Sheikh Hasina: 25 ನಿಮಿಷ ತಡವಾಗಿರ್ತಿದ್ರೆ ನನ್ನ ಹಾಗೂ ಸಹೋದರಿಯ ಜೀವ ಉಳಿಯುತ್ತಿರಲಿಲ್ಲ; ಬಾಂಗ್ಲಾದ ಕರಾಳತೆ ಬಿಚ್ಚಿಟ್ಟ ಶೇಖ್ ಹಸೀನಾ ಏನಂದ್ರು?
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸಿನಾ ಅವರು ಗಂಭೀರ ಆರೋಪವನ್ನು ಮಾಡಿದ್ದು, ತಮ್ಮ ಹಾಗೂ ಸಹೋದರಿಯ ಹತ್ಯೆಗೆ ಸಂಚು ರೂಪಿಸಲಾಗಿತ್ತು. ತಾವು ಬದುಕುಳಿದಿದ್ದು ಪವಾಡವೇ ಸರಿ ಎಂದು ಹೇಳಿದ್ದಾರೆ. ಕಳೆದ ವರ್ಷ ಬಾಂಗ್ಲಾದೇಶ ತೊರೆದ ಹಲವು ತಿಂಗಳುಗಳ ಹಿಂದೆ ಈ ಹೇಳಿಕೆ ಬಂದಿದೆ.
ಢಾಕಾ : ಬಾಂಗ್ಲಾದೇಶದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿ ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಬಾಂಗ್ಲಾದೇಶವನ್ನು ತೊರೆದಿದ್ದರು. (Bangladesh) ಕಳೆದ ವರ್ಷ ಆಗಸ್ಟ್ 5 ರಂದು ಅಧಿಕಾರದಿಂದ ಕೆಳಗಿಳಿಯುವಂತೆ ವಿದ್ಯಾರ್ಥಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದವು. ನಂತರ ಮಧ್ಯಂತರ ಸರ್ಕಾರ ರಚನೆ ಮಾಡಲಾಗಿದೆ. ಇದೀಗ ಹಸೀನಾ ಶೇಖ್ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ನನ್ನನ್ನು ಹಾಗೂ ಸಹೋದರಿ ರೆಹಾನಾ ಅವರನ್ನು ಕೊಲ್ಲಲು ಸಂಚು ರೂಪಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಬಾಂಗ್ಲಾದೇಶ ಅವಾಮಿ ಲೀಗ್ ಪಕ್ಷವು ತನ್ನ ಫೇಸ್‌ಬುಕ್ ಪುಟದಲ್ಲಿ ಶುಕ್ರವಾರ ತಡರಾತ್ರಿ ಪೋಸ್ಟ್ ಮಾಡಿದ ಆಡಿಯೊದಲ್ಲಿ ಹಸೀನಾ ಈ ಆರೋಪಗಳನ್ನು ಮಾಡಿದ್ದಾರೆ. ಪ್ರತಿಭಟನೆಯ ದಿನ ಪ್ರತಿಭಟನಾಕಾರರು ಶೇಖ್ ಹಸೀನಾ ಅವರ ಮನೆಗೆ ನುಗ್ಗಿ ದಾಂಧಲೆ ಸೃಷ್ಟಿಸಿದ್ದರು. ಈ ಬಗ್ಗೆ ಮಾತನಾಡಿದ ಹಸೀನಾ, ರೆಹಾನಾ ಮತ್ತು ನಾನು ಬದುಕುಳಿದಿದ್ದು ಒಂದು ಪವಾಡವಾಗಿದೆ. ಕೇವಲ 20-25 ನಿಮಿಷಗಳ ಅಂತರದಲ್ಲಿ, ನಾವು ಸಾವಿನಿಂದ ಪಾರಾಗಿದ್ದೇವೆ ಎಂದು ಹೇಳಿದ್ದಾರೆ. ಹಲವು ಬಾರಿ ನನ್ನ ಮೇಲೆ ಕೊಲೆ ಪ್ರಯತ್ನ ನಡೆದಿತ್ತು ಎಂಬ ಸ್ಪೋಟಕ ವಿಷಯವನ್ನು ಬಹಿರಂಗಗೊಳಿಸಿದ್ದಾರೆ.
“Escaped Death by 25 Minutes”: Sheikh Hasina Reveals Alleged Assassination Plot in Bangladesh
— The Asian Chronicle (@AsianChronicle) January 18, 2025
Former Bangladesh PM Sheikh Hasina reveals shocking details of an alleged assassination plot against her and her sister Rehana, claiming they narrowly escaped death by just 25 minutes.… pic.twitter.com/kIwQgkhFg7
ಆಗಸ್ಟ್ 21 ರಂದು ನಡೆದ ಘಟನೆಯಲ್ಲಿ ಬದುಕಿರುವುದು ಹಾಗೂ ಅಥವಾ ಕೋಟಲಿಪಾರಾದಲ್ಲಿ ನಡೆದ ಬೃಹತ್ ಕೋಟ್ಲಿಪಾರಾ ಬಾಂಬ್ ದಾಳಿಯಿಂದ ಬದುಕುಳಿಯುವುದು, ಹಾಗೂ ಕೆಲ ಘಟನೆಗಳಿಂದ ನಾನು ಸುರಕ್ಷಿತವಾಗಿರುವುದು ಅಲ್ಲಾನ ದಯೆ ಎಂದು ಅವರು ಹೇಳಿದ್ದಾರೆ. ನಾನು ಬೇರೆ ಏನಾದರೂ ಮಾಡಬೇಕೆಂದು ಅಲ್ಲಾ ಬಯಸುತ್ತಾನೆ. ಆದರೆ, ನಾನು ಈಗ ಸಂತ್ರಸ್ತೆ. ನನ್ನ ದೇಶ ಮತ್ತು ನನ್ನ ಮನೆ ಇಲ್ಲದೆ ಬದುಕುತ್ತಿದ್ದೇನೆ. ನನ್ನದೆನ್ನುವ ಎಲ್ಲವನ್ನೂ ಸುಟ್ಟುಹಾಕಲಾಗಿದೆ’ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ : AMU Row: ಬಾಂಗ್ಲಾದೇಶ ವಿದ್ಯಾರ್ಥಿಗಳಿಂದ ಹಿಂದೂ ವಿರೋಧಿ ಪೋಸ್ಟ್- AMUನಲ್ಲಿ ಭುಗಿಲೆದ್ದ ಆಕ್ರೋಶ
ಕಳೆದ ವರ್ಷ, ಆಗಸ್ಟ್ 2024 ರಲ್ಲಿ, ಶೇಖ್ ಹಸೀನಾ ಮತ್ತು ಅವಾಮಿ ಲೀಗ್ ಪಕ್ಷದ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳ ನೇತೃತ್ವದಲ್ಲಿ ಪ್ರಬಲ ಚಳುವಳಿ ನಡೆದಿತ್ತು. ಹಲವಾರು ವಾರಗಳ ಪ್ರತಿಭಟನೆಗಳು, ಹಿಂಸಾಚಾರ ಪ್ರೇರಿತ ಘರ್ಷಣೆಗಳು ಮತ್ತು ಚಳುವಳಿಗಳ ನಂತರ, ಆಗಸ್ಟ್ 5, 2024 ರಂದು ಬಾಂಗ್ಲಾದೇಶದಲ್ಲಿ ದಂಗೆಯನ್ನು ನಡೆಸಲಾಯಿತು, ನಂತರ 76 ವರ್ಷದ ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ದೇಶದಿಂದಲೇ ಪಲಾಯನ ಮಾಡಿ ಭಾರತಕ್ಕೆ ಬರಬೇಕಾಯಿತು. ಈ ಅವಧಿಯಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದಲ್ಲಿ 600ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.