#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Delhi Election 2025: ದೆಹಲಿ ಚುನಾವಣೆ;ಬಿಜೆಪಿಯ ಮತ್ತೊಂದು ಪ್ರಣಾಳಿಕೆ ರಿಲೀಸ್‌- ಉಚಿತ ಶಿಕ್ಷಣ ಘೋಷಣೆ

ಫೆಬ್ರವರಿ 5ರಂದು ದೆಹಲಿ ವಿಧಾನಸಭಾ ನಡೆಯಲಿದೆ ಬಿಜೆಪಿ ಪಕ್ಷಕ್ಕೆ ಇದು ಪ್ರತಿಷ್ಠೆಯ ಚುನಾವಣೆಯಾಗಿದ್ದು,ಆಮ್‌ ಆದ್ಮಿ ಅಧಿಪತ್ಯವಿರುವ ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಕಷ್ಟು ಕಸರತ್ತು ನಡೆಸುತ್ತಿದೆ. ಮತದಾರರನ್ನು ಸೆಳೆಯಲು ಬಿಜೆಪಿ ಪಕ್ಷವು ಸಾಕಷ್ಟು ಮಹತ್ವದ ಪ್ರಣಾಳಿಕೆಗಳನ್ನು ಘೋಷಿಸುತ್ತಿದ್ದು,ಇದೀಗ ಸ್ನಾತಕೋತ್ತರ ಪದವಿಯವರೆಗೂ ಉಚಿತ ಶಿಕ್ಷಣ ನೀಡಲಾಗುವುದು ಎಂದು ಎರಡನೇ ಪ್ರಣಾಳಿಕೆಯಲ್ಲಿ ಘೋಷಿಸಿದೆ.

ಎಲ್‌ಕೆಜಿಯಿಂದ ಪಿಜಿಯವರೆಗೆ ಉಚಿತ ಶಿಕ್ಷಣ- ಬಿಜೆಪಿಯಿಂದ ಮಹತ್ವದ ಘೋಷಣೆ

Profile Deekshith Nair Jan 21, 2025 2:44 PM

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯ(Delhi Election 2025) ಕಾವು ತಾರಕಕ್ಕೇರಿದೆ. ರಾಜಕೀಯ ಪಡಸಾಲೆಯಲ್ಲಿ ದೆಹಲಿ ಚುನಾವಣೆಯು ಬಹು ಚರ್ಚಿತ ವಿಷಯವಾಗಿದ್ದು,ಈ ಬಾರಿ ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಎಂಬ ಕುತೂಹಲವಿದೆ. ಬಿಜೆಪಿ ಪಕ್ಷಕ್ಕೆ ಇದು ಪ್ರತಿಷ್ಠೆಯ ಚುನಾವಣೆಯಾಗಿದ್ದು, ಮತದಾರರನ್ನು ಸೆಳೆಯಲು ಸಾಕಷ್ಟು ಕಸರತ್ತು ನಡೆಸುತ್ತಿದೆ. ಬಿಜೆಪಿ ಇದೀಗ ಎರಡನೇ ಮಹತ್ವದ ಪ್ರಣಾಳಿಕೆ(BJP Manifesto)ಯನ್ನು ಘೋಷಿಸಿದ್ದು,ಸ್ನಾತಕೋತ್ತರ ಪದವಿಯವರೆಗೂ ಉಚಿತ ಶಿಕ್ಷಣ ನೀಡಲಾಗುವುದು ಎಂದು ಭರವಸೆ ನೀಡಿದೆ.

ಭಾರತೀಯ ಜನತಾ ಪಕ್ಷವು ಮುಂಬರುವ ದೆಹಲಿ ಚುನಾವಣೆ 2025 ಕ್ಕೆ ಮಂಗಳವಾರ(ಜ.21) ತನ್ನ ಎರಡನೇ ಮಹತ್ವದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ನಗರದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ನಿರ್ಗತಿಕ ಮತ್ತು ಬಡ ವಿದ್ಯಾರ್ಥಿಗಳಿಗೆ ಎಲ್‌ಕೆಜಿಯಿಂದ ಪಿಜಿಯವರೆಗೆ ಉಚಿತ ಶಿಕ್ಷಣವನ್ನು ನೀಡುವುದಾಗಿ ಭರವಸೆ ನೀಡಿದೆ.



ದೆಹಲಿ ವಿಧಾನಸಭಾ ಚುನಾವಣೆಗೆ ಬಿಜೆಪಿಯ 'ಸಂಕಲ್ಪ ಪತ್ರ'ವನ್ನು ಬಿಡುಗಡೆ ಮಾಡಿದ ಬಿಜೆಪಿ ಸಂಸದ ಅನುರಾಗ್ ಠಾಕೂರ್, ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ 15,000 ರುಪಾಯಿ ಆರ್ಥಿಕ ನೆರವು ನೀಡಲಾಗುವುದು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಎರಡು ಬಾರಿ ಪ್ರಯಾಣದ ವೆಚ್ಚ ಮತ್ತು ಅರ್ಜಿ ಶುಲ್ಕವನ್ನು ಮರುಪಾವತಿಸಲಾಗುವುದು ಎಂದಿದ್ದಾರೆ.



ಫೆಬ್ರವರಿ 5ರ ದೆಹಲಿ ಚುನಾವಣೆಗೆ ಬಿಜೆಪಿ ತನ್ನ ಪ್ರಣಾಳಿಕೆಯ ಮೊದಲ ಭಾಗವನ್ನು ಕಳೆದ ವಾರ ಬಿಡುಗಡೆಗೊಳಿಸಿತ್ತು. ಮಹಿಳೆಯರಿಗೆ 2,500 ರೂ ಮಾಸಿಕ ನೆರವು, ಪ್ರತಿ ಗರ್ಭಿಣಿ ಮಹಿಳೆಗೆ 21,000 ರೂ, 500 ರುಪಾಯಿಗೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡುವುದಾಗಿ ಮತ್ತು ವೃದ್ಧಾಪ್ಯ ಪಿಂಚಣಿಯನ್ನು 2,500 ರುಪಾಯಿ ಪಿಂಚಣಿ ನೀಡುವುದಾಗಿ ಭರವಸೆ ನೀಡಿದೆ.

ಈ ಸುದ್ದಿಯನ್ನೂ ಓದಿ:Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

ಮೊದಲ ಪ್ರಣಾಳಿಕೆಯನ್ನು ಘೋಷಿಸಿದ್ದ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಬಿಜೆಪಿ ಅಧಿಕಾರಕ್ಕೆ ಬಂದರೆ ಈಗಿರುವ ಎಲ್ಲಾ ಜನಕಲ್ಯಾಣ ಯೋಜನೆಗಳನ್ನು ಮುಂದುವರಿಸುವುದಲ್ಲದೆ, ಭ್ರಷ್ಟಾಚಾರವನ್ನು ಕಿತ್ತೊಗೆಯುವ ಮೂಲಕ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವ ಆಶ್ವಾಸನೆ ನೀಡಿದ್ದಾರೆ.

ಬಿಜೆಪಿ ನೇತೃತ್ವದ ದೆಹಲಿ ಸರ್ಕಾರವು ತನ್ನ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ನಗರದಲ್ಲಿ 'ಆಯುಷ್ಮಾನ್ ಭಾರತ್' ಅನುಷ್ಠಾನಕ್ಕೆ ಅನುಮೋದನೆ ನೀಡಲಿದ್ದು 5 ಲಕ್ಷ ರುಪಾಯಿ ಹೆಚ್ಚುವರಿ ಆರೋಗ್ಯ ರಕ್ಷಣೆಯನ್ನು ನೀಡುತ್ತದೆ ಎಂದು ನಡ್ಡಾ ಹೇಳಿದ್ದರು.