Black Magic: ಸ್ನೇಹಮಯಿ ಕೃಷ್ಣ ಮೇಲೆ ವಾಮಾಚಾರ: ಇಬ್ಬರು ಆರೆಸ್ಟ್, ಪ್ರಸಾದ್ ಅತ್ತಾವರ ಮೇಲೆ ಕೇಸ್
ಸ್ನೇಹಮಯಿ ಕೃಷ್ಣ ಮೇಲೆ ಬೆಂಗಳೂರಿನ ಅಶೋಕ ನಗರದಲ್ಲಿರುವ ಸ್ಮಶಾನದಲ್ಲಿ ಆರೋಪಿಗಳು ವಾಮಾಚಾರ ಮಾಡಿಸಿದ್ದರು. ಸ್ಮಶಾನ ಕಾಳಿಕಾಂಬ ಗುಡಿಯಲ್ಲಿ ಕುರಿಗಳನ್ನು ಬಲಿ ನೀಡಿದ್ದರು. ಈ ವಿಚಾರ ಸ್ಮಶಾನ ಕಾಳಿಕಾಂಬ ದೇವಸ್ಥಾನದ ಅರ್ಚಕರಿಗೆ ತಿಳಿಯದಂತೆ ಬಲಿ ನೀಡಿದ್ದರು.

ಸಾಂದರ್ಭಿಕ ಚಿತ್ರ

ಮಂಗಳೂರು: ಮುಡಾ ಹಗರಣದ (MUDA scam, MUDA case) ಕೇಸ್ ದೂರುದಾರ ಸ್ನೇಹಮಯಿ ಕೃಷ್ಣ (Snehamayi Krishna) ಸೇರಿದಂತೆ ಇಬ್ಬರ ಮೇಲೆ ವಾಮಾಚಾರ (Black Magic) ನಡೆಸಿದ್ದ ಇಬ್ಬರು ಆರೋಪಿಗಳನ್ನು (Culprits) ಪೊಲೀಸರು ಬಂಧಿಸಿದ್ದಾರೆ. ಸ್ನೇಹಮಯಿ ಕೃಷ್ಣ, ಗೋವಿಂದರಾಜು ಮೇಲೆ ವಾಮಾಚಾರ ನಡೆಸಿದ ಇಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಿದ್ದರು.
ಸ್ನೇಹಮಯಿ ಕೃಷ್ಣ ಮೇಲೆ ಬೆಂಗಳೂರಿನ ಅಶೋಕ ನಗರದಲ್ಲಿರುವ ಸ್ಮಶಾನದಲ್ಲಿ ಆರೋಪಿಗಳು ವಾಮಾಚಾರ ಮಾಡಿಸಿದ್ದರು. ಸ್ಮಶಾನ ಕಾಳಿಕಾಂಬ ಗುಡಿಯಲ್ಲಿ ಕುರಿಗಳನ್ನು ಬಲಿ ನೀಡಿದ್ದರು. ಈ ವಿಚಾರ ಸ್ಮಶಾನ ಕಾಳಿಕಾಂಬ ದೇವಸ್ಥಾನದ ಅರ್ಚಕರಿಗೆ ತಿಳಿಯದಂತೆ ಬಲಿ ನೀಡಿದ್ದರು.
ಸ್ನೇಹಮಯಿ ಕೃಷ್ಣ, ಗಂಗರಾಜು, ಪ್ರಸಾದ್ ಅತ್ತಾವರ, ಶ್ರೀನಿಧಿ, ಸುಮಾ ಆಚಾರ್ಯ ಹೆಸರಿನ ಚೀಟಿ ನೀಡಿ ದೇವಿಗೆ ಪೂಜೆ, ಬಲಿ ನೀಡಿದ್ದ ಕುರಿಗಳ ರಕ್ತವನ್ನು ಸ್ನೇಹಮಯಿ ಕೃಷ್ಣ, ಗಂಗರಾಜು ಪೋಟೋಗೆ ಅರ್ಪಣೆ ಮಾಡಲಾಗಿತ್ತು. ವಾಮಾಚಾರದ ದೃಶ್ಯ ಪ್ರಸಾದ್ ಅತ್ತಾವರ ಮೊಬೈಲ್‌ನಲ್ಲಿ ಪತ್ತೆಯಾಗಿತ್ತು. ಪ್ರಸಾದ್ ಅತ್ತಾವರ ರಾಮಸೇನಾ ಸಂಘಟನೆಯ ಸಂಸ್ಥಾಪಕ ಆಗಿದ್ದಾರೆ. ಮಸಾಜ್ ಪಾರ್ಲರ್ ಮೇಲಿನ ಗಲಾಟೆಯಲ್ಲಿ ಬಂಧನಕ್ಕೆ ಒಳಗಾಗಿದ್ದರು.
ರಾಮಮಂದಿರ ಅವಹೇಳನ ಮಾಡಿದ ವ್ಯಕ್ತಿಗೆ 60 ದಿನಗಳ ಜೈಲುಶಿಕ್ಷೆ
ನರಗುಂದ: ರಾಮಮಂದಿರದ ಭಾವಚಿತ್ರದ ಮೇಲೆ ಅವಹೇಳನಕಾರಿ ಬರಹ ಬರೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಆರೋಪಿಗೆ 60 ದಿನಗಳ ಸಾದಾ ಕಾರಾಗೃಹ ಶಿಕ್ಷೆಯನ್ನು ವಿಧಿಸಿ ಕೋರ್ಟ್ ಆದೇಶಿಸಿದೆ. ನರಗುಂದದ ಸಿಜೆ ಮತ್ತು ಜೆಎಂಎಫ್ ಸಿ ಕೋರ್ಟ್, ಅಯೋಧ್ಯೆಯ ರಾಮಮಂದಿರದ ಭಾವಚಿತ್ರದ ಮೇಲೆ ಅವಹೇಳನಕಾರಿ ಬರಹ ಬರೆದು, ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಂತ ವ್ಯಕ್ತಿಗೆ 60 ದಿನಗಳ ಜೈಲು ವಾಸ ಹಾಗೂ 5000 ದಂಡವನ್ನು ವಿಧಿಸಿದೆ.
ನರಗುಂದದ ನಿವಾಸಿ ಅಕ್ಬರಸಾಬ ಖಾನ್ ಎಂಬವರು ಅ.24, 2014ರಂದು ರಾಮಮಂದಿರ ಚಿತ್ರದ ಮೇಲೆ ಹಿಂದಿ ಮತ್ತು ಇಂಗ್ಲೀಷ್ ನಲ್ಲಿ ಅಕ್ಷೇಪಾರ್ಹ ಸಾಲುಗಳ್ನು ಬರೆದು ಪೋಸ್ಟ್ ಮಾಡಿದ್ದರು. ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ವಿವಾದ ಆಲಿಸಿದ ನ್ಯಾಯಧೀಶರು ಆರೋಪಿಗೆ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ಇದನ್ನೂ ಓದಿ: Physical abuse: ರಾಜಧಾನಿಯಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ; ಪರಿಚಯಸ್ಥ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ!