೆಗಳಿಗೆ ಚಾಲನೆ ನೀಡುತ್ತದೆ. ಡಿಜಿಟಲ್ ದಾಖಲೆ ಮಾಡುವುದನ್ನು ಸರಳ ಗೊಳಿಸುತ್ತದೆ ಅಲ್ಲದೆ, ಎನ್‌ಒಸಿಗಳನ್ನು ಪಡೆಯುವಲ್ಲಿ ಶುಲ್ಕ ರಚನೆಗಳನ್ನು ಒಂದೇ ರೀತಿ ಹಾಗೂ ನ್ಯಾಯಯುತವಾಗಿರುವ ಖಾತ್ರಿ ಮಾಡಿಕೊಳ್ಳುತ್ತದೆ.

ಜಕ್ಕೂರು ಏರೋಡ್ರಮ್‌ನಿಂದ ಎನ್‌ಒಸಿ ಪಡೆಯಲು ಇರುವ ಎತ್ತರದ ನಿರ್ಬಂಧ ಮತ್ತೊಂದು ಗಂಭೀರ ಸಮಸ್ಯೆಯಾಗಿದೆ. ಮನರಂಜನೆಗಾಗಿ ಇರುವ ಈ ಖಾಸಗಿ ಏರ್‌ಪೋರ್ಟ್ ಸಂಬoಧಿಸಿದoತೆ ಇಂತಹ ಕಡ್ಡಾಯಗಳಿಗೆ ವಿನಾಯಿತಿ ನೀಡಬೇಕು ಎಂಬ ಅಭಿಪ್ರಾಯವನ್ನು ಕ್ರೆಡಾಯ್ ಬೆಂಗಳೂರು ಹೊಂದಿದೆ. ಅದರಲ್ಲಿಯೂ ನಿರ್ದಿಷ್ಟವಾಗಿ ಏರ್‌ಪೋರ್ಟ್ ರಸ್ತೆಯಲ್ಲಿನ ಯೋಜನೆಗಳಿಗೆ ಈ ವಿನಾಯಿತಿ ಬೇಕಾಗಿದೆ. ಏಕೆಂದರೆ ಇದರಿಂದ ಹೂಡಿಕೆದಾರರ ಕ್ರಮಗಳ ಮೇಲೆ ಪರಿಣಾಮ ಉಂಟಾ ಗುತ್ತದೆ. ಈ ವಿನಾಯಿತಿ ನೀಡುವುದರಿಂದ ನಗರಗಳ ಪ್ರಮುಖ ಪ್ರದೇಶಗಳಲ್ಲಿ ಹೆಚ್ಚು ಅನುಕೂಲ ಕರ ಬೆಳವಣಿಗೆಯನ್ನು ಪೋಷಿಸಬಹುದಾಗಿದೆ’’ ಎಂದರು.

ಖಾಲಿ ಇರುವ ಆಸ್ತಿಗಳಿಗೆ ಸಂಬoಧಿಸಿದ ಆಸ್ತಿ ತೆರಿಗೆ ಸುಧಾರಣೆಗಳು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಪ್ರಮುಖ ಕಾಳಜಿಯ ಕ್ಷೇತ್ರವಾಗಿದೆ. ಖಾಲಿ ಇರುವ ಕಟ್ಟಡಗಳ ತೆರಿಗೆಗಳನ್ನು ಪುನರ್ ಸ್ಥಾಪಿಸಲು ಸರ್ಕಾರಕ್ಕೆ ಕ್ರೆಡಾಯ್ ಬೆಂಗಳೂರು ಆಗ್ರಹಿಸುತ್ತದೆ. ಇದರಿಂದ ಆಸ್ತಿ ಮಾಲೀಕರ ಮೇಲೆ ಹಣಕಾಸು ಹೊರೆ ಇಲ್ಲವಾಗುತ್ತದೆ.

ಕಟ್ಟಡ ಪೂರ್ಣವಾದ ನಂತರ ಅದು ಖಾಲಿ ಇರುವ ತೊಂದರೆಯಲ್ಲಿ ಬಳಲುತ್ತಿರುವ ಮಾಲೀಕರಿಗೆ ಅಥವ ಅಸ್ತಿಯನ್ನು ಲೀಜ್‌ಗೆ ನೀಡದೆ ಇರುವಾಗ ಇರುವ ಹೊರೆ ಕಡಿಮೆಯಾಗಬಹುದು. ಝೋನ್ ಕ್ಲಾಸಿಫಿಕೇಷನ್‌ಗೆ ಮುನ್ನ ಬಿಬಿಎಂಪಿಯಲ್ಲಿ ಈ ಯೋಜನೆ ಕೈಗೊಳ್ಳಬಹುದಾಗಿದೆ. ಹೆಚ್ಚುವರಿ ಯಾಗಿ, ಸಂಪೂರ್ಣವಾಗಿ ಪಾವತಿಸಲಾದ ತೆರಿಗೆಗಳಿಗೆ ನೋ ಡ್ಯೂ ಸರ್ಟಿಫಿಕೇಟ್ ನೀಡುವಲ್ಲಿ ಹಿಂದಿನ ಪುನರ್ ಮೌಲ್ಯೀಕರಣವನ್ನು ತಡೆಯಬೇಕು. ಇದರಿಂದ ನ್ಯಾಯಯುತ ಮತ್ತು ಸ್ಥಿರ ತೆರಿಗೆ ವ್ಯವಸ್ಥೆಯ ಖಾತ್ರಿ ಇರುತ್ತದೆ.

``ಫಜಲ್ ಪಾರ್ಕಿಂಗ್ ವ್ಯವಸ್ಥೆಯಂತಹ ತಂತ್ರಜ್ಞಾನ ಉನ್ನತೀಕರಣದ ಮೂಲಕ ಪಾರ್ಕಿಂಗ್ ಪರಿಹಾರಗಳನ್ನು ಆಧುನೀಕರಿಸುವ ಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಕ್ರೆಡಾಯ್ ಬೆಂಗಳೂರು ಕೋರುತ್ತಿದೆ. ಸ್ಥಳಾವಕಾಶ ನಿರ್ವಹಣೆಯಲ್ಲಿ ಈ ನವೀನ ಮಾರ್ಗವು ಉತ್ತಮ ಕಾರ್ಯ ಕ್ಷಮತೆಯ ನಗರ ಯೋಜನೆಗೆ ಅವಕಾಶ ಮಾಡಿಕೊಡುತ್ತದೆ ಅಲ್ಲದೆ, ಜನದಟ್ಟಣೆ ಹೆಚ್ಚಾಗಿರುವ ಸ್ಥಳಗಳಲ್ಲಿ ಪಾರ್ಕಿಂಗ್‌ಗೆ ಬೆಳೆಯುತ್ತಿರುವ ಬೇಡಿಕೆಗಳನ್ನು ಗಮನಿಸಿ ಪರಿಹರಿಸುತ್ತದೆ. ನಗರ ಯೋಜನೆ ಮಾನದಂಡಗಳಲ್ಲಿ ಫಜಲ್ ಪಾರ್ಕಿಂಗ್ ವ್ಯವಸ್ಥೆಗಳನ್ನು ಸೇರಿಸುವುದಕ್ಕಾಗಿ ತಿದ್ದುಪಡಿ ಗಳನ್ನು ಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸುತ್ತೇವೆ.

ಹೆಚ್ಚುವರಿಯಾಗಿ, ಟಿಒಡಿ(ಟ್ರಾö್ಯನ್ಸಿಟ್ ಒರಿಯೆಂಟೆಡ್ ಡೆವಲಪ್‌ಮೆಂಟ್) ನೀತಿಯನ್ನು ಮುಂದುವರಿಸುವoತೆ ನಾವು ಮನವಿ ಮಾಡುತ್ತೇವೆ. ಇದನ್ನು ಡೈರೆಕ್ಟೋರೇಟ್ ಆಫ್ ಅರ್ಬನ್ ಲ್ಯಾಂಡ್ ಟ್ರಾö್ಯನ್ಸ್ಪೋರ್ಟ್(ಡಿಯುಎಲ್‌ಟಿ) ಅಲ್ಲದೆ, ಬೆಂಗಳೂರು ಮೆಟ್ರೋ ರೇಲ್ ಕಾರ್ಪೋ ರೇಷನ್ ಲಿಮಿಟೆಡ್(ಬಿಎಂಆರ್‌ಸಿಎಲ್) ಮೇ 2019ರಲ್ಲಿ ರೂಪಿಸಿವೆ. ಟ್ರಾö್ಯನ್ಸಿಟ್ ಓರಿಯೆಂ ಟೆಡ್ ಅಭಿವೃದ್ಧಿಗೆ ಚಾಲನೆ ನೀಡುವ ಗುರಿಯೊಂದಿಗೆ ಟಿಒಡಿ ನೀತಿಯನ್ನು ಪರಿಚಯಿಸಲಾಗಿತ್ತು. ಆದರೆ, ಅದರ ಅನುಷ್ಟಾನ ಒಂದು ಸವಾಲಾಗಿ ಮುಂದುವರಿದಿದೆ. ಟ್ರಾö್ಯಫಿಕ್ ಟ್ರಾö್ಯನ್ಸಿಟ್ ನಿರ್ವಹಣಾ ಕೇಂದ್ರಗಳಿಗೆ ಈ ನೀತಿ ಅನ್ವಯಿಸುತ್ತದೆ ಅಲ್ಲದೆ, ನಡಿಗೆ, ಸೈಕಲ್‌ಸವಾರಿ ಮತ್ತು ಬಸ್ ಸೇವೆಗಳಿಗೆ ಸಂಪರ್ಕವನ್ನು ಪ್ರೋತ್ಸಾಹಿಸುತ್ತದೆ. ಈ ನೀತಿಯ ಅನುಷ್ಟಾನವು ಟ್ರಾö್ಯನ್ಸಿಟ್ ಸ್ಟೇಷನ್‌ಗಳ ಬಳಿಯ ಭೂ ಪ್ರದೇಶಗಳ ಬಳಕೆಯನ್ನು ಪರಿಣಾಮಕಾರಿಯಾಗಿ ಬದಲಿಸುತ್ತದೆ. ಜೊತೆಗೆ ಮಿಶ್ರ ಬಳಕೆಯ ಅಭಿವೃದ್ಧಿಯನ್ನು ಪ್ರೋತ್ಸಾಹಿ ಸುವುದಲ್ಲದೆ, ಉನ್ನತ ಫ್ಲೋರ್ ಸ್ಪೇಸ್ ಇಂಡಕ್ಸ್ ಅನ್ನು ಕಾರ್ಯಕ್ಷಮತೆಯ ಭೂ ಉಪಯೋಗಕ್ಕಾಗಿ ಪ್ರೋತ್ಸಾಹಿಸುತ್ತದೆ. ನಡಿಗೆ, ಸೈಕಲ್ ಅಥವ ಬಸ್‌ಗಳಿಂದ ಸಂಪರ್ಕದ ಮೇಲೆ ಟಿಒಡಿ ಝೋನ್‌ಗಳನ್ನು ಸ್ಥಾಪಿಸುವುದನ್ನು ಈ ನೀತಿ ಅರಸುತ್ತದೆ. ಮೆಟ್ರೋ ಲೈನ್‌ನಿಂದ 6 ನಿಮಿಷ ನಡಿಗೆ ಅಥವ 500 ಮೀಟರ್ ದೂರದಲ್ಲಿನ ಪ್ರದೇಶಕ್ಕೆ ಹತ್ತಿರವಾದ ಸ್ಥಳಗಳಲ್ಲಿ ಈ ಬದಲಾವಣೆಗಳನ್ನು ಪರಿಚಯಿಸಬಹುದು. ಮೆಟ್ರೋ ಸ್ಟೇಷನ್‌ಗಳ 500 ಮೀಟರ್ ದೂರದ ಒಳಗೆ ಎಫ್‌ಎಆರ್ ಅವಕಾಶಗಳನ್ನು ಹೆಚ್ಚಿಸುವುದನ್ನು ಸರ್ಕಾರ ಪರಿಗಣಿಸಬೇಕು ಎಂದು ನಾವು ಮನವಿ ಮಾಡಿದ್ದೇವೆ. ಜೊತೆಗೆ ಪಾರ್ಕಿಂಗ್ ನಿಯಮಗಳನ್ನು ಪರಿಷ್ಕರಿಸಿ ಜನರು ಹೆಚ್ಚಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಸುವುದನ್ನು ಪ್ರೋತ್ಸಾಹಿಸಬೇಕಿದೆ. ಇದರೊಂದಿಗೆ ವಾಹನ ದಟ್ಟಣೆ ಕಡಿಮೆಯಾಗುವುದಲ್ಲದೆ, ಒಟ್ಟಾರೆ ಉತ್ಪಾದಕತೆ ಹೆಚ್ಚಾಗುತ್ತದೆ.

ಕೆರೆಗಳು, ನಾಲೆಗಳು ಮತ್ತು ಝರಿಗಳು ಸೇರಿದಂತೆ ಜಲ ಭಾಗಗಳನ್ನು ಒಂದೇ ರೀತಿಯಲ್ಲಿ ನಿರೂಪಿ ಸುವಂತೆ ಬಹಳ ಕಾಲದಿಂದ ಕೋರಲಾಗಿದೆ. ನಿರಂಕುಶ ಜಾರಿ ಚಟುವಟಿಕೆಗಳನ್ನು ತಡೆಯಲು ಅಲ್ಲದೆ, ನಿಯಮಗಳ ಅನುಸರಣೆಯ ಖಾತ್ರಿ ಮಾಡಿಕೊಳ್ಳಲು ಇದು ಅವಶ್ಯಕ. ಜಲ ಭಾಗಗಳ ವರ್ಗೀಕರಣದಲ್ಲಿ ಸ್ಪಷ್ಟತೆಗಾಗಿ ನಾವು ಕೋರುತ್ತೇವೆ. ಜೊತೆಗೆ ಭೂ ಬಳಕೆಯನ್ನು ಗರಿಷ್ಟಗೊಳಿ ಸಲು ಬಫರ್ ವಲಯಗಳ ಪರಿಷ್ಕರಣೆಯನ್ನು ಕೋರುತ್ತೇವೆ. ಜಿಐಎಸ್ ಮತ್ತು ದ್ರೋಣ್ ಆಧಾರಿತ ಮ್ಯಾಪಿಂಗ್ ಮೂಲಕ ಸಮಗ್ರ ಅಭಿವೃದ್ಧಿ ಯೋಜನೆಗಳಿಗೆ ತಕ್ಕಂತೆ ಕಂದಾಯ ಭೂಪಟಗಳನ್ನು ಆಧುನೀಕರಣಗೊಳಿಸುವುದು ಒಪ್ಪಿಗೆ ಹಾಗೂ ಜಾರಿ ಕ್ರಮಗಳನ್ನು ಸರಳಗೊಳಿಸಲಿದೆ. ಜೊತೆಗೆ ಅಪ್ರಸ್ತುತ ವಿವರಗಳ ಮೇಲಿನ ವಿವರಗಳನ್ನು ಆಧರಿಸುವುದು ತಪ್ಪುತ್ತದೆ. ಈ ಸಮಸ್ಯೆಗಳ ಕಡೆಗೆ ಸರ್ಕಾರ ಗಮನಹರಿಸಲಿದ್ದು, ಬೆಂಗಳೂರು ನಗರ ಮತ್ತು ಕರ್ನಾಟಕ ರಾಜ್ಯದ ಪ್ರಗತ್ಯಾತ್ಮಕ ಅಭಿವೃದ್ಧಿಯನ್ನು ಹೆಚ್ಚಿಸಲಿದೆ ಎಂಬ ವಿಶ್ವಾಸ ನಮಗಿದೆ’’ ಎಂದು ಅಮರ್ ಮೈಸೂರ್ ಹೇಳಿದರು.

ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜಾಯದ್ ನೊಮನ್ ಅವರ ಅಡಿಯಲ್ಲಿ ಕ್ರೆಡಾಯ್ ಬೆಂಗಳೂರು ಪ್ರಗತ್ಯಾತ್ಮಕ ನಗರ ಅಭಿವೃದ್ಧಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ಸರ್ಕಾರದ ಜೊತೆಗೆ ಸಹಭಾಗಿತ್ವವನ್ನು ಪೋಷಿಸುವುದರೊಂದಿಗೆ ಈ ಸಮಸ್ಯೆಗಳ ಪರಿಹಾರಕ್ಕೆ ತಮ್ಮ ಬದ್ಧತೆಯನ್ನು ಕ್ರೆಡಾಯ್ ಪುನರುಚ್ಛರಿಸುತ್ತದೆ. ನಗರದ ರಿಯಲ್ ಎಸ್ಟೇಟ್ ಕ್ಷೇತ್ರದ ಸುಸ್ಥಿರ ಬೆಳವಣಿಗೆಯ ಖಾತ್ರಿ ಮಾಡಿಕೊಳ್ಳಲು ಮತ್ತು ಹಂಚಿಕೆಯ ಗುರಿಯನ್ನು ಸಾಧಿಸಲು ಸರ್ಕಾರ ದೊಂದಿಗೆ ತನ್ನ ಮಾತುಕತೆಯನ್ನು ಕ್ರೆಡಾಯ್ ಬೆಂಗಳೂರು ಮುಂದುವರಿಸಲಿದೆ.