ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yagati Raghu Naadig Column: ಏಕ್‌ ಚುಟ್ಕೀ ʼಸಿಂದೂರ್‌ʼ ಕೀ ಕೀಮತ್‌ ತುಮ್‌ ಕ್ಯಾ ಜಾನೋ ʼಮುನೀರ್‌ʼ ಬಾಬು ?!

ಏಕ್ ಚುಟ್ಕೀ ಸಿಂದೂರ್ ಕಿ ಕೀಮತ್ ತುಮ್ ಕ್ಯಾ ಜಾನೋ ರಮೇಶ್ ಬಾಬು? ಈಶ್ವರ್ ಕಾ ಆಶೀರ್ವಾದ್ ಹೋತಾ ಹೈ ಏಕ್ ಚುಟ್ಕೀ ಸಿಂದೂರ್ | ಸುಹಾಗನ್ ಕೆ ಸರ್ ಕಾ ತಾಜ್ ಹೋತಾ ಹೈ ಏಕ್ ಚುಟ್ಕೀ ಸಿಂದೂರ್| ಹರ್ ಔರತ್ ಕಾ ಖ್ವಾಬ್ ಹೋತಾ ಹೈ ಏಕ್ ಚುಟ್ಕೀ ಸಿಂದೂರ್|| (ಒಂದು ಚಿಟಿಕೆ ಸಿಂದೂ ರದ ಮೌಲ್ಯ ನಿಮಗೆ ತಿಳಿದಿದೆಯೇ ರಮೇಶ್ ಬಾಬು? ಒಂದು ಚಿಟಿಕೆ ಸಿಂದೂರವು ಈಶ್ವರನ ಆಶೀರ್ವಾದವಾಗಿರುತ್ತದೆ, ಒಂದು ಚಿಟಿಕೆ ಸಿಂದೂರವು ವಿವಾಹಿತೆಯೊಬ್ಬಳ ತಲೆಯ ಮೇಲಿನ ಕಿರೀಟವಾಗಿರುತ್ತದೆ, ಒಂದು ಚಿಟಿಕೆ ಸಿಂದೂರವು ಪ್ರತಿಯೊಬ್ಬ ಮಹಿಳೆಯ ಕನಸಾಗಿರು ತ್ತದೆ).

ಸಿಂದೂರ - ಸಮರ

ಏಕ್ ಚುಟ್ಕೀ ಸಿಂದೂರ್ ಕಿ ಕೀಮತ್ ತುಮ್ ಕ್ಯಾ ಜಾನೋ ರಮೇಶ್ ಬಾಬು? ಈಶ್ವರ್ ಕಾ ಆಶೀರ್ವಾದ್ ಹೋತಾ ಹೈ ಏಕ್ ಚುಟ್ಕೀ ಸಿಂದೂರ್ | ಸುಹಾಗನ್ ಕೆ ಸರ್ ಕಾ ತಾಜ್ ಹೋತಾ ಹೈ ಏಕ್ ಚುಟ್ಕೀ ಸಿಂದೂರ್| ಹರ್ ಔರತ್ ಕಾ ಖ್ವಾಬ್ ಹೋತಾ ಹೈ ಏಕ್ ಚುಟ್ಕೀ ಸಿಂದೂರ್|| (ಒಂದು ಚಿಟಿಕೆ ಸಿಂದೂರದ ಮೌಲ್ಯ ನಿಮಗೆ ತಿಳಿದಿದೆಯೇ ರಮೇಶ್ ಬಾಬು? ಒಂದು ಚಿಟಿಕೆ ಸಿಂದೂರವು ಈಶ್ವರನ ಆಶೀರ್ವಾದವಾಗಿರುತ್ತದೆ, ಒಂದು ಚಿಟಿಕೆ ಸಿಂದೂರವು ವಿವಾಹಿತೆಯೊಬ್ಬಳ ತಲೆಯ ಮೇಲಿನ ಕಿರೀಟವಾಗಿರುತ್ತದೆ, ಒಂದು ಚಿಟಿಕೆ ಸಿಂದೂರವು ಪ್ರತಿಯೊಬ್ಬ ಮಹಿಳೆಯ ಕನಸಾಗಿರು ತ್ತದೆ).

ಪಾಕಿಸ್ತಾನದ ಸೇನಾ ಮುಖ್ಯಸ್ಥರಾದ ಅಸಿಮ್ ಮುನೀರ್ ಅವರೇ, ನಿಮಗೆ ಹೀಗೊಂದು ಬಹಿರಂಗ ಪತ್ರ ಬರೆಯಲು ಸಮಯ ಹಾಳು ಮಾಡಬೇಕಾಗುವಂಥ ಸಂದರ್ಭ ನಮಗೆ ಒದಗುತ್ತದೆ ಅಥವಾ ಅಂಥದೊಂದು ದುಸ್ಥಿತಿ ನಿಮ್ಮದಾಗುತ್ತದೆ ಎಂದು ನಾನಾಗಲೀ, ನನ್ನಂಥ ಕೋಟ್ಯಂತರ ದೇಶ ಪ್ರೇಮಿ ಭಾರತೀಯರಾಗಲೀ ಅಂದಾಜು ಮಾಡಿರಲಿಲ್ಲ. ಆದರೆ ಅಂಥ ಸಂದರ್ಭ ಬಂದೇಬಿಟ್ಟಿತು ನೋಡಿ! ಮೇಲೆ ಉಲ್ಲೇಖಿಸಿರುವುದು ಶಾರುಖ್ ಖಾನ್ ನಟಿಸಿರುವ ‘ಓಂ ಶಾಂತಿ ಓಂ’ ಎಂಬ ಹಿಂದಿ ಚಲನಚಿತ್ರದ ಸಂಭಾಷಣೆ. “ಭಾರತೀಯ ಮಹಿಳೆ ಯೊಬ್ಬಳು ತನ್ನ ಹಣೆಯಲ್ಲಿ ಅಥವಾ ಶಿರದಲ್ಲಿ ಧರಿಸುವ ಸಿಂದೂರದ ಮೌಲ್ಯ ಮತ್ತು ಮಹತ್ವ ತುಂಬಾ ಉನ್ನತವಾದುದು; ನಿಮ್ಮಂಥ ಸಾಮಾನ್ಯರು ಇದನ್ನು ಅರ್ಥ ಮಾಡಿಕೊಳ್ಳಲಾರರು" ಎಂಬುದಾಗಿ ಕಥಾನಾಯಕಿಯು ತನ್ನೆದುರು ನಿಂತಿರುವ ಖಳನಾಯಕನಿಗೆ ಹೇಳುವ ಮಾತಿದು. ಬಾಲಿವುಡ್ ಸಿನಿಮಾಗಳು ಪಾಕಿಸ್ತಾನದಲ್ಲೂ ಜನಪ್ರಿಯವೇ, ಈ ಸಿನಿಮಾವನ್ನು ನೀವೂ ನೋಡಿ ರುತ್ತೀರಿ ಎಂದು ಭಾವಿಸುವೆ...

ಇದನ್ನೂ ಓದಿ: Yagati Raghu Naadig Column: ಕದನ ಕುತೂಹಲ ಕಥನ

ಎಂಥಾ ವಿಚಿತ್ರ! ಮೇಲಿನ ದೃಶ್ಯವನ್ನೇ ಮರುರೂಪಿಸುವುದಾದರೆ, ‘ಓಂ ಶಾಂತಿ ಓಂ’ ಮಂತ್ರವನ್ನೇ ಅನುಗಾಲವೂ ಅನುಕ್ಷಣವೂ ಪಠಿಸುತ್ತಾ ಬಂದಿರುವ ಭರತಭೂಮಿಯೆಂಬ ಭವ್ಯನಾಡಿಗೆ, ಅದರ ಒಡಲನ್ನು ತರಿದುಕೊಂಡು ಹುಟ್ಟಿದ್ದ ಪಾಕಿಸ್ತಾನ ಎಂಬ ನಿಮ್ಮ ಪರಮಪಾತಕ ದೇಶವೇ ಮಗ್ಗುಲ ಮುಳ್ಳು ಆದಂತೆಯೇ, ಪಹಲ್ಗಾಮ್‌ನಲ್ಲಿ ಪತಿಯೊಂದಿಗೆ ವಿಹರಿಸಲು ಬಂದಿದ್ದ ಅಮಾಯಕ ಭಾರತೀಯ ನಾರಿಯರ ಪಾಲಿಗೆ ನೀವು ಖಳನಾಯಕರಾಗಿ ಬಿಟ್ಟಿರಿ. ನೀವು ಪೋಷಿಸಿದ ಉಗ್ರರು, ಆ ಮಹಿಳೆಯರ ಕಣ್ಣೆದುರೇ ಅವರ ಪತಿದೇವರನ್ನು ಹತ್ಯೆಗೈದು ಅವರ ‘ಸಿಂದೂರ’ಭಾಗ್ಯವನ್ನು ಕಸಿದುಕೊಳ್ಳುವುದಕ್ಕೆ ನೀವು ಕಾರಣರಾಗಿಬಿಟ್ಟಿರಿ. ಹೀಗಾಗಿ, ಅಂದಿನ ಹತ್ಯಾ ಕಾಂಡದ ಸಂತ್ರಸ್ತ ಮಹಿಳೆಯರು ಮಾತ್ರವಲ್ಲದೆ, ಒಂದಿಡೀ ಭಾರತದ ಮಹಿಳೆಯರು ನಿಮ್ಮನ್ನು ಈಗ ಕೇಳುತ್ತಿದ್ದಾರೆ- “ಏಕ್ ಚುಟ್ಕೀ ‘ಸಿಂದೂರ್’ ಕೀ ಕೀಮತ್ ತುಮ್ ಕ್ಯಾ ಜಾನೋ ‘ಅಸಿಮ್ ಮುನೀರ್’ ಬಾಬು?" ಅಂತ. ಈ ಪ್ರಶ್ನೆಗೆ ಉತ್ತರಿಸುವ ಜ್ಞಾನ ವಾಗಲೀ, ತಾಕತ್ತಾಗಲೀ ನಿಮಗಿದೆಯಾ? ಹುಲಿಯಂತೆ ಬೊಬ್ಬಿಟ್ಟು ಇಲಿಯಂತೆ ಬಂಕರ್‌ನಲ್ಲಿ ಅಡಗಿ ಕುಳಿತುಕೊಳ್ಳುವ ನಿಮಗೆಲ್ಲಿಂದ ಬರಬೇಕು ಅಂಥ ಶಕ್ತಿ...!!

ಮುನೀರ್, ನಿಮಗೆ ನೆನಪಿದೆಯಾ? ನಿಮ್ಮವರ ಚಿತಾವಣೆಯಿಂದಾಗಿ ಕಾಲಾನುಕಾಲಕ್ಕೆ ಭಾರತದ ಗಡಿಭಾಗದಲ್ಲಿ ಒಂದಿಷ್ಟು ಘರ್ಷಣೆಗಳು, ಉಗ್ರರ ಒಳನುಸುಳಿಕೆಗಳು, ವಿಧ್ವಂಸಕ ಕೃತ್ಯಗಳು ನಡೆಯುತ್ತಿದ್ದುದುಂಟು ಮತ್ತು ಅದಕ್ಕೆ ಯಥೋಚಿತ ರೀತಿಯಲ್ಲಿ ಭಾರತವೂ ತಿರುಗೇಟು-ತಪರಾಕಿ ನೀಡಿದ್ದುಂಟು. ಆದರೆ, ಇತ್ತೀಚೆಗೆ ಪಹಲ್ಗಾಮ್‌ನಲ್ಲಿ ನಿಮ್ಮ ಉಗ್ರರು ಬರೋಬ್ಬರಿ 26 ಮಂದಿಯ ಮಾರಣಹೋಮ ನಡೆಸಿ, ಹೆಂಗೆಳೆಯರ ‘ಸಿಂದೂರ’ ಅಳಿಸಿದರಲ್ಲಾ? ಅದಕ್ಕೆ ಕುಮ್ಮಕ್ಕು ನೀಡಿದ್ದು ಯಾವುದು ಗೊತ್ತೇ? ನೀವಾಡಿದ ತುಟಿಮೀರಿದ ಮಾತುಗಳು...

72 ok

ಹೌದು, ಒಮ್ಮೆ ನೆನಪಿಸಿಕೊಳ್ಳಿ... ನೆನಪಾಗುತ್ತಿಲ್ಲವೇ? ಅದೂ ನಿಜವೇ! ನಿಮಗೆ ಜೀರ್ಣಶಕ್ತಿ ಜಾಸ್ತಿ, ಜ್ಞಾಪಕಶಕ್ತಿ ಕಮ್ಮಿ... ನಾನೇ ನೆನಪಿಸಿಬಿಡುತ್ತೇನೆ! ಪಹಲ್ಗಾಮ್ ದಾಳಿಗೂ ಸ್ವಲ್ಪ ಮೊದಲು ನಿಮ್ಮ ನೆಲದಲ್ಲಿ ನಿಂತು ನೀವು ಮಾಡಿದ ಪ್ರಚೋದನ ಕಾರಿ ಭಾಷಣದಲ್ಲಿ, “ಕಾಶ್ಮೀರವು ಪಾಕಿಸ್ತಾನದ ಕತ್ತಿನ ರಕ್ತನಾಳ" ಎಂದು ಬಡಬಡಿಸಿ ಬಿಟ್ಟಿರಿ. ಮುಸ್ಲಿಮರು ಮತ್ತು ಹಿಂದೂಗಳ ನಡುವಿನ ಧಾರ್ಮಿಕ-ಸಾಂಸ್ಕೃತಿಕ ವ್ಯತ್ಯಾಸಗಳನ್ನು ಒತ್ತಿ ಹೇಳಿ ‘ದ್ವಿರಾಷ್ಟ್ರ ಸಿದ್ಧಾಂತ’ವನ್ನು ಪುನರುಚ್ಚರಿಸಿ ದಿರಿ. ಉಗ್ರಗಾಮಿ ಗುಂಪುಗಳು ತಮ್ಮ ಹೇಯಕೃತ್ಯವನ್ನು ನಡೆಸಲು ನಿಮ್ಮೀ ಹೇಳಿಕೆಯೇ ‘ನಾಯಿ ಶಿಳ್ಳೆ’ಯಂತೆ ಸಂಜ್ಞೆ ಮಾಡಿಬಿಟ್ಟಿತು.ನಿಮ್ಮ ಈ ಪ್ರಚೋದನಕಾರಿ ಮಾತು, ನಿಮಗಿಂತಲೂ ಸಾಕಷ್ಟು ವರ್ಷ ಮೊದಲೇ ಪಾಕಿಸ್ತಾನದಲ್ಲಿ ಅಬ್ಬರಿಸಿ ಅಸ್ತಿತ್ವವನ್ನೇ ಕಳೆದುಕೊಂಡ, ನಿಮ್ಮ ರೀತಿಯಲ್ಲೇ ‘ಭಾರತ-ವಿರೋಧಿ’ ಚಿತ್ತಸ್ಥಿತಿಯನ್ನು ಹೊಂದಿದ್ದ ‘ಜಿಯಾ-ಉಲ್-ಹಕ್’ ಎಂಬ ಸೇನಾಧಿಕಾರಿಯ ಮಾತುಗಳನ್ನೇ ನೆನಪಿಸುವಂತಿತ್ತು. ಕಾಶ್ಮೀರ ಕಣಿವೆಯಲ್ಲಿ ಮೈಚೆಲ್ಲಿಕೊಂಡಿರುವ ನಿಮ್ಮ ಉಗ್ರರಿಗೆ ಆ ಮಾತುಗಳು ಪರೋಕ್ಷ ಸೂಚನೆ ಯಂತೆ ರವಾನೆಯಾಗಿ, ಹಿಂಸಾಚಾರ ಎಸಗಲು ವೇಗವರ್ಧಕ ವಾಗಿ ಪರಿಣಮಿಸಿಬಿಟ್ಟವು. ಕಾಶ್ಮೀರದ ಕೇಸರ ಪುಷ್ಪಗಳ ‘ಸುಗಂಧ’ಭರಿತ ಗಾಳಿಯ ಬದಲಿಗೆ ಮದ್ದು-ಗುಂಡುಗಳ ‘ಗಂಧಕ’ದ ಗಾಳಿಯನ್ನೇ ಉಸಿರಾಡುವ ಆ ಉಗ್ರರು ಪೈಶಾಚಿಕ ಕೃತ್ಯವನ್ನು ಮೆರೆದೇಬಿಟ್ಟರು... ಈ ಹತ್ಯಾ ಕಾಂಡದ ನಂತರವಾದರೂ ನಿಮ್ಮ ನರವಿಲ್ಲದ ನಾಲಿಗೆ ಸುಮ್ಮನಿರ ಲಿಲ್ಲ. “ಪಹಲ್ಗಾಮ್ ಹತ್ಯಾ ಕಾಂಡದ ನಂತರ ಭಾರತ ನಡೆಸುವ ಯಾವುದೇ ಸೇನಾ ಕಾರ್ಯಾ ಚರಣೆಗೆ ಅಷ್ಟೇ ಕ್ಷಿಪ್ರವಾಗಿ ಮತ್ತು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡುತ್ತೇವೆ" ಎನ್ನುವ ಮೂಲಕ ಭಾರತೀಯ ಸೇನಾ ವ್ಯವಸ್ಥೆಯ ಸ್ವಾಭಿಮಾನವನ್ನೇ ನೀವು ಕೆಣಕಿ ಬಿಟ್ಟಿರಿ. ಇನ್ನು, ನಿಮ್ಮ ದೇಶದ ಮತ್ತೊಬ್ಬ ತಥಾಕಥಿತ ಸೇನಾವೀರನಂತೂ, “ನಾವು ಪರಮಾಣು ಬಾಂಬ್ ಅನ್ನು ಇಟ್ಟುಕೊಂಡಿರು ವುದು ಪ್ರದರ್ಶನಕ್ಕಲ್ಲ, ಭಾರತದ ಮೇಲೆ ಪ್ರಯೋಗಿಸಲಿಕ್ಕೆ.." ಎಂದು ಉತ್ತರಕುಮಾರನ ಪೌರುಷ ವನ್ನು ತೋರಿಬಿಟ್ಟರು. ಈ ಮಾತನ್ನು ಕೇಳಿಸಿಕೊಂಡ ಭಾರತೀಯರಿಗೆ “ನವಿಲನ್ನು ನೋಡಿ ಕೆಂಭೂತ ತನ್ನ ಪುಕ್ಕವನ್ನು ತರಿದುಕೊಂಡಿತಂತೆ!" ಎಂಬ ಜಾಣನುಡಿ ನೆನಪಾಗಿದ್ದು ಸುಳ್ಳಲ್ಲ...

ಅಂದು ಪಹಲ್ಗಾಮ್‌ನಲ್ಲಿ ತನ್ನ ಕಣ್ಣೆದುರೇ ಪತಿಯನ್ನು ಕೊಂದ ಉಗ್ರನೊಬ್ಬನಿಗೆ ಪತ್ನಿಯು, “ನಮ್ಮನ್ನೇಕೆ ಉಳಿಸಿದೆ? ನನ್ನನ್ನೂ ನನ್ನ ಮಗನನ್ನೂ ಕೊಂದುಬಿಡು" ಎಂದಿದ್ದಕ್ಕೆ ಆ ಪರಮ ಪಾತಕಿ ಉಗ್ರ, “ನೀನು ಹೋಗಿ ಇದನ್ನು ನಿಮ್ಮ ಪ್ರಧಾನಿ ಮೋದಿ ಯವರಿಗೆ ಹೇಳಲಿ ಎಂದೇ ನಿನ್ನನ್ನು ಉಳಿಸಿದ್ದೇನೆ" ಎಂಬ ದುರಹಂಕಾರದ ಮಾತಾಡಿದ. ‘ಸಿಂದೂರ’ ಕಳೆದುಕೊಂಡ ಆ ಸಂತ್ರಸ್ತೆಯ ಅಳಲು ಅರಣ್ಯರೋದನವಾಗದೆ, ಮೋದಿಯವರನ್ನೂ ತಲುಪಿತು. ಭಾರತೀಯ ಮಹಿಳೆಯರ ‘ಸಿಂದೂರ’ವನ್ನು ಅಳಿಸಿದವರನ್ನೇ ಅಳಿಸಿ ಹಾಕುವ ಕಾರ್ಯಾಚರಣೆಗೆ ಮೋದಿ ಯವರು ಕಂಕಣತೊಟ್ಟು ಸ್ವತಃ ಅದಕ್ಕೆ ‘ಆಪರೇಷನ್ ಸಿಂದೂರ’ ಎಂದೇ ಹೆಸರಿಟ್ಟರು. ಸೇನೆ ಯವರು ವ್ಯೂಹಾತ್ಮಕ ಕಾರ್ಯತಂತ್ರವನ್ನು ಹೆಣೆದೇ ಬಿಟ್ಟರು. ಮುಂದಿನದ್ದು ನಿಮಗೆ ಗೊತ್ತೇ ಇದೆ ಅಸಿಮ್ ಮುನೀರ್‌ಜೀ....

ಭಾರತವನ್ನು ಕೆಣಕಿದ್ದಕ್ಕೆ ಆದ ಗಾಯಗಳನ್ನು ನೆಕ್ಕಿಕೊಳ್ಳುತ್ತಾ ಬಂಕರ್‌ನಲ್ಲಿ ಅಡಗಿ ಕುಳಿತಿರುವ ನೀವು ಒಂದೊಮ್ಮೆ ಅಲ್ಲಿ ಟಿವಿ ವ್ಯವಸ್ಥೆ ಇದ್ದರೆ, ನಿಮ್ಮ ಒಂದು ಕೊಬ್ಬಿನ ಮಾತಿನಿಂದ ಪಾಕಿ ಸ್ತಾನಕ್ಕೆ ಎಂಥ ದುರವಸ್ಥೆಯನ್ನು ತಂದಿಟ್ಟಿದ್ದೀರಿ ಎಂಬುದರ ದೃಶ್ಯಾವಳಿಯನ್ನು ಈಗಾಗಲೇ ನೋಡಿರುತ್ತೀರಿ... ಆದರೂ ಮತ್ತೊಮ್ಮೆ ಹೇಳುತ್ತೇನೆ ಕೇಳಿ. ನಿಮ್ಮ ಪಾಕಿಸ್ತಾನದ ಹೆಮ್ಮೆಯೆನಿಸಿದ್ದ ರಾವಲ್ಪಿಂಡಿ, ಲಾಹೋರ್ ಸೇರಿದಂತೆ ಸಾಕಷ್ಟು ನಗರಗಳಿಗೆ ಭಾರತೀಯ ಸೇನಾಯೋಧರು ನುಗ್ಗಿ ನುಗ್ಗಿ ಹೊಡೆದಿದ್ದಾರೆ, ನಿಮ್ಮ ಯುದ್ಧ ವಿಮಾನಗಳನ್ನು, ಡ್ರೋನ್ ಎಂಬ ಆಟಿಕೆಗಳನ್ನು ಪುಡಿ ಗಟ್ಟಿದ್ದಾರೆ, ಕಟ್ಟಡಗಳನ್ನು ಧ್ವಂಸ ಮಾಡಿದ್ದಾರೆ. ತನ್ನ ಜನರಿಗೆ ಪಡಿತರ ಗೋಧಿ ಹಿಟ್ಟನ್ನೂ ಹಂಚಲಾಗದೆ ಜಗತ್ತಿನೆದುರು ಭಿಕ್ಷಾಪಾತ್ರೆ ಹಿಡಿದು ನಿಂತಿರುವ, ಆರ್ಥಿಕ ಕುಸಿತವನ್ನು ಭರಿಸಲಾಗದೆ ಕತ್ತೆಗಳನ್ನು ವಿದೇಶಗಳಿಗೆ ರಫ್ತು ಮಾಡಿ ಚಿಲ್ಲರೆ ಕಾಸು ಒಟ್ಟು ಮಾಡಬೇಕಾಗಿ ಬಂದಿರುವ ಪಾಕಿಸ್ತಾನ ಎಂಬ ನಿಮ್ಮ ನೆಲ ಈಗ, ನಿಮ್ಮ ಒಡಕು ಬಾಯಿಯಿಂದಾಗಿ ಧರಾಶಾಯಿಯಾಗಿದೆ. ಅದು ಧೂಳಿನಿಂದ ಮತ್ತೆ ಮೇಲಕ್ಕೇಳಲು ತಪಸ್ಸನ್ನೇ ಮಾಡಬೇಕಾಗಿ ಬಂದಿದೆ... ಭಾರತದ ವಿರುದ್ಧ ಕತ್ತಿ ಮಸೆಯುತ್ತಲೇ ಬಂದಿರುವ ಉಗ್ರವಾದಿ ಅಜರ್ ಮಸೂದ್‌ನ ಕುಟುಂಬದ 10 ಜನ ಸದಸ್ಯರು, 4 ಮಂದಿ ಆಪ್ತರು ನಾಶವಾಗಿದ್ದಾರೆ... ಸೇನಾ ಮುಖ್ಯ ಸ್ಥರ ಸ್ಥಾನದಿಂದ ನಿಮ್ಮನ್ನು ಕಿತ್ತೊಗೆಯಬೇಕು ಅಂತ ಪಾಕಿಸ್ತಾನದಲ್ಲೇ ಜನದನಿ ತಾರಕಕ್ಕೇರಿದೆ. ನಿಮ್ಮ ಪರಮೋಚ್ಚ ಜನನಾಯಕ ಶೆಹಬಾಜ್ ಷರೀಫ್‌ ಗೂ ಇದೇ ಗತಿಯಾದರೆ ಅಚ್ಚರಿಯಿಲ್ಲ..! ‘ಒಂದು ಚಿಟಿಕೆ ಸಿಂದೂರ’ದ ಕಿಮ್ಮತ್ತೇನು ಎಂಬುದು ನಿಮಗೀಗ ಅರ್ಥವಾಗಿರಬೇಕಲ್ಲವೇ ಮುನೀರ್ ಜನಾಬ್...?!!

ನಿಮ್ಮ ದ್ವೇಷ ಭಾಷಣದಲ್ಲಿ ಒಂದು ಕಡೆ ಹಿಂದೂಗಳ ಜೀವನ ಕ್ರಮ, ಧಾರ್ಮಿಕ-ಸಾಂಸ್ಕೃತಿಕ ಮಗ್ಗುಲುಗಳ ಬಗ್ಗೆ ಏನೇನೋ ವಟಗುಟ್ಟಿದಿರಿ ಅಲ್ಲವೇ? ನಿಮಗೆ ಗೊತ್ತಿರದ (ಅಥವಾ ಗೊತ್ತಿದ್ದೂ ಗೊತ್ತಿಲ್ಲದಂತೆ ನಟಿಸುತ್ತಿರುವ!) ಒಂದಷ್ಟು ಅಂಶಗಳನ್ನು ಹೇಳುತ್ತೇನೆ, ಗಮನವಿಟ್ಟು ಕೇಳಿಸಿಕೊಳ್ಳಿ. ನಮ್ಮದು ಹಿಂದೂ ಬಾಹುಳ್ಯದ ರಾಷ್ಟ್ರವಾದರೂ, ಪರಧರ್ಮಗಳ ಜತೆಗಿನ ಸೋದರತ್ವ ಮತ್ತು ಸೌಹಾರ್ದ ಭಾವನೆಗಳಿಗೆ ನಮ್ಮಲ್ಲೇನೂ ಕುಂದು ಉಂಟಾಗಿಲ್ಲ. ನಿಮ್ಮಂಥ ಮತಾಂಧರು ಯಾರನ್ನು/ ಯಾವ ರಾಜಕೀಯ ಪಕ್ಷವನ್ನು ಬಾಯಿಗೆ ಬಂದಂತೆ ಟೀಕಿಸುತ್ತೀರೋ ಅವರ ಕಾಲ ಘಟ್ಟ ದಲ್ಲಿಯೇ ಎ.ಪಿ.ಜೆ. ಅಬ್ದುಲ್ ಕಲಾಂರಂಥ ಮಹಾನ್ ಸಾಧಕರನ್ನು ಅವರ ‘ಜಾತಿ-ಧರ್ಮ-ಭಾಷೆ-ಬಣ್ಣ’ ಯಾವುದೆಂಬುದನ್ನೂ ಲೆಕ್ಕಿಸದೆ ದೇಶದ ರಾಷ್ಟ್ರಪತಿಯಂಥ ಪರಮೋಚ್ಚ ಸ್ಥಾನದಲ್ಲಿ ಕೂರಿಸಿದ ಉದಾತ್ತ ನಡೆ ಹಿಂದೂಗಳದ್ದು. ದೇಶದ ಜನಸಂಖ್ಯೆಯಲ್ಲಿ ಅಬ್ಬಬ್ಬಾ ಎಂದರೆ ಶೇ.1.75 ರಷ್ಟು ಇರಬಹುದಾದ ಸಿಖ್ ಸಮುದಾಯಕ್ಕೆ ಸೇರಿದ ಡಾ.ಮನಮೋಹನ್ ಸಿಂಗ್‌ರನ್ನು ಸಾಕಷ್ಟು ಹಿಂದೆಯೇ ಪ್ರಧಾನಿ ಗದ್ದುಗೆಯಲ್ಲಿ ಪ್ರತಿಷ್ಠಾ ಪಿಸಿದ ಮಹಾನ್ ದೇಶ ಭಾರತ ಎಂಬುದನ್ನು ಮರೆಯದಿರಿ...

ಮುನೀರ್ ಅವರೇ, ಹಿಂದೂಸ್ತಾನದ ಮಹತ್ತೇನು, ಹಿಂದೂಗಳ ತಾಕತ್ತೇನು ಎಂಬುದನ್ನು ನಿಮಗೆ ವಿವರಿಸಲು ಹೊರಟರೆ ಸಮಯ ಸಾಕಾಗದು, ಬರೆದು ತಿಳಿಸಲು ಹೊರಟರೆ ಪುಟಗಳು ಸಾಲವು. ಭಾರತೀಯ ಮಹಿಳೆಯರು ಧರಿಸುವ ‘ಸಿಂದೂರ’ಕ್ಕೆ ಇರುವ ತಾಕತ್ತನ್ನು ನಿಮಗೆ ಮನವರಿಕೆ ಮಾಡಿಕೊಡಲು ಈ ಪತ್ರದ ಆರಂಭದಲ್ಲಿ ಶಾರುಖ್ ಖಾನ್ ಅಭಿನಯದ ‘ಓಂ ಶಾಂತಿ ಓಂ’ ಚಲನಚಿತ್ರದ ‘ಏಕ್ ಚುಟ್ಕೀ ಸಿಂದೂರ್...’ ಸಂಭಾ ಷಣೆಯನ್ನು ಉಲ್ಲೇಖಿಸಿರುವೆ. ಈಗ, ಹಿಂದೂ ಸ್ತಾನದ ಮತ್ತು ಹಿಂದೂಗಳ ಒಂದಿಡೀ ಅಸ್ತಿತ್ವದಲ್ಲಿ ಸ್ಥಾಯಿಯಾಗಿರುವ ಸೌಹಾರ್ದ ಭಾವವನ್ನು ನಿಮಗೆ ಅರ್ಥಮಾಡಿಸಲು ಮತ್ತದೇ ಶಾರುಖ್ ಖಾನ್ ಅಭಿನಯದ (ಮತ್ತು ಭಾರತದ ಓರ್ವ ಹಿಂದೂ ಸೇನಾಧಿಕಾರಿ ಮತ್ತು ಪಾಕಿಸ್ತಾನದ ಹುಡುಗಿಯೊಬ್ಬಳ ನಡುವೆ ಪ್ರೇಮಾಂಕುರ ವಾಗುವ ಕಥಾನಕವನ್ನು ಒಳಗೊಂಡಿರುವ) ‘ವೀರ್ ಝಾರಾ’ ಚಲನಚಿತ್ರದ ಈ ಹಾಡಿನ ಸಾಲು ಗಳನ್ನು ನಿಮ್ಮ ಮುಂದೆ ಮತ್ತೊಮ್ಮೆ ಹರವಿಡುತ್ತಿರುವೆ. ಕೊಂಚ ಸಮಯ ಮಾಡಿಕೊಂಡು ಅದನ್ನು ನೀವು ಓದಿಕೊಂಡಿದ್ದೇ ಆದಲ್ಲಿ, ಭಾರತೀಯ ಮಹಿಳೆ ಯರ ‘ಸಿಂದೂರ’ದ ತಂಟೆಗೆ ಹೋಗುವ, ಭಾರತದ ಶಾಂತಿ-ನೆಮ್ಮದಿಗಳಿಗೆ ಸಂಚಕಾರ ತರುವ ದುಸ್ಸಾಹಸವನ್ನು ನೀವು ಮುಂದೆಂದೂ ಮಾಡಲಾರಿರಿ.

ಮುನೀರ್‌ಜೀ, ಓದಿ ಅರ್ಥಮಾಡಿಕೊಳ್ಳಿ ಈ ಸಾಲುಗಳನ್ನು: “ಧರತೀ ಸುನಹರೀ ಅಂಬರ್ ನೀಲಾ ಹರ್ ಮೌಸಮ್ ರಂಗೀಲಾ, ಐಸಾ ದೇಸ್ ಹೈ ಮೇರಾ...| ಬೋಲೆ ಪಪೀಹಾ ಕೋಯಲ್ ಗಾಯೆ, ಸಾವನ್ ಘಿರ್-ಘಿರ್ ಆಯೆ, ಐಸಾ ದೇಸ್ ಹೈ ಮೇರಾ | ಮೇರೆ ದೇಸ್ ಮೆ ಮೆಹಮಾನೋಂ ಕೋ ಭಗವಾನ್ ಕಹಾ ಜಾತಾ ಹೈ, ವೋ ಯಹೀ ಕಾ ಹೋ ಜಾತಾ ಹೈ, ಜೋ ಕಹೀ ಸೇ ಭೀ ಆತಾ ಹೈ...||"

ಯಗಟಿ ರಘು ನಾಡಿಗ್

View all posts by this author