ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranji Trophy: ರಣಜಿಯಲ್ಲೂ ರೋಹಿತ್‌, ಜೈಸ್ವಾಲ್‌, ಗಿಲ್‌ ವಿಫಲ

Ranji Trophy: ದೇಶೀಯ ಕ್ರಿಕೆಟ್‌ನಲ್ಲಿಯೂ ಭಾರತ ತಂಡದ ಅನುಭವಿ ಬ್ಯಾಟರ್‌ಗಳು ಬ್ಯಾಟಿಂಗ್‌ ವೈಫಲ್ಯ ಎದುರಿಸಿದ್ದು ಚಾಂಪಿಯನ್ಸ್‌ ಟ್ರೋಫಿ ಆರಂಭಕ್ಕೂ ಮುನ್ನವೇ ಬಿಸಿಸಿಐಗೆ ಚಿಂತಿಸುವಂತೆ ಮಾಡಿದೆ

Rohit-Jaiswal

ಮುಂಬಯಿ: ಮರಳಿ ಫಾರ್ಮ್‌ ಕಂಡುಕೊಳ್ಳಲು 10 ವರ್ಷದ ಬಳಿಕ ದೇಶೀಯ ರಣಜಿ ಪಂದ್ಯದಲ್ಲಿ(Ranji Trophy) ಆಡಲಿಳಿದ ಟೀಮ್‌ ಇಂಡಿಯಾದ ನಾಯಕ ರೋಹಿತ್‌ ಶರ್ಮ ಇಲ್ಲಿಯೂ ವೈಫಲ್ಯ ಕಂಡಿದ್ದಾರೆ. ಗುರುವಾರ ಆರಂಭಗೊಂಡ ಜಮ್ಮು ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಕೇವಲ 3 ರನ್‌ಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಇವರ ಜತೆಗಾರ ಯಶಸ್ವಿ ಜೈಸ್ವಾಲ್‌ ಕೂಡ 4 ರನ್‌ಗೆ ಆಟ ಮುಗಿಸಿದರು.

ರೋಹಿತ್‌ ದೇಶೀಯ ಕ್ರಿಕೆಟ್‌ನಲ್ಲಿಯೂ ಬ್ಯಾಟಿಂಗ್‌ ವೈಫಲ್ಯ ಎದುರಿಸಿದ್ದು ಚಾಂಪಿಯನ್ಸ್‌ ಟ್ರೋಫಿ ಆರಂಭಕ್ಕೂ ಮುನ್ನವೇ ಬಿಸಿಸಿಐಗೆ ಚಿಂತಿಸುವಂತೆ ಮಾಡಿದೆ. ಇನ್ನೊಂದೆಡೆ ಉಪನಾಯಕ ಶುಭಮನ್‌ ಗಿಲ್‌ ಕೂಡ ಕರ್ನಾಟಕ ವಿರುದ್ಧದ ಪಂದ್ಯದಲ್ಲಿ 4 ರನ್‌ಗೆ ಔಟ್‌ ಆಗಿ ಕಳಪೆ ಬ್ಯಾಟಿಂಗ್‌ ಫಾರ್ಮ್‌ ಮುಂದುವರಿಸಿದ್ದಾರೆ.



ಒಂದೊಮ್ಮೆ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾದರೆ, ರೋಹಿತ್‌ ಶರ್ಮ ನಾಯಕತ್ವ ಕಳೆದುಕೊಳ್ಳುವುದು ಬಹುತೇಕ ಖಚಿತ. ಈಗಾಗಲೇ ಬಿಸಿಸಿಐ ರೋಹಿತ್‌ಗೆ ಈ ಬಗ್ಗೆ ಸ್ಪಷ್ಟ ಸಂದೇಶ ನೀಡಿದೆ ಎನ್ನಲಾಗಿದೆ. ಮುಂದಿನ ನಾಯಕನಾಗಿ ಶುಭಮನ್‌ ಗಿಲ್‌ ಆಯ್ಕೆಯಾಗಲಿದ್ದಾರೆ ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಅವರಿಗೆ ಉಪನಾಯಕ ಜವಾಬ್ದಾರಿ ನೀಡಿದ್ದು ಎನ್ನಲಾಗಿದೆ.

ಇದನ್ನೂ ಓದಿ Champions Trophy jersey: ಭಾರತದ ಜೆರ್ಸಿಯಲ್ಲಿ ಪಾಕ್‌ ಹೆಸರು ಮುದ್ರಿಸಲು ಬಿಸಿಸಿಐ ಒಪ್ಪಿಗೆ

ರೋಹಿತ್‌ ಶರ್ಮಾ ಆಸ್ಟ್ರೇಲಿಯಾ ವಿರುದ್ಧ 4ನೇ ಪಂದ್ಯದ ಬಳಿಕವೇ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದರು. ಆದರೆ ವರ ಹಿತೈಶಿಗಳು ನಿರ್ಧಾರದಿಂದ ಹಿಂದೆ ಸರಿಯುವಂತೆ ರೋಹಿತ್‌ಗೆ ಒತ್ತಾಯಿಸಿದ್ದಾರೆ. ಹೀಗಾಗಿ ರೋಹಿತ್‌ ನಿವೃತ್ತಿ ನಿರ್ಧಾರ ಕೈಬಿಟ್ಟರು ಎಂದು ವರದಿಯಾಗಿತ್ತು.

ತಂಡಗಳು

ಮುಂಬೈ: ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ (ನಾಯಕ), ಶ್ರೇಯಸ್ ಅಯ್ಯರ್, ಹಾರ್ದಿಕ್ ತಮೋರ್ (ವಿ.ಕೀ), ಶಿವಂ ದುಬೆ, ಶಾರ್ದೂಲ್ ಠಾಕೂರ್, ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಮೋಹಿತ್ ಅವಸ್ತಿ, ಕರ್ಶ್ ಕೊಠಾರಿ.

ಜಮ್ಮು ಕಾಶ್ಮೀರ: ಶುಭಂ ಖಜುರಿಯಾ, ವಿವ್ರಾಂತ್ ಶರ್ಮಾ, ಅಬ್ದುಲ್ ಸಮದ್, ಪರಸ್ ಡೋಗ್ರಾ (ನಾಯಕ), ಕನ್ಹಯ್ಯಾ ವಾಧವನ್ (ವಿ.ಕೀ), ಔಕಿಬ್ ನಬಿ ದಾರ್, ಯಾರ್ ಹಸನ್, ಯುದ್ವೀರ್ ಸಿಂಗ್ ಚರಕ್, ಅಬಿದ್ ಮುಷ್ತಾಕ್, ಉಮರ್ ನಜೀರ್ ಮಿರ್, ವಂಶಜ್ ಶರ್ಮಾ.