ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸರ್ಕಾರದ ಪ್ರೋತ್ಸಾಹಧನ ತಿರಸ್ಕರಿಸಿದ ರಾಜ್ಯದ ಖೋ ಖೋ ಪಟುಗಳು

ಲೋಕೇಶ್ವರ್‌ ಕೂಡ ಕ್ರೀಡಾಪಟುಗಳಿಗೆ ಬೆಂಬಲ ಸೂಚಿಸಿ, 'ಖೋ ಖೋ ಆಟಗಾರರ ಸಾಧನೆ ಪರಿಗಣಿಸಿ ಸರ್ಕಾರ ಸೂಕ್ತ ಪ್ರೋತ್ಸಾಹಧನ ತಕ್ಷಣ ಪ್ರಕಟಿಸಬೇಕು. ಇಲ್ಲದಿದ್ದರೆ ಅವರಿಗಾಗಿ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯದ ಕೊಕ್ಕೊ ಆಟಗಾರರನ್ನು ಒಟ್ಟು ಸೇರಿಸಿ ಭಿಕ್ಷಾಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.

M K Gautham-Chaitra B

ಬೆಂಗಳೂರು: ಖೋ ಖೋ ವಿಶ್ವಕಪ್‌ ಗೆದ್ದ ಭಾರತೀಯ ತಂಡಗಳ ಸದಸ್ಯರಾಗಿದ್ದ ಬೆಂಗಳೂರಿನ ಎಂ.ಕೆ. ಗೌತಮ್‌ ಹಾಗೂ ಮೈಸೂರಿನ ಬಿ.ಚೈತ್ರಾ ಅವರಿಗೆ ರಾಜ್ಯ ಸರ್ಕಾರ ತಲಾ 5 ಲಕ್ಷ ಪ್ರೋತ್ಸಾಹಧನ ಘೋಷಿಸಿತ್ತು. ಆದರೆ, ಈ ಬಹುಮಾನವನ್ನು ಉಭಯ ಕ್ರೀಡಾಪಟುಗಳು ತಿರಸ್ಕರಿಸುವುದಾಗಿ ಹೇಳಿದ್ದಾರೆ. ಇದೇ ವೇಳೆ ರಾಜ್ಯ ಖೋ ಖೋ(Kho Kho) ಸಂಸ್ಥೆಯ ಅಧ್ಯಕ್ಷ ಲೋಕೇಶ್ವರ್‌ ಕೂಡ ರಾಜ್ಯದ ಕ್ರೀಡಾಪಡುಗಳ ಸಾಧನೆಯನ್ನು ಸರ್ಕಾರ ಅವಮಾನಿಸಿದೆ ಎಂದು ಆರೋಪಿಸಿದ್ದಾರೆ.

ಶನಿವಾರ ನಡೆದಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗೌತಮ್‌ ಮತ್ತು ಚೈತ್ರಾ , ರಾಜ್ಯ ಸರ್ಕಾರವು ನಮ್ಮನ್ನು ನಡೆಸಿಕೊಂಡ ರೀತಿಯಿಂದ ತುಂಬಾ ನೋವಾಗಿದೆ. ಈಗ ಪ್ರಕಟಿಸಿರುವ 5 ಲಕ್ಷ ಪ್ರೋತ್ಸಾಹಧನವನ್ನು ತಿರಸ್ಕರಿಸಿದ್ದೇವೆ.

ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿ ಬೇರೆ ರಾಜ್ಯದ ಆಟಗಾರರಿಗೆ ದೊಡ್ಡ ಮೊತ್ತದ ಬಹುಮಾನ ಘೋಷಿಸುವ ಜತೆಗೆ 'ಎ' ದರ್ಜೆಯ ಸರ್ಕಾರಿ ಹುದ್ದೆಯ ಭರವಸೆ ನೀಡಲಾಗಿದೆ. ನಮಗೆ ಆ ರೀತಿಯ ಯಾವ ಸೌಲಭ್ಯ ಕೊಡದೆ ಇರುವುದು ಬೇಸರ ತಂದಿದೆ ಎಂದು ಹೇಳಿದರು.

ಲೋಕೇಶ್ವರ್‌ ಕೂಡ ಕ್ರೀಡಾಪಟುಗಳಿಗೆ ಬೆಂಬಲ ಸೂಚಿಸಿ, 'ಖೋ ಖೋ ಆಟಗಾರರ ಸಾಧನೆ ಪರಿಗಣಿಸಿ ಸರ್ಕಾರ ಸೂಕ್ತ ಪ್ರೋತ್ಸಾಹಧನ ತಕ್ಷಣ ಪ್ರಕಟಿಸಬೇಕು. ಇಲ್ಲದಿದ್ದರೆ ಅವರಿಗಾಗಿ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯದ ಕೊಕ್ಕೊ ಆಟಗಾರರನ್ನು ಒಟ್ಟು ಸೇರಿಸಿ ಭಿಕ್ಷಾಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಇದನ್ನೂ ಓದಿ ODI tri-series: ತ್ರಿಕೋನ ಸರಣಿ ಬಳಿಕ ಚಾಂಪಿಯನ್ಸ್‌ ಟ್ರೋಫಿಗೆ ಪಾಕ್‌ ತಂಡ ಪ್ರಕಟ

ಲೋಕೇಶ್ವರ್‌ ಮಾಡಿರುವ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾದುದು ಎಂದು ಕರ್ನಾಟಕ ಒಲಿಂಪಿಕ್‌ ಸಂಸ್ಥೆ ಅಧ್ಯಕ್ಷ ಕೆ.ಗೋವಿಂದರಾಜ್‌ ಹೇಳಿದ್ದಾರೆ. ಕರ್ನಾಟಕ ಒಲಿಂಪಿಕ್‌ ಸಂಸ್ಥೆಯ ಮಾನ್ಯತೆ ಹೊಂದಿರುವ ಸಂಸ್ಥೆಗಳಿಗೆ ಸರ್ಕಾರ ಅನುದಾನ ನೀಡಿದೆ. ಲೋಕೇಶ್ವರ್ ಅವರ ಸಂಸ್ಥೆಯು ಈ ತನಕ ಅನುದಾನ ಕೋರಿ ಅರ್ಜಿಯೇ ಸಲ್ಲಿಸಿಲ್ಲ ಎಂದು ಹೇಳಿದ್ದಾರೆ.