ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ರೈತ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಸಭೆ

ಜಿಲ್ಲೆಯ ರೈತರ ಸಮಸ್ಯೆಗಳನ್ನು ಪರಿಹರಿಸುವ ಸಂಬಂಧ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಪರಿಹಾರಕ್ಕೆ ಪ್ರಯತ್ನ ಮಾಡಲು ರೈತ ಸಂಘಟನೆಗಳಿಂದ ಮನವಿ ಬಂದಿತ್ತು. ಅದರಂತೆ ಇಂದು ರೈತ ರೊಂದಿಗೆ ಸಭೆ ನಡೆಸಿ ಕೆಲವು ಸಮಸ್ಯೆಗಳಿಗೆ ಪರಿಹಾರ ಕ್ರಮಗಳನ್ನು ಸ್ಥಳದಲ್ಲೆ ಕೈಗೊಳ್ಳ ಲಾಯಿತು.

ಚಿಕ್ಕಬಳ್ಳಾಪುರ: ಚಿತ್ರಾವತಿ ನದಿಗೆ ಬಾಗೇಪಲ್ಲಿ ನಗರದ ಕೊಳಚೆ ನೀರು ಸೇರುವುದನ್ನು ಶಾಶ್ವತ ವಾಗಿ ತಪ್ಪಿಸಲು ಅಮೃತ 2 ಯೋಜನೆಯಡಿ 3.5 ಕೋಟಿ ಹಣವನ್ನು ಸರ್ಕಾರ ನೀಡಿದೆ. ಈ ಸಂಬಂಧ ಕಾಮಗಾರಿ ಕೈಗೊಳ್ಳುವ ಪ್ರಕ್ರಿಯೆ ಚಾಲನೆಯಲ್ಲಿದ್ದು, ಪ್ರಸ್ತುತ ಟೆಂಡರ್ ಹಂತದಲ್ಲಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ “ಜಿಲ್ಲೆಯ ರೈತರ ಸಮಸ್ಯೆಗಳನ್ನು ಪರಿಹರಿಸುವ ಸಭೆ”ಯ ಅಧ್ಯಕ್ಷತೆ ವಹಿಸಿ ರೈತ ಮುಖಂಡರಿಂದ ಸಮಸ್ಯೆಗಳನ್ನು ಆಲಿಸಿ ನಂತರ ಮಾತನಾಡಿದರು.

ಜಿಲ್ಲೆಯ ರೈತರ ಸಮಸ್ಯೆಗಳನ್ನು ಪರಿಹರಿಸುವ ಸಂಬಂಧ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಪರಿಹಾರಕ್ಕೆ ಪ್ರಯತ್ನ ಮಾಡಲು ರೈತ ಸಂಘಟನೆಗಳಿಂದ ಮನವಿ ಬಂದಿತ್ತು. ಅದರಂತೆ ಇಂದು ರೈತರೊಂದಿಗೆ ಸಭೆ ನಡೆಸಿ ಕೆಲವು ಸಮಸ್ಯೆಗಳಿಗೆ ಪರಿಹಾರ ಕ್ರಮಗಳನ್ನು ಸ್ಥಳದಲ್ಲೆ ಕೈಗೊಳ್ಳ ಲಾಯಿತು. ಕೆಲವು ಸಮಸ್ಯೆಗಳ ಪರಿಹಾರವನ್ನು ಕಾಲ ಮಿತಿಯಲ್ಲಿ ಪರಿಹಾರ ಮಾಡಲು ಅಧಿಕಾರಿ ಗಳಿಗೆ ಸೂಚನೆ ನೀಡಲಾಯಿತು ಎಂದು ತಿಳಿಸಿದರು.

ಇದನ್ನೂ ಓದಿ: China Restriction to Travel Abroad: ಶಿಕ್ಷಕರು, ವೈದ್ಯರು, ನಿವೃತ್ತರು...ಚೀನಾ ನೌಕರರು ವಿದೇಶಕ್ಕೆ ಹೋಗುವಂತಿಲ್ಲ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ರಿ)ಯ ರಾಜ್ಯಾಧ್ಯಕ್ಷರು ಚಿತ್ರಾವತಿ ನದಿಗೆ ಕೊಳಚೆ ನೀರು ಸೇರ್ಪಡೆಯನ್ನು ತಪ್ಪಿಸಲು ಸಭೆಯ ಗಮನ ಸೆಳೆದರು. ಪ್ರತಿಕ್ರಿಯಿಸಿದ ಜಿಲ್ಲಾಧಿ ಕಾರಿಗಳು ಈಗಾಗಲೇ ಚಿತ್ರಾವತಿ ನದಿಗೆ ಬಾಗೇಪಲ್ಲಿ ನಗರದ ಕೊಳಚೆ ನೀರು ಸೇರ್ಪಡೆ ಆಗುವುದನ್ನು ತಪ್ಪಿಸಲು ತಾತ್ಕಾಲಿಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ ಅಮೃತ 2 ಯೋಜನೆಯಡಿ ಕಾಮಗಾರಿ ಕೈಗೊಂಡು ಶಾಶ್ವತವಾಗಿ ಸಮಸ್ಯೆಯನ್ನು ಪರಿಹರಿಸುವುದಾಗಿ ತಿಳಿಸಿದರು.

ಚೇಳೂರು ಎಪಿಎಂಸಿ ಮಾರ್ಕೆಟ್ ಅಂಗಳದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಯನ್ನು ತ್ವರಿತವಾಗಿ ಕಲ್ಪಿಸಬೇಕು. ಮಳೆ ನೀರು ಸರಾಗವಾಗಿ ಸಾಗಲು ಕೆರೆಯಿಂದ ಕೆರೆಗೆ ಸಂಪರ್ಕ ಇರುವ ರಾಜ ಕಾಲುವೆಗಳಲ್ಲಿನ ತ್ಯಾಜ್ಯವನ್ನು ಹಾಗೂ ಹೂಳನ್ನು ತೆರವುಗೊಳಿಸಬೇಕು. ರೈತರು ಸರ್ಕಾರಿ ಕಚೇರಿಗಳನ್ನು ಸಂಪರ್ಕಿಸಿ, ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ, ಸಿಬ್ಬಂದಿಯ ಗಮನಕ್ಕೆ ತಂದಾಗ ಕಾನೂನು ರೀತ್ಯ ಪರಿಹರಿಸಲು ಸ್ವಂದಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.