ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gubbi (Tumkur) News: ಗೂಗಲ್ ಲೊಕೇಶನ್ ಬಳಸಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳರ ಬಂಧನ..!

ತಾಲ್ಲೂಕಿನ ಸಿ.ಎಸ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸಿ.ಕೊಡಗೇಹಳ್ಳಿ ಗ್ರಾಮದ ಕೋಡಿಕೆಂಪಮ್ಮ ದೇವಸ್ಥಾನದ ಬಾಗಿಲು ಬೀಗ ಮುರಿದು ದೇವಸ್ಥಾನದ ಹುಂಡಿಯನ್ನು ಕಳ್ಳತನ ಮಾಡಲು ದೇವ ಸ್ಥಾನದ ಒಳಗೆ ಹೋಗಿ ಹುಂಡಿಯನ್ನು ಹೊರಗಡೆ ತಂದಾಗ ಗ್ರಾಮಸ್ಥರ ಕೂಗಾಟ ಕೇಳಿಸಿಕೊಂಡ ಕಳ್ಳರು ಹುಂಡಿಯನ್ನು ಮತ್ತು ಕೃತ್ಯಕ್ಕೆ ಬಳಸಿದ್ದ ಕಾರನ್ನು ದೇವಸ್ಥಾನದ ಬಳಿ ಬಿಟ್ಟು ಓಡಿ ಹೋಗಿದ್ದ ಪ್ರಕರಣ ಭೇದಿಸಿದ್ದ ಸಿ.ಎಸ್.ಪುರ ಪೊಲೀಸರು ಖತರ್ನಾಕ್ ಇಬ್ಬರು ಕಳ್ಳರನ್ನು ಬಂಧಿಸಿದ್ದಾರೆ.

ಗೂಗಲ್ ಲೊಕೇಶನ್ ಬಳಸಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳರ ಬಂಧನ..!

Ashok Nayak Ashok Nayak Jun 15, 2025 2:52 PM

ಗುಬ್ಬಿ: ಗೂಗಲ್ ಲೊಕೇಶನ್ ಬಳಸಿ ನಿಯರೆಸ್ಟ್ ಟೆಂಪಲ್ ಫಾರ್ ಮಿ ಎಂದು ಸರ್ಚ್ ಮಾಡಿ ಹತ್ತಿರದ ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರನ್ನು ಸಿ.ಎಸ್.ಪುರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿರುವ ಘಟನೆ ನಡೆದಿದೆ.

ತಾಲ್ಲೂಕಿನ ಸಿ.ಎಸ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸಿ.ಕೊಡಗೇಹಳ್ಳಿ ಗ್ರಾಮದ ಕೋಡಿಕೆಂಪಮ್ಮ ದೇವಸ್ಥಾನದ ಬಾಗಿಲು ಬೀಗ ಮುರಿದು ದೇವಸ್ಥಾನದ ಹುಂಡಿಯನ್ನು ಕಳ್ಳತನ ಮಾಡಲು ದೇವ ಸ್ಥಾನದ ಒಳಗೆ ಹೋಗಿ ಹುಂಡಿಯನ್ನು ಹೊರಗಡೆ ತಂದಾಗ ಗ್ರಾಮಸ್ಥರ ಕೂಗಾಟ ಕೇಳಿಸಿಕೊಂಡ ಕಳ್ಳರು ಹುಂಡಿಯನ್ನು ಮತ್ತು ಕೃತ್ಯಕ್ಕೆ ಬಳಸಿದ್ದ ಕಾರನ್ನು ದೇವಸ್ಥಾನದ ಬಳಿ ಬಿಟ್ಟು ಓಡಿ ಹೋಗಿದ್ದ ಪ್ರಕರಣ ಭೇದಿಸಿದ್ದ ಸಿ.ಎಸ್.ಪುರ ಪೊಲೀಸರು ಖತರ್ನಾಕ್ ಇಬ್ಬರು ಕಳ್ಳರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Gubbi (Tumkur) News: ಮರು ಜಾತಿಗಣತಿ ಸ್ವಾಗತಾರ್ಹ: ಶಾಸಕ ಎಸ್.ಆರ್.ಶ್ರೀನಿವಾಸ್

ಬಂದಿತ ಆರೋಪಿಗಳನ್ನ ನರಸಿಂಹಮೂರ್ತಿ(21) ವರ್ಷ ಮತ್ತೊಬ್ಬ ನಾಗರಾಜು(18) ಎನ್ನಲಾಗಿದೆ. ಇಬ್ಬರು ವ್ಯಕ್ತಿಗಳ ವಿಳಾಸ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೋಕಿನ ಕಾರೆಹಳ್ಳಿ ಮಜರೇ ಬೊಮ್ಮನಹಳ್ಳಿ ಗ್ರಾಮ ಎಂದು ತಿಳಿದು ಬಂದಿದೆ. ಇಬ್ಬರ ತಂದೆಯ ಹೆಸರು ವಸಂತಕುಮಾರ್ ಎಂದು ಇದ್ದು ಇಬ್ಬರು ಸಹೋದರರು ಎನ್ನಲಾಗುತ್ತಿದೆ.

ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು ಮೊದಲಿಗೆ ಕಳ್ಳತನಕ್ಕೆ ಬಳಸಿದ್ದ ಕೆಎ 02 ಎಡಿ 6543 ಎಂಬ ಕಾರಿನ ಮಾಲೀಕರ ವಿಳಾಸ ಸಂಗ್ರಹಿಸಿ ಪ್ರಕರಣ ಕೈಗೆತ್ತಿಕೊಂಡ ಇಬ್ಬರು ಆರೋಪಿಗಳನ್ನ ದಸ್ತಗಿರಿ ಮಾಡಿ ವಿಚಾರ ಮಾಡಲಾಗಿ ಆರೋಪಿತರು ಗೂಗಲ್ ಲೊಕೇಶನ್ ನಲ್ಲಿ ಟೆಂಪಲ್ ನಿಯರ್ ಫಾರ್ ಮಿ ಎಂದು ಸರ್ಚ್ ಮಾಡಿ ಊರುಗಳಿಂದ ಹೊರಗಡೆ ಒಂಟಿಯಾಗಿರುವ ಮತ್ತು ಭದ್ರತೆ ಇಲ್ಲದಿರುವ ಹುಂಡಿ ಹೊಡೆದರೆ ಅಲ್ಲಿ ಹಣ ಇದ್ದೇ ಇರುತ್ತೆ ಎಂದು ತಿಳಿದು ದೇವಸ್ಥಾನದ ಹುಂಡಿ ಹಣ ಮತ್ತು ದೇವರ ಒಡವೆಗಳನ್ನು ಕಳ್ಳತನ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿರು ತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಜೊತೆಗೆ ದೇವಸ್ಥಾನಗಳಲ್ಲಿ ಹುಂಡಿ ಕಳ್ಳತನ ಮಾಡಿದ್ದ ಹಣದಿಂದ ಮೇಲ್ಕಂಡ ಕೆಎ 02 ಎಡಿ 6543 ಎಂಬ ಟೊಯೋಟೊ ಇಟಿಯೋಸ್ ಕಾರನ್ನು ಖರೀದಿ ಮಾಡಿ ಕಳ್ಳತನಗಳಿಗೆ ಬಳಸುತ್ತಿದ್ದು ಎಂಬುದು ತಿಳಿಯುವುದರ ಜೊತೆಗೆ ಈ ಕಾರ್ಯಾಚರಣೆಯಿಂದ ಸಿ.ಎಸ್.ಪುರ ಪೊಲೀಸ್ ಠಾಣೆ ಸೇರಿದಂತೆ ಗುಬ್ಬಿ ಮತ್ತು ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಗಳಿಗೆ ಸೇರಿದ ಒಟ್ಟು ಎಂಟು ಪ್ರಕರಣ ಗಳನ್ನು ಭೇದಿಸುವಲ್ಲಿ ಸಿ.ಎಸ್.ಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಿರಾ ಉಪ ವಿಭಾಗದ ಪೊಲೀಸ್ ಉಪಾಧೀಕ್ಷರಾದ ಬಿ.ಕೆ.ಶೇಖರ್ ಅವರ ಮಾರ್ಗಸೂಚನೆ ಮೇರೆಗೆ ಗುಬ್ಬಿ ವೃತ್ತದ ಸಿಪಿಐ ರಾಘವೇಂದ್ರ.ಟಿ.ಆರ್ ನೇತೃತ್ವದ ಸಿ.ಎಸ್ ಪುರ ಪಿಎಸ್ಐ ಶಿವಕುಮಾರ್ ತಂಡದಲ್ಲಿ ಸಿಬ್ಬಂದಿಗಳಾದ ಸಿದ್ದರಾಜು, ರಾಜು, ವಿಜಯಕುಮಾರ್ ಮತ್ತು ಭೀಮೇಶ್ ಎಂಬ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಪ್ರಶಂಸಿಸಿದರು.