ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video : ಶಾಲೆಯಲ್ಲಿಯೇ ಶಿಕ್ಷಕಿ, ಆಕೆಯ ಪತಿಗೆ ಹಿಗ್ಗಾ ಮುಗ್ಗಾ ಥಳಿತ; ವೈರಲ್‌ ಆದ ವಿಡಿಯೋ

ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ಶಿಕ್ಷಕಿ ಹಾಗೂ ಆಕೆಯ ಪತಿಯ ಮೇಲೆ ಶಾಲೆ ಪ್ರಿನ್ಸಿಪಾಲ್‌ ಹಾಗೂ ಮತ್ತಿತರು ಹಲ್ಲೆ ನಡೆಸಿದ್ದಾರೆ. ಸದ್ಯ ವಿಡಿಯೋ ವೈರಲ್‌ ಆಗಿದ್ದು, ಆಕ್ರೋಶ ವ್ಯಕ್ತವಾಗುತ್ತಿದೆ.

Viral

ಲಖನೌ: ಉತ್ತರ ಪ್ರದೇಶದ (Uttar Pradesh) ಷಹಜಾನ್‌ಪುರದಲ್ಲಿ ಅಮಾನವೀಯ ಘಟನೆ ಒಂದು ನಡೆದಿದ್ದು, ವ್ಯಕ್ತಿಗಳ ಗುಂಪೊಂದು ಶಾಲಾ ಶಿಕ್ಷಕಿ ಮತ್ತು ಅವರ ಪತಿ ಮೇಲೆ ಹಲ್ಲೆ ನಡೆಸಿದೆ. ಈ ಗುಂಪಿನಲ್ಲಿ ಶಾಲೆಯ ಇದರಲ್ಲಿ ಶಾಲೆಯ ಪ್ರಾಂಶುಪಾಲರು ಸೇರಿದ್ದರು ಎಂದು ತಿಳಿದು ಬಂದಿದೆ. ಸದ್ಯ ಹಲ್ಲೆಯ ದೃಶ್ಯ ಸೋಶಿಯಲ್‌ ಮೀಡಿಯಾದಲ್ಲಿ (Viral Video) ವೈರಲ್‌ ಆಗುತ್ತಿದೆ.

ವೀಡಿಯೊದಲ್ಲಿ, ಪುರುಷರ ಗುಂಪೊಂದು ಪುರುಷನ ಮೇಲೆ ದಾಳಿ ಮಾಡುವುದನ್ನು ಕಾಣಬಹುದು, ಆದರೆ ಮಹಿಳೆಯ ಧ್ವನಿಯು ಹಿನ್ನಲೆಯಲ್ಲಿ ಕೇಳಿ ಬರುತ್ತದೆ. ಆಕೆ ದಯವಿಟ್ಟು ನನ್ನ ಪತಿಗೆ ಹೊಡೆಯಬೇಡಿ ಎಂದು ವಿನಂತಿಸಿಕೊಳ್ಳುತ್ತಿರುವುದು ಕೇಳಿ ಬರುತ್ತದೆ. ಸಂತ್ರಸ್ತನನ್ನು ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕಿಯ ಪತಿ ಎಂದು ಗುರುತಿಸಲಾಗಿದ್ದು, ಪತ್ನಿಯನ್ನು ಶಾಲೆಗೆ ಬಿಡಲು ಬಂದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.



ಈ ಸುದ್ದಿಯನ್ನೂ ಓದಿ : Viral Video: ಶಾರೂಕ್‌ ಖಾನ್‌ ಅಭಿನಯದ ಕುಛ್‌ ಕುಛ್‌ ಹೋತಾ ಹೈ ಹಾಡು ಹಾಡಿ ಸಂಭ್ರಮಿಸಿದ ಇಂಡೋನೇಷ್ಯಾ ಸಚಿವರು

ಕೆಲ ಮಾಹಿತಿ ಪ್ರಕಾರ ಶಾಲೆಯ ಪ್ರಾಂಶುಪಾಲ ಸುಮಿತ್ ಪಾಠಕ್ ಮತ್ತು ಸಹ ಶಿಕ್ಷಕರು ಸೇರಿ ದಂಪತಿಯ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಹಲ್ಲೆಗೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಘಟನೆಯ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಖಂಡನೆಗೆ ಕಾರಣವಾಗಿವೆ.ಅನೇಕರು ಕಾಮೆಂಟ್‌ಗಳ ವಿಭಾಗಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರ, "ಇದು ಭಯಾನಕವಾಗಿದೆ" ಎಂದು ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬ ಇದು ಬಾಲಿವುಡ್‌ ಸಿನಿಮಾ ದೃಶ್ಯಗಳು ಎನ್ನುವಂತಿವೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ರಾಜಸ್ಥಾನದ ಚಿತ್ತೋರ್‌ಗಢ ಜಿಲ್ಲೆಯಲ್ಲಿ ಹೆಡ್‌ ಮಾಸ್ಟರ್‌ ಒಬ್ರು ಶಾಲೆಯಲ್ಲಿಯೇ ಲೇಡಿ ಟೀಚರ್‌ ಜೊತೆ ರೊಮಾನ್ಸ್‌ ನಡೆಸಿದ್ದ ಘಟನೆ ವೈರಲ್‌ ಆಗಿತ್ತು. ಈ ದೃಶ್ಯ ಅಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದನ್ನು ಸೋಶಿಯಲ್‌ ಮೀಡಿಯಾದಲ್ಲಿ ಯಾರೋ ಹರಿಬಿಟ್ಟಿದ್ದರು. ಆ ಶಿಕ್ಷಕರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು.