ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Chikkaballapur News: ಶಾಲಾ ವಾರ್ಷಿಕೋತ್ಸವ ಮಕ್ಕಳ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆ: ಕೆ.ವಿ.ಪ್ರಕಾಶ್

ಪೋಷಕರು ಮತ್ತು ಶಿಕ್ಷಕರು ಬಾಲ್ಯದಿಂದಲೇ ಮಕ್ಕಳಲ್ಲಿನ ಪ್ರತಿಭೆಯನ್ನು ಗುರ್ತಿಸಿ ಅದಕ್ಕೆ ತಕ್ಕಂತೆ ಪ್ರೋತ್ಸಾಹ ನೀಡಿದರೆ ದೇಶಕ್ಕೆ ಆಸ್ತಿಯಾಗಲಿದ್ದಾರೆ.ಆರೋಗ್ಯವಂತೆ ಸಮಾಜ ಕಟ್ಟುವಲ್ಲಿ ಮನೆ ಮತ್ತು ಶಾಲೆಗಳು ಪ್ರಧಾನ ಪಾತ್ರವಹಿಸಲಿವೆ.ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬುದನ್ನು ಮರೆಯ ಬಾರದು ಎಂದರು

ಹಲೋ ಕಿಡ್ಸ್ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ

ವಿದ್ಯಾರ್ಥಿಗಳಲ್ಲಿ ಹುದುಗಿರುವ ಆಗಾಧವಾದ ಶಕ್ತಿಯನ್ನು ಅನಾವಣರಗೊಳಿಸಲು ಶಾಲಾ ವಾರ್ಷಿಕೋತ್ಸವದಂತಹ ವೇದಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಪ್ರಾಧ್ಯಾಪಕ ಕೆ.ವಿ.ಪ್ರಕಾಶ್ ಹೇಳಿದರು.

Profile Ashok Nayak Feb 16, 2025 8:22 PM

ಬಾಗೇಪಲ್ಲಿ: ವಿದ್ಯಾರ್ಥಿಗಳಲ್ಲಿ ಹುದುಗಿರುವ ಆಗಾಧವಾದ ಶಕ್ತಿಯನ್ನು ಅನಾವರಣಗೊಳಿಸಲು ಶಾಲಾ ವಾರ್ಷಿಕೋತ್ಸವದಂತಹ ವೇದಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಪ್ರಾಧ್ಯಾಪಕ ಕೆ.ವಿ.ಪ್ರಕಾಶ್ ಹೇಳಿದರು. ಪಟ್ಟಣದ ದ್ವಾರಕಾ ಪಾರ್ಟಿಹಾಲ್‌ನಲ್ಲಿ ಏರ್ಪಡಿಸಿದ್ದ ಹಲೋ ಕಿಡ್ಸ್ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಪೋಷಕರು ಮತ್ತು ಶಿಕ್ಷಕರು ಬಾಲ್ಯದಿಂದಲೇ ಮಕ್ಕಳಲ್ಲಿನ ಪ್ರತಿಭೆಯನ್ನು ಗುರ್ತಿಸಿ ಅದಕ್ಕೆ ತಕ್ಕಂತೆ ಪ್ರೋತ್ಸಾಹ ನೀಡಿದರೆ ದೇಶಕ್ಕೆ ಆಸ್ತಿಯಾಗಲಿದ್ದಾರೆ.ಆರೋಗ್ಯವಂತೆ ಸಮಾಜ ಕಟ್ಟುವಲ್ಲಿ ಮನೆ ಮತ್ತು ಶಾಲೆಗಳು ಪ್ರಧಾನ ಪಾತ್ರವಹಿಸಲಿವೆ.ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬುದನ್ನು ಮರೆಯಬಾರದು ಎಂದರು.

ಮಕ್ಕಳಲ್ಲಿ ಭಗವಂತನಿರುತ್ತಾನೆ. ಜಗತ್ತಿನ ಎಲ್ಲಾ ಮಕ್ಕಳ ಬುದ್ಧಿಶಕ್ತಿ ಸಮಾನವಾಗಿರುತ್ತದೆ. ಶಿಕ್ಷಕರು-ಪಾಲಕರು ಅವರ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ ಒದಗಿಸಿ ಉತ್ತಮ ಪ್ರಜೆಯನ್ನಾಗಿಸಿ. ಮಕ್ಕಳ ಸಾಮ ರ್ಥ್ಯಕ್ಕೆ ಅನುಗುಣವಾಗಿ ಅವರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಶಿಕ್ಷಕ ವೃಂದ ಹಾಗೂ ಪೋಷಕ ವರ್ಗ ಶ್ರಮಿಸಬೇಕು ಎಂದು ಹೇಳಿದರು.

ಇದನ್ನೂ ಓದಿ: Chikkaballapur News: ಬಾಲ್ಯದಲ್ಲಿಯೇ ಮಕ್ಕಳಲ್ಲಿ ಸದ್ಭಾವನೆಗಳನ್ನು ಬೆಳೆಸಿದಾಗ ಇದು ಸಾಧ್ಯ: ಮಂಗಳನಾಥಸ್ವಾಮೀಜಿ ಸಲಹೆ

ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷೆ ಸುಜಾತ ನರಸಿಂಹ ನಾಯ್ಡು ಮಾತನಾಡಿ ಮನೆಯಲ್ಲಿ ಪಾಲಕರು ಟಿವಿ ಹಾಗೂ ಮೊಬೈಲ್ ಗಳಿಂದ ಹೊರ ಬಂದು ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ನಿರ್ಮಿಸಿಕೊಡಬೇಕು.ಹಲೋ ಕಿಡ್ಸ್ ಶಾಲೆ ಕಲಿಕೆಗೆ ಉತ್ತಮ ವಾತವರಣ ಹೊಂದಿದೆ.ತಾವು ತಮ್ಮ ಮಕ್ಕಳನ್ನು ಹಲೋ ಕಿಡ್ಸ್ ಶಾಲೆಯಲ್ಲಿ ನಿಮ್ಮ ಮಗುವನ್ನು ದಾಖಲಿಸಿ ಉತ್ತಮ ಭವಿಷ್ಯ ನೀಡಿ ಎಂದು ಮನವಿ ಮಾಡಿದರು.

ಈ ಕಾರ್ಯಕ್ರಮದಲ್ಲಿ ಮಕ್ಕಳು ಹಲವಾರು ನೃತ್ಯಗಳ ಮೂಲಕ ಪೋಷಕರಿಗೆ ಉತ್ತಮ ಮನ ರಂಜನೆ ನೀಡಿದರು. ಈ ಸಂದರ್ಭದಲ್ಲಿ ಅಮ್ಮ..ಅಮ್ಮ.. ಐ ..ಲವ್...ಯು ಹಾಡಿನಲ್ಲಿ ಚಿಕ್ಕ ಮಕ್ಕಳ ಜೊತೆಗೆ ತಾಯಂದಿರ ನೃತ್ಯ ಮಾಡಿ ಆನಂದ ಪಟ್ಟರು.ವಿವಿಧ ನೃತ್ಯಗಳಿಂದ ಹಾಗೂ ಅಭಿನಯ ಕಾರ್ಯಕ್ರಮಗಳನ್ನು ನೋಡಿ ಪೋಷಕರು ಹಾಗೂ ಸಾರ್ವಜನಿಕರು ಸಂತಸ ಪಟ್ಟರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯಸ್ಥರು ಹಾಗೂ ಟ್ರಸ್ಟ್ಗಳಾದ ವೈ.ಜಿ.ಕುಶಲ, ಮುಖ್ಯ ಶಿಕ್ಷಕಿ ಶೋಭಾ, ನ್ಯಾಷನಲ್ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ವೆಂಕಟಶಿವಾರೆಡ್ಡಿ,ಸಮಾಜ ಸೇವಕರಾದ ಅಶೋಕ ನಂಜುಂಡಪ್ಪ, ಹಲೋ ಕಿಡ್ಸ್ ಶಾಲೆಯ ಶಿಕ್ಷಕರು ಸಿಬ್ಬಂದಿ ವರ್ಗ ಹಾಗೂ ಮಕ್ಕಳ ಪೋಷಕರು ಹಾಗೂ ಸಾರ್ವಜನಿಕರು ಹಾಜರಿದ್ದರು.