Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Maha Kumbh Mela: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ಆರಂಭವಾಗಿದೆ. ಕೋಟ್ಯಂತರ ಭಕ್ತರು ಆಗಮಿಸಿ ಪುಣ್ಯ ಸ್ನಾನ ಮಾಡುತ್ತಿದ್ದಾರೆ. ಈ ಮಧ್ಯೆ ಎಲ್ಲರ ಗಮನ ಸೆಳೆಯುವವರು ನಾಗ ಸಾಧುಗಳು. ಅವರ ಜೀವನ ವಿಧಾನವೇ ನಿನೂಢ ಮತ್ತು ಅನನ್ಯ. ಹಾಗಾದರೆ ಅವರು ಜೀವಿಸುವುದೆಲ್ಲಿ? ಹೇಗಿರುತ್ತದೆ ಅವರ ದಿನಚರಿ? ಇಲ್ಲಿದೆ ವಿವರ.

Naga Sadhus
Profile Ramesh B January 18, 2025

ಲಖನೌ: ಇಡೀ ಮೈತುಂಬಾ ಬಳಿದಿರುವ ವಿಭೂತಿ, ರುದ್ರಾಕ್ಷಿ ಮಾಲೆ, ನಗ್ನ ದೇಹ, ಸಿಕ್ಕಾಗಿರುವ ಕೂದಲು, ಸದಾ ಗಾಂಜಾ ನಶೆ...ಸಾಮಾನ್ಯವಾಗಿ ನಾಗಾ ಸಾಧುಗಳು (Naga Sadhus)ಗಳು ಕಂಡು ಬರುವುದೇ ಹೀಗೆ. ಸಾಮಾನ್ಯವಾಗಿ ಎಲ್ಲೂ ಕಂಡು ಬರದ ಅವರು ಕುಂಭಮೇಳದ ವೇಳೆ ಎಲ್ಲೊಂದಲೋ ಬಂದು ಗಂಗಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ಬಂದ ದಾರಿಯಲ್ಲೇ ಅಪ್ರತ್ಯಕ್ಷರಾಗುತ್ತಾರೆ. ಅವರ ಜೀವನ ವಿಧಾನವೇ ನಿನೂಢ ಮತ್ತು ಅನನ್ಯ. ಹಾಗಾದರೆ ಅವರು ಜೀವಿಸುವುದೆಲ್ಲಿ? ಹೇಗಿರುತ್ತದೆ ಅವರ ದಿನಚರಿ? ಇಲ್ಲಿದೆ ಮಾಹಿತಿ (Maha Kumbh Mela).

ಉತ್ತರ ಪ್ರದೇಶದಲ್ಲಿ ನಡೆಯುವ ಕುಂಭಮೇಳದಲ್ಲಿ ನಾಗಾ ಸಾಧುಗಳು ಲಕ್ಷಾಂತರ ಸಂಖ್ಯೆಯಲ್ಲಿ ಕಂಡುಬರುತ್ತಾರೆ. ಇವರು ಶಿವನ ಆರಾಧಕರು. ಕಠಿಣ ತಪ್ಪಸ್ಸು, ಧ್ಯಾನದ ಮೂಲಕ ಗಮನ ಸೆಳೆಯುವ ಇವರು ʼಅಖಾಡಗಳುʼ ಎಂದು ಕರೆಯಲ್ಪಡುವ ಸನ್ಯಾಸಿ ಪಂಥಗಳ ಸದಸ್ಯರು. ಬೂದಿಯಿಂದ ಆವೃತವಾದ ನಗ್ನ ದೇಹಗಳ ಅವರ ಜೀವನ ಶೈಲಿ ಲೌಕಿಕ ಆಸೆಗಳಿಂದ ದೂರ ಉಳಿದಿರುವ ಅವರ ವೈಶಿಷ್ಟ್ಯತೆಯನ್ನು ಪ್ರತಿಬಿಂಬಿಸುತ್ತದೆ.



ನಾಗಾ ಸಾಧುಗಳ ಹಿನ್ನೆಲೆ

ನಾಗಾ ಸಾಧುಗಳ ಮೂಲ ಶೈವ ಧರ್ಮದ ಪ್ರಾಚೀನ ಸಂಪ್ರದಾಯಗಳಲ್ಲಿ ಕಂಡು ಬರುತ್ತದೆ. ಇದು ಶಿವನನ್ನು ಸರ್ವೋಚ್ಛ ದೇವರೆಂದು ಪೂಜಿಸುವ ಹಿಂದೂ ಧರ್ಮದ ಅತ್ಯಂತ ಹಳೆಯ ಪಂಥಗಳಲ್ಲಿ ಒಂದು. ಕ್ರಿ.ಪೂ 326ರ ಸುಮಾರಿಗೆ ಅಲೆಕ್ಸಾಂಡರ್ ದಿ ಗ್ರೇಟ್ ಭಾರತದ ಮೇಲೆ ಆಕ್ರಮಣ ಮಾಡಿದ ಸಮಯದಲ್ಲಿಯೇ ನಾಗ ಸಾಧುಗಳು ಇದ್ದರು ಎಂದು ಕೆಲವು ಇತಿಹಾಸಕಾರರು ಹೇಳುತ್ತಾರೆ.

ಸಂಸ್ಕೃತದಲ್ಲಿ ನಾಗ ಎಂಬ ಪದಕ್ಕೆ ಪರ್ವತ ಎಂಬರ್ಥವೂ ಇದೆ. ಈ ಸನ್ಯಾಸಿಗಳು ಮೂಲತಃ ಭಾರತದ ಪರ್ವತ ಪ್ರದೇಶಗಳಲ್ಲಿ ವಾಸಿಸುತ್ತಿದ್ದರು ಎಂಬುದನ್ನು ಇದು ಸೂಚಿಸುತ್ತದೆ ಎನ್ನುತ್ತಾರೆ ಇತಿಹಾಸಕಾರರು. ಕಾಲಾನಂತರದಲ್ಲಿ ಅವರ ಆಧ್ಯಾತ್ಮಿಕ ಆಚರಣೆಗಳು ದಿಗಂಬರ ಜೈನರಂತಹ ಇತರ ಸನ್ಯಾಸಿ ಸಂಪ್ರದಾಯಗಳೊಂದಿಗೆ ಹೆಣೆದುಕೊಂಡಿತು. ಅವರು ಆಕಾಶ ಹೊದಿಕೆ (ನಗ್ನ) ತಪಸ್ಸು ಸಹ ಮಾಡುತ್ತಾರೆ.

8ನೇ ಶತಮಾನದಲ್ಲಿ ಅದ್ವೈತ, ವೇದಾಂತ ತತ್ವವನ್ನು ಬಲಪಡಿಸಿದ ಆದಿಗುರು ಶಂಕರಾಚಾರ್ಯರು ಭಾರತದಾದ್ಯಂತ ಅಖಾಡಗಳನ್ನು ಸ್ಥಾಪಿಸಿದರು. ಜತೆಗೆ ನಾಗ ಸಾಧುಗಳು ಸೇರಿದಂತೆ ವಿವಿಧ ಸನ್ಯಾಸಿಗಳನ್ನು ಸಂಘಟಿಸಿದರು.

ಕಠಿಣ ವ್ರತ

ನಾಗ ಸಾಧುಗಳಾಗುವ ಪ್ರಕ್ರಿಯೆ ತುಂಬಾ ಕಠಿಣವಾದುದು. ಇದಕ್ಕೆ ಅನೇಕ ವರ್ಷಗಳ ಸಮರ್ಪಣೆ, ಕಠಿಣ ದೈಹಿಕ, ಮಾನಸಿಕ ತರಬೇತಿ ಮತ್ತು ಆಳವಾದ ಆಧ್ಯಾತ್ಮಿಕ ಅಭ್ಯಾಸದ ಅಗತ್ಯವಿದೆ. ದೀಕ್ಷಾ ಪ್ರಕ್ರಿಯೆಯು ಬ್ರಹ್ಮಚರ್ಯ ವ್ರತ ಮತ್ತು ಆಧ್ಯಾತ್ಮಿಕ ಶಿಸ್ತಿನ ಆಚರಣೆಯೊಂದಿಗೆ ಪ್ರಾರಂಭವಾಗುತ್ತದೆ. ನಾಗ ಸಾಧು ಆಕಾಂಕ್ಷಿಗಳು ಎಲ್ಲ ಲೌಕಿಕ ಸುಖಗಳನ್ನು ತ್ಯಜಿಸಲು ಸಿದ್ಧರಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಆಯಾ ಅಖಾಡಗಳ ಆಡಳಿತ ಮಂಡಳಿಯಿಂದ ಮೌಲ್ಯಮಾಪನ ಮಾಡಲಾಗುತ್ತದೆ. ಈ ಮೌಲ್ಯಮಾಪನವು ಸಾಮಾನ್ಯವಾಗಿ 12 ವರ್ಷಗಳವರೆಗೆ ಇರುತ್ತದೆ. ಈ ಸಮಯದಲ್ಲಿಆಕಾಂಕ್ಷಿಯು ಬದ್ಧತೆ ಮತ್ತು ತ್ಯಾಗದ ಜೀವನವನ್ನು ನಡೆಸುವ ಸಾಮರ್ಥ್ಯದ ತೀವ್ರ ಪರೀಕ್ಷೆಗೆ ಒಳಗಾಗುತ್ತಾನೆ.

ಈ ಪರೀಕ್ಷೆಯಲ್ಲಿ ಯಶಸ್ವಿಯಾದ ಸಾಧಕನು ಪಂಚ ಗುರು ಮತ್ತು ಪಿಂಡ್ ದಾನದಂತಹ ಪ್ರಮುಖ ಆಚರಣೆಗಳಿಗೆ ಒಳಗಾಗುತ್ತಾನೆ. ಪಂಚ ಗುರು ಪ್ರಕ್ರಿಯೆಯು ಸಾಧಕರಿಗೆ ಆಧ್ಯಾತ್ಮಿಕ ಬೋಧನೆಗಳಿಗೆ ದೀಕ್ಷೆ ನೀಡಿದರೆ, ಪಿಂಡ್ ದಾನವು ಅವರ ಹಿಂದಿನ ಗುರುತನ್ನು ತ್ಯಜಿಸುವುದನ್ನು ಸಂಕೇತಿಸುತ್ತದೆ. ದೀಕ್ಷೆಯ ಪ್ರಮುಖ ಘಟ್ಟವು ಅಖಾಡಗಳ ಧ್ವಜದ ಕೆಳಗೆ ನಿಂತು 24 ಗಂಟೆಗಳ ಕಾಲ ಉಪವಾಸವನ್ನು ಒಳಗೊಂಡಿರುತ್ತದೆ. ಇದು ಸನ್ಯಾಸಿ ಜೀವನಕ್ಕೆ ಅಂತಿಮ ಬದ್ಧತೆಯನ್ನು ಸೂಚಿಸುತ್ತದೆ. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಸಾಧಕರನ್ನು ಅಧಿಕೃತವಾಗಿ ನಾಗಾ ಸಾಧು ಎಂದು ಪರಿಗಣಿಸಲಾಗುತ್ತದೆ.

ನಾಗ ಸಾಧುಗಳು ಹೋಗುವುದೆಲ್ಲಿಗೆ?

ಕುಂಭಮೇಳದಲ್ಲಿ ಮೊದಲು ಸ್ನಾನ ಮಾಡುವ ಹಕ್ಕು ಅವರಿಗೆ ಇದೆ. ಅದರ ನಂತರವೇ ಉಳಿದ ಭಕ್ತರಿಗೆ ಸ್ನಾನ ಮಾಡಲು ಅವಕಾಶವಿರುತ್ತದೆ. ಕುಂಭಮೇಳದಲ್ಲಿ ಕಾಣಿಸಿಕೊಳ್ಳುವ ನಾಗ ಸಾಧುಗಳು ಬಳಿಕ ಅಪ್ರತ್ಯಕ್ಷರಾಗುತ್ತಾರೆ. ಹಾಗಾದರೆ ಅವರು ಹೋಗುವುದಾದರೂ ಎಲ್ಲಿಗೆ? ನಾಗ ಸಾಧುಗಳು ಸಾಮಾನ್ಯವಾಗಿ ಜನ ನಿಬಿಡ ಪ್ರದೇಶಗಳಿಂದ ದೂರುವಾಗಿ ಪರ್ವತಗಳ ಗುಹೆಗಳಲ್ಲಿ, ದಟ್ಟ ಕಾಡಿನಲ್ಲಿ ವಾಸಿಸುತ್ತಾರೆ. ಜಗತ್ತೆಲ್ಲ ಮಲಗಿದ ಬಳಿಕ, ಕತ್ತಲು ಆರಂಭವಾದ ನಂತರ ಇವರ ಚಟುವಟಿಕೆ ಶುರುವಾಗುತ್ತದೆ. ತಮ್ಮ ಧಾರ್ಮಿಕ ಆಚರಣೆಗಳನ್ನು ಇತರರು ನೋಡಬಾರದು ಎನ್ನುವುದು ಇದರ ಉದ್ದೇಶ. ಅವರ ರಾತ್ರಿ ಪ್ರಯಾಣವು ಪಟ್ಟಣಗಳು ಮತ್ತು ಹಳ್ಳಿಗಳ ಮೂಲಕ ಯಾರ ಗಮನಕ್ಕೂ ಬಾರದಂತೆ ಹಾದುಹೋಗಲು ಅನುವು ಮಾಡಿಕೊಡುತ್ತದೆ. ಇದು ಅವರ ಪವಿತ್ರ ಏಕಾಂತವನ್ನು ಕಾಪಾಡಿಕೊಳ್ಳುತ್ತದೆ.

ನಾಗಾ ಸಾಧುಗಳ ಪ್ರತಿಯೊಂದು ಅಖಾಡವೂ ಕೊತ್ವಾಲ್‌ನಿಂದ ನಿರ್ದೇಶಿಸಲ್ಪಡುತ್ತದೆ. ಕೊತ್ವಾಲ್‌ಗಳು ಸಾಧುಗಳು ಮತ್ತು ಅವರ ಅಖಾಡಗಳ ನಡುವೆ ಸಂವಹನವನ್ನು ನಿರ್ವಹಿಸುತ್ತ ಸಂಪರ್ಕ ಕೊಂಡಿಯಾಗಿರುತ್ತಾರೆ.

ಈ ಸುದ್ದಿಯನ್ನೂ ಓದಿ: Aghori: ಸ್ಮಶಾನದಲ್ಲೇ ವಾಸ, ಮೃತದೇಹಗಳೊಂದಿಗೆ ಸಹವಾಸ; ಇದು ಅಘೋರಿಗಳ ನಿಗೂಢ ಜಗತ್ತು

ನಾಗ ಸಾಧುಗಳು ಆಳವಾದ ರಹಸ್ಯ, ಭಕ್ತಿ ಮತ್ತು ಶಿಸ್ತಿನ ಜೀವನವನ್ನು ನಡೆಸುತ್ತಾರೆ. ಕುಂಭಮೇಳದಿಂದ ಅರಣ್ಯಕ್ಕೆ ಅವರ ಪ್ರಯಾಣವು ಆಧ್ಯಾತ್ಮಿಕ ವಿಮೋಚನೆಯ ನಿರಂತರ ಅನ್ವೇಷಣೆಯನ್ನು ಸಂಕೇತಿಸುತ್ತದೆ. ಸನ್ಯಾಸಿಗಳಾಗಿ ಬದುಕುವ ಅವರು ದೈವಿಕ ಅನ್ವೇಷಣೆಯಲ್ಲಿ ಲೌಕಿಕ ಸೌಕರ್ಯಗಳನ್ನು ತಿರಸ್ಕರಿಸುತ್ತಾರೆ ಮತ್ತು ಅವರ ಜೀವನ ವಿಧಾನವು ಉನ್ನತ ಆಧ್ಯಾತ್ಮಿಕ ಕರೆಗೆ ಕಡೆಗಿನ ಅವರ ಅಚಲ ಬದ್ಧತೆಗೆ ಸಾಕ್ಷಿ. ಹೀಗಾಗಿ ಅವರು ಕುಂಭಮೇಳದ ನಂತರ ತಮ್ಮ ತಮ್ಮ ಅಖಾಡಗಳಿಗೆ ಹಿಂತಿರುಗುತ್ತಾರೆ. ಅಖಾಡಗಳು ಭಾರತದ ವಿವಿಧ ಭಾಗಗಳಲ್ಲಿವೆ.

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ