ಅರ್ಧಶತಕ ಸಿಡಿಸಿ ವಿರಾಟ್ ಕೊಹ್ಲಿ, ಎಬಿಡಿ ದಾಖಲೆ ಮುರಿದ ದೇವದತ್ ಪಡಿಕ್ಕಲ್!
ಹರಿಯಾಣ ವಿರುದ್ಧ ವಿಜಯ್ ಹಝಾರೆ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಕರ್ನಾಟಕ ತಂಡವನ್ನು ಫೈನಲ್‌ಗೆ ತಲುಪಿಸಿದ್ದಾರೆ. ತಮ್ಮ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಕನ್ನಡಿಗ ದೇವದತ್ ಪಡಿಕ್ಕಲ್ ದಿಗ್ಗಜರಾದ ಎಬಿಡಿ ವಿಲಿಯರ್ಸ್ ಹಾಗೂ ವಿರಾಟ್ ಕೊಹ್ಲಿ ದಾಖಲೆ ಮುರಿದು ಗಮನ ಸೆಳೆದಿದ್ದಾರೆ.
ಬೆಂಗಳೂರು: ಪ್ರತಿಷ್ಠಿತ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮುಂದುವರಿಸಿರುವ ಕನ್ನಡಿಗ ದೇವದತ್ ಪಡಿಕ್ಕಲ್ (Devdut Padikkal), ಲಿಸ್ಟ್ ಎ ನಲ್ಲಿ ದಿಗ್ಗಜ ಆಟಗಾರರಾದ ಎಬಿ ಡಿ ವಿಲಿಯರ್ಸ್ (Ab de Villers), ವಿರಾಟ್ ಕೊಹ್ಲಿ (Virat Kohli) ಸೇರಿದಂತೆ ಹಲವು ದಿಗ್ಗಜರ ದಾಖಲೆಯನ್ನು ಮುರಿದಿದ್ದಾರೆ.
ಹರಿಯಾಣ ವಿರುದ್ಧ ಬುಧವಾರ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ತಾಳ್ಮೆಯುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ದೇವದತ್ ಪಡಿಕ್ಕಲ್ ಎಂಟು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 113 ಎಸೆತಗಳಲ್ಲಿ 86 ರನ್ ಬಾರಿಸಿದ್ದರು. ಆ ಮೂಲಕ ಕರ್ನಾಟಕ ತಂಡ 238 ರನ್‌ಗಳ ಗೆಲುವಿಗೆ ನೆರವು ನೀಡಿದ್ದರು. ತಮ್ಮ ಈ ಇನಿಂಗ್ಸ್ ಮೂಲಕ ಅವರು 2021-22ರ ಸಾಲಿನಲ್ಲಿ ತಾವೇ ಬರೆದಿದ್ದ ದಾಖಲೆಯನ್ನು ಮುರಿದಿದ್ದಾರೆ. ಪಡಿಕ್ಕಲ್ 7 ಬಾರಿ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ.
vijay Hazare Trophy: ಹರಿಯಾಣವನ್ನು ಮಣಿಸಿ ಫೈನಲ್‌ಗೇರಿದ ಕರ್ನಾಟಕ!
ದಿಗ್ಗಜರ ದಾಖಲೆ ಮುರಿದ ಕನ್ನಡಿಗ
ಲೀಸ್ಟ್ ಎ ಕ್ರಿಕೆಟ್‌ನಲ್ಲಿ 82.38ರ ಸರಾಸರಿಯಲ್ಲಿ 2000 ರನ್ ಪೂರೈಸುವ ಮೂಲಕ ದೇವದತ್ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್ (58.16), ಮೈಕಲ್ ಬೆವೆನ್ (57.86), ವಿರಾಟ್ ಕೊಹ್ಲಿ (57.05) ಮತ್ತು ಎಬಿಡಿ ವಿಲಿಯರ್ಸ್ (53.47) ಅವರನ್ನು ಹಿಂದಿಕ್ಕಿದ್ದಾರೆ.
ಕರ್ನಾಟಕ ಗೆಲುವಿನಿಂದ ಸಂತಸ: ಪಡಿಕ್ಕಲ್
"ಈ ಮಾದರಿ ಕ್ರಿಕೆಟ್‌ನಲ್ಲಿ ಆಡಲು ಸದಾ ಕಾಯುತ್ತೇನೆ. ಕರ್ನಾಟಕ ತಂಡದ ಪರ ಆಡುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಹರಿಯಾಣ ವಿರುದ್ಧ ಬ್ಯಾಟ್ ಮಾಡುವುದು ತುಂಬಾ ಕಠಿಣವಾಗಿತ್ತು. ಆದರೆ ನಾನು ಮತ್ತು ಸ್ಮರಣ್ ಅವರು ಒಂದೊಂದು ರನ್ ಕದಿಯುತ್ತಾ ಸ್ಕೋರ್ ಬೋರ್ಡ್ ಹೆಚ್ಚಿಸುವತ್ತ ಗಮನಹರಿಸಿದ್ದೆವು" ಎಂದು ಪಡಿಕ್ಕಲ್ ಹೇಳಿದ್ದಾರೆ.
yo-yo fitness Test: ಮತ್ತೆ ಯೋ-ಯೋ ಟೆಸ್ಟ್ ಜಾರಿಗೆ ಮುಂದಾದ ಬಿಸಿಸಿಐ!
"ಚೆಂಡಿನ ಗತಿಗೆ ತಕ್ಕಂತೆ ದೇಹವನ್ನು ಅಳವಡಿಸಿಕೊಳ್ಳಬೇಕು. ಯಾವಾಗ ನೀವು ಎಡವುತ್ತಿವೋ ಆಗ ಸಮಸ್ಯೆಗೆ ಸಿಲುಕುತ್ತೇವೆ. ಆದರೆ ಅವರು (ಸ್ಮರಣ್) ನಿಜಕ್ಕೂ ಉತ್ತಮ ಕ್ರಿಕೆಟ್ ಆಡಿದ್ದಾರೆ. ಶತಕದ ಜೊತೆಯಾಟವಾಡಿದ್ದು ನಿಜಕ್ಕೂ ಉತ್ತಮ ಭಾವನೆ ಮೂಡಿಸಿದೆ. ಆದರೆ ಅದಕ್ಕಿಂತ ತಂಡ ಗೆದ್ದು ಫೈನಲ್ ತಲುಪಿರುವುದು ಸಂತಸ ತಂದಿದೆ," ಎಂದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ವೇಳೆ ದೇವದತ್ ಪಡಿಕ್ಕಲ್ ಹೇಳಿಕೊಂಡಿದ್ದರು.
ಆಸೀಸ್ ಸರಣಿಯಲ್ಲಿ ಸ್ಥಾನ ಪಡೆದಿದ್ದ ಕನ್ನಡಿಗ
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ -ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ವೇಳೆ ನಡೆದಿದ್ದ ಪ್ರೈಮ್ ಮಿನಿಸ್ಟರ್ ಇಲೆವೆನ್ ತಂಡದ ವಿರುದ್ಧ ಆಡಿದ್ದ ದೇವದತ್ ಪಡಿಕ್ಕಲ್, ಪರ್ತ್ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಅವರ ಅನುಪಸ್ಥಿತಿಯಲ್ಲಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದರೂ ಅತಿ ಹೆಚ್ಚು ರನ್ (0,25) ಗಳಿಸುವಲ್ಲಿ ವಿಫಲರಾಗಿದ್ದರು.