ಗೌರಿಬಿದನೂರು : ಬಲಿಜ ಸಮುದಾಯದ ವಿದ್ಯಾರ್ಥಿಗಳು ವ್ಯಾಸಾಂಗದ ಸಮಯದಲ್ಲಿಯೇ ಉತ್ತಮ ಭವಿಷ್ಯದ ಕಡೆ ಗಮನಹರಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಗುರಿಯನ್ನು ಹೊಂದಿರ ಬೇಕು ಎಂದು ಬಲಿಜ ಸಮುದಾಯದ ಮುಖಂಡ ಹಾಗೂ ನಗರಸಭಾ ಸದಸ್ಯ ಮಾರ್ಕೆಟ್ ಮೋಹನ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ನಗರದ ಬಲಿಜ ಯುವ ಘರ್ಜನೆ ಕಾರ್ಯಾ ಲಯದಲ್ಲಿ ಸೋಮವಾರ ನಡೆದ ಪ್ರತಿಭಾವಂತ ಬಲಿಜ ಸಮುದಾಯದ ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಳೆದ ನವಂಬರ್‌ನಲ್ಲಿ ತಾಲೂಕಿನ ಬಲಿಜ ಯುವ ಘರ್ಜನೆ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಕೊಟ್ಟ ಮಾತಿನಂತೆ ವಿಧಾನ ಪರಿಷತ್ ಸದಸ್ಯರಾದ ಪಿಸಿ ಮೋಹನ್ ಅವರು ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಕಳಿಹಿಸಿರುವ ಲ್ಯಾಪ್ ಟ್ಯಾಪ್‌ಗಳನ್ನು ವಿತರಿಸಿದ್ದೇವೆ.
ಇದನ್ನೂ ಓದಿ: Chikkaballapur News: ಶಾಲಾ ವಾರ್ಷಿಕೋತ್ಸವ ಮಕ್ಕಳ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆ: ಕೆ.ವಿ.ಪ್ರಕಾಶ್
ಇತರೆ ಸಮುದಾಯದ ವಿದ್ಯಾರ್ಥಿಗಳಂತೆ ನಮ್ಮ ಸಮುದಾಯದ ವಿದ್ಯಾರ್ಥಿಗಳು ಸಹಾ ಉತ್ತಮ ವಿದ್ಯಾ ಭ್ಯಾಸದ ಕಡೆ ಗಮನಹರಿಸಬೇಕು. ಐಎಎಸ್, ಕೆಎಎಸ್, ಐಪಿಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆ ಗಳನ್ನು ಬರೆದು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದರು.
ಬಲಿಜ ಯುವ ಘರ್ಜನೆಯ ಜಿಲ್ಲಾಧ್ಯಕ್ಷ ಜಿ.ಎ.ಪ್ರದೀಪ್ ಮಾತನಾಡಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಾಯ ಸಹಕಾರ ನೀಡಿದ ಸಂಸದ ಪಿ.ಸಿ.ಮೋಹನ್ ಮತ್ತು ಇತರೆ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿ ದರು.
ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ರಮೇಶ್ ಬಾಬು,ಮುದ್ದುಕೃಷ್ಣ, ವೆಂಕಟಾದ್ರಿ, ಸಂಘ ಟನಾ ಕಾರ್ಯದರ್ಶಿ ಪರಮೇಶ್,ರಾಕೇಶ್,ಪಾರ್ವತಮ್ಮ,ಸದಸ್ಯರಾದ ಮಾರ್ಕೆಟ್ ಮೋಹನ್. ಗೋಪಿ ಮುಂತಾದವರು ಹಾಜರಿದ್ದರು.