ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻನೀನಾದೆ ನಾʼ ಸೀರಿಯಲ್ ನಟಿ ರಮಿಕಾ ಶಿವುಗೆ ಸಿಕ್ತು ಸೂಪರ್‌ ಚಾನ್ಸ್; ‌ʻಶ್ರೀರಸ್ತು ಶುಭಮಸ್ತು‌ʼ ಹೀರೋ ಶ್ರೀ ಮಹದೇವ್‌ ಹೊಸ ಸಿನಿಮಾಕ್ಕೆ ನಾಯಕಿ

Premada Oorali Update: 'ಅಕ್ಷಿ' ಸಿನಿಮಾ ಮೂಲಕ ರಾಷ್ಟ್ರ ಪ್ರಶಸ್ತಿ ಗೆದ್ದಿದ್ದ ಮನೋಜ್ ಕುಮಾರ್ ಈಗ 'ಪ್ರೇಮದ ಊರಲಿ' ಎಂಬ ಮ್ಯೂಸಿಕಲ್ ಲವ್ ಸ್ಟೋರಿ ಮೂಲಕ ವಾಪಸಾಗಿದ್ದಾರೆ. ಶ್ರೀ ಮಹದೇವ್ ಮತ್ತು ರಮಿಕಾ ಶಿವು ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

Avinash GR
Avinash GR Mar 3, 2026 5:55 PM

ʻಶ್ರೀರಸ್ತು ಶುಭಮಸ್ತು‌ʼ ಧಾರಾವಾಹಿ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿಯೂ ನಟಿಸಿ, ಹೆಸರು ಮಾಡಿದರು ನಟ ಶ್ರೀ ಮಹದೇವ್‌. ಇದೀಗ ಅವರು ʻಪ್ರೇಮದ ಊರಲಿʼ ಎಂಬ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ನೀನಾದೆ ನಾ ಧಾರಾವಾಹಿ ಖ್ಯಾತಿಯ ನಟಿ ರಮಿಕಾ ಶಿವು ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಜೊತೆಗೆ ತೇಜಸ್ವಿನಿ ಪೂಣಚ್ಚ ಮತ್ತು ರಂಗಾಯಣ ರಘು ಅವರು ಕೂಡ ಈ ಚಿತ್ರದಲ್ಲಿ ಪ್ರಮುಖದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಹಿಂದೆ ʻಅಕ್ಷಿʼ ಸಿನಿಮಾದ ಮೂಲಕ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದ ಮನೋಜ್ ಕುಮಾರ್ ಈಗ ಹೊಸ ಕಥೆಯೊಂದಿಗೆ ಬಂದಿದ್ದಾರೆ.‌ ಈ ಬಾರಿ ಅವರು ಮ್ಯೂಸಿಕ್ ಲವ್ ಸ್ಟೋರಿ ಕಥೆ ಹೇಳಲು ಹೊರಟಿದ್ದಾರೆ. ಈ ಸಿನಿಮಾಗೆ ʻಪ್ರೇಮದ ಊರಲಿʼ ಎಂದು ಟೈಟಲ್ ಇಡಲಾಗಿದ್ದು, ಟೀಸರ್ ಕೂಡ ಬಿಡುಗಡೆ ಮಾಡಲಾಗಿದೆ.‌

Actress Nandini: ನೀನಾದೆ ನಾ, ಜೀವ ಹೂವಾಗಿದೆ ಖ್ಯಾತಿಯ ನಟಿ ನಂದಿನಿ ಆ*ತ್ಮಹತ್ಯೆ; ಕಾರಣವಾದ್ರೂ ಏನು?

ನಿರ್ದೇಶಕರು ಹೇಳಿದ್ದೇನು?

"ರಂಗಾಯಣ ರಘು ಅವರು ಈ ಸಿನಿಮಾಗೆ ಹಾಗೂ ನನಗೆ ಬೆಳಕಿನಂತೆ. ನಾನು ಅವರ ಅಭಿನಯದ ಬಗ್ಗೆ ಮಾತಾಡುವಷ್ಟು ದೊಡ್ಡವನಲ್ಲ. ಅವರು ಈ ಚಿತ್ರದಲ್ಲಿ ಒಂದು ವಿಶಿಷ್ಟವಾದ ಪಾತ್ರದಲ್ಲಿ ನಟಿಸಿದ್ದಾರೆ. ಹಾಸನದ ಸದಾ ಮಳೆ ಬರುವ ಜಾಗದಲ್ಲಿ ಶೂಟಿಂಗ್ ಮಾಡಿದ್ದೇವೆ. ಹೀರೋ ಶ್ರೀ ಈ ಚಿತ್ರಕ್ಕೆ ಸಾಕಷ್ಟು ಶ್ರಮ ಹಾಕಿದ್ದಾರೆ. ನಾಯಕಿರು ಅದ್ಭುತವಾಗಿ ನಟಿಸಿದ್ದಾರೆ. ನನಗೆ ಈ ಅವಕಾಶ ಕೊಟ್ಟ ನಿರ್ಮಾಪಕರಿಗೆ ಧನ್ಯವಾದಗಳು. ಚಿತ್ರಕ್ಕೆ ಏನು ಬೇಕು ಎಲ್ಲವನ್ನೂ ನೀಡಿದ್ದಾರೆ. ಸಂಪೂರ್ಣ ಬೆಂಬಲ ಕೊಟ್ಟಿದ್ದಾರೆ" ಎನ್ನುತ್ತಾರೆ ಮನೋಜ್‌ಕುಮಾರ್.

"ಪ್ರೇಮದ ಊರಲಿ ಸಿನಿಮಾವು ಮ್ಯೂಸಿಕಲ್ ಲವ್ ಸ್ಟೋರಿ ಆಗಿದೆ. ಈ ಚಿತ್ರದ ಹಿನ್ನೆಲೆ ಸಂಗೀತ ಅದ್ಭುತವಾಗಿದೆ. ಟೀಸರ್ ನೋಡಿದ್ರೆ ಅದು ಗೊತ್ತಾಗುತ್ತದೆ. ಇದು‌ ನಾಗಣ್ಣ ಹಾಗೂ ಸಂತುವಿನ ಪುಟ್ಟ ಲೋಕ. ಊರು ಅಂದರೆ ಸಾವಿರ ಮನೆ, ನೂರು ಮನೆ ಇರಬೇಕು ಎಂಬುದು‌ ಇಲ್ಲ. ಒಂದು ಮನೆಯಲ್ಲಿ ಎಲ್ಲರೂ ಲವಲವಿಕೆಯಿಂದ, ಖುಷಿಯಿಂದ, ಪ್ರೀತಿಯಿಂದ ಇದ್ದರೆ ಅದೇ ನಮಗೆ ದೊಡ್ಡ ಊರು. ಅದೇ ಪ್ರೇಮದ‌ ಊರಲಿ" ಎಂದು‌ ಹೇಳುತ್ತಾರೆ ಮನೋಜ್‌ಕುಮಾರ್.

Shri Mahadev Wedding: ದಾಂಪತ್ಯ ಬದುಕಿಗೆ ಕಾಲಿಟ್ಟ ʻಶ್ರೀರಸ್ತು ಶುಭಮಸ್ತುʼ ಸೀರಿಯಲ್‌ ನಟ ಶ್ರೀ ಮಹದೇವ್‌; ಹುಡುಗಿ ಯಾರು?

"ತಪ್ಪುಗಳನ್ನು ಮಾಡುತ್ತಾ ಜೀವನ ಕಲಿಯುವ ಪಾತ್ರದಲ್ಲಿ ನಾನು ನಟಿಸಿದ್ದೇನೆ. ಶ್ರೀ ಮೊದಲು ಫೋನ್‌‌ ಮಾಡಿ ಹಳ್ಳಿ ಕಥೆ ಇದು ಹೇಳಿದರು. ನನಗೆ ಹಳ್ಳಿ ಕಥೆ ಇಷ್ಟವಾಗುತ್ತದೆ. ಇದು ನನಗೆ ಇಷ್ಟವಾಯ್ತು. ಶೂಟಿಂಗ್ ಜಾಗ ತುಂಬಾನೇ ಸೊಗಸಾಗಿತ್ತು. ನಾನು ಶೂಟಿಂಗ್ ಮುಗಿಸಿದ ಬಳಿಕ‌ ನಾನು ಅಲ್ಲಿನ ಹಳ್ಳಿಯವನು ಅದೇ. ನಿರ್ದೇಶಕರು ಕೆಲಸ ಮಾಡುವ ರೀತಿ ನನಗೆ ಇಷ್ಟವಾಯ್ತು. ಹಳ್ಳಿ ಕಥೆ. ‌ಈ‌ ನಿಮ್ಮ ಪ್ರೀತಿ, ಸಹಕಾರ ನಮ್ಮ ಚಿತ್ರದ ಮೇಲೆ ಇರಲಿ" ಎನ್ನುತ್ತಾರೆ ರಂಗಾಯಣ ರಘು.

ʻಪ್ರೇಮದ ಊರಲಿʼ ಚಿತ್ರವನ್ನು ವೆನಿಲ್ಲಾ ಎಂಟರ್‌ಟೇಮೆಂಟ್ಸ್‌ ಮತ್ತು ಜಾನಕಮ್ಮ ಪ್ರೊಡಕ್ಷನ್ ಅಡಿಯಲ್ಲಿ ಮಮತಾ ದೇವೇಂದ್ರ, ಪ್ರಶಾಂತ್ ಹಾಗೂ ರಮೇಶ್ ಅವರು ನಿರ್ಮಾಣ ಮಾಡಿದ್ದಾರೆ. ಸುನಾದ್ ಗೌತಮ್ ಸಂಗೀತ ನಿರ್ದೇಶನ, ರಾಜಕಾಂತ್ ಎಸ್ ಕೆ ಛಾಯಾಗ್ರಹಣ ಮಾಡಿದ್ದು, ಹರ್ಷಿತ್ ಪ್ರಭು ಸಂಕಲನ ಈ ಚಿತ್ರಕ್ಕಿದೆ.