ODI tri-series: ತ್ರಿಕೋನ ಸರಣಿ ಬಳಿಕ ಚಾಂಪಿಯನ್ಸ್ ಟ್ರೋಫಿಗೆ ಪಾಕ್ ತಂಡ ಪ್ರಕಟ
19 ದಿನಗಳ ಕಾಲ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ. ಫೆಬ್ರವರಿ 19ರಂದು ಹಾಲಿ ಚಾಂಪಿಯನ್ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಕರಾಚಿಯಲ್ಲಿ ಉದ್ಘಾಟನಾ ಪಂದ್ಯ ಆಡುವ ಮೂಲಕ ಪಂದ್ಯಾವಳಿಗೆ ಚಾಲನೆ ಸಿಗಲಿದೆ.
ಲಾಹೋರ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಆತಿಥೇಯ ಪಾಕಿಸ್ತಾನ ಇನ್ನೂ ತಂಡವನ್ನು ಪ್ರಕಟಿಸಿಲ್ಲ. ಆದರೆ, ಲಾಹೋರ್ ಮತ್ತು ಕರಾಚಿಯಲ್ಲಿ ತ್ರಿಕೋನ ಏಕದಿನ ಸರಣಿಯೊಂದನ್ನು ಆಡಲು ಪಾಕ್ ನಿರ್ಧರಿಸಿದೆ. ನ್ಯೂಜಿಲೆಂಡ್ ಮತ್ತು ದ.ಆಫ್ರಿಕಾ ತಂಡಗಳ ವಿರುದ್ಧ ಪಾಕಿಸ್ತಾನ ಆಡಲಿಳಿಯಲಿದೆ. ಈ ಸರಣಿ ಬಳಿಕ ತಂಡವನ್ನು ಪ್ರಕಟಿಸುವ ಯೋಜನೆ ಪಾಕ್‌ನದ್ದು.
ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನ ದಿಢೀರ್ ಆಗಿ ತ್ರಿಕೋನ ಏಕದಿನ ಸರಣಿಯನ್ನಾಡಲು ಕೂಡ ಒಂದು ಕಾರಣವಿದೆ. ಹೌದು ಕೆಲ ದಿನಗಳಿಂದ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗಳು ನಡೆಯುವ ಪಾಕ್‌ನ ಮೂರು ಮೈದಾನಗಳಲ್ಲಿ ಲಾಹೋರ್ ಮತ್ತು ಕರಾಚಿ ಕ್ರೀಡಾಂಗಣಗಳು ಇನ್ನೂ ಸಜ್ಜಾಗಿಲ್ಲ, ಹೀಗಾಗಿ ಪಂದ್ಯಗಳನ್ನು ಸಂಪೂರ್ಣವಾಗಿ ದುಬೈಗೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ ಕ್ರೀಡಾಂಗಣ ಸಜ್ಜಾಗಿದೆ ಎಂದು ಜಗಜ್ಜಾಹೀರಾಗಲು ಪಾಕ್ ಈ ತಂತ್ರವನ್ನು ರೂಪಿಸಿದಂತಿದೆ. ಫೈನಲ್ ಸೇರಿದಂತೆ ನಾಲ್ಕು ಪಂದ್ಯಗಳ ಈ ಸರಣಿ ಫೆ.8ರಿಂದ 14ರ ತನಕ ನಡೆಯಲಿದೆ.
ಇದನ್ನೂ ಓದಿ ICC ವರ್ಷದ ಏಕದಿನ ತಂಡ ಪ್ರಕಟ; ಭಾರತೀಯರಿಗಿಲ್ಲ ಸ್ಥಾನ
ಚಾಂಪಿಯನ್ಸ್ ಟ್ರೋಫಿ ಯಾವಾಗ?
19 ದಿನಗಳ ಕಾಲ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ. ಫೆಬ್ರವರಿ 19ರಂದು ಹಾಲಿ ಚಾಂಪಿಯನ್ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಕರಾಚಿಯಲ್ಲಿ ಉದ್ಘಾಟನಾ ಪಂದ್ಯ ಆಡುವ ಮೂಲಕ ಪಂದ್ಯಾವಳಿಗೆ ಚಾಲನೆ ಸಿಗಲಿದೆ.
ಭಾರತ ಒಳಗೊಂಡ 3 ಲೀಗ್ ಪಂದ್ಯಗಳು ಮತ್ತು ಒಂದು ಸೆಮಿಫೈನಲ್ ಪಂದ್ಯ ದುಬೈನಲ್ಲಿ ನಿಗದಿಯಾಗಿದೆ. ಟೂರ್ನಿಯ ಉಳಿದ 9 ಲೀಗ್ ಮತ್ತು ಇನ್ನೊಂದು ಸೆಮಿಫೈನಲ್ ಪಂದ್ಯ ಪಾಕಿಸ್ತಾನದ ಕರಾಚಿ, ರಾವಲ್ಪಿಂಡಿ ಮತ್ತು ಲಾಹೋರ್ನಲ್ಲಿ ನಿಗದಿಯಾಗಿವೆ. 2ನೇ ಸೆಮಿಫೈನಲ್ ಮಾರ್ಚ್ 2ರಂದು ಲಾಹೋರ್ನಲ್ಲಿ ನಿಗದಿಯಾಗಿದೆ. ಟೂರ್ನಿಯಲ್ಲಿ ಆಡುವ 8 ತಂಡಗಳನ್ನು ತಲಾ 4ರಂತೆ 2 ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ರೌಂಡ್ ರಾಬಿನ್ ಲೀಗ್ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್ಗೇರಲಿವೆ.